Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಹಾಲು ಮಾರಿ, ಹೋಟೆಲ್ ಕೆಲಸ ಮಾಡಿ ನಟನಾದ..ಚೀನಾ ಶಾಲಾ ಪುಸ್ತಕದಲ್ಲೂ ಈತನದ್ದೇ ಪಾಠ..!
ಬ್ರೂಸ್ ಲೀ, ಈತನ ಹೆಸರು ಕೇಳಿಲ್ಲ ಎನ್ನುವವರು ತೀರಾ ಅಪರೂಪ. ಚೀನಾದ ಅತ್ಯಂತ ಪ್ರಸಿದ್ಧ ಕಲಾವಿದ ಆತ, ಮಾರ್ಷಲ್ ಆರ್ಟ್ಸ್ ಕಲೆಯನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದ ಖ್ಯಾತಿ ಬ್ರೂಸ್ ಲೀಗೆ ಸಲ್ಲುತ್ತದೆ. ಆದ್ರೆ ಇಲ್ಲೊಬ್ಬ ಬ್ರೂಸ್ ಲೀ ಅಭಿಮಾನಿ ಸಿನಿಮಾ ಹುಚ್ಚು ಹಿಡಿಸಿಕೊಂಡು ಚೀನಾಗೆ ಹೋಗಿ ನಟನೂ ಆಗಿ ಈಗ ಜನ ಮೆಚ್ಚುವ ಕೆಲಸ ಮಾಡಿಕೊಂಡಿದ್ದಾನೆ.
ಬ್ರೂಸ್ ಲೀ ತರ ನಟರಾಗಬೇಕು ಅನ್ನೋದು ಎಲ್ಲಾ ನಟರ ಕನಸಾಗಿರುತ್ತೆ. ಆ ರೀತಿ ಅನುಕರಣೆ ಮಾಡುವವರನ್ನೂ ನಾವು ನೋಡಿದ್ದೇವೆ. ಆದ್ರೆ ಉತ್ತರಾಖಂಡ್‌ನ ಯುವಕ ಬ್ರೂಸ್ ಲೀ ಅಂತಾಗಲೂ ಚೀನಾಗೆ ಓಡಿ ಹೋಗಿದ್ದ. ಹೌದು ಚೀನಾದ ನಟ ಭಾರತದ ದೇವ್ ರತುರಿ ಎಂಬಾತನ ಕಥೆ ಇದು.

ಇಂಗ್ಲಿಷ್ ಗೊತ್ತಿಲ್ಲ, ಮನೆಯಲ್ಲೂ ಬಡತನ
ಉತ್ತರಾಖಂಡದ ತೆಹ್ರಿ ಗರ್ವಾಲ್‌ನಿಂದ ಚೀನಾಕ್ಕೆ ಹೋಗಿದ್ದವ ಹತ್ತಾರು ಕುಟುಂಬಕ್ಕೆ ಈಗ ಬೆಳಕಾಗಿದ್ದಾನೆ.ಮನೆಯಲ್ಲಿ ಕಡು ಬಡತನ, ರೈತಾಪಿ ಕುಟುಂಬ ಸಣ್ಣ ಕೋಣೆಯಂತಹ ಮನೆಯಲ್ಲಿ ಬೆಳೆದ ಆತ ಶಾಲೆಗೆ ಹೋಗುತ್ತಿದ್ದ. ತೆಹ್ರಿ ಗರ್ವಾಲ್‌ನ ಕೆಮ್ರಿಯಾ ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ ಅವರು ಇಂಗ್ಲಿಷ್ ಅನ್ನು ಅಷ್ಟೇನೂ ಅರ್ಥಮಾಡಿಕೊಳ್ಳಲಿಲ್ಲ,
ಆದರೂ ಅವರು ಚಲನಚಿತ್ರವನ್ನು ವೀಕ್ಷಿಸಲು ಥ್ರಿಲ್ ಆಗಿದ್ದರು. "ನಾನು 6 ನೇ ತರಗತಿಯಲ್ಲಿದ್ದಾಗ ಮಾತ್ರ ಎಬಿಸಿಡಿ ಕಲಿಯಲು ಪ್ರಾರಂಭಿಸಿದೆ. ನಟನು ಇಂಗ್ಲಿಷ್ ಅನ್ನು ತುಂಬಾ ನಿಧಾನವಾಗಿ ಮಾತನಾಡುತ್ತಿದ್ದರಿಂದ ಈ ಚಲನಚಿತ್ರವು ನನಗೆ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು" ಎಂದು ಈಗ 47ರ ಹರೆಯದ ದೇವ್ ಹೇಳುತ್ತಾರೆ.
