Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಳೆಯಲ್ಲಿ ತಿನ್ನಲೇಬೇಕೆನಿಸುವ ತಿಂಡಿಗಳಿವು!
ಹೊರಗಡೆ ಮಳೆ ಸುರಿಯುತ್ತಿದ್ದರೆ ಏನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಆದರೆ ಈ ಸಮಯದಲ್ಲಿ ಘನ ಆಹಾರಕ್ಕಿಂತ ಕರಿದ ತಿಂಡಿಗಳು, ಹುರಿದ ಕಡಲೆ ಪದಾರ್ಥಗಳು, ಚಿಪ್ಸ್ ಗಳನ್ನು ತಿನ್ನಬೇಕು ಅನಿಸುತ್ತಿರುತ್ತದೆ. ಈ ಸಮಯದಲ್ಲಿ ಡಯಟ್ ಬಗ್ಗೆ ಚಿಂತೆ ಮಾಡುವುದಕ್ಕಿಂತ ಇಷ್ಟದ ಪದಾರ್ಥಗಳನ್ನು ತಿಂದರೆ ಮನಸ್ಸಿಗೆ ತುಂಬಾ ಖುಷಿ ಸಿಗುವುದು. ಅದರಲ್ಲೂ ಈ ಕೆಳಗಿನ ತಿಂಡಿಗಳನಂತೂ ಡಯಟ್‌ನಲ್ಲಿರುವವರನ್ನು ಕೂಡ ತಮ್ಮತ್ತ ಸೆಳೆಯುವ ತಾಕತ್ತು ಹೊಂದಿವೆ.

1. ಸೂಪ್: ಹೊರಗಡೆ ಮಳೆ ಸುರಿಯುತ್ತಿದ್ದರೆ, ಬಿಸಿಬಿಸಿಯಾದ ಸೂಪ್ ಕುಡಿಯಲು ತುಂಬಾ ಇಷ್ಟವಾಗುತ್ತದೆ. ಸೂಪ್ ಕುಡಿಯುವುದು ಆರೋಗ್ಯಕ್ಕೆ ಕೂಡ ಒಳ್ಳೆಯದು, ಆದ್ದರಿಂದ ಸ್ಟ್ರಿಕ್ಟ್ ಡಯಟ್ ನಲ್ಲಿರುವವರು ಕೂಡ ಸೂಪ್ ಕುಡಿಯಲು ಹಿಂದೆ-ಮುಂದೆ ನೋಡಬೇಕಾದ ಅವಶ್ಯಕತೆಯಿಲ್ಲ.
2. ಮಸಾಲೆ ಟೀ: ಮಳೆ ಸುರಿಯುತ್ತಿರುವಾಗ ಚಹಾ ಹೀರುವುದರ ಸುಖನೇ ಬೇರೆ. ಆದರೆ ಈ ಸಮಯದಲ್ಲಿ ಮಾಮೂಲಿ ಕುಡಿಯುವ ಚಹಾಕ್ಕಿಂತ ಮಸಾಲೆ ಟೀ ಕುಡಿದರೆ ಬೆಚ್ಚನೆಯ ಅನುಭವದ ಜೊತೆ, ಮನಸ್ಸಿಗೆ ತುಂಬಾ ಖುಷಿ ಸಿಗುತ್ತದೆ.
3. ಚಿಪ್ಸ್ : ದಿನಾ ಚಿಪ್ಸ್ ತಿಂದರೆ ದಪ್ಪಗಾಗುತ್ತೇವೆ, ಆದರೆ ಅಪರೂಪಕ್ಕೆ ಚಿಪ್ಸ್ ತಿಂದರೆ ಆಕರ್ಷಕ ಮೈಕಟ್ಟಿಗೆ ಯಾವುದೇ ಭಂಗ ಉಂಟಾಗುವುದಿಲ್ಲ. ಚಿಪ್ಸ್ ಅನ್ನು ಚೀಸ್ ಅಥವಾ ಟೊಮೆಟೊ ಸಾಸ್ ಜೊತೆ ತಿಂದರೆ ಅದರ ರುಚಿನೇ ಬೇರೆ.
4. ಪಕೋಡ: ಏನೇ ಹೇಳಿ ಮಳೆಗಾಲದಲ್ಲಿ ತಿನ್ನಲು ಸೂಕ್ತ ತಿಂಡಿಯೆಂದರೆ ಪಕೋಡ, ಬಜ್ಜಿ. ಬಿಸಿ ಬಿಸಿ ಪಕೋಡ ಅಥವಾ ಬಜ್ಜಿಯನ್ನು ತಿನ್ನುತ್ತಾ , ಮಳೆ ಅಂದ ನೋಡುತ್ತಿದ್ದರೆ ಒಂದು ಕ್ಷಣ ನಮ್ಮನ್ನೇ ನಾವು ಮರೆತು ಬಿಡುತ್ತೇವೆ.
ಮಳೆ ಸುರಿಯುತ್ತಿರುವಾಗ ನಿಮಗೂ ಕೂಡ ಈ ರೀತಿಯ ತಿಂಡಿಗಳನ್ನು ತಿನ್ನಬೇಕೆಂದು ಅನಿಸುತ್ತದೆ ತಾನೆ?



Click it and Unblock the Notifications
