Latest Updates
-
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು!
ಕಲ್ಪನೆಗೂ ಮೀರಿದ, ಉಪವಾಸ ವ್ರತದ ಕಟ್ಟುನಿಟ್ಟಿನ ಆಚರಣೆಗಳು
ಹಿಂದೂ ಧರ್ಮದಲ್ಲಿ ವ್ರತ, ಉಪವಾಸಕ್ಕೆ ಅದರದ್ದೇ ಆದ ಮಹತ್ವವಿದೆ. ತಮ್ಮ ಮನದ ಅಭಿಲಾಶೆಗಳನ್ನು ಈಡೇರಿಸುವುದಕ್ಕಾಗಿ ಅಂತೆಯೇ ಭಗವಂತನ ಕೃಪೆಯನ್ನು ಪಡೆದುಕೊಳ್ಳುವುದಕ್ಕಾಗಿ ಈ ವ್ರತವನ್ನು ಆಚರಿಸಲಾಗುತ್ತದೆ. ವ್ರತವನ್ನು ಆಚರಿಸುವಾಗ ನಾನಾ ಪ್ರಕಾರಗಳಿದ್ದು ಕೆಲವರು ಕಠಿಣ ವ್ರತಗಳನ್ನು ಆಚರಿಸುವ ಮೂಲಕ ವ್ರತವನ್ನು ಕೈಗೊಳ್ಳುತ್ತಾರೆ.
ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ವ್ರತದ ಮಾಹಿತಿಗಳು ನಿಮ್ಮನ್ನು ದಿಗ್ಭ್ರಮೆಗೊಳಿಸುವುದು ಖಂಡಿತ. ವ್ರತದ ಅರ್ಥವನ್ನು ಹಿಂದೂ ಧರ್ಮದಲ್ಲಿ ಪವಿತ್ರವಾಗಿ ಕಂಡುಕೊಳ್ಳಲಾಗಿದೆ. ಇಡೀ ದಿನ ಅಲ್ಪ ಆಹಾರವನ್ನು ಸೇವಿಸಿ ಪರಮಾತ್ಮನನ್ನು ಪೂಜಿಸುವುದು ಎಂಬುದು ಒಂದು ಅರ್ಥವಾದರೆ, ನಿರಾಹಾರವಾಗಿದ್ದುಕೊಂಡು ಪರಮಾತ್ಮನನ್ನು ದಿನ ಪೂರ್ತಿ ಪೂಜಿಸುವುದು ಇನ್ನೊಂದು ವಿಧವಾಗಿದೆ.
ನೀವು ಯಾವ ಪ್ರಕಾರದ ವ್ರತವನ್ನು ಕೈಗೊಳ್ಳುತ್ತೀರಿ ಎಂಬುದು ಮುಖ್ಯವಲ್ಲ, ನೀವು ಎಷ್ಟು ಅಚಲರಾಗಿ ಪೂರ್ಣ ವಿಶ್ವಾಸದಿಂದ ಈ ಆಚರಣೆಯನ್ನು ಕೈಗೊಳ್ಳುತ್ತೀರಿ ಎಂಬ ಅಂಶ ಮುಖ್ಯವಾಗಿದೆ. ಇಂದಿನ ಲೇಖನದಲ್ಲಿ ವ್ರತದ ಕುರಿತಾಗಿ ಇನ್ನಷ್ಟು ಪ್ರಮುಖ ಅಂಶಗಳನ್ನು ನಾವು ಹಂಚಿಕೊಳ್ಳುತ್ತಿದ್ದೇವೆ.....

ವ್ರತದ ಪ್ರಕಾರಗಳು
ದೇವರ ಮೇಲಿರುವ ನಂಬಿಕೆ, ಶ್ರದ್ಧೆ, ವಿಶ್ವಾಸವನ್ನು ಪೂರ್ಣವಾಗಿ ವ್ರತವು ಆಧರಿಸಿದೆ. ಆದರೆ ಬೇರೆ ಬೇರೆ ಪ್ರಕಾರಗಳಲ್ಲಿ ಜನರು ವ್ರತವನ್ನು ತಮ್ಮ ನಂಬಿಕೆಗಳಿಗೆ ಅನುಸಾರವಾಗಿ ಆಚರಿಸುತ್ತಾರೆ.

ಹಿಂದೂ ಧರ್ಮದಲ್ಲಿ ವ್ರತದ ಕುರಿತಾಗಿ ನಂಬಿಕೆ
ವ್ರತ ಎಂಬುದು ಸಂಸ್ಕೃತ ಪದವಾಗಿದ್ದು, ಧಾರ್ಮಿಕ ಆಚರಣೆ ಎಂಬುದಾಗಿಯೇ ಈ ಪದ್ಧತಿಯನ್ನು ಧರ್ಮದಲ್ಲಿ ಕರೆದಿದ್ದಾರೆ. ಋಗ್ವೇದದಲ್ಲಿ ವ್ರತವನ್ನು ಕುರಿತು 200 ಉಲ್ಲೇಖಗಳನ್ನು ನಮಗೆ ಕಾಣಬಹುದಾಗಿದೆ.

