Latest Updates
-
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು!
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿಗಳು
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋವಿರುತ್ತದೆ. ಗಾಂಧಿಯ ಫೋಟೋವಿದ್ದರೆ ಮಾತ್ರ ಆ ನೋಟಿಗೆ ಬೆಲೆ. ಗಾಂಧಿ ನಗುತ್ತಿರುವ ನೋಟುಗಳು ನಮ್ಮ ಕೈಯಲ್ಲಿದ್ದರೆ ಮಾತ್ರ ನಮ್ಮ ಮುಖದಲ್ಲೂ ನಗು ಇರುವುದು ಅಲ್ವಾ. ನೋಟಿನಲ್ಲಿ ಗಾಂಧಿಜೀ ನಗುತ್ತಿರುವಂತೆ ಇರುವ ಪೋಟೋವಿದೆ. ಈ ಫೋಟೋದ ಹಿಂದಿನ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ:

ಭಾರತದ ಕರೆನ್ಸಿಯನ್ನು 1987ರಲ್ಲಿ ತಂದರು, ಆವಾಗ ಅಶೋಕ ಸ್ತಂಭ ಹಾಗೂ ಮಹಾತ್ಮಗಾಂಧಿ ಫೋಟೋವಿತ್ತು. ಅದಾದ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹಾತ್ಮ ಗಾಂಧಿ ಸರಣಿ ಕರೆನ್ಸಿ ನೋಟುಗಳನ್ನು 1996ರಿಂದ ಪ್ರಿಂಟ್ ಮಾಡಲಾರಂಭಿಸಿತು. ಆದ್ದರಿಂದ ಗಾಂಧಿಜೀಯ ಫೋಟೋಗಳನ್ನು ನೋಟಿನಲ್ಲಿ ಕಾಣಬಹುದು.
ಮಹಾತ್ಮ ಗಾಂಧಿಜೀಯವರ ನಗುತ್ತಿರುವ ಫೋಟೋವನ್ನೇ ಏಕೆ ಬಳಸಲಾಯಿತು?
ಕೆಲವರು ಇದನ್ನು ಮಹಾತ್ಮ ಗಾಂಧಿಜೀಯವರ ಚಿತ್ರ ಬಿಡಿಸಿ ನಂತರ ನೋಟು ಅಚ್ಚ ಮಾಡಲಾಯಿತು ಎಂದು ಯೋಚಿಸುತ್ತಾರೆ, ಆದರೆ ವಾಸ್ತವ ಅದಲ್ಲ, ಮಹಾತ್ಮ ಗಾಂಧಿಜೀಯವರ ಫೋಟೋ ಇದಾಗಿದೆ. ಈ ಫೋಟೋವನ್ನು ಫೆಡ್ರಿಕ್ ಪೆಥಿಕ್ ಲಾರೆನ್ಸ್ ಕ್ಲಿಕ್ಕಿಸಿದರು.
ಇಲ್ಲಿ ನೀಡಲಾಗಿದೆಯೆಲ್ಲಾ ಅದುವೇ ಒರ್ಜಿನಲ್ ಫೋಟೋ. ಗಾಂಧಿಜೀಯವರು ಯಾರನ್ನೋ ನೋಡಿ ನಗುತ್ತಿರುವ ಫೋಟೋ ಅದಾಗಿದೆ.ಈ ಫೋಟೋವನ್ನೇ ಕ್ರಾಪ್ ಮಾಡಿ ಭಾರತದ ಕರೆನ್ಸಿಗೆ ಬಳಸಲಾಗಿದೆ.
ಈ ಫೋಟೋವನ್ನು ಮಾಜಿ ವೈಸ್ ರಾಯ್ ಮನೆಯಲ್ಲಿ 1946ರಲ್ಲಿ ತೆಗೆಯಲಾಯಿತು. ಇದೀಗ ರಾಷ್ಟ್ರಪತಿ ಭವನವಾಗಿದೆ.
ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿ ಫೋಟೋವನ್ನು ಯಾವ ಉದ್ದೇಶದಿಂದ ಬಳಸಲಾಯಿತು?
ಸ್ವಾತಂತ್ರ್ಯ ಹೋರಾಟಕ್ಕೆ ಭಾರತದ ಮೂಲೆ-ಮೂಲೆಯಿಂದ ಜನರು ಸ್ವಾತಂತ್ರ್ಯ ಹೋರಾಟ ಮಾಡಿದ್ದರು. ಅನೇಕ ಮಹಾ ನಾಯಕರ ತ್ಯಾಗದ ಫಲ ನಮಗೆ ಸಿಕ್ಕ ಸ್ವಾತಂತ್ರ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವರು ಅಹಿಂಸಾ ಮಾರ್ಗ ಅನುಸರಿಸಿದರೆ ಇನ್ನು ಕೆಲವರು ಬ್ರಿಟಿಷರ ಮಣಿಸಲು ರಕ್ತ ಹರಿಸಲೂ ಸಿದ್ಧವಾಗಿದ್ದರು. ಆದರೆ ಎಲ್ಲರೂ ಒಪ್ಪಿಕೊಂಡ ನಾಯಕ ಮಹಾತ್ಮಗಾಂಧಿ ಆಗಿದ್ದರು. ಇವರನ್ನು ಭಾರತದ ಪಿತಾಮಹಾ ಎಂದು ಕರೆಯುತ್ತಿದ್ದರು, ಹೀಗಾಗಿ ಭಾರತದ ಕರೆನ್ಸಿಯಲ್ಲಿ ಮಹಾತ್ಮಗಾಂಧಿಯವರ ಫೋಟೋವನ್ನೇ ಬಳಸಲಾಯಿತು.



Click it and Unblock the Notifications