Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶುಭ ಸಂದರ್ಭಗಳಲ್ಲಿ ಹೂವುಗಳ ಬಳಕೆ ಅತಿ ಪವಿತ್ರ ಏಕೆ?
ಹಿಂದೂ ಧರ್ಮವು ಪ್ರಪಂಚದ ಧರ್ಮಗಳಲ್ಲಿಯೇ ಅತ್ಯಂತ ಕುತೂಹಲಕಾರಿ ವಿಚಾರಗಳನ್ನು ತನ್ನಲ್ಲಿ ಒಳಗೊಂಡಿರುವ ಧರ್ಮವಾಗಿದೆ. ಹಬ್ಬಗಳು, ಸಂಪ್ರದಾಯಗಳು, ಪೂಜಾ ವಿಧಿಗಳು ಮತ್ತು ಆಚರಣೆಗಳು ಈ ಧರ್ಮವನ್ನು ಇತರ ಧರ್ಮಗಳಿಗಿಂತ ಬೇರೆಯಾಗಿ ನಿಲ್ಲಿಸುತ್ತದೆ.
ಅಂತೆಯೇ ಭಾರತೀಯ ಸಂಸ್ಕೃತಿಯಲ್ಲಿ ಹೂವಿಗೆ ಭಕ್ತಿಯ ಮೌಲ್ಯವನ್ನು ನೀಡಲಾಗಿದೆ. ದೇವರಿಗೆ ಹೂವನ್ನು ಅರ್ಪಿಸುವುದರ ಮೂಲಕ ಭಕ್ತಿಯನ್ನು ಸಮರ್ಪಿಸುವುದು ಭಾರತೀಯರು ನಡೆಸಿಕೊಂಡು ಬಂದಿರುವ ಪದ್ಧತಿ.ಸಾಕಷ್ಟು ದೇವರನ್ನು ಪೂಜಿಸಲು ದಾಸವಾಳ, ಚೆಂಡು ಹೂವು, ಮತ್ತು ಕಮಲದ ಹೂವುಗಳನ್ನು ಬಳಸಲಾಗುತ್ತದೆ. ಹೂವಿನ ಪರಿಮಳ ಮತ್ತು ಬಣ್ಣ ಧನಾತ್ಮಕ ಭಾವನೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ಹಾಗೆಯೇ ಹಿಂದೂ ಧರ್ಮದಲ್ಲಿ ವರ ಮತ್ತು ವಧು ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆ ಮಾಡಲಾಗುತ್ತದೆ. ಶುಭ ಸಂದರ್ಭಗಳಲ್ಲಿ ಹೂವುಗಳ ಬಳಕೆಯ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳೋಣ.

ಚೆಂಡು ಹೂವು
ಚೆಂಡು ಹೂವು ಕೀಟಗಳನ್ನು ದೂರಮಾಡುವ ಘಾಟಿನ ಪರಿಮಳವನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಮನೆಗಳಲ್ಲಿ ತೋರಣದ ರೂಪದಲ್ಲಿ ಮತ್ತು ದೇವರಿಗೆ ಹಾರದ ರೂಪದಲ್ಲಿ ಹಾಕಲಾಗುತ್ತದೆ.
ದಾಸವಾಳ
ಕೆಂಪು ದಾಸವಳವನ್ನು ಗಣೇಶ ದೇವರಿಗೆ ಮತ್ತು ಕಾಳಿ ಮಾತೆಗೆ ಅರ್ಪಿಸಲಾಗುತ್ತದೆ, ಜೊತೆಗೆ ದಾಸವಾಳ ಹೂವು ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ದಾಸವಾಳದ ಹೂವು ನಮ್ಮ ಜೀವನದಲ್ಲಿ ಏಳಿಗೆಯನ್ನು ನೀಡಿ ಶತ್ರುಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.
ಗುಲಾಬಿ
ಗುಲಾಬಿ ಹೂವಿನ ಎಸಳುಗಳನ್ನು ಹೊಸ ಮದುಮಕ್ಕಳ ಮಂಚದ ಮೇಲೆ ಹರಡಲಾಗುತ್ತದೆ. ಗುಲಾಬಿ ಹೂವಿನ ಎಸಳುಗಳಲ್ಲಿ ಕಾಮೋತ್ತೇಜಕ ಸುವಾಸನೆ ಇರುವುದು ಇದಕ್ಕೆ ಮುಖ್ಯ ಕಾರಣ. ಗುಲಾಬಿ ಹೂವು ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ಕೂಡ ನಂಬಲಾಗಿದೆ.ಗುಲಾಬಿ ಹೂವುಗಳು ಭಾವನಾತ್ಮಕವಾಗಿ ಕೂಡ ಹತ್ತಿರವಾಗಿಸುತ್ತದೆ ಎಂದು ಹೇಳಲಾಗುತ್ತದೆ.
ಕಮಲ
ಜಲಪುಷ್ಪವಾದ ಈ ಕಮಲದ ಹೂವು ವಿಷ್ಣು, ಬ್ರಹ್ಮ, ಸರಸ್ವತಿ ಮತ್ತು ಲಕ್ಷ್ಮಿಗೆ ಪ್ರಿಯವಾಗಿದೆ. ಕಮಲದ ಹೂವು ಸೌಂದರ್ಯ ಮತ್ತು ಶುದ್ಧತೆಯ ಸಂಕೇತ. ಅರಳಿರುವ ಕಮಲದ ದಳಗಳನ್ನು ಆತ್ಮದ ವಿಸ್ತರಣೆಯ ರೂಪವಾಗಿ ನೋಡಲಾಗುತ್ತದೆ. ಬೌದ್ಧ ಜನಾಂಗದಲ್ಲಿ ಕಮಲದ ಹೂವನ್ನು ಆತ್ಮ ಸ್ವರೂಪದ ಶುದ್ಧತೆಗೆ ಹೋಲಿಸಲಾಗುತ್ತದೆ.
ಮಲ್ಲಿಗೆ ಹೂವು
ಮಲ್ಲಿಗೆ ಹೂವನ್ನು ಭಾರತೀಯರು ದೇವರಿಗೆ ಅರ್ಪಿಸಲು ಮಾತ್ರವಲ್ಲ ಮಹಿಳೆಯರ ಕೇಶ ಅಲಂಕಾರಕ್ಕೂ ಬಳಸಲಾಗುತ್ತದೆ. ಇದರಲ್ಲಿರುವ ಸುಗಂಧ ಪರಿಮಳವು ಹಿತಕರ ಅನುಭವವನ್ನು ನೀಡುವುದರ ಜೊತೆಗೆ ರಿಲ್ಯಾಕ್ಸ್ ಆಗಿಸಲು ಸಹಕರಿಸುತ್ತದೆ.



Click it and Unblock the Notifications
