Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಕ್ಕಳಿಗೆ ಮುದ್ದು ಕೃಷ್ಣನ ಹೆಸರುಡಬೇಕು ಎಂದುಕೊಂಡಿದ್ದೀರಾ? ಇಲ್ಲಿದೆ ಹೆಸರುಗಳು!
ಮಕ್ಕಳು ಹುಟ್ಟಿದ ನಂತರ ಅವರಿಗೆ ಹೆಸರಿಡುವ ಶಾಸ್ತ್ರ ತುಂಬಾನೇ ವಿಶೇಷವಾಗಿ ಇರುತ್ತದೆ. ಗಂಡಾಗಲಿ ಅಥವಾ ಹೆಣ್ಣಾಗಲಿ ವಿಶೇಷವಾದ ಹೆಸರಿಡಬೇಕು ಅಂತ ಪೋಷಕರು ಹುಡುಕಾಡುತ್ತಿರುತ್ತಾರೆ. ಅದ್ರಲ್ಲೂ ದೇವರ ಹೆಸರನ್ನು ಮಕ್ಕಳಿಗೆ ಇಟ್ಟರೆ ತುಂಬಾನೇ ಒಳ್ಳೆಯದು ಎನ್ನುವ ನಂಬಿಕೆಯಿದೆ.

ಮಕ್ಕಳು ಹುಟ್ಟುವಾಗ ಹೆಚ್ಚಿನವರು ಮಗು ಮುದ್ದು ಕೃಷ್ಣನಂತಿರಲಿ ಎಂದು ಬಯಸುತ್ತಾರೆ. ಅದೇ ರೀತಿ ಕೃಷ್ಣನ ಹೆಸರನ್ನು ಮಕ್ಕಳಿಗೆ ಇಡೋದಕ್ಕೂ ಬಯಸುತ್ತಾರೆ. ಒಂದು ವೇಳೆ ನೀವು ನಿಮ್ಮ ಮಗುವಿಗೆ ಕೃಷ್ಣನ ಹೆಸರಿಡಬೇಕು ಅಂತ ಬಯಸಿದ್ದಾರೆ. ನಿಮಗಾಗಿ ಇಲ್ಲಿದೆ ಕೃಷ್ಣನ ವಿಶೇಷ ಹೆಸರುಗಳು.
ನಿಮ್ಮ ಮುದ್ದು ಮಕ್ಕಳಿಗಾಗಿ ಇಲ್ಲಿದೆ ಕೃಷ್ಣನ ಹೆಸರುಗಳು :
ಅರಿವ್ : ಈ ಹೆಸರಿನ ಅರ್ಥ ಬುದ್ಧಿವಂತಿಕೆ ಮತ್ತು ನ್ಯಾಯದ ರಾಜ
ಅಭಿಜೀತ್ : ಈ ಹೆಸರಿನ ಅರ್ಥ ವಿಜಯಶಾಲಿ
ಅದ್ವೈತ್ : ಈ ಹೆಸರಿನ ಅರ್ಥ ಅನನ್ಯ, ಅವಿಭಜಿತ
ಅಭ್ಯಂಕರ್ : ಅಭ್ಯಂಕರ್ ಎಂಬುದು ಸಂಸ್ಕೃತ ಪದವಾಗಿದ್ದು ಭಯವನ್ನು ಹೋಗಲಾಡಿಸುವವನು ಎಂದರ್ಥ
ಅಬ್ಜಯೋನಿ : ಅಬ್ಜಯೋನಿ ಎಂಬುದು ಗಂಡು ಮಗುವಿನ ಹೆಸರು ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಜನಪ್ರಿಯವಾಗಿದೆ. ಮತ್ತು ಇದರ ಅರ್ಥ 'ಕಮಲದಿಂದ ಜನನ'
ಅನಾದಿಃ : ಈ ಹೆಸರು ಶ್ರೀಕೃಷ್ಣನನ್ನು ಸೂಚಿಸುತ್ತದೆ
ಅನಂತಜಿತ್ : ಈ ಹೆಸರಿನ ಅರ್ಥ ಅನಂತತೆಯ ವಿಜಯಿ. ಎಂದರೆ ಎಂದಿಗೂ ಜಯಶಾಲಿಯಾದ ಭಗವಂತ
ಪರಾಜಿತ್ : ಎಂದರೆ ಸೋಲಲಾರದವನು, ಮಹಾ ಯೋಧ
ಅಪ್ರಮೇಯ : ಈ ಹೆಸರಿನ ಅರ್ಥವು ಶ್ರೀಕೃಷ್ಣನಂತೆಯೇ 'ಅನಂತ' ಮತ್ತು 'ಅಳತೆ' ಎಂದರ್ಥ
ಅರಿಜಿತ್ : ಕೃಷ್ಣ ಮತ್ತು ಸುಭದ್ರೆಯ ಮಗ. ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸಿದವನು
ಅಸ್ವಧ್ : ಈ ಹೆಸರಿನ ಪದದ ಅರ್ಥ ಕೃಷ್ಣ
ಅಯುಕ್ತ್ : ಈ ಹೆಸರಿನ ಅರ್ಥ ಸ್ಪಷ್ಟ ಮನಸ್ಸು. ಇದು ಶ್ರೀಕೃಷ್ಣನನ್ನು ಉಲ್ಲೇಖಿಸುತ್ತದೆ
ಬಾಲಗೋಪಾಲ್ : ಶಿಶು ಕೃಷ್ಣ ಅಥವಾ ಬೇಬಿ ಕೃಷ್ಣ
ಬಾಲಿ : ಬಾಲಿ ಭಾರತೀಯ ಮೂಲದ ಜನಪ್ರಿಯ ಹೆಸರು ಮತ್ತು ಇದರರ್ಥ ಸೈನಿಕ
ಬಲ್ಮುಕುಂದ : ಯುವ ಕೃಷ್ಣ
ಬಂಕೆಬಿಹಾರಿ : ಬಂಕೆಬಿಹಾರಿ ಎಂದರೆ 'ಕಾಡಿನಲ್ಲಿ ಕ್ರೀಡೆಯನ್ನು ಇಷ್ಟಪಡುವವನು' ಎಂದರ್ಥ.
