Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ನಿತ್ಯ ಮಂತ್ರ ಪಠಣೆ ಮಾಡುತ್ತೀರಾ? ಹಾಗಾದ್ರೆ ಈ ವಿಚಾರಗಳನ್ನು ಮರೆಯಲೇಬೇಡಿ !
ಪೂಜಾ ಸಂದರ್ಭದಲ್ಲಿ ನಾವು ಮಂತ್ರವನ್ನು ಪಠಣೆ ಮಾಡುವುದನ್ನು ನೋಡಿದ್ದೇವೆ. ಹಿಂದೂ ಧರ್ಮದಲ್ಲಿ ಅನೇಕ ಪೂಜಾ ಕೈಂಕರ್ಯಗಳಿದೆ. ಸಂಕಷ್ಟ ಪರಿಹಾರಕ್ಕೆ, ಸಂಪತ್ತು ಅಭಿವೃದ್ಧಿಗಾಗಿ ಹೀಗೆ ಅನೇಕ ಕಾರಣಗಳಿಗಾಗಿ ನಾವು ಬೇರೆ ಬೇರೆ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ.
ಇಲ್ಲಿ ಮುಖ್ಯವಾದ ವಿಚಾರ ಅಂದ್ರೆ ಪ್ರತಿ ಪೂಜೆಗೂ ಬೇರೆ ಬೇರೆ ಮಂತ್ರಗಳನ್ನು ಪಠಣೆ ಮಾಡಲಾಗುತ್ತದೆ. ಆದರೆ ಪೂಜೆಯ ಫಲಸಿಗಬೇಕಾದರೆ ನಾವು ಪಠಿಸುವ ಮಂತ್ರವನ್ನು ಸರಿಯಾದ ವಿಧಾನದಲ್ಲಿ ಪಠಣೆ ಮಾಡಬೇಕು. ಹಾಗಾದ್ರೆ ಮಂತ್ರ ಪಠಣೆ ಮಾಡಬೇಕಾದ ಸಂದರ್ಭದಲ್ಲಿ ಯಾವೆಲ್ಲಾ ವಿಚಾರಗಳನ್ನು ತಲೆಯಲ್ಲಿಟ್ಟುಕೊಳ್ಳಬೇಕು ಅನ್ನೋದನ್ನ ತಿಳಿಯೋಣ.

1. ಸರಿಯಾದ ಸಮಯದಲ್ಲಿ ಮಂತ್ರ ಪಠಣೆ ಮಾಡಬೇಕು
ಮಂತ್ರಪಠಣೆ ಮಾಡಬೇಕಾದ ಸಂದರ್ಭದಲ್ಲಿ ಏಕಾಗ್ರತೆ ಎಷ್ಟು ಮುಖ್ಯವಾಗುತ್ತದೆಯೋ ಅದಕ್ಕಿಂತ ಮುಖ್ಯವಾಗಿ ನಾವು ಯಾವ ಸಂದರ್ಭದಲ್ಲಿ ಮಂತ್ರ ಪಠಣೆ ಮಾಡುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲು ಅಥವಾ ಸೂರ್ಯಾಸ್ತದ ನಂತರ ಮಂತ್ರ ಪಠಣೆ ಮಾಡೋದಕ್ಕೆ ಉತ್ತಮ ಸಮಯ. ಮುಖ್ಯವಾಗಿ ರಾತ್ರಿಯ ಸಮಯದಲ್ಲಿ ಮಂತ್ರ ಪಠಣೆ ಮಾಡಲು ಹೋಗಬೇಡಿ. ಯಾಕಂದ್ರೆ ಇದು ನಿಮ್ಮ ನಿದ್ರೆಗೂ ಕೂಡ ತೊಂದರೆಯನ್ನು ಉಂಟುಮಾಡಬಹುದು. ಇನ್ನೂ ಪ್ರತಿನಿತ್ಯ ಒಂದೇ ಸಮಯದಲ್ಲಿ ಮಂತ್ರ ಪಠಣೆ ಮಾಬೇಕು.
2. ಪ್ರಾಶಸ್ತ್ಯವಾದ ಸ್ಥಳ ಆಯ್ಕೆ ಮಾಡಿ
ಮಂತ್ರ ಪಠಣೆ ಮಾಡುವ ಸಂದರ್ಭದಲ್ಲಿ ಪ್ರಾಶಸ್ತ್ಯವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ಸಾರಿ ನೀವು ಮಂತ್ರ ಪಠಣೆ ಮಾಡಲು ಕುಳಿತುಕೊಂಡರೆ ಪದೇ ಪದೇ ಸ್ಥಳ ಬದಲಾಣೆ ಮಾಡಬಾರದು. ಮಂತ್ರ ಪಠಣೆ ಮುಗಿಯುವವರೆಗೂ ಒಂದೇ ಸ್ಥಳದಲ್ಲಿ ಕುಳಿತಿರಬೇಕು. ಶಾಂತಿ ಹಾಗೂ ಪ್ರಶಾಂತತೆ ಇರುವ ಸ್ಥಳದಲ್ಲಿ ಮಂತ್ರ ಪಠಣೆ ಮಾಡಿದರೆ ಒಳ್ಳೆಯದು.