ವ್ರತದ ಒಳಾರ್ಥವೇನು
ಋಗ್ವೇದದ ಪ್ರಕಾರ ವ್ರತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಅಂದರೆ ತ್ಯಾಗ ಎಂಬ ಮಹಾನ್ ಅರ್ಥವನ್ನು ಇದು ಪಡೆದುಕೊಂಡಿದೆ. ಕಾಯಿಕಾ (ಮನಸ್ಸನ್ನು ಶುದ್ಧಗೊಳಿಸುವುದು), ವಾಚಿಕಾ (ಮಾತನ್ನು ಸ್ವಚ್ಛಮಾಡುವುದು) ಮಾನಸ (ದೇಹವನ್ನು ಶುದ್ಧೀಕರಿಸುವುದು).

ವ್ರತವನ್ನು ಕೈಗೊಳ್ಳುವುದು ಹೇಗೆ
ವ್ರತದ ಸಮಯದಲ್ಲಿ ವ್ಯಕ್ತಿಯು ಆಹಾರದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸದೇ ಪರಮಾತ್ಮನಲ್ಲಿ ತನ್ನನ್ನು ಐಕ್ಯಗೊಳಿಸಬೇಕು. ಮಂತ್ರ ಪಠನೆ, ಪೂಜೆ ಮಾಡುವುದು ಮೊದಲಾದ ಕಾರ್ಯಗಳನ್ನು ಈ ಸಮಯದಲ್ಲಿ ಅವರು ಅನುಸರಿಸಬೇಕು.

ವ್ರತದಿಂದ ಉಂಟಾಗುವ ಪ್ರಯೋಜನಗಳು
ಹಿಂದೂ ಧರ್ಮದಲ್ಲಿ ಕೆಲವೊಂದು ಹಬ್ಬಗಳು ವ್ರತಕ್ಕೆ ತನ್ನದೇ ಆದ ಮಹತ್ವವನ್ನು ನೀಡಿವೆ. ದೇವರಿಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸುವುದು ಎಂಬ ಉದ್ದೇಶವನ್ನು ಇದು ಹೊಂದಿದೆ. ತಮ್ಮ ಮನದ ಅಭಿಲಾಷೆಗಳನ್ನು ವ್ರತಧಾರಿಗಳು ವ್ರತವನ್ನು ಕೈಗೊಳ್ಳುವ ಮೂಲಕ ನೆರವೇರಿಸಿಕೊಳ್ಳುತ್ತಾರೆ.

ವ್ರತದ ನಿಯಮಗಳು
ಆದರೆ ಇಂದಿನ ಯುಗದಲ್ಲಿ ವ್ರತವನ್ನು ಆಚರಿಸುವವರು ತಮ್ಮ ಅಗತ್ಯಕ್ಕೆ ಅನುಸಾರವಾಗಿ ಇದನ್ನು ಮಾರ್ಪಡಿಸುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ವ್ರತವನ್ನು ಆಚರಿಸುವವರು ಕೆಲವೊಂದು ಪದ್ಧತಿಗಳನ್ನು ಪೂರ್ತಿಯಾಗಿ ಆಚರಿಸಲೇಬೇಕಾಗಿದೆ.

ಸಂತಾಪನಾ
ಇದರ ಅರ್ಥವೆಂದರೆ ಪೂರ್ತಿ ದಿನ ಹಸುವಿನ ಸೆಗಣಿ, ಮೂತ್ರವನ್ನು ಸೇವಿಸಿ ಉಪವಾಸವನ್ನು ಕೈಗೊಳ್ಳುವುದಾಗಿದೆ.

ಮಹಾಸಂತಾಪನಾ
ಆರು ದಿನಗಳ ಕಾಲ ಈ ವ್ರತವನ್ನು ಆಚರಿಸಲಾಗುತ್ತಿದ್ದು, ಐದು ಅಂಶಗಳನ್ನು ಮಾತ್ರವೇ ಒಂದೊಂದು ದಿನ ಹಂಚಿಕೊಳ್ಳಲಾಗುತ್ತದೆ. ಏಳನೇ ದಿನ ಉಪವಾಸವನ್ನು ಕೈಗೊಳ್ಳುವುದಾಗಿದೆ.