ಬಂಸಿ : ಶ್ರೀಕೃಷ್ಣನು ನುಡಿಸುವ ವಾದ್ಯ ಕೊಳಲು
ಬನ್ವಾರಿ : ಈ ಹೆಸರು ಶ್ರೀಕೃಷ್ಣನನ್ನು ಉಲ್ಲೇಖಿಸುತ್ತದೆ. ಇದರ ಅರ್ಥ ವೃಂದಾವನದಲ್ಲಿ ವಾಸಿಸುವವನು
ಬ್ರಿಜ್ : ಈ ಹೆಸರಿನ ಅರ್ಥ 'ಕೃಷ್ಣನ ಸ್ಥಳ' ಮತ್ತು 'ಶಕ್ತಿ'
ಬ್ರಿಜೇಶ್ : ಹುಲ್ಲುಗಾವಲಿನ ಕೃಷ್ಣ
ದರ್ಶ : 'ಸುಂದರ' ಮತ್ತು 'ದೃಷ್ಟಿ' ಈ ಹೆಸರಿನ ಅರ್ಥಗಳು. ಮತ್ತು ಇದು ಶ್ರೀಕೃಷ್ಣನನ್ನು ಪ್ರತಿನಿಧಿಸುತ್ತದೆ.
ದಾರುಕ್ : ಈ ಹೆಸರಿನ ಅರ್ಥ 'ಕೃಷ್ಣನ ಸಾರಥಿ'
ದಯಾನಿಧಿ : ದಯಾನಿಧಿ ಎಂದರೆ 'ದಯೆಯ ವ್ಯಕ್ತಿ' ಅಥವಾ 'ಕರುಣೆಯ ನಿಧಿ' ಎಂದರ್ಥ.
ದೇವಕಿನಂದನ : ಶ್ರೀಕೃಷ್ಣನು ದೇವಕಿಯ ಮಗ
ದೇವೇಶ್ : ಈ ಸುಂದರವಾದ ಹೆಸರು ಶ್ರೀಕೃಷ್ಣನನ್ನು ಸೂಚಿಸುತ್ತದೆ
ಧಮ : ಈ ಹೆಸರು ಭಗವಾನ್ ಕೃಷ್ಣನನ್ನು ಪ್ರತಿರೂಪಿಸುತ್ತದೆ. ಇದರ ಅರ್ಥ ಪರಮಾತ್ಮ
ಗಾಣಾಶ್ರಯ : ವಿನಯಶೀಲ ಮತ್ತು ಧೈರ್ಯಶಾಲಿ ಹುಡುಗ
ಗಾನಾಶ್ರಯ : ಗಾನಾಶ್ರಯ ಎಂಬುದು ಜನಪ್ರಿಯ ಹಿಂದೂ ಹೆಸರು
ಘನಶ್ಯಾಮ್ : ಈ ಹೆಸರಿನ ಅರ್ಥ ಶೀಘ್ರದಲ್ಲೇ ಮಳೆ ಬೀಳುವ ಗಾಢವಾದ ಮೋಡದ ಬಣ್ಣ. ಅಥವಾ 'ಘನ ಕತ್ತಲು'.
ಗಿರ್ಧಾರಿ : ಇದರರ್ಥ 'ಗೋವರ್ಧನ ಬೆಟ್ಟವನ್ನು ಎತ್ತಿದವನು
ಗಿರಿವರ್ : ಇದರರ್ಥ 'ಗೋವರ್ಧನ ಗಿರಿ ಪರ್ವತವನ್ನು ಹಿಡಿದವನು'.
ಈ ಕೃಷ್ಣನ ಹೆಸರುಗಳನ್ನು ನಿಮ್ಮ ಮಕ್ಕಳಿಗೆ ಇಡಬಹುದು.



Click it and Unblock the Notifications