3. ಜಪಮಾಲೆಯ ಆಯ್ಕೆ ಸರಿಯಾಗಿರಲಿ
ಮಂತ್ರಪಠಣೆ ಮಾಡೋದಕ್ಕೆ ಶುರು ಮಾಡುವ ಮೊದಲು ಸರಿಯಾದ ಜಪಮಾಲೆಯನ್ನು ಆಯ್ದುಕೊಳ್ಳಿ. ಬೇರೆ ಬೇರೆ ರೀತಿಯ ಮಂತ್ರಪಠಣೆ ಮಾಡುವ ಸಂದರ್ಭದಲ್ಲಿ ನಾವು ಬೇರೆ ಬೇರೆ ಜಪಮಾಲೆಯನ್ನು ಆಯ್ದುಕೊಳ್ಳಬೇಕು. ಹೀಗಾಗಿ ಸರಿಯಾದ ಜಪಮಾಲೆಯನ್ನು ಆಯ್ದುಕೊಳ್ಳಲು ಆರ್ಚಕರು ಅಥವಾ ತಿಳಿದವರ ಸಹಾಯಪಡೆದುಕೊಳ್ಳಿ. ಒಂದು ವೇಳೆ ನೀವು ಮಂತ್ರ ಪಠಣೆ ಮಾಡುವಾಗ ತಪ್ಪಾದ ಜಪಮಾಲೆಯನ್ನು ಆಯ್ದುಕೊಂಡಿದ್ದೇ ಆದರೆ ಅದು ನಿಮಗೆ ಫಲ ನೀಡೋದಿಲ್ಲ.
4. ಕುಳಿತುಕೊಳ್ಳುವ ಭಂಗಿ ಸರಿಯಾಗಿರಲಿ
ಮಂತ್ರಪಠಣೆ ಮಾಡುವ ಸಂದರ್ಭದಲ್ಲಿ ನಾವು ಕುಳಿತುಕೊಳ್ಳುವ ಭಂಗಿ ಸರಿಯಾಗಿರಬೇಕು. ಮರದ ಪೀಠ, ಹತ್ತಿಯ ಬಟ್ಟೆ, ಮ್ಯಾಟ್ ಅಥವಾ ನೆಲದ ಮೇಲೆಯೂ ಕುಳಿತುಕೊಳ್ಳಬಹುದು. ಆದರೆ ಸೋಫಾದ ಮೇಲೆ ಅಥವಾ ಕುರ್ಚಿ ಮೇಲೆ ಕುಳಿತುಕೊಳ್ಳಲು ಹೋಗಬೇಡಿ. ನಾವು ಕುಳಿತುಕೊಳ್ಳುವ ಭಂಗಿ ಸರಿಯಾಗಿದ್ದರೆ ಮಂತ್ರ ಪಠಣೆ ಮಾಡುವ ಸಂದರ್ಭದಲ್ಲಿ ನಮಗೆ ಯಾವುದೇ ರೀತಿ ತೊಂದರೆ ಆಗೋದಿಲ್ಲ.
5. ಜಪಮಾಲೆಯನ್ನು ಕಾಣುವಂತೆ ಇಡಬೇಡಿ
ನೀವು ಮಂತ್ರಪಠಣೆ ಮಾಡುವಾಗ ಜಪಮಾಲೆಯನ್ನು ಯಾರಿಗೂ ಕಾಣದಂತೆ ಇಡಬೇಕು. ಮಂತ್ರ ಪಠಣೆ ಮಾಡುವಾಗ ಜಪಮಾಲೆಯನ್ನು ಬಟ್ಟೆಯಲ್ಲಿ ಕವರ್ ಮಾಡಿ ಯಾರಿಗೂ ಕಾಣದಂತೆ ಇಡಬೇಕು. ಇನ್ನೂ ನಿಮ್ಮ ತಲೆಯು ಯಾರಿಗೂ ಕಾಣದಂತೆ ಮಂತ್ರ ಪಠಣೆ ಮಾಡಬೇಕು. ಆದ್ದರಿಂದ ಮಂತ್ರ ಪಠಣೆ ಮಾಡುವ ಸಂದರ್ಭದಲ್ಲಿ ನಿಮ್ಮ ತಲೆಯನ್ನು ಬಟ್ಟೆಯಿಂದ ಕವರ್ ಮಾಡಿದರೆ ಒಳ್ಳೆಯದು.
6. ಜಪಮಾಲೆಯನ್ನು ಸರಿಯಾಗಿ ಬಳಕೆ ಮಾಡಿ
ಅನೇಕ ಜನರಿಗೆ ಜಪಮಾಲೆಯನ್ನು ಯಾವ ರೀತಿ ಬಳಕೆ ಮಾಡಬೇಕು ಎನ್ನುವುದು ಗೊತ್ತಿರೋದಿಲ್ಲ. ಮುಖ್ಯವಾದ ವಿಚಾರ ಎಂದರೆ ಜಪಮಾಲೆಯನ್ನು ತಿರುಗಿಸಲು ಹೆಬ್ಬೆರಳು ಹಾಗೂ ಮಧ್ಯದ ಬೆರಳನ್ನು ಬಳಕೆ ಮಾಡಬೇಕು. ಯಾವ ವ್ಯಕ್ತಿ ಮಂತ್ರ ಪಠಣೆ ಮಾಡುವ ಸಂದರ್ಭದಲ್ಲಿ ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳುತ್ತಾನೆ ಹಾಗೂ ಏಕಾಗ್ರತೆಯಿಂದಿರುತ್ತಾನೋ ಅವರು ಅತೀ ಹೆಚ್ಚಿನ ಫಲಿತಾಂಶವನ್ನು ಪಡೆಯುತ್ತಾರಂತೆ.
ಹೀಗಾಗಿ ಯಾವುದೇ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಅಲ್ಲಿ ಶ್ರದ್ಧೆ ಹಾಗೂ ಏಕಾಗ್ರತೆ ತುಂಬಾನೇ ಮುಖ್ಯವಾಗುತ್ತದೆ. ಆಗ ಮಾತ್ರ ಯಾವುದೇ ಕೆಲಸವಾದರೂ ಫಲ ಕೊಡೋದಕ್ಕೆ ಸಾಧ್ಯ.



Click it and Unblock the Notifications













