Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂದರ್ಶನದಲ್ಲಿ ಜಯ ಗಳಿಸುವುದು ಹೇಗೆ?

ತಯಾರಿ: ಒಂದು ಕಂಪನಿ ಅಥವಾ ಸಂಸ್ಥೆಗೆ ಕೆಲಸಕ್ಕೆ ಅರ್ಜಿ ಹಾಕಿ ಅಲ್ಲಿಂದ ಸಂದರ್ಶನಕ್ಕೆ ಕರೆ ಬಂದರೆ ಆ ಕಂಪನಿ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕಾಗಿ ಕಂಪನಿ ವೆಬ್ ಸೈಟ್‌ಗೆ ಹೋಗಿ ಅದರಲ್ಲಿ ಕಂಪನಿ ಬಗ್ಗೆ ಇರುವ ವಿವರಗಳನ್ನು ಓದಿಕೊಂಡರೆ ಸಾಕು. ಆ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿರುವರ ವ್ಯಕ್ತಿ ಪರಿಚಯವಿದ್ದರೆ ಅದನ್ನು ಓದಿಕೊಳ್ಳುವುದು ಒಳ್ಳೆಯದು. ಈ ರೀತಿ ಮಾಡಿದರೆ ಸಂದರ್ಶನದಲ್ಲಿ ಕಂಪನಿ ಬಗ್ಗೆ ಏನಾದರೂ ಕೇಳಿದರೆ ಸುಲಭವಾಗಿ ಉತ್ತರಿಸಬಹದು.
ಸಂದರ್ಶನ ಎದುರಿಸುವಾಗ ಒತ್ತಡದಲ್ಲಿರಬಾರದು: ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ಸಾವಧಾನವಾಗಿ, ಸ್ಪಷ್ಟವಾಗಿ ಉತ್ತರ ಹೇಳಬೇಕು. ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾದವರಂತೆ, ಒತ್ತಡಕ್ಕೆ ಒಳಪಟ್ಟವರಂತೆ ತೋರಿಸಿಕೊಳ್ಳಬಾರದು. ಅದಕ್ಕಾಗಿ ಹೇಗೆ ಸಂದರ್ಶನವನ್ನು ಎದುರಿಸಬೇಕೆಂಬ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಕೈಗಳ ಉಗುರಗಳನ್ನು ಕತ್ತರಿಸಿರಬೇಕು. ಶೂಗಳಿಗೆ ಪಾಲಿಷ್ ಮಾಡಿರಬೇಕು. ಪುರುಷರಾದರೆ ಸೇವ್ ಮಾಡಿ, ಕೂದಲನ್ನು ಒಪ್ಪವಾಗಿ ಬಾಚಿಕೊಂಡಿರಬೇಕು. ಮಹಿಳೆಯರಾದರೆ ಸೆಲ್ಟಾರ್ ಅಥವಾ ಸ್ಯಾರಿ ಹಾಕಬಹುದು. ಮಲ್ಟಿನ್ಯಾಷನಲ್ ಕಂಪನಿಗಳಿಗೆ ಹೋಗುವುದಾದರೆ ಸೂಟ್ ಧರಿಸುವುದು ಒಳ್ಳೆಯದು.
ಮರು ಪರೀಕ್ಷೆ: ಸಂದರ್ಶನಕ್ಕೆ ಹೊರಡುವ ಮುನ್ನ ನಿಮ್ಮ ರೆಸ್ಯೂಮೆ (ವೈಯಕ್ತಿಕ ವಿವರವಿರುವ ಫೈಲ್) ಅನ್ನು ಎಲ್ಲಾ ಸರಿಯಾಗಿದೆಯೇ ಎಂದು ಮತ್ತೊಮ್ಮೆ ಪರೀಕ್ಷಿಸಬೇಕು. ಸಂದರ್ಶಕ್ಕೆ ಹೋಗುವಾಗ ಇತರ ಎಲ್ಲಾ ಡಾಕ್ಯೂಮೆಂಟ್ಸ್ ಇದೆಯೇ ಎಂದು ಪರೀಕ್ಷಿಸಿ ಜೊತೆಗೆ ಕೊಂಡೊಯ್ಯಬೇಕು. ಈ ಎಲ್ಲಾ ತಯಾರಿಗಳ ಜೊತೆ ಮುಖ್ಯವಾದ ಅಂಶವೆಂದರೆ ಆತ್ಮವಿಶ್ವಾಸ ಇರಬೇಕು. ಆಗ ಸಂದರ್ಶನವನ್ನು ಸುಲಭದಲ್ಲಿ ಎದುರಿಸಬಹುದು.



Click it and Unblock the Notifications