ಬ್ರೂಸ್ ಲೀ ಅಭಿಮಾನಿಯಾದ
ಆದರೆ ಸಿನಿಮಾ ನೋಡುತ್ತಿದ್ದ ಅವರಿಗೆ ಅಚ್ಚರಿಯಾಗಿ ಕಂಡಿದ್ದು ಬ್ರೂಸ್ ಲೀ. ಕೈಯಲ್ಲಿ ಯಾವ ಆಯುಧವೂ ಇಲ್ಲದೆ ಸವಕಲು ದೇಹದ ಯುವಕ ಎಲ್ಲರೂ ನಿಬ್ಬೆರಗಾಗುವ ಮಾರ್ಷಲ್ ಆರ್ಟ್ಸ್ ಪ್ರದರ್ಶಿಸುತ್ತಿರುವುದನ್ನು ಕಂಡು ಬೆರಗಾಗಿದ್ದ. ಅಂದೆ ಸಿನಿಮಾದಲ್ಲಿ ನಟಿಸಬೇಕು ಎಂಬ ನಿರ್ಧಾರ ಮಾಡಿ ಮನೆಯಲ್ಲಿ ಹೇಳಿ ದೆಹಲಿಗೆ ತೆರಳಿಯೇ ಬಿಟ್ಟ.
10ನೇ ತರಗತಿವರೆಗೆ ಓದಿದ್ದ ದೇವ್ ಒಂದೊತ್ತಿನ ಊಟಕ್ಕಾಗಿ ಹಾಲು ಮಾರುವುದು, ಕಾರು ಓಡಿಸುವುದು, ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. 1998ರಲ್ಲಿ, ಅವರು ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಅಣ್ಣನೊಂದಿಗೆ ವಾಸಿಸಲು ಮುಂಬೈಗೆ ಹೋದರು.
ಮೆಟ್ರೋಪಾಲಿಟನ್ ನಗರದಲ್ಲಿ ಬದುಕಲು, ಅವರು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದರು ಮತ್ತು ಸಿನಿಮಾ ಸೆಟ್‌ಗೆ ತನ್ನ ಸಹೋದರನೊಂದಿಗೆ ಹೋಗುತ್ತಿದ್ದರು. ಆದರೆ ಅವರಿಗೆ ಇಲ್ಲಿ ಅದೃಷ್ಟ ಕುಲಾಯಿಸಿತ್ತು. ಒಂದು ದಿನ ದೇವ್‌ಗೆ ಕ್ಯಾಮರಾ ಮುಂದೆ ಕೆಲವು ಡೈಲಾಗ್‌ಗಳನ್ನು ಓದಲು ಕೇಳಲಾಯಿತ್ತು. ಅವರೂ ಕಂಠಪಾಠ ಮಾಡಿ ಡೈಲಾಗ್ ಹೇಳಿಯೇ ಬಿಟ್ಟಿದ್ರು. ಇದು ಅವರು ನಟನಾಗಲು ಮೊದಲ ಹೆಜ್ಜೆಯಾಗಿತ್ತು.
ಹೊಟ್ಟೆಪಾಡಿಗಾಗಿ ಹೋಟೆಲ್ ಕೆಲಸ
ಎದೆಗುಂದದ ದೇವ್ ದೆಹಲಿಗೆ ಹಿಂತಿರುಗಿ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸಕ್ಕೆ ಸೇರಿದರು. ಅಚ್ಚರಿಯಂತೆ ಚೀನಾದಲ್ಲಿ ಭಾರತೀಯ ಹೋಟೆಲ್ ಹೊಂದಿದ್ದ ಮಾಲೀಕರೊಬ್ಬರು ದೇವ್ ಪರಿಚಯ ಮಾಡಿಕೊಂಡ. ಅವರು ಚೀನಾಗೆ ಬಂದುಬಿಡು ಅಲ್ಲಿ ನಮ್ಮ ಹೋಟೆಲ್ ಕೆಲಸ ಮಾಡು ಎಂಬ ಆಫರ್ ನೀಡಿದ್ದರು. ಹಿಂದು ಮುಂದು ನೋಡದೆ ದೇವ್ ಚೀನಾಗೆ ಹೊರಟೇ ಬಿಟ್ಟರು.
