Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಅಕಾಲ ಮೃತ್ಯು ತಡೆಗಟ್ಟುತ್ತೆ ಮೃತ್ಯುಂಜಯ ಪೂಜೆ, ಕರ್ನಾಟಕದ ಈ ದೇವಾಲಯದಲ್ಲಿ ಪ್ರತಿ ನಿತ್ಯ ಇರುತ್ತೆ ಮಹಾಮೃತ್ಯುಂಜಯ ಹೋಮ
ಅಕಾಲಿಕ ಮರಣವನ್ನು ತಡೆಗಟ್ಟಲು ಮೃತ್ಯುಂಜಯ ಪೂಜೆ ಮಾಡಲಾಗುವುದು. ಕರ್ನಾಟಕದ ಕೊಡಗಿನಲ್ಲಿ ಮೃತ್ಯುಂಜಯ ದೇವಾಲಯವಿದ್ದು ಹಲವು ವೈಶಿಷ್ಠ್ಯತೆ ಹೊಂದಿದೆ.

ಈ ದೇವಾಲಯ ಒಂದು ಸಾವಿರಕ್ಕಿಂತಲೂ ಪುರಾತನವಾದ ದೇವಾಲಯವಾಗಿದ್ದು ವಿರಾಜಪೇಟೆ ಬಡಗಾರಕೇರಿಯಲ್ಲಿದೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಪ್ರತಿನಿತ್ಯವೂ ಮೃತ್ಯುಂಜಯ ಹೋಮ ನಡೆಯುವುದು. ಈ ಹೋಮವನ್ನು ಪ್ರತ್ಯೇಕ ವಾಗಿ ಮಾಡಿಸಬಹುದು ಅಥವಾ ಸಾಮೂಹಿಕವಾಗಿ ಮಾಡಿಸಬಹುದು.
ಈ ದೇವಾಲಯದಲ್ಲಿ ಮಹಾ ಮೃತ್ಯುಂಜಯ ಹೋಮ, ರುದ್ರಾಭಿಷೇಕ, ಪಂಚಮರೀಷ ಹೋಮ, ನವಗ್ರಹ ಪೂಜೆ, ಸತ್ಯ ನಾರಾಯಣ ಪೂಜೆ, ವಸಂತ ಪೂಜೆ ಏಕಾದಶಿ ಪೂಜೆ ಹೀಗೆ ಹಲವು ಪೂಜೆಯನ್ನು ಮಾಡಲಾಗುವುದು.
ಮಹಾ ಮೃತ್ಯುಂಜಯ ಪೂಜೆಯ ಮಹತ್ವವೇನು? ಮೃತ್ಯುಂಜಯ ಪೂಜೆ ಮಾಡುವಾಗ ಪಠಿಸಬೇಕಾದ ಮಂತ್ರಗಳಾವುವು ಎಂದು ನೋಡೋಣ ಬನ್ನಿ:
* ಮಹಾಮೃತ್ಯುಂಜಯ ಪೂಜೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಇದ್ದರೆ ಅದು ದೂರಾಗುವುದು.
* ಅಕಾಲಿಕ ಮೃತ್ಯು ಭಯ ಕಾಡುತ್ತಿದ್ದರೆ ಮೃತ್ಯುಂಜಯ ಹೋಮ ಮಾಡಿಸುವುದರಿಂದ ಸಾವಿನ ಭಯ ದೂರಾಗುವುದು
* ಈ ಪೂಜೆಯನ್ನು ಮಾಡಿಸುವುದರಿಂದ ಮನೆಯಲ್ಲಿರುವ ಕಷ್ಟಗಳು ದೂರಾಗುವುದ.
* ಗಂಡ-ಹೆಂಡತಿ, ಮಕ್ಕಳ ನಡುವೆ ಸಾಮರಸ್ಯದ ಕೊರತೆ ಇದ್ದರೆ ಈ ಪೂಜೆ ಮಾಡಿಸುವುದರಿಂದ ಕುಟುಂಬದಲ್ಲಿ ಸಂತೋಷ, ನೆಮ್ಮದಿ ನೆಲೆಸಿರುತ್ತದೆ.
* ಈ ಪೂಜೆ ಮಾಡಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೀರಿ, ಶಿವ ಕೃಪೆಯಿದ್ದರೆ ಎಂಥ ಕಷ್ಟಗಳಿದ್ದರೂ ಅವುಗಳನ್ನು ಜಯಿಸಲು ನಮ್ಮಿಂದ ಸಾಧ್ಯವಾಗುವುಉದ.
ಮೃತ್ಯಂಜಯ ಮಂತ್ರಗಳು
ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ||
ತ್ರ್ಯಯಂಬಕಮ್: ಓ ಶಿವನೇ ನೀವು ಮೂರು ಕಣ್ಣುಗಳನ್ನು ಹೊಂದಿದ್ದೀರಿ
ಯಜ್ಮಹೇ : ನಿರಂತರವಾಗಿ ಪೂಜಿಸಲ್ಪಡುತ್ತೀರಿ
ಸುಗಂಧಿನ್: ಪರಿಮಳವನ್ನು ಆಸ್ವಾದಿಸುವವರು
ಪುಷ್ಠಿ ವರ್ಧನಂ: ಭಕ್ತಿಯನ್ನು ಹೆಚ್ಚಿಸುವವರು
ಉರ್ವಾರುಕಮೀವ ಬಂಧನಾತ್: ಮುಕ್ತಿದಾತ
ಮೃತ್ಯು: ಮರಣ
ಮೋಕ್ಷ: ಜನನ ಮರಣ ಚಕ್ರದಿಂದ ಬಿಡುಗಡೆ
ಮಮ್ರಿತಾತ್: ಅಮರ ಅಲ್ಲ
ಅರ್ಥ: ಓ ಶಿವನೇ ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡು, ಅಮರತ್ವ ಸಾಧ್ಯವಾಗದಿದ್ದರೂ ಮೋಕ್ಷವನ್ನು ಕರುಣಿಸು.
