ಈ ನಾಲ್ಕು ರಾಶಿಯವರು ತುಂಬಾನೇ ಬುದ್ಧಿವಂತರು! ಯೋಚಿಸಿ ಹೆಜ್ಜೆ ಇಡುವವರು...

Posted By: Deepu
Subscribe to Boldsky

ಕೆಲವರು ತಮ್ಮ ಜೀವನದಲ್ಲಿ ಸದಾ ಬುದ್ಧಿವಂತಿಕೆಯಿಂದಲೇ ವ್ಯವಹರಿಸುತ್ತಾರೆ. ಅವರ ಬುದ್ಧಿ ಶಕ್ತಿಯೇ ಅವರ ಜೀವನವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವುದು. ವ್ಯಕ್ತಿಯು ತನ್ನ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಲು ಕೇವಲ ಅವನ ಶ್ರಮ ಅಥವಾ ಬುದ್ಧಿವಂತಿಕೆಯು ಕಾರಣವಾಗಿರುವುದಿಲ್ಲ. ಪ್ರಪಂಚದಲ್ಲಿ ವಿಶಿಷ್ಟ ಶಕ್ತಿ ಎನಿಸಿಕೊಂಡ ರಾಶಿ ಚಕ್ರದ ಪ್ರಭಾವವು ಹಿಂದೆ ಅಡಗಿರುತ್ತದೆ. ಅದೃಷ್ಟ ಹಾಗೂ ಉತ್ತಮ ಭವಿಷ್ಯದ ಹಿನ್ನೆಲೆಯಲ್ಲಿ ವ್ಯಕ್ತಿ ಸಮಾಜಕ್ಕೆ ಬುದ್ಧಿವಂತನಾಗಿ ಹಾಗೂ ಶ್ರೇಷ್ಠ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ಅದರಂತೆಯೇ ಅವನ ಸ್ವಭಾವ ಹಾಗೂ ವರ್ತನೆಗಳು ಕೂಡಿರುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ತಮ್ಮ ಜೀವನದಲ್ಲಿ ಅತಿಯಾದ ಸುಖ ಹಾಗೂ ಸಂತೋಷವನ್ನು ಅನುಭವಿಸುತ್ತಾರೆ. ಇನ್ನೂ ಕೆಲವರು ಸಾಮಾನ್ಯ ಬದುಕನ್ನು ಕಾಣುತ್ತಾರೆ. ಹಾಗೆಯೇ ಕೆಲವು ಸೀಮಿತ ರಾಶಿ ಚಕ್ರದವರು ಸದಾ ಕಾಲ ಬುದ್ಧಿವಂತಿಕೆಯಿಂದ ವ್ಯವಹಿರುತ್ತಾರೆ. ಅವರು ಜೀವನದ ಉದ್ದಕ್ಕೂ ಜಾಣರು ಅಥವಾ ಬುದ್ಧಿವಂತರು ಎನಿಸಿಕೊಳ್ಳುತ್ತಾರೆ ಎಂದು ಹೇಳಲಾಗುವುದು. ಹಾಗಾದರೆ ಆ ಬುದ್ಧಿವಂತ ರಾಶಿ ಚಕ್ರಗಳು ಯಾವವು? ಅದರಲ್ಲಿ ನಿಮ್ಮ ರಾಶಿಚಕ್ರವೂ ಒಂದಾಗಿದೆಯೇ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ...  

