Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಜನರು ಈ ದೇವಸ್ಥಾನಕ್ಕೆ ಹೋಗಲು ಭಯಪಡುತ್ತಾರಂತೆ! ಯಾಕೆ ಗೊತ್ತೇ?
ದೇವಸ್ಥಾನ ಎಂದರೆ ಅತ್ಯಂತ ಸುರಕ್ಷಿತವಾದ, ನಮ್ಮ ಕಾಪಾಡುವ ಭಗವಂತನ ಮನೆ ಎಂಬ ಭಾವನೆಯೇ ಭಕ್ತಿಯ ಮೂಲವಾಗಿದೆ. ವಿವಿಧ ಧರ್ಮಗಳ ಧಾರ್ಮಿಕ ತಾಣಗಳು ನಮ್ಮ ಭಾರತದ ಉದ್ದಗಲಕ್ಕೂ ಇದ್ದು ಪ್ರತಿ ಸಮುದಾಯವೂ ತಮ್ಮ ನಂಬಿಕೆಗಳನ್ನು ಹಾಗೂ ಸಂಪ್ರದಾಯಗಳನ್ನು ಆಚರಿಸುತ್ತಾ ಬರುತ್ತಿವೆ. ಭಾರತದಲ್ಲಿ ಧಾರ್ಮಿಕ ಸ್ಥಾನಗಳಿಗೆ ಪ್ರತಿದಿನವೂ ಭೇಟಿ ನೀಡುವುದು ಭಾರತೀಯ ಸಂಸ್ಕೃತಿಯ ಭಾಗವೇ ಆಗಿದೆ.
ಅದರಲ್ಲೂ ಹಿಂದೂ ಧರ್ಮದಲ್ಲಿ ಸುಮಾರು 330ಕ್ಕೂ ಹೆಚ್ಚು ದೇವರನ್ನು ಆರಾಧಿಸುವ ದೇವಾಲಯಗಳಿವೆ. ವಿಶ್ವದ ಮೂರನೆಯ ಅತಿದೊಡ್ಡ ಹಾಗೂ ವಿಶ್ವದ ಅತ್ಯಂತ ಪ್ರಾಚೀನವಾದ ಈ ಧರ್ಮ ವಿಗ್ರಾಹಾರಾಧನೆಯನ್ನು ಅನುಸರಿಸುತ್ತದೆ. ಭಾರತದ ನೂರು ಕೋಟಿ ಹಿಂದೂ ಧರ್ಮಿಯರು ದೇಶಾದ್ಯಂತ ಇರುವ ಅಸಂಖ್ಯಾತ ದೇವಾಲಯಗಳಿಗೆ ಭೇಟಿ ನೀಡಿ ಧಾರ್ಮಿಕ ವಿಧಿಗಳನ್ನು ಪೂರೈಸುತ್ತಾರೆ.
ದಿನಂಪ್ರತಿ ಅಥವಾ ವಿಶೇಷ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿ ದೇವರ ಆಶೀರ್ವಾದ ಹಾಗೂ ಪ್ರಸಾದವನ್ನು ಪಡೆಯುವುದು ಭಾರತೀಯ ಜೀವನ ಪದ್ಧತಿಯಾಗಿದೆ... ಆದರೆ ಇಷ್ಟೆಲ್ಲಾ ಕಾರ್ಣಿಕ ಹೊಂದಿರುವ ಸಮ್ಮ ಹಿಂದೂ ಸಂಸ್ಕೃತಿಯ ದೇವಸ್ಥಾನದಲ್ಲಿ ಎಲ್ಲರೂ ಅಚ್ಚರಿಗೊಳ್ಳುವ ಸಂಗತಿ ನಡೆಯುತ್ತಿದೆ!! ಹೌದು ಹಿಮಾಚಲ ಪ್ರದೇಶದ ಭರ್ಮೂರ್ ಎಂಬ ಪಟ್ಟಣದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಲು ಜನರು ಹಿಂದೇಟು ಹಾಕುತ್ತಿದ್ದಾರಂತೆ...ಮುಂದೆ ಓದಿ

ಎಷ್ಟೇ ಕಷ್ಟವಾದರೂ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ...
ಹಿಂದೂ ಧರ್ಮ ಅನುಸರಿಸುವ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಪ್ರದೇಶಗಳಲ್ಲೆಲ್ಲಾ ಆ ಸ್ಥಳಮಹಾತ್ಮೆಯನ್ನು ಗುರುತಿಸಿ ಸಾವಿರಾರು ದೇವಸ್ಥಾನಗಳಿವೆ. ಎಷ್ಟೇ ದೂರ ಹಾಗೂ ಕಷ್ಟಕರ ಪ್ರಯಾಣದ ಅಗತ್ಯವಿದ್ದರೂ ಭಕ್ತರು ಈ ದೇವಾಲಯಗಳಿಗೆ ಭೇಟಿ ನೀಡಿಯೇ ನೀಡುತ್ತಾರೆ. ಮಲೆನಾಡಿನ ಕಾಡಿನ ನಡುವೆಯೇ ಇರಲಿ, ಹಿಮಾಲಯದ ತುದಿಯಲ್ಲಿರುವ ಗಂಗೋತ್ರಿಯೇ ಆಗಲಿ, ಬೆಟ್ಟದ ಮೇಲಿರುವ ವೈಷ್ಣೋದೇವಿಯೇ ಆಗಲಿ ಭಕ್ತರು ಯಾವುದೇ ಕಷ್ಟಗಳನ್ನು ಎದುರಿಸಲು ಸಿದ್ಧರಿರುತ್ತಾರೆ.