ಪ್ರಜಾಪತ್ಯ ಅಥವಾ ಕ್ರಿಚ್ಚಾ
ಈ ದಿನದಲ್ಲಿ ಮಧ್ಯಾಹ್ನ ಮಾತ್ರವೇ ಭೋಜನವನ್ನು ಸೇವಿಸಲಾಗುತ್ತದೆ. ಆರಂಭದ ಮೂರು ದಿನಗಳು 26 ಅಗುಳನ್ನು ಮಾತ್ರವೇ ಸೇವಿಸಲಾಗುತ್ತದೆ. ಈ ಅಗುಳು ಒಂದು ಮೊಟ್ಟೆಯ ಗಾತ್ರದಷ್ಟಿರಬೇಕು.ಮೂರು ದಿನಗಳ ಕಾಲ 22 ಅಗುಳುಗಳನ್ನು ಮಾತ್ರವೇ ಅನುಮತಿಸಲಾಗಿದೆ. ಇದನ್ನು ರಾತ್ರಿ ಮಾತ್ರವೇ ಸೇವಿಸಬೇಕು. ಕೊನೆಯ ಮೂರು ದಿನಗಳು 24 ಅಗುಳುಗಳನ್ನು ಸೇವಿಸಬಹುದಾಗಿದೆ.

ಅತಿಕೃಚ
ಇದೊಂದು ಹಿಂದಿನ ವ್ರತಕ್ಕಿಂತ ಹೆಚ್ಚು ಕ್ಲಿಷ್ಟವಾಗಿದೆ. ಮೂರು ದಿನಗಳ ಕಾಲ ಒಂದು ಅಗುಳನ್ನು ಮಾತ್ರವೇ ಅನುಮತಿಸಲಾಗಿದೆ. ಇನ್ನುಳಿದ ಮೂರು ದಿನಗಳು ರಾತ್ರಿ ಸಮಯದಲ್ಲಿ ಒಂದು ಅಗುಳನ್ನು ಸೇವಿಸಬಹುದಾಗಿದೆ. ಮೂರು ದಿನಗಳ ಕಾಲ 22 ಅಗುಳನ್ನು ಸೇವಿಸಬಹುದಾಗಿದೆ. ಇನ್ನುಳಿದ ಮೂರು ದಿನಗಳು, ಮೂರು ನಾಲ್ಕು ಅಗುಳಗಳನ್ನು ಮಾತ್ರ ಸೇವಿಸಬಹುದಾಗಿದೆ.

ಪರಾಕಾ
ಈ ವ್ರತವನ್ನು ಕೈಗೊಳ್ಳುವವವರು, 12 ದಿನಗಳ ಕಾಲ ನಿರಂತರ ಉಪವಾಸವನ್ನು ಕೈಗೊಳ್ಳುತ್ತಾರೆ. ದಿನದಲ್ಲಿ ಒಂದು ಅಗುಳಿನಷ್ಟು ಆಹಾರವನ್ನು ಮಾತ್ರವೇ ಸೇವಿಸುತ್ತಾರೆ.

ತಪ್ತಕೃಚ
ಈ ವ್ರತವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ವ್ರತದ ಆರಂಭಕ್ಕಿಂತ ಮುನ್ನ ಭೋಜವನ್ನು ಸೇವಿಸುತ್ತಾರೆ. ಎರಡನೆಯ ದಿನ ಉಪವಾಸವಾಗಿದೆ. ಮೂರನೆಯ ದಿನದಂದು ಎಷ್ಟು ಬೇಕೋ ಅಷ್ಟು ಆಹಾರವನ್ನು ಸೇವಿಸಬಹುದಾಗಿದೆ. ನಾಲ್ಕನೆಯ ದಿನ ನಿರಾಹಾರವಾಗಿ ಇರುವುದಾಗಿದೆ.

ಚಂದ್ರಾಯಾನ
ಈ ವ್ರತವನ್ನು ಸಂಪೂರ್ಣ ತಿಂಗಳು ಆಚರಿಸುತ್ತಾರೆ. ಪುರ್ಣ ಚಂದ್ರನ ಆಗಮನದಿಂದ ಈ ವ್ರತವನ್ನು ಕೈಗೊಳ್ಳುತ್ತಾರೆ. ಮುಖ್ಯ ದಿನದಂದು, ಹದಿನೈದು ಅಗುಳನ್ನು ಸೇವಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಈ ಅಗುಳನ್ನು ಕಡಿಮೆ ಮಾಡುತ್ತಾ ಬರುವುದಾಗಿದೆ. ಹೊಸ ಚಂದ್ರನ ಆಗಮನ (ಅಮವಾಸ್ಯೆ) ಯವರೆಗೆ ಈ ವ್ರತವನ್ನು ಆಚರಿಸುತ್ತಾರೆ. ಪೂರ್ಣ ಚಂದ್ರನ ಆಗಮನದ ನಂತರ, ಹದಿನೈದು ಅಗುಳನ್ನು ಸೇವಿಸಲಾಗುತ್ತದೆ. ಹೀಗೆ ವ್ರತವನ್ನು ಪೂರ್ಣಗೊಳಿಸಲಾಗುತ್ತದೆ.



Click it and Unblock the Notifications