ಕುಂಭ: ಜನವರಿ 21- ಫೆಬ್ರವರಿ 18

ಕುಂಭ: ಜನವರಿ 21- ಫೆಬ್ರವರಿ 18

ಈ ರಾಶಿಯವರು ತರ್ಕಬದ್ಧ, ಬೌದ್ಧಿಕ ಮತ್ತು ಸ್ವತಂತ್ರ ವ್ಯಕ್ತಿಗಳು. ಇವರು ತಮ್ಮ ಭಾವನೆಯನ್ನು ಅಷ್ಟಾಗಿ ವ್ಯಕ್ತಪಡಿಸದೆ ಇರುವುದರಿಂದ ಭಾವನಾತ್ಮಕ ವ್ಯಕ್ತಿಗಳಲ್ಲ ಎನಿಸಿಕೊಳ್ಳುತ್ತಾರೆ. ಇವರು ಸ್ವತಂತ್ರರಾಗಿರುವುದರಿಂದ ತಮ್ಮದೇ ಆದ ನಿರ್ಧಾರಗಳನ್ನು ಒಳಗೊಂಡಿರುತ್ತಾರೆ. ಅವರು ತಾವು ನಿರ್ಧರಿಸಿದ ವಿಚಾರದ ಕುರಿತು ಯಾವುದೇ ಕಾರಣಕ್ಕೂ ಕೈಬಿಡುವ ವರ್ತನೆಯನ್ನು ತೋರರು. ಕೆಲವು ವಿಚಾರದಲ್ಲಿ ಸೂಕ್ತ ರೀತಿಯ ಲೆಕ್ಕಾಚಾರದ ಮೂಲಕವೇ ಮುಂದುವರಿಯುವರು.

ಕುಂಭ: (ಮುಂದುವರಿದ ಭಾಗ)

ಕುಂಭ: (ಮುಂದುವರಿದ ಭಾಗ)

ಇವರು ಕೆಲವು ಸಂಗತಿಗಳಿಗೆ ನಾಚಿಕೆ ಮತ್ತು ಸ್ತಬ್ಥ ಭಾವನೆಯನ್ನು ವ್ಯಕ್ತ ಪಡಿಸಬಹುದು. ಆದರೆ ಅದೇ ಅವರಿಗೆ ಕೆಲವೊಮ್ಮೆ ಉತ್ತಮ ಶಕ್ತಿಯಾಗಿರುತ್ತದೆ. ಇವರು ದಾರ್ಶನಿಕ ಗುಣಮಟ್ಟವನ್ನು ಹೊಂದಿರುವುದರಿಂದ ಭವಿಷ್ಯದ ಬಗ್ಗೆ ನಿರ್ಧರಿಸಲು ಹಾಗೂ ಕೆಲವು ಕಲ್ಪನೆಯನ್ನು ಮಾಡಲು ಅನುಕೂಲವಾಗುವುದು.

ತುಲಾ: ಸಪ್ಟೆಂಬರ್ 24- ಅಕ್ಟೋಬರ್ 23

ತುಲಾ: ಸಪ್ಟೆಂಬರ್ 24- ಅಕ್ಟೋಬರ್ 23

ಜ್ಯೋತಿಷ್ಯದ ಪ್ರಕಾರ ಇವರನ್ನು ಒಂದು ನಿರ್ಣಾಯಕ ವ್ಯಕ್ತಿಗಳು ಎಂದು ಪರಿಗಣಿಸಲಾಗುವುದು. ಕುಂಭ ರಾಶಿಯಂತೆ ಇದೂ ಸಹ ಒಂದು ಶ್ರೇಷ್ಠವಾದ ರಾಶಿ ಚಕ್ರ. ಈ ರಾಶಿಯವರು ತರ್ಕಬದ್ಧ, ಸೌಮ್ಯ ಮತ್ತು ಸಾಮಾಜಿಕವಾಗಿ ಉತ್ತಮ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಸಂವಹನ ನಡೆಸಲು ಇಷ್ಟಪಡುವರು. ಇದರಿಂದ ಅವರಿಗೆ ಸಾಮಾಜಿಕ ಜೀವನದಲ್ಲಿ ಉತ್ತಮ ಸ್ಥಾನ ದೊರೆಯುವುದು. ಅಲ್ಲದೆ ತುಲಾ ರಾಶಿಯವರ ಪರಿಪೂರ್ಣತೆಯನ್ನು ಈ ವ್ಯಕ್ತಿಗಳು ಹೊಂದಿರುತ್ತಾರೆ.