ಮೃತ್ಯುಂಜಯ ಮಂತ್ರ ಆಯುಸ್ಸು ಹೆಚ್ಚಿಸುತ್ತದೆ ಅಲ್ಲದೆ ಅನಿವಾರ್ಯ ಸಾವು ಬಂದಾಗ ಮರಣದ ಭಯವಿಲ್ಲದೆ ಮೋಕ್ಷವನ್ನುಪಡೆಯುತ್ತೇವೆ.
ಮೃತ್ಯುಂಜಯ ಮಂತ್ರ ಯಾವಾಗ ಪಠಿಸಬೇಕು?
* ಮೃತ್ಯುಂಜಯ ಪೂಜೆಯನ್ನು ಮಾಡುವಾಗ ಮಾತ್ರವಲ್ಲ ಯಾವಾಗ ಬೇಕಾದರೂ ಮೃತ್ಯುಂಜಯ ಮಂತ್ರ ಪಠಿಸಬಹುದು.
* ಈ ಮಂತ್ರದ ಫಲ ಪಡೆಯಲು ದಿನದಲ್ಲಿ 108 ಬಾರಿ ಪಠಿಸಿ
* ಶಿವು ಶಿವ ಪೂಜೆ ಮಾಡುವಾಗಲೂ ಈ ಮಂತ್ರ ಪಠಿಸಿ
* ಈ ಮಂತ್ರವನ್ನು ಸೋಮವಾರ ಪ್ರಾರಂಭಿಸಿದರ 15 ದಿನ ನಿರಂತರವಾಗಿ ಪಠಿಸಬೇಕು.
* ಈ ಮಂತ್ರವನ್ನು ಪಠಿಸುವುದರಿಂದ ಏಕಾಗ್ರತೆ ಹೆಚ್ಚಾಗುವುದು.
* ಈ ಮಂತ್ರವನ್ನು ಪಠಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
* ಈ ಮಂತ್ರವನ್ನು ಪಠಣೆ ಮಾಡುವಾಗ ಶಾಂತವಾಗಿ ಒಂದು ಕಡೆ ಕೂತು ಮಂತ್ರ ಪಠಣೆ ಮಾಡಿ.
ಈ ಮಂತ್ರವನ್ನು ಸರಿಯಾಗಿ ಉಚ್ಛಾರಣೆ ಮಾಡಬೇಕು. ನೀವು ಈ ಮಂತ್ರ ಹೇಳುವ ಮೊದಲಿಗೆ ಒಂದು ಕೊಡೆ ಕೂತು ಕಣ್ಣು ಮುಚ್ಚಿ, ದೀರ್ಘ ಉಸಿರು ತೆಗೆದು ನಿಧಾನಕ್ಕೆ ಮಾಡಿ. ಇದರಿಂದ ಏಕಾಗ್ರತೆ ಹೆಚ್ಚುವುದು. ಈ ಮಂತ್ರ ಹೇಳುವಾಗ ಹಣೆಯ ಮಧ್ಯ ನಿಮ್ಮ ಗಮನ ಕೇಂದ್ರೀಕರಿಸುವುದು ಒಳ್ಳೆಯದು.
ಈ ಮಂತ್ರ ಮೊದಲ ಬಾರಿ ಹೇಳುವುದಾದರೆ ತಲೆಸುತ್ತು, ಸುತ್ತು ಬರಬಹುದು, ಆದರೆ ನೀವು ಪ್ರತಿದಿನ ಮಂತ್ರ ಹೇಳಲಾರಂಭಿಸಿದರೆ ಏನೂ ಆಗಲ್ಲ.
* ನೀವು ಈ ಮಂತ್ರ ಪಠಿಸುವಾಗ ಜಪ ಮಾಲೆ ಹಿಡಿದು ಪಠಣೆ ಮಾಡುವುದು ಒಳ್ಳೆಯದು. ಜಪ ಮಾಲೆಯಲ್ಲಿ 108 ಮಣಿಗಳಿರುತ್ತದೆ. ನಿಮ್ಮ ಸಂಕಲ್ಪ ನೆರವೇರಲು 40 ದಿನಗಳಲ್ಲಿ 8000 ಬಾರಿ ಪಠಿಸಿ.
ಮೃತ್ಯುಂಜಯ ಮಂತ್ರವನ್ನು ಯಾವ ಸಮಯದಲ್ಲಿ ಪಠಿಸಬೇಕು?
ಯಾವುದೇ ಸಮಯದಲ್ಲಿ ಪಠಿಸಬಹುದು, ಆದರೆ ಬ್ರಹ್ಮ ಮುಹೂರ್ತದಲ್ಲಿ ಪಠಿಸುವುದು ಒಳ್ಳೆಯದು.
ಮಹಿಳೆಯರು ಮೃತ್ಯುಂಜಯ ಮಂತ್ರ ಪಠಿಸಬಹುದೇ?
ಹೌದು ಮಹಿಳೆಯರು ಈ ಮಂತ್ರವನ್ನು ಪಠಿಸಬಹುದು.



Click it and Unblock the Notifications