ಯಮರಾಜನ ದೇವಸ್ಥಾನಕ್ಕೆ ಮಾತ್ರ ಜನರು ಭೇಟಿ ನೀಡುತ್ತಿಲ್ಲ....
ಹಿಂದೂ ಧರ್ಮದಲ್ಲಿ ಪ್ರತಿ ಶಕ್ತಿಯ ಅಧಿಪತ್ಯವನ್ನು ಒಂದೊಂದು ದೇವರಿಗೆ ನೀಡಲಾಗಿದ್ದು ಸಾವಿನ ಅಧಿಪತಿಯಾಗಿ ಯಮರಾಜನನ್ನು ನೇಮಿಸಲಾಗಿದೆ. ಆ ಪ್ರಕಾರ ವಿವಿಧ ದೇವರುಗಳ ದೇವಸ್ಥಾನಗಳನ್ನೂ ನಿರ್ಮಿಸಲಾಗಿದೆ. ಆದರೆ ಸಾವಿನ ಅಧಿಪತಿ ಯಮರಾಜನಿಗೆ ಈ ಜಗತ್ತಿನಲ್ಲಿ ಕೇವಲ ಒಂದೇ ದೇವಸ್ಥಾನವಿದೆ. ಅಂತೆಯೇ ಸೃಷ್ಟಿಕರ್ತ ಬ್ರಹ್ಮನಿಗೆ ಕೇವಲ ಆರು ದೇವಸ್ಥಾನಗಳಿವೆ.

ಎಲ್ಲಿದೆ ಇದು?
ಹಿಮಾಚಲ ಪ್ರದೇಶದ ಭರ್ಮೂರ್ ಎಂಬ ಪಟ್ಟಣದಲ್ಲಿರುವ ಈ ದೇವಸ್ಥಾನದಲ್ಲಿ ಯಮರಾಜನನ್ನು ಪೂಜಿಸಲಾಗುತ್ತದೆ.
Image Courtesy

ಜನರು ಹೊರಗಿನಿಂದಲೇ ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ!
ಆದರೆ ಸಾವಿನ ಅಧಿಪತಿಯಾಗಿರುವ ಕಾರಣಕ್ಕೇ ಹಿಂದೂ ಧರ್ಮೀಯರು ಈ ದೇವಸ್ಥಾನದ ಒಳಗೆ ಭೇಟಿ ನೀಡಲು ಹಿಂದೇಟು ಹಾಕುತ್ತಾರೆ. ಇವರು ದೇವಸ್ಥಾನಕ್ಕೆ ಭೇಟಿ ನೀಡಿದರೂ ಒಳಕ್ಕೆ ಪ್ರವೇಶಿಸದೇ ಹೊರಗಿನಿಂದಲೇ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿ ಹಿಂದಿರುಗುತ್ತಾರೆ.

ಈ ದೇವಾಲಯದಲ್ಲಿ ಚಿತ್ರಗುಪ್ತನಿಗೂ ಒಂದು ಕೋಣೆಯದೆಯಂತೆ....
ಯಮರಾಜನ ಕಾರ್ಯದರ್ಶಿಯಾದ ಚಿತ್ರಗುಪ್ತನ ಕೆಲಸವೆಂದರೆ ಮರಣಹೊಂದಿದ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ವಿವರಗಳನ್ನು ನೀಡಿ ಸ್ವರ್ಗ ಅಥವ ನರಕಕ್ಕೆ ಅರ್ಹನೋ ಎಂಬ ವಿವರಗಳನ್ನು ಯಮರಾಜನಿಗೆ ಒದಗಿಸುವುದು. ಈ ದೇವಾಲಯದಲ್ಲಿ ಚಿತ್ರಗುಪ್ತನಿಗೂ ಒಂದು ಕೋಣೆಯನ್ನು ಒದಗಿಸಲಾಗುತ್ತದೆ.