ತುಲಾ: (ಮುಂದುವರಿದ ಭಾಗ)

ತುಲಾ: (ಮುಂದುವರಿದ ಭಾಗ)

ಈ ವ್ಯಕ್ತಿಗಳು ಸರಿಯಾದ ಮತ್ತು ನ್ಯಾಯಯುತವಾದ ಖಚಿತತೆಯನ್ನು ಪಡೆದುಕೊಂಡಿರುತ್ತಾರೆ. ಯಾವುದೇ ವಿಷಯ ಅಥವಾ ಸನ್ನಿವೇಶವನ್ನು ಎದುರಿಸಲು ತಮ್ಮದೆ ಆದ ಸಮಯವನ್ನು ಕೈಗೊಳ್ಳುತ್ತಾರೆ. ಇವರ ವಯಸ್ಸನ್ನು ಪರಿಗಣಿಸದೆ ಇದ್ದರೂ ಸಹ ಇವರು ಬುದ್ಧಿವಂತರು ಎಂದು ಸಮಾಜಕ್ಕೆ ಬಿಂಬಿತವಾಗುತ್ತದೆ. ಇವರ ನಿಷ್ಠೆಯ ಪ್ರಭಾವದಿಂದ ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ.

ಮೀನ: ಫೆಬ್ರವರಿ 19-ಮಾರ್ಚ್ 20

ಮೀನ: ಫೆಬ್ರವರಿ 19-ಮಾರ್ಚ್ 20

ಅತ್ಯಂತ ಭಾವನಾತ್ಮಕರು ಮೀನ ರಾಶಿಯವರು ಇತರರನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಾಮರ್ಥ್ಯ ಹೊಂದಿರುತ್ತಾರೆ. ಅದಕ್ಕಾಗಿಯೇ ಇದನ್ನು ಅತ್ಯಂತ ಭಾವನಾತ್ಮಕ ಬುದ್ಧಿವಂತಿಕೆಯ ರಾಶಿ ಚಿಹ್ನೆ ಎನ್ನುವರು. ಅವರು ತಮ್ಮ ಭಾವನೆಗಳನ್ನು ಮತ್ತು ನೀರಿನಲ್ಲಿರುವ ಮೀನುಗಳಂತಹ ಇತರರ ನಡುವೆ ಈಜುತ್ತಾರೆ. ಅವರು ಕಲಾತ್ಮಕ ಮತ್ತು ತಮ್ಮ ಭಾವನಾತ್ಮಕ ಬುದ್ಧಿವಂತಿಕೆಯನ್ನು ಮತ್ತು ಕಲೆಯ ಮೂಲಕ ಪ್ರಪಂಚದ ದೃಷ್ಟಿಗೆ ಪ್ರತಿಫಲಿಸುತ್ತಾರೆ. ಅವರು ಹೆಚ್ಚು ಅರ್ಥಗರ್ಭಿತರಾಗಿದ್ದಾರೆ ಮತ್ತು ಪರಿಸ್ಥಿತಿಯನ್ನು ಬಿಟ್ಟುಬಿಡಲು ಅಥವಾ ಏನಾದರೂ ಅಪಾಯಕಾರಿಯಾಗುತ್ತಿರುವಾಗ ಅವರಿಗೆ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ.

ಮೀನ

ಮೀನ

ಇನ್ನು ಈ ರಾಶಿಯವರಿಗೆ ಕನಸು ಕಾಣುವುದೇ ಇವರ ಅದೃಷ್ಟದ ಸಂಕೇತ. ಕೆಟ್ಟ ಕನಸುಗಳನ್ನು ವಿಶ್ಲೇಸಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವು ಕನಸು ಕಾಣುವುದರಿಂದಲೇ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎನ್ನಲಾಗುವುದು. ಈ ರಾಶಿಯ ಜನರು ಸಹಾನುಭೂತಿ ತೋರುವ ವ್ಯಕ್ತಿಗಳಾಗಿದ್ದು ಜನರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಸಮಯ ವಿನಿಯೋಗಿಸುವುದರಲ್ಲಿಯೇ ಪರಿಪೂರ್ಣತೆಯನ್ನು ಅನುಭವಿಸುತ್ತಾರೆ. ಜನರನ್ನು ಅವರಿದ್ದ ಹಾಗೇ ಸ್ವೀಕರಿಸುವ ನಿಮ್ಮ ಪರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಂಗೀತ. ನಿಮ್ಮ ಮನೋಭಾವವನ್ನು ಉತ್ತಮಗೊಳಿಸಲು ಸಂಗೀತ ನಡೆಯುತ್ತಿದ್ದರೆ ಸಾಕಾಗುತ್ತದೆ. ಸಂಗೀತದ ಅಲೆ ಸುತ್ತ ತೇಲುತ್ತಿರುವಾಗ ನಿಮಗೆ ಹೊಸ ವಿಷಯಗಳು ಹೊಳೆಯುತ್ತವೆ ಹಾಗೂ ಹೆಚ್ಚು ಕ್ರಿಯಾತ್ಮಕರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಆರೋಗ್ಯ, ಆರೈಕೆ, ಸಾಮಾಜಿಕ ಕೆಲಸ ಮತ್ತು ಲೋಕೋಪಕಾರ.