2005ರಲ್ಲಿ ಅವರು ಚೀನಾಕ್ಕೆ ತೆರಳಿದರು. ಆದ್ರೆ ಚೀನಾದಲ್ಲಿ ಹೋಟೆಲ್ ಕೆಲಸ ಮಾಡುವುದು ದೇವ್ ಉದ್ದೇಶವಾಗಿರಲಿಲ್ಲ. ಮಾರ್ಷಲ್ ಆರ್ಟ್ಸ್ ಕಲಿಯುವುದು ಅವರ ಮೊದಲ ಆದ್ಯತೆಯಾಗಿತ್ತು. ಹಗಲು ಕೆಲಸ ಮಾಡಿ ರಾತ್ರಿ ಮಾರ್ಷಲ್ ಆರ್ಟ್ಸ್ ತರಗತಿಗೆ ತೆರಳಿದರು. ಕಷ್ಟ ಪಟ್ಟು ಈ ವಿದ್ಯೆ ಕಲಿತರು.
ಆದ್ರೆ 5 ವರ್ಷದಲ್ಲಿ ಅವರು ಹೋಟೆಲ್ ವೇಯ್ಟರ್ ಬದಲು ಮ್ಯಾನೇಜರ್ ಆಗಿ ಬಡ್ತಿ ಪಡೆದರು. ಇಷ್ಟೆಲ್ಲಾ ಆದರೂ ದೇವ್‌ಗೆ ಸಮಾಧಾನವಿರಲಿಲ್ಲ. ಆತ್ಮತೃಪ್ತಿ ಹೊಂದಲು ನಟನಾಗದೆ ಬೇರೆ ದಾರಿ ಕಾಣಿಸಲಿಲ್ಲ. ಇದರ ಹೊತ್ತಲ್ಲಿ ತಮ್ಮ ಹೋಟೆಲ್‌ಗೆ ಚೀನಾ ಸಿನಿಮಾ ನಿರ್ದೇಶಕರೊಬ್ಬರು ಸಣ್ಣ ದೃಶ್ಯ ಶೂಟ್ ಮಾಡಲು ಬಂದಿದ್ದರು. ಚೀನೀ ನಿರ್ದೇಶಕ ಟ್ಯಾಂಗ್ ರೆಸ್ಟೋರೆಂಟ್‌ನಲ್ಲಿ ಸಣ್ಣ ದೃಶ್ಯವನ್ನು ಚಿತ್ರೀಕರಿಸಲು ಯೋಜಿಸಿದರು.
ಚೀನಿ ಶಾಲಾ ಮಕ್ಕಳ ಪಾಠವಾದ ದೇವ್
ಆದ್ರೆ ಹೋಟೆಲ್‌ನಲ್ಲಿಯೇ ದೇವ್‌ಗೆ ಸಣ್ಣ ಪಾತ್ರ ಮಾಡುವ ಅವಕಾಶವೂ ಸಿಕ್ಕಿತು. ಇಲ್ಲಿಂದ ಅವರ ನಟನೆ ಆರಂಭವಾಯಿತು. ಬಳಿಕ ಚೀನಿ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ದೇವ್ SWAT ಹೆಸರಿನ ಟಿವಿ ಧಾರಾವಾಹಿ ಸರಣಿಯಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ಇಂದು, ಅವರು ಚೀನಾದ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರು. ಅವರ ಪ್ರಯಾಣವು ಚೀನಿಯರಲ್ಲಿ ಎಷ್ಟು ಚಿರಪರಿಚಿತವಾಗಿದೆ ಎಂದರೆ ಅವರ ಜೀವನ ಕಥೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸ್ಪೂರ್ತಿದಾಯಕ ಕಥೆಯಾಗಿ ಸೇರಿಸಲಾಗಿದೆ.
ಚೀನಾದ ಕ್ಸಿಯಾನ್ ಇಂಟರ್‌ನ್ಯಾಶನಲ್ ಸ್ಟಡೀಸ್ ಯೂನಿವರ್ಸಿಟಿಯು ಅಲ್ಲಿನ ಮಕ್ಕಳಿಗೆ ದೇವ್ ಅವರ ಸ್ಫರ್ತಿದಾಯಕ ಜೀವನವನ್ನು ಪಾಠವಾಗಿ ಪರಿಚಯಿಸಿದೆ.



Click it and Unblock the Notifications

