Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಹನುಮಾನ್ ಚಾಲೀಸಾದ ಪ್ರಾಮುಖ್ಯತೆ
ಹನುಮಾನ್ ಚಾಲೀಸಾವು ರಾಮ ಭಂಟ, ಅಪ್ರತಿಮ ಸಾಹಸಿ, ಅದಮ್ಯ ಚೇತನ ಹನುಮನ ಲೀಲೆಗಳನ್ನು ಮತ್ತು ಆತನ ಖ್ಯಾತಿಯನ್ನು ಸಾರುವ ಒಂದು ಜನಪ್ರಿಯ ಕೃತಿಯಾಗಿದೆ. ಭಕ್ತಿಯ ಪರಾಕಾಷ್ಠೆಗೆ ನಮ್ಮನ್ನು ಕೊಂಡೊಯ್ಯುವ ಈ ಅದ್ಭುತ ಕೃತಿಯನ್ನು ರಚಿಸಿದವರು ಶ್ರೀ ರಾಮಚಂದ್ರನ ಪರಮ ಭಕ್ತರಾದ ತುಳಸಿದಾಸರು. ತುಳಸಿದಾಸರು ಶ್ರೀ ರಾಮ ಚಂದ್ರನ ಪರಮ ಭಕ್ತರು ಎಂದು ಕರೆಯಲು ಒಂದು ಕಾರಣವಿದೆ. ಅವರು ತಮ್ಮ ದಿವ್ಯ ತಪಸ್ಸಿನಿಂದ ಶ್ರೀರಾಮನನ್ನು ಒಲಿಸಿಕೊಂಡು ತುಳಸಿ ರಾಮಾಯಣವನ್ನು ರಚಿಸಿದವರು.
ಅಂತಹ ತುಳಸಿ ದಾಸರೇ ಈ ಹನುಮಾನ್ ಚಾಲೀಸಾವನ್ನು ನಮಗಾಗಿ ನೀಡಿದ್ದಾರೆ. ರಾಮಚಂದ್ರನ ಒಬ್ಬ ಪರಮ ಭಕ್ತ, ಮತ್ತೊಬ್ಬ ರಾಮನ ಪರಮ ಭಂಟನ ಕುರಿತು ರಚಿಸಿದ ಈ ಚಾಲೀಸಾವು ಸ್ತೋತ್ರಗಳಲ್ಲಿಯೇ ಅತ್ಯಂತ ಶ್ರೇಷ್ಠ ಎಂದು ಭಾವಿಸಲಾಗಿದೆ. ಹಾಗಾದರೆ ಬನ್ನಿ ನಿಜಕ್ಕು ಈ ಚಾಲೀಸಾವನ್ನು ಪಠಿಸುವುದರಿಂದ ನಮಗೆ ಏನೆಲ್ಲಾ ಉಪಯೋಗಗಳು ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣಾ.

ಈ ಅಂಕಣವು ಹನುಮಾನ್ ಚಾಲೀಸಾದ ಬಹುತೇಕ ಪ್ರತಿ ಸಾಲುಗಳ ಪ್ರಾಮುಖ್ಯತೆಯನ್ನು ನಿಮಗೆ ತಿಳಿಸಿಕೊಡುತ್ತದೆ. ಏಕೆಂದರೆ ಹನುಮಾನ್ ಚಾಲೀಸಾದ ಪ್ರತಿ ಸಾಲಿನಲ್ಲಿಯೂ ನಮ್ಮ ದೈನಂದಿನ ಕಷ್ಟ ಕೋಟಲೆಗಳ ಪರಿಹಾರ ಅಡಕಗೊಂಡಿದೆ. ಇಲ್ಲಿನ ಸಾಲುಗಳನ್ನು ದೋಹಾ ಎಂದು ಕರೆಯಲಾಗುತ್ತದೆ. ಹಾಗಾದರೆ ಬನ್ನಿ ಹನುಮಾನ್ ಚಾಲೀಸಾದ ದೋಹಾಗಳ ಪ್ರಯೋಜನಗಳನ್ನು ನಾವು ತಿಳಿದುಕೊಳ್ಳೋಣಾ.
ಹನುಮಾನ್ ಚಾಲೀಸಾದ ಪ್ರಥಮ ಸಾಲು " ಜಯ ಹನುಮಾನ್ ಙ್ಞಾನ ಗುಣ ಸಾಗರ" ವನ್ನು ಪಠಿಸುವುದರಿಂದ ದೈವಿಕವಾದ ಙ್ಞಾನವನ್ನು ಸಂಪಾದಿಸುವಿರಿ. ಈ ದೈವಿಕವಾದ ಙ್ಞಾನವು ನಿಮ್ಮ ಜೀವನದ ಎಲ್ಲಾ ಕಷ್ಟ- ನಷ್ಟಗಳಿಗೆ ಪರಿಹಾರವನ್ನು ಕಾಣಿಸುತ್ತದೆ. ಜೀವನದ ಪ್ರತಿ ಸವಾಲನ್ನು ಎದುರಿಸಲು, ಸಂಸಾರ ಸಾಗರವನ್ನು ಸಮರ್ಥವಾಗಿ ಈಜಲು ಈ ದೋಹಾವು ನಿಮಗೆ ನೆರವನ್ನು ನೀಡುತ್ತದೆ.
