Latest Updates
-
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ?
ಮನೆಯ ಮುಂದೆ ನಾಮಫಲಕ ಹಾಕುವಾಗ ಈ ತಪ್ಪುಗಳು ಆಗದಿರಲಿ!
ನಾವು ಯಾವುದೇ ಶುಭ ಕೆಲಸವನ್ನು ಮಾಡಬೇಕಾದ್ರು ವಾಸ್ತು ಪ್ರಕಾರಾನೇ ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಒಂದು ವೇಳೆ ನಾವು ಮನೆಯ ವಿಚಾರದಲ್ಲಿ ವಾಸ್ತು ಹೊರತು ಪಡಿಸಿ ಏನಾದ್ರು ಕೆಲಸಗಳನ್ನು ಮಾಡಿದ್ರೆ ಅದರಿಂದ ಕೆಟ್ಟದಾಗುತ್ತೆ ಎನ್ನುವ ನಂಬಿಕೆಯಿದೆ. ಅದ್ರಲ್ಲಿ ಪ್ರಮುಖವಾಗಿ ಮನೆಯ ಮುಂಭಾಗ ಹಾಕುವ ನೇಮ್ ಪ್ಲೇಟ್ ಬಗ್ಗೆ ಗಮನ ಹರಿಸುವುದು ತುಂಬಾನೇ ಮುಖ್ಯವಾಗುತ್ತದೆ.

ಎಲ್ಲಾ ಮನೆಗಳಲ್ಲಿಯೂ ನೇಮ್ ಪ್ಲೇಟ್ ಇದ್ದೇ ಇರುತ್ತದೆ. ಇದು ಮನೆಯ ಸೌಂದರ್ಯವನ್ನೂ ಹೆಚ್ಚು ಮಾಡುತ್ತದೆ. ಈ ನಾಮಫಲಕವು ಧನಾತ್ಮಕ ಶಕ್ತಿಯನ್ನು ತನ್ನತ್ತ ಆಕರ್ಷಿಸುತ್ತಂತೆ. ಇನ್ನೂ ಮನೆಯ ಮುಂಭಾಗ ನಾಮಫಲಕ ಹಾಕುವಾಗ ತುಂಬಾನೇ ಜಾಗರೂಕರಾಗಿ ಇರ್ಬೇಕು. ಅಷ್ಟಕ್ಕು ವಾಸ್ತು ಪ್ರಕಾರ ಮನೆಯ ನೇಮ್ ಪ್ಲೇಟ್ ಹೇಗಿರಬೇಕು? ಅದರ ಬಣ್ಣ, ಆಕಾರ, ಜೊತೆಗೆ ಯಾವೆಲ್ಲಾ ತಪ್ಪುಗಳು ಆಗಬಾರದು ಅನ್ನೋದನ್ನು ತಿಳಿಯೋಣ.
ನಾಮಫಲಕ ಯಾವ ದಿಕ್ಕಿನಲ್ಲಿ ಇರಬೇಕು?
ನಾಮಫಲಕವನ್ನು ಯಾವಾಗಲೂ ಮುಖ್ಯ ಬಾಗಿಲಿನ ಎಡಭಾಗದಲ್ಲಿ ಇರುವಂತೆ ಹಾಕಬೇಕು. ನಾಮಫಲಕವನ್ನು ಪ್ರವೇಶ ದ್ವಾರದ ಅರ್ಧದಷ್ಟು ಎತ್ತರದಲ್ಲಿ ಇಡಬೇಕು. ಇದು ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯಲ್ಲಿ ಯಾವುದೇ ಉದ್ವಿಗ್ನತೆ ಸೃಷ್ಟಿಯಾಗಲು ಅವಕಾಶ ಇರೋದಿಲ್ಲ. ಮತ್ತು ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ನಾಮಫಲಕದ ಗಾತ್ರ ಎಷ್ಟಿರಬೇಕು?
ನಾಮಫಲಕದ ಆಕಾರವು ವೃತ್ತಾಕಾರ, ತ್ರಿಕೋನ ಅಥವಾ ಪಂಚಭುಜಾಕೃತಿಯಾಗಿರಬೇಕು. ನಾಮಫಲಕ ಬೀಳದಂತೆ ಸರಿಯಾಗಿ ಅದನ್ನು ಫಿಕ್ಸ್ ಮಾಡಬೇಕು. ಯಾವುದೇ ಕಾರಣಕ್ಕೂ ನಾಮಫಲಕ ಬೀಳದಂತೆ ಎಚ್ಚರಿಕೆ ವಹಿಸಬೇಕು. ನಾಮಫಲಕದ ಮುಂದೆ ಯಾವುದೇ ಕಂಬ ಅಥವಾ ಅಡ್ಡವಾಗಿ ಪಿಲ್ಲರ್ ಇರಬಾರದು.
ನಾಮ ಫಲಕ ಯಾವ ಬಣ್ಣದಲ್ಲಿ ಇರಬೇಕು?