ಈ ದೇವಸ್ಥಾನದಲ್ಲಿ ಒಟ್ಟು ನಾಲ್ಕು ದ್ವಾರಗಳಿವೆಯಂತೆ....
ಮರಣಾನಂತರ ವ್ಯಕ್ತಿಯ ಆತ್ಮವನ್ನು ಈ ದೇವಾಲಯಕ್ಕೆ ಕರೆತಂದು ವಿಚಾರಣೆಯ ಬಳಿಕ ಮುಂದಿನ ಸ್ಥಳಕ್ಕೆ ಕಳುಹಿಸಲಾಗುತ್ತದೆ ಎಂದು ನಂಬಲಾಗಿದೆ. ಒಂದು ನಂಬಿಕೆಯ ಪ್ರಕಾರ ಈ ದೇವಸ್ಥಾನದಲ್ಲಿ ಒಟ್ಟು ನಾಲ್ಕು ದ್ವಾರಗಳಿದ್ದು ಇವುಗಳನ್ನು ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಮತ್ತು ಕಬ್ಬಿಣದಿಂದ ತಯಾರಿಸಲಾಗಿದೆ. ವ್ಯಕ್ತಿ ಮರಣಾನಂತರ ಯಾವ ದ್ವಾರವನ್ನು ಪ್ರವೇಶಿಸಬೇಕೆಂದು ಯಮಧರ್ಮ ನಿರ್ಧರಿಸುತ್ತಾನೆ.
Image Courtesy

ಪುಣ್ಯ-ಪಾಪ
ವ್ಯಕ್ತಿಯ ಜೀವಿತಾವಧಿಯಲ್ಲಿ ಮಾಡಿದ ಪುಣ್ಯ ಮತ್ತು ಪಾಪದ ಕೆಲಸಗಳನ್ನೆಲ್ಲಾ ಸರಿಯಾಗಿ ತೂಗಿ ಮುಂದಿನ ಜೀವನ ಹೇಗಿರಬೇಕು ಎಂಬುದನ್ನು ನ್ಯಾಯವಾಗಿ ನಿರ್ಧರಿಸುವ ಕಾರಣದಿಂದಲೇ 'ಯಮ'ನ ಹೆಸರಿನೊಂದಿಗೆ 'ಧರ್ಮ' ಎಂಬ ಪದವನ್ನೂ ಸೇರಿಸಲಾಗುತ್ತದೆ. ಈ ವಿಷಯಗಳನ್ನೆಲ್ಲಾ ಗರುಡ ಪುರಾಣದಲ್ಲಿ ಪಡೆಯಬಹುದು.

ಪುರಾಣದ ಪ್ರಕಾರ
ಈ ಪುರಾಣದಲ್ಲಿ ವಿವರಿಸಿರುವಂತೆ ಮರಣಾನಂತರ ವ್ಯಕ್ತಿಯ ಆತ್ಮವನ್ನು ಮೊದಲು ಚಿತ್ರಗುಪ್ತನ ಬಳಿ ಕಳುಹಿಸಲಾಗುತ್ತದೆ. ಚಿತ್ರಗುಪ್ತನಲ್ಲಿರುವ ಕಡತದಲ್ಲಿ ಪಾಪದ ಹಾಗೂ ಪುಣ್ಯದ ಹಾಗೂ ಕರ್ಮದ ಎಲ್ಲಾ ವಿವರಗಳಿರುತ್ತವೆ. ಈ ವಿವರಗಳನ್ನು ಆಧರಿಸಿ ಯಮಧರ್ಮ ನಾಲ್ಕು ಬಾಗಿಲುಗಳಲ್ಲಿ ಯಾವ ಬಾಗಿಲಿನಿಂದ ಹೋಗಬೇಕು ಎಂದು ಸೂಚಿಸುತ್ತಾನೆ.

ಪುರಾಣದ ಪ್ರಕಾರ
ಬ್ರಹ್ಮದೇವನ ಪುತ್ರ, ಶ್ರವಣ ಈ ಕೆಲಸದಲ್ಲಿ ಚಿತ್ರಗುಪ್ತನಿಗೆ ನೆರವಾಗುತ್ತಾನೆ ಎಂದೂ ವಿವರಿಸಲಾಗಿದೆ. ಶ್ರವಣ ಎಂದರೆ ಕೇಳುವ ಸಾಮರ್ಥ ಎಂಬ ಅರ್ಥವಿದ್ದು ಈತನಿಗೆ ಭೂಮಿ, ಸ್ವರ್ಗ ಹಾಗೂ ನರಕದ ಬಗ್ಗೆ ಎಲ್ಲಾ ವಿವರಗಳು ಹೊತ್ತಿರುತ್ತವೆ ಹಾಗೂ ಈ ವಿಶ್ವದ ಪ್ರತಿ ಜೀವಿಯನ್ನೂ ನೋಡಬಲ್ಲ ಹಾಗೂ ಕೇಳಬಲ್ಲ ಶಕ್ತಿಯನ್ನು ಹೊಂದಿದ್ದಾನೆ.'



Click it and Unblock the Notifications











