Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫಿಲಂ ಫೇರ್ ಅವಾರ್ಡ್ ನಲ್ಲಿ ಮಿಂಚಿದ ಸೆಲೆಬ್ರಿಟಿಗಳು
2013 ಫಿಲಂ ಫೇರ್ ದಕ್ಷಿಣ ಪ್ರಶಸ್ತಿಯಲ್ಲಿ ಭಾಗವಹಿಸಿದ್ದ ಸೆಲೆಬ್ರಿಟಿಗಳ ವೇಷ ಭೂಷಣಗಳು ಆಕರ್ಷಕವಾಗಿದ್ದು, ಕೆಲ ಸೆಲೆಬ್ರಿಟಿಗಳ ಡ್ರೆಸ್ಸಿಂಗ್ ಸೆನ್ಸ್ ಅತ್ಯಾಕರ್ಷಕವಾಗಿದ್ದೆವು.
ಈ ಸಾಲಿನ ದಕ್ಷಿಣದ ಫಿಲಂ ಫೇರ್ ಪ್ರಶಸ್ತಿಯಲ್ಲಿ ಸಂಜನಾ, ಭೂಮಿಕಾ, ಧನುಷ್ ಪತ್ನಿ ಐಶ್ವರ್ಯ, ಚಾರ್ಮಿ ಕೌರ್, ಸಂಜನಾ , ಶೃತಿ ಹಾಸನ್, ಪ್ರಿಯಾಮಣಿ ಇವರೆಲ್ಲಾ ಭಿನ್ನ -ಭಿನ್ನ ಸ್ಟೈಲ್ ಸ್ಟೇಟ್ ಮೆಂಟ್ ನಿಂದ ವೀಕ್ಷಕರ ಮನ ಸೆಳೆದರು.
ಬನ್ನಿ ಇವರ ಸ್ಟೈಲ್ ಸ್ಟೇಟ್ ಮೆಂಟ್ ನತ್ತ ಕಣ್ಣಾಡಿಸೋಣ:

ಸಂಜನಾ
ರಂಗು-ರಂಗಿನ ಬಟ್ಟೆಯಲ್ಲಿ ವೀಕ್ಷಕರ ಗಮನ ಸೆಳೆದ ಸಂಜನಾ.

ನಿಕಿತಾ ನಾರಾಯಣ್
ಪಾರದರ್ಶಕ ಉಡುಗೆ ಧರಿಸಿ ಹಾಟ್ ಲುಕ್ ನಲ್ಲಿ ಮಿಂಚಿದ ನಿಕಿತಾ ನಾರಾಯಣ್.

ಮೀನಾಕ್ಷಿ ದೀಕ್ಷಿತ್
ಅಪ್ಪಟ ಭಾರತೀಯ ಉಡುಗೆಯಲ್ಲಿ ಮಿಂಚಿದ ಮೀನಾಕ್ಷಿ ದೀಕ್ಷಿತ್.

ಶೃತಿ ಹಾಸನ್
ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್ ನಲ್ಲಿ ಶೃತಿ ಹಾಸನ್.

ಪ್ರಿಯಾಮಣಿ
ರಂಗು-ರಂಗಿನ ಸೀರೆ ಧರಿಸಿ, ಕಿವಿಗೆ ದೊಡ್ಡ ಜಿಮುಕಿ ಹಾಕಿ ಕೈಗೆ ಬಳೆ ಧರಿಸಿದರೂ ಇದನ್ನು ಅಪ್ಪಟ ಭಾರತೀಯ ನಾರಿಯ ಲುಕ್ ಅನ್ನಲು ಸಾಧ್ಯವಿಲ್ಲ. ಏಕೆಂದರೆ ಕುತ್ತಿಗೆ ಮತ್ತು ಹಣೆ ಬೋಳಾಗಿ ಇದೆ. ಸೀರೆಯಲ್ಲಿ ಫ್ಯಾಷನಬಲ್ ಆಗಿ ಕಾಣಿಸಬೇಕೆಂದು ಬಯಸುವವರು ಪ್ರಿಯಾಮಣಿಯ ಈ ಸ್ಟೈಲ್ ಅನ್ನು ನಕಲಿ ಮಾಡಬಹುದು.

ಭೂಮಿಕಾ ಚಾವ್ಲಾ
ಭೂಮಿಕಾ ಹಾಟ್ ಕಲರ್ ನ(ರೆಡ್ ಅಂಡ್ ಬ್ಲ್ಯಾಕ್ ಮಿಕ್ಸ್ ) ಡ್ರೆಸ್ ಧರಿಸಿ, ಅದಕ್ಕೆ ಸರಿದೊಂದುವ ಕಿವಿಯೋಲೆ ಧರಿಸಿ, ಈಗೀನ ಟ್ರೆಂಡ್ ಗೆ ತಕ್ಕಂತೆ ಕಡುಗೆಂಪು ಬಣ್ಣದ ಲಿಪ್ ಸ್ಟಿಕ್ ಹಾಕಿದ್ದರೂ ಈ ಡ್ರೆಸ್ಸಿಂಗ್ ಸ್ಟೈಲ್ ಅವರಿಗೆ ಹಾಟ್ ಲುಕ್ ನೀಡುವಲ್ಲಿ ಎಡವಿದೆ.

ಐಶ್ವರ್ಯ ಧನುಷ್
ತಮಿಳಿನ ಪ್ರಸಿದ್ಧ ನಿರ್ದೇಶಕಿ, ಚಿತ್ರನಟ ಧನುಷ್ ರವರ ಪತ್ನಿ ಐಶ್ವರ್ಯ ಈ ಅವಾರ್ಡ್ ಫಂಕ್ಷನ್ ನಲ್ಲಿ ಕಪ್ಪು ಬಣ್ಣದ ಅನಾರ್ಕಲಿ ಚೂಡಿಯಲ್ಲಿ ಮಿಂಚಿದರು.

ಜ್ವಾಲಾ ಗುಟ್ಟಾ
ಜ್ವಾಲಾ ಗುಟ್ಟಾ ಸಿನಿಮಾರಂಗಕ್ಕೆ ಬರುವ ಮೊದಲು ಬ್ಯಾಡ್ ಮಿಂಟನ್ ಆಟಗಾರ್ತಿಯಾಗಿದ್ದರು. ದಕ್ಷಿಣ ಭಾರತದ ಫಿಲಂ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಉದ್ದ ಲಂಗ, ಬ್ಲೌಸ್ ಧರಿಸಿ, ಸಾಂಪ್ರದಾಯಕವಾದ ಉಡುಗೆಯಿಂದ ಗಮನ ಸೆಳೆದರು.

ಚಾರ್ಮಿ ಕೌರ್
ಬ್ಲ್ಯಾಕ್ ಗೌನ್ ಧರಿಸಿ, ಕೈಯಲ್ಲಿ ಪಿಂಕ್ ಕಲರ್ ವ್ಯಾಲಟ್ ಹಿಡಿದಿದ್ದ ಚಾರ್ಮಿ ಕೌರ್ ಳ ಈ ಸ್ಟೈಲ್ ಸ್ಟೇಟ್ ಮೆಂಟ್ ಕಾಲೇಜು ಕನ್ಯೆಯರ ಮುನಮುಟ್ಟಿರುವುದಂತು ದಿಟ.



Click it and Unblock the Notifications