ನಾಮಫಲಕದ ಬಣ್ಣವು ಬಹಳ ಮುಖ್ಯವಾದ ಅಂಶವಾಗಿದೆ. ಮನೆಯ ವಾಸ್ತುವಿಗೆ ಅನುಗುಣವಾಗಿ ನಾಮಫಲಕದ ಬಣ್ಣವನ್ನು ಆರಿಸಬೇಕು. ಉತ್ತರ ದಿಕ್ಕಿನ ಮನೆಯಲ್ಲಿ ಕೆಂಪು ಮತ್ತು ನೀಲಿ ಬಣ್ಣದ ನಾಮಫಲಕಗಳನ್ನು ಎಂದಿಗೂ ಬಳಸಬಾರದು. ಬದಲಿಗೆ ತಿಳಿ ಹಳದಿ ಮತ್ತು ಹಸಿರು ಬಣ್ಣದ ನಾಮಫಲಕಗಳನ್ನು ಆಯ್ಕೆ ಮಾಡಬಹುದು.
ನಿಮ್ಮ ಮನೆ ಪೂರ್ವಾಭಿಮುಖವಾಗಿದ್ದರೆ ಹಳದಿ ಬಣ್ಣವನ್ನು ಬಳಸಬಹುದು. ಅದೇ ರೀತಿ ದಕ್ಷಿಣಾಭಿಮುಖವಾಗಿರುವ ಮನೆಗೆ ಕೆಂಪು ಬಣ್ಣದ ನಾಮಫಲಕವನ್ನು ಬಳಸುವುದು ಒಳ್ಳೆಯದು. ಇನ್ನೂ ಪಶ್ಚಿಮಕ್ಕೆ ಎದುರಾಗಿರುವ ಮನೆಗೆ ನೀವು ತಿಳಿ ಬೂದು, ಕಪ್ಪು ಅಥವಾ ಕಂಚಿನ ಬಣ್ಣದ ನಾಮಫಲಕವನ್ನು ಬಳಸಬಹುದು.
ನಾಮ ಫಲಕದ ಮುಂದೆ ಈ ವಸ್ತುಗಳು ಇರಲೇಬಾರದು!
ನಾಮಫಲಕದ ಮುಂದೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬೇಡಿ. ನಾಮಫಲಕದ ಮುಂದೆ ಸ್ವಚ್ಛಗೊಳಿಸುವ ವಸ್ತುಗಳನ್ನು ಕೂಡ ಇಡಬಾರದು. ಇದನ್ನು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ.
ಈ ವಿಚಾರಗಳ ಬಗ್ಗೆ ಗಮನವಿರಲಿ!
* ನಾಮ ಫಲಕದಲ್ಲಿ ಪ್ರಾಣಿಗಳು, ಪಕ್ಷಿಗಳು, ದೇವತೆಗಳು ಇತ್ಯಾದಿಗಳ ಚಿತ್ರಗಳು ಇರಬಾರದು. ನಾಮಫಲಕದಲ್ಲಿ ಯಾವುದೇ ರೀತಿಯ ರಂಧ್ರ ಇರಬಾರದು. ವಾಸ್ತು ಪ್ರಕಾರ ಇದು ಸರಿಯಲ್ಲ.
* ನಾಮಫಲಕದಲ್ಲಿ ಗರಿಷ್ಠ ಎರಡು ಸಾಲುಗಳಲ್ಲಿ ಹೆಸರನ್ನು ಬರೆಯಬೇಕು.
* ನಾಮಫಲಕದ ಬಣ್ಣವು ಮನೆಯ ಮಾಲೀಕನ ರಾಶಿಗೆ ಹೊಂದಿಕೆಯಾಗಬೇಕು.
* ನಾಮ ಫಲಕದಲ್ಲಿ ಧೂಳು, ಕೊಳಕು ಇತ್ಯಾದಿ ಇರಬಾರದು.
* ನಾಮಫಲಕದಲ್ಲಿ ಅಕ್ಷರಗಳನ್ನು ಸುಲಭವಾಗಿ ಓದಲು ಸಾಧ್ಯವಾಗುವಂತೆ ಬರೆಯಬೇಕು
* ಎರಡು ನಾಮಫಲಕಗಳನ್ನು ಎಂದಿಗೂ ಒಟ್ಟಿಗೆ ಇಡಬಾರದು
* ಹಲ್ಲಿಗಳು ಅಥವಾ ಯಾವುದೇ ರೀತಿಯ ಜೀವಿಗಳು ನಾಮಫಲಕದ ಹಿಂದೆ ಜೀವಿಸದಂತೆ ನೋಡಿಕೊಳ್ಳಿ
* ಕಪ್ಪು ಇರುವೆಗಳು ನಾಮಫಲಕದ ಮೇಲೆ ತಿರುಗಾಡಿದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
* ನಾಮಫಲಕದ ಮೇಲಿನ ಅಕ್ಷರಗಳು ಬೀಳಬಾರದು ಅಥವಾ ಮುರಿಯಬಾರದು. ಈ ರೀತಿ ಆದರೆ ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ.
* ನಾಮಫಲಕವು ಒಂದು ಅಥವಾ ಎರಡು ಅಡಿ ದೂರದಿಂದಲೂ ಓದುವಷ್ಟು ದೊಡ್ಡದಾಗಿರಬೇಕು
* ಮುಖ್ಯ ದ್ವಾರ ಮತ್ತು ನಾಮಫಲಕವು ಪ್ರಕಾಶಮಾನವಾಗಿರಬೇಕು
ವಾಸ್ತು ಪ್ರಕಾರ ನಾಮಫಲಕ ಹಾಕುವ ಸಂದರ್ಭದಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಜಾಗರೂಕರಾಗಿರೋದು ಒಳ್ಳೆಯದು.



Click it and Unblock the Notifications