ಹನುಮಾನ್ ಚಾಲೀಸಾ ಮಂತ್ರದ ಮಹತ್ವ ತಿಳಿದಿದೆಯೇ?
ಮಹಾವೀರ ವಿಕ್ರಮ ಎಂದು ಶುರುವಾಗುವ ಮೂರನೆ ದೋಹಾವು ನಿಮಗೆ ಆಂತರಿಕ ಶಕ್ತಿಯನ್ನು ನೀಡಿ, ದುರ್ಜನರ ಸಂಗದಿಂದ ದೂರವಿರಲು ಸಹಾಯ ಮಾಡುತ್ತದೆ. ಏಳು ಮತ್ತು ಎಂಟನೆಯ ದೋಹಾವು ಪ್ರಭು ಶ್ರೀ ರಾಮನ ಮತ್ತು ಹನುಮನ ನಡುವಿನ ಸಂಬಂಧವನ್ನು ವಿವರಿಸುತ್ತದೆ. ಶ್ರೀ ರಾಮನ ಖ್ಯಾತಿಯನ್ನು ಸಾರುವ ಈ ದೋಹಾಗಳು ನಿಮ್ಮನ್ನೂ ಪ್ರಭುರಾಮನ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ.
14 ಮತ್ತು 15ನೇ ಚೌಪದಿಗಳು ಹನುಮನ ಕೀರುತಿಯನ್ನು ಸಾರುತ್ತವೆ. ಇದನ್ನು ಪಠಿಸುವ ವ್ಯಕ್ತಿಯು ತಾನು ಇಚ್ಛಿಸಿದ ಖ್ಯಾತಿಯನ್ನು, ಪ್ರಶಂಸೆಯನ್ನು ಸಂಪಾದಿಸುವುದರ ಜೊತೆಗೆ. ತಾವು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ವಿಜಯವನ್ನು ಸಹ ತಮ್ಮದನ್ನಾಗಿಸಿಕೊಂಡು ಬೆಳೆಯುತ್ತಾರೆ. 11ನೇ ಚೌಪದಿಯನ್ನು ಪಠಿಸುವುದರಿಂದ ಹಾವು ಮತ್ತಿತರ ವಿಷ ಜಂತುಗಳ ಕಡಿತದ ಭಯವನ್ನು ನಿವಾರಿಸಿಕೊಳ್ಳಬಹುದು.
16 -17ನೇ ಚೌಪದಿಗಳು ತಮ್ಮ ಜೀವನದ ಮಹತ್ವಾಕಾಂಕ್ಷೆಯನ್ನು ನೆರವೇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಜೊತೆಗೆ ತಾವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಬರಬೇಕಾಗಿರುವ ಬಡ್ತಿಗಳು ಸಹ ಇದರಿಂದ ಲಭ್ಯವಾಗುತ್ತವೆ.
20ನೇ ದೋಹಾವು ನಿಮ್ಮ ಗುರಿಗಳನ್ನು ತಲುಪಲು ಇರುವ ಅಡ್ಡಿ -ಆತಂಕಗಳನ್ನು ಮತ್ತು ಸವಾಲುಗಳನ್ನು ಸಮರ್ಥವಾಗಿ ನಿವಾರಿಸಿಕೊಂಡು ಜಯ ಸಾಧಿಸಲು ನೆರವಾಗುತ್ತವೆ.
24ನೇ ಚೌಪದಿಯು ತುಂಬಾ ಮಹತ್ವಪೂರ್ಣವಾದುದು. ಇದನ್ನು ಪಠಿಸುವುದರಿಂದ ಡಾಕಿನಿಗಳು, ಪಿಶಾಚಿಗಳು, ಭೂತಗಳು ಮತ್ತು ಕ್ಷುದ್ರ ದೇವತೆಗಳ ಭಯವು ನಿವಾರಣೆಯಾಗುತ್ತದೆ. ಹೀಗೆ ಚಾಲೀಸಾದ ಪ್ರತಿಯೊಂದು ದೋಹಾಗಳು ವಿವಿಧ ಬಗೆಯ ಪ್ರಯೋಜನಗಳನ್ನು ನಮಗೆ ನೀಡುತ್ತದೆ. ಹಾಗಾಗಿ ಹನುಮಾನ್ ಚಾಲೀಸಾವನ್ನು ತಪ್ಪದೇ ಓದಿ ಕಷ್ಟಗಳಿಂದ ನಿವಾರಣೆಯನ್ನು ಹೊಂದಿ.



Click it and Unblock the Notifications











