Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶೂನ್ಯತೆ, ನಿರ್ಥಕತೆ, ಖಾಲಿತನದ ನಿಜವಾದ ಅರ್ಥ

ಒಂದು ದಿನ ಸುಭುತಿಯು ಮರವೊಂದರ ಕೆಳಗಡೆ ಸ್ಥಿತಪ್ರಜ್ಞನಂತೆ ಧ್ಯಾನದಲ್ಲಿ ಮುಳುಗಿದ್ದನು. ಆಗ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದ ದೇವತೆಗಳು ಆತನ ಮೇಲೆ ಪುಷ್ಪ ವೃಷ್ಟಿ ಮಾಡಲು ಶುರು ಮಾಡಿದರು. ಇದರಿಂದ ಸುಭುತಿಯ ಏಕಾಂತ ಕಡಿತಗೊಂಡಿತು ಮತ್ತು ಆತನಿಗೆ ಆಶ್ಚರ್ಯವೋ ಆಶ್ಚರ್ಯ. ಸುತ್ತ ಮುತ್ತ ನೋಡಿದಾಗ ಆತನಿಗೆ ದೇವತೆಗಳು ಹೂಮಳೆ ಸುರಿಸಿದ್ದು ಕಂಡುಬಂದಿತು.
"ಇದೇಕೆ ನನ್ನ ಮೇಲೆ ಪುಷ್ಪ ವೃಷ್ಟಿ ಮಾಡಿದಿರಿ?" ಎಂದು ಸುಭುತಿ ವಿನಮ್ರವಾಗಿ ದೇವರನ್ನು ಪ್ರಶ್ನಿಸಿದ.
"ಶೂನ್ಯತೆ, ಖಾಲಿತನದ ಬಗ್ಗೆ ನಿನ್ನ ಮಾತುಗಳನ್ನು, ಉಪದೇಶಗಳನ್ನು, ನಿನ್ನ ಚಿಂತನೆಯನ್ನು ನಾವು ಮೆಚ್ಚಿದ್ದೇವೆ. ಆದ್ದರಿಂದಲೇ ಈ ಹೂ ಮಳೆ" ಎಂದು ದೇವತೆಗಳು ಉಸುರಿದರು.
"ಆದರೆ..." ಸುಭುತಿ ಹೇಳಿದ, "ನಾನು ಶೂನ್ಯತೆ ಬಗ್ಗೆ ನಿಮ್ಮ ಜೊತೆ ಮಾತನಾಡಿಯೇ ಇಲ್ಲವಲ್ಲ?"
"ನೀನು ಶೂನ್ಯತೆ ಬಗ್ಗೆ ಮಾತನಾಡಿಯೂ ಇಲ್ಲ, ನಾವು ಶೂನ್ಯತೆ ಬಗ್ಗೆ ಕೇಳಿಯೂ ಇಲ್ಲ" ಎಂದು ದೇವತೆಗಳು ಸುಭುತಿಯನ್ನು ಪ್ರಶಂಶಿಸಿದರು.
ಬುದ್ಧನ ಅನುಯಾಯಿಯಾಗಿದ್ದ ಸುಭುತಿಯ ಮೇಲೆ ಮತ್ತೆ ಯತೇಚ್ಛವಾಗಿ ಹೂವಿನ ಸುರಿಮಳೆಯಾಯ್ತು.



Click it and Unblock the Notifications