ಸಿಂಹ

ಸಿಂಹ

ಚತುರತೆಯ ರಾಜ ಸಿಂಹ ಅತ್ಯಂತ ಬುದ್ಧಿವಂತ ರಾಶಿ ಚಿಹ್ನೆ. ಅವರು ತಮ್ಮ ಅಂತರ್ದೃಷ್ಟಿಯಿಂದ ಮತ್ತು ಅವರ ಮಹಾನ್ ಕುತಂತ್ರದಿಂದ ನಿಯಂತ್ರಿಸುತ್ತಾರೆ. ಪ್ರತೀ ವಿಷಯದಲ್ಲಿ ತಮ್ಮ ಗುರಿಗಳನ್ನು ತಲುಪುವಲ್ಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಸಿಂಹ ರಾಶಿಯವರು ಯಾವುದೇ ಅಡಚಣೆಗೆ ಶರಣಾಗುವುದಿಲ್ಲ. ಇವರು ಸದಾ ಹೋರಾಟದ ಬುದ್ಧಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಟೀಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ರಕ್ಷಿಸಲು ಅವರು ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಇತರರಿಗೆ ಮನವೊಲಿಸುವಲ್ಲಿ ಮಹತ್ತರರಾಗಿರುತ್ತಾರೆ. ಅವರು ಉತ್ತಮ ಭಾಷಣಕಾರರು ಮತ್ತು ರಾಜಕಾರಣಿಗಳು ಆಗಿರುತ್ತಾರೆ.

ಸಿಂಹ

ಸಿಂಹ

ಈ ರಾಶಿಯವರಿಗೆ ಚಿತ್ತಾಕರ್ಷಕ ಮತ್ತು ಹೊಳೆಯುವ ಹರಳುಗಳು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತವೆ.ಜೆಮ್‍ಸ್ಟೋನ್ ಅಥವಾ ನೀಲಿಮಣಿ ಇವರಿಗೆ ಅತ್ಯಂತ ಅದೃಷ್ಟದ ವಸ್ತು ಎಂದು ಪರಿಗಣಿಸಲಾಗುತ್ತದೆ.ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ. ನಿಮಗೆ ಬಹಳಷ್ಟು ಕನಸುಗಳಿದ್ದು ಮಹತ್ವಾಕಾಂಕ್ಷಿಗಳೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ನೇಹ. ಜೀವನಸಂಗಾತಿ ಅಥವಾ ಪ್ರಾಣ ಸ್ನೇಹಿತ/ಸ್ನೇಹಿತೆಯ ಸ್ನೇಹಕ್ಕೆ ನೀವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಇವರಿಗೆ ಸರ್ಕಾರಿ ಕೆಲಸ, ಕಾನೂನು ಸೇವೆ, ಕಲೆ, ವಿನ್ಯಾಸ, ವಾಸ್ತುಶಿಲ್ಲ, ಇಂಜಿನಿಯರಿಂಗ್, ಮನೋರಂಜನೆ, ರಿಯಲ್ ಎಸ್ಟೇಟ್ ಅಥವಾ ಶಿಕ್ಷಣ ಕ್ಷೇತ್ರವು ಹೊಂದಿಕೆಯಾಗುತ್ತದೆ.

English summary

These Are The 2 Of The Most Wisest Zodiac Signs Of All Times!

There are two zodiac signs which are known to be labelled as being the wisest zodiac signs. These zodiac signs are well known for their characteristics and their honest nature, which defines them as being the most wisest zodiac signs. As each zodiac sign has its own strengths and weaknesses, the individuals of this sign are also said to have their individual qualities, desires, moods, and attitudes, which define their personality.