Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ವ್ಯಕ್ತಿ ಸತ್ತ ಮೇಲೂ ದೇಹದ 10 ಈ ಭಾಗಗಳು ಕೆಲಸ ಮಾಡುತ್ತದೆ ಗೊತ್ತಾ?
ಸಾವು ಸಂಭವಿಸಿದಾಗ ದೇಹ ನಿಶ್ಚಲವಾಗುತ್ತೆ, ಉಸಿರಾಟ ನಿಲ್ಲುತ್ತೆ, ಹೃದಯ ತನ್ನ ಬಡಿತ ನಿಲ್ಲಿಸುತ್ತದೆ, ಆದರೆ ಸಾವು ಸಂಭವಿಸಿದ ಮೇಲೂ ದೇಹದ 11 ಭಾಗಗಳು ತನ್ನ ಕಾರ್ಯ ನಿಲ್ಲಿಸುವುದಿಲ್ಲ, ಆತ್ಮ ದೇಹವನ್ನು ಬಿಟ್ಟು ಹೋಗಿ ತುಮಬಾ ಹೊತ್ತಿನವರೆಗೆ ಅವುಗಳು ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವುದಾದರೆ:
ವಿಚಿತ್ರ ಶಬ್ದ ಬರುತ್ತದೆ
ವ್ಯಕ್ತಿ ಸತ್ತು ಹೋಗಿದ್ದಾರೆ ಎಂದು ಹೇಳಿದ ಮೇಲೂ ಒಂದು ವಿಚಿತ್ರ ಶಬ್ದ ಬರುವುದನ್ನು ಗಮನಿಸಿರಬಹುದು. ಸತ್ತ ಮೇಲೂ ಸದ್ದು ಬರಲು ಮನುಷ್ಯನ ದೇಹದೊಳಗೆ ಇರುವ ಗ್ಯಾಸ್ ಕಾರಣ, ಅದು ಹೊರಬರಲು ಪ್ರಯತ್ನಿಸುತ್ತದೆ, ಆವಾಗ ಈ ರೀತಿ ಶಬ್ದ ಬರುವುದು.

ಜನ್ಮ ನೀಡುವುದು
ಗರ್ಭಿಣಿ ಸತ್ತ ಮೇಲೂ ಮಗುವಿಗೆ ಜನ್ಮ ನೀಡಿರುವ ಕೆಲವೊಂದು ಪ್ರಕರಣಗಳನ್ನು ನೋಡಿರಬಹುದು. ಅಲ್ಲದೆ ಇನ್ನು ಕೆಲವು ಪ್ರಕರಣಲ್ಲಿ ಹೊಟ್ಟೆಯೊಳಗೆ ಸತ್ತ ಮಗು ಹೆರಿಗೆ ಮೂಲಕ ಹೊರಬರುತ್ತದೆ. ದೇಹದೊಳಗೆ ಗ್ಯಾಸ್ ಒತ್ತಡ ಹಾಕುತ್ತದೆ, ಆವಾಗ ಮಗು ಗರ್ಭದಿಂದ ಜನನೇಂದ್ರೀಯ ಮೂಲಕ ಹೊರಬರುವುದು.
ಸ್ನಾಯುಗಳ ಚಲನೆ ಇರುತ್ತದೆ
ವ್ಯಕ್ತಿ ಸತ್ತು ಗಂಟೆಗಳ ಕಾಲ ಸ್ನಾಯುಗಳ ಚಲನೆ ಇರುತ್ತದೆ, ಇದರಿಂದಾಗಿ ಎದೆ ಭಾಗದಲ್ಲಿ ಚಲನೆ ಕಾಣಬಹುದು. ಸಂಪೂರ್ಣ ಸಾವು ಸಂಭವಿಸುವವರೆಗೆ ಸ್ನಾಯುಗಳಲ್ಲಿ ಚಲನೆ ಇರುತ್ತದೆ.
ಜೀನ್ಸ್ ಸಕ್ರೀಯವಾಗಿರುತ್ತದೆ
ಮನುಷ್ಯ ಸತ್ತು ಹೋದ ಮೇಲೂ ಅವನ ಜೀನ್ಸ್ ಚಟುವಟಿಕೆಯಿಂದ ಇರುತ್ತದೆ. ಈ ಮೂಲಕ ತಜ್ಞರು ವ್ಯಕ್ತಿ ಸತ್ತು ಎಷ್ಟು ಗಂಟೆಗಳಾಗಿದೆ, ಎಷ್ಟು ದಿನಗಳಾಗಿದೆ ಎಂದು ಕಮಡು ಹಿಡಿಯುತ್ತಾರೆ.
