Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಶ್ರಾವಣದ ಮಾಸ: ಸೋಮವಾರ, ಮಂಗಳವಾರ ಈ 5 ತಪ್ಪುಗಳನ್ನು ಮಾಡದಿರಿ
ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರಕ್ಕೆ ತುಂಬಾನೇ ಮಹತ್ವವಿದೆ. ಪ್ರತಿ ಸೋಮವಾರ ಶಿವನಿಗೆ ವಿಶೇಷ ಪೂಜೆ ಮಾಡಿ ಆರಾಧಿಸಲಾಗುವುದು. ಈ ದಿನ ಶಿವನ ಆರಾಧನೆ ಮಾಡುವುದರಿಂದ ಹೆಚ್ಚಿನ ಫಲ ಸಿಗಲಿದೆ, ಈ ದಿನ ಉಪವಾಸವಿದ್ದು ಶಿವ-ಪಾರ್ವತಿಯ ಆರಾಧನೆ ಮಾಡಿದರೆ ಶಿವ-ಪಾರ್ವತಿಯ ಕೃಪೆಯಿಂದ ಬದುಕಿನಲ್ಲಿ ಒಳಿತಾಗುವುದು ಎಂಬ ನಂಬಿಕೆ.
ಶ್ರಾವಣ ಮಾಸದಲ್ಲಿ ಸೋಮವಾರ ಶಿವನ ಆರಾಧನೆ ಮಾಡಿದರೆ ಮಂಗಳ ವಾರ ಮಂಗಳ ಗೌರಿ ಅಂದರೆ ಪಾರ್ವತಿಯ ಆರಾಧನೆ ಮಾಡಲಾಗುವುದು. ಈ ವ್ರತಗಳನ್ನು ಪಾಲಿಸುವವರು ಕೆಲವೊಂದು ಪೂಜಾ ನಿಯಮಗಳನ್ನು ಪಾಲಿಸಬೇಕು, ಈ ತಪ್ಪುಗಳು ಆಗದಂತೆ ಎಚ್ಚರವಹಿಸಬೇಕು.

1. ಶ್ರಾವಣ ಮಾಸದಲ್ಲಿ ಹೆಚ್ಚಾಗಿ ತಿನ್ನಬಾರದು: ಶ್ರಾವಣ ಮಾಸದಲ್ಲಿ ಅತೀ ಹೆಚ್ಚು ತಿನ್ನಬಾರದು, ಅಲ್ಲದೆ ಬರೀ ಸಾತ್ವಿಕ ಆಹಾರವನ್ನಷ್ಟೇ ಸೇವಿಸಬೇಕು. ಈ ಅವಧಿಯಲ್ಲಿ ಧ್ಯಾನದಲ್ಲಿ ಮಗ್ನರಾಗಿರಬೇಕು, ಸದಾ ಶಿವನ ಧ್ಯಾನದಲ್ಲಿರುವುದರಿಂದ ಶಿವಕೃಪೆಯಿಂದಾಗಿ ಬದುಕು ತುಂಬಾನೇ ಸುಂದರವಾಗುವುದು. ಅಲ್ಲದೆ ಮನೆಯ ವಾತಾವರಣ ಕೂಡ ತುಂಬಾ ಶಾಂತವಾಗಿರಬೇಕು. ಮನೆಯಲ್ಲಿ ಜಗಳ, ವಾಗ್ವಾದ ಏನೂ ಇರಬಾರದು.
2. ಈರುಳ್ಳಿ, ಬೆಳ್ಳುಳ್ಳಿ ಸೇವಿಸಬಾರದು
ಶ್ರಾವಣ ಮಾಸದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಸೇವಿಸುವಂತಿಲ್ಲ, ಅದರಲ್ಲೂ ಉಪವಾಸದ ದಿನವಂತೂ ಇವುಗಳನ್ನು ಮುಟುವಂತೆಯೂ ಇಲ್ಲ.
3. ಎಣ್ಣೆಯಲ್ಲಿ ಕರಿದ ಪದಾರ್ಥ ತಿನ್ನಬಾರದು
ಶ್ರಾವಣ ಮಾಸದ ಆಹಾರ ಪದ್ಧತಿ ನಮ್ಮ ದೇಹವನ್ನು ಡಿಟಾಕ್ಸ್ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಈ ಅವಧಿಯಲ್ಲಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದರೆ ದೇಹದಲ್ಲಿರುವ ಕಶ್ಮಲ ಹೊರ ಹಾಕಲು ಸಾಧ್ಯವಿಲ್ಲ. ದೇಹದಲ್ಲಿರುವ ಕಶ್ಮಲ ಹೊರಹಾಕಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಕಾಯಿಲೆ ಬೀಳುವುದು ಕಡಿಮೆಯಾಗುವುದು ಈ ದೃಷ್ಟಿಯಿಂದ ಶ್ರಾವಣ ಮಾಸದ ವ್ರತ ತುಂಬಾನೇ ಸಹಕಾರಿ. ದೇವರ ಕೃಪೆ ಜೊತೆ ಆರೋಗ್ಯ ಭಾಗ್ಯ ಕೂಡ ಪಡೆಯಬಹುದು.
4. ಹೆಚ್ಚು ಸಕ್ಕರೆ ಸೇವಿಸಬೇಡಿ
ಉಪವಾಸವಿದ್ದಾಗ ಬಾಯಿಗೆ ಏನಾದರೂ ಸಿಹಿ ಬೇಕೆಂದಿನಿಸುವುದು, ಆದರೆ ಸಿಹಿ ತಿನ್ನಲು ಸಕ್ಕರೆ ತಿನ್ನಬೇಡಿ, ಅದರ ಬದಲಿಗೆ ಬೆಲ್ಲ ಅಥವಾ ಬೆಲ್ಲದ ಸಿಹಿ ತಿಂಡಿ ಬಳಸಿ.
5. ಉಪವಾಸ ಮಾಡುವಾಗ ನಿಮ್ಮ ಆರೋಗ್ಯ ಸ್ಥಿತಿ ಗಮನದಲ್ಲಿರಲಿ
ಉಪವಾಸ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು, ಆದರೆ ಶುಗರ್ ಅಥವಾ ಬೇರೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಕಠಿಣ ವ್ರತ ಮಾಡಬೇಡಿ, ಇದರಿಂದ ಇನ್ಸುಲಿನ್‌ನಲ್ಲಿ ಹೆಚ್ಚು ಕಡಿಮೆ ಆದರೆ ತೊಂದರೆಯಾಗುವುದು. ಆದ್ದರಿಂದ ಸಂಪೂರ್ಣ ದಿನ ಉಪವಾಸವಿರಲು ಸಾಧ್ಯವಾಗದವರು ಈ ದಿನ ಸಾತ್ವಿಕ ಆಹಾರ ಮಾತ್ರ ಸೇವಿಸಿ ಅಥವಾ ಒಂದು ಹೊತ್ತು ಆಹಾರ ಸೇವಿಸಿ ಉಪವಾಸ ಮಾಡಿ.



Click it and Unblock the Notifications