ಮೂತ್ರ ವಿಸರ್ಜನೆ
ವ್ಯಕ್ತಿ ಸತ್ತು ಹೋಗಿ ಕೆಲವು ಗಂಟೆಗಳ ಬಳಿಕ ಮೂತ್ರ ವಿಸರ್ಜನೆಯಾಗಬಹುದು, ವ್ಯಕ್ತಿ ಸತ್ತಾಗ ಮೆದುಳಿನ ಸೂಚನೆ ಅಂಗಾಂಗಗಳಿಗೆ ಸಿಗುವುದಿಲ್ಲ, ಇದರಿಂದಾಗಿ ದೇಹದೊಳಗಿನಿಂದ ಮೂತ್ರ ಅಥವಾ ಮಲ ಬರಬಹುದು.
ಕೂದಲು ಹಾಗೂ ಉಗುರುಗಳು ಬೆಳೆಯುತ್ತವೆ
ಸಾವಿನ ನಂತರ ಕೂಡ ಉಗುರು ಬೆಳೆಯುವುದು, ಕೂದಲು ಬೆಳೆಯುವುದು. ಹಾಗಂತ ಹೊಸ ಕೂದಲುಗಳು ಹುಟ್ಟುವುದಿಲ್ಲ, ಆದರೆ ಕೂದಲು ಬೆಳೆಯುವುದು, ತುಂಬಾ ದಿನಗಳಾದರೆ ಉಗುರು, ಕೂದಲುಗಳು ಸಡಿಲವಾಗಿ ಬಿದ್ದು ಹೋಗುವುದು.
ಜೀರ್ಣಕ್ರಿಯೆ ನಡೆಯುವುದು
ವ್ಯಕ್ತಿ ಸತ್ತ ಮೇಲೂ ಹೊಟ್ಟೆಯೊಳಗಿನ ಆಹಾರವನ್ನು ಜೀರ್ಣ ಮಾಡುವ ಕಾರ್ಯವನ್ನು ಹೊಟ್ಟೆ ಒಳಗಿನ ಒಳ್ಳೆಯ ಬ್ಯಾಕ್ಟಿರಿಯಾ ಮಾಡುವುದಂತೆ. ದೇಹ ಸಂಪೂರ್ಣವಾಗಿ ತನ್ನ ಕಾರ್ಯ ನಿಲ್ಲಿಸುವವರೆಗೂ ಜೀರ್ಣಕ್ರಿಯೆ ನಡೆಯುವುದು.
ಮೆದುಳು ಕಾರ್ಯನಿರ್ವಹಿಸುತ್ತದೆ
ವ್ಯಕ್ತಿಯ ಇತರ ಅಂಗಾಂಗಗಳು ತನ್ನ ಕಾರ್ಯ ಸಂಪೂರ್ಣ ನಿಲ್ಲಿಸಿದರೂ ಮೆದುಳು ಕೆಲ ದಿನಗಳವರೆಗೆ ಕಾರ್ಯ ನಿರ್ವಹಿಸುವಂತೆ ಇಡುವ ತಂತ್ರಜ್ಞಾನವಿದೆ.
ತ್ವಚೆ ಕಣಗಳು ಜೀವಂತವಾಗಿರುತ್ತದೆ
ವ್ಯಕ್ತಿ ತೀರಿ ಹೋದರೆ ಕೆಲವು ದಿನಗಳವರೆಗೆ ತ್ವಚೆ ಕಣಗಳು ಜೀವಂತವಾಗಿರುತ್ತದೆಯಂತೆ. ತ್ವಚೆ ಸಡಿಲವಾಗಿ ಕರಗಿದರೂ ತ್ವಚೆ ಕಣಗಳು ಜೀವಂತವಾಗಿರುತ್ತದೆಯಂತೆ.
ಸ್ಖಲನವಾಗುತ್ತೆ
ಸಾವಿನ ನಂತರ ಕೂಡ ಪುರುಷರಲ್ಲಿ ಸ್ಖಲನವಾಗುವುದು. ಹೃದಯ ತನ್ನ ಕೆಲಸ ನಿಲ್ಲಿಸಿದಾಗ ರಕ್ತ ದೇಹದ ಕೆಳಭಾಗಕ್ಕೆ ಹರಿಯುವುದು, ಇದರಿಂದಾಗಿ ಸ್ಖಲನವಾಗುವುದು.



Click it and Unblock the Notifications
