Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಜನವರಿ 24ರ ಮೌನಿ ಅಮವಾಸ್ಯೆಯ ವಿಶೇಷತೆ ಏನು?
ಪ್ರತಿ ತಿಂಗಳು ಅಮವಾಸ್ಯೆ, ಹುಣ್ಣಿಮೆ ಬರುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಪ್ರತಿಯೊಂದು ಅಮವಾಸ್ಯೆಯನ್ನು ಒಂದೊಂದು ಹೆಸರಿನಿಂದ ಕರೆಯಲಾಗುವುದು ಹಾಗೂ ಅದಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುವುದು. ಈ ಬಾರಿ ಬರುವ ಅಮವಾಸ್ಯೆಯನ್ನು ಮೌನಿ ಅಮವಾಸ್ಯೆಯಂದು ಕರೆಯುತ್ತಾರೆ. ಈ ಅಮವಾಸ್ಯೆ ಜನವರಿ 24ರಂದು ನಡೆಯಲಿದೆ. ಇದನ್ನು ಮಾಘ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು. ಅನೇಕ ಧಾರ್ಮಿಕ ವಿಧಿ ವಿಧಾನಗಳ ಅಮವಾಸ್ಯೆ ತಿಥಿ ಸಮಯದಲ್ಲಿ ನಡೆಯಲಿದೆ.

ಮೌನಿ ಅಮವಾಸ್ಯೆ ತಿಥಿ ಸಮಯ ಬೆಳಗ್ಗೆ 2-.17ಕ್ಕೆ ಪ್ರಾರಂಭವಾಗಿ ಜನವರಿ 25ರ ಮುಂಜಾನೆ 3.11ಕ್ಕೆ ಅಂತ್ಯವಾಗಲಿದೆ. ಈ ಬಾರಿ ಅವಾಸ್ಯೆಯ ವಿಶೇಷತೆ ಎಂದರೆ 29 ವರ್ಷಗಳ ನಂತರ ಶನಿಯು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಪವಿತ್ರ ಸ್ನಾನ
ಮೌನಿ ಅಮವಾಸ್ಯೆಯಂದು ಪವಿತ್ರ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಸಂಗಮ ಸ್ನಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇನ್ನು ಕೆಲವರು ಈ ದಿನದಂದು ಮೌನವ್ರತ ಮಾಡುತ್ತಾರೆ. ಮೌನವಾಗಿದ್ದು ದೇವರ ಧ್ಯಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ಮೌನಿ ಅಮವಾಸ್ಯೆಗೆ ಪೌರಾಣಿಕ ಮಹತ್ವ
ರಾಕ್ಷಸರು, ಗಾಂಧರ್ವರು ಸಮುದ್ರ ಮಂಥನ ಮಾಡುತ್ತಿದ್ದಾಗ ಅಮೃತದ ಒಂದೆರಡು ಹನಿ ಸಂಗಮದಲ್ಲಿನ ನೀರಿಗೆ ಬೀಳುತ್ತದೆ, ಆದ್ದರಿಂದ ಆ ನೀರು ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಪಡೆಯುತ್ತದೆ. ಇದರಿಂದಾಗಿ ಸಂಗಮ ಸ್ನಾನ ಮಾಡಿದರೆ ಒಳ್ಳೆಯದು ಎಂಬ ಕತೆಯಿದೆ. ಉಳಿದ ಸಮಯದಲ್ಲಿ ಮಾಡುವುದಕ್ಕಿಂತ ಅಮವಾಸ್ಯೆಯಂದು ಸಂಗಮ ಸ್ನಾನ ಮಾಡಿದರೆ ಫಲ ಮೂರು ಪಟ್ಟು ಹೆಚ್ಚು ಎಂದು ಹೇಳಲಾಗುತ್ತದೆ. ಈ ದಿನ ಗಂಗೆ ನೀರು ಅಮೃತವಾಗಿರುತ್ತದೆ, ಆ ಪುಣ್ಯ ನದಿಯಲ್ಲಿ ಸ್ನಾನ ಮಾಡುವುದರಿಂದ ಮಾನಸಿಕ ಹಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ, ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ.

ಮೌನ ವ್ರತದ ಫಲ
ಮನುಷ್ಯನ ಮನಸ್ಸು ತುಂಬಾ ಚಂಚಲ. ಆದರೆ ಮೌನವಾಗಿ ಧ್ಯಾನ ಮಾಡುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುವುದು, ಮನಸ್ಸನ್ನು ನಿಯಂತ್ರಿಸುವ ಶಕ್ತಿ ದೊರೆಯುತ್ತದೆ. ಈ ದಿನ ಇಷ್ಟ ದೈವವನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ ಕಳೆಯಬೇಕು. ಇದರಿಂದ ಆಲೋಚನೆಗಳು ಶುದ್ಧವಾಗುತ್ತದೆ, ಮನಸ್ಸು ನಿರಾಳವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಆರೋಗ್ಯ ಕೂಡ ಹೆಚ್ಚುತ್ತದೆ.
ಮೌನ ವ್ರತದ ಆಚರಣೆ:
ಮುಂಜಾನೆ ಎದ್ದು ಪವಿತ್ರ ಸ್ನಾನ ಮಾಡಿ, ಪೂರ್ವಜರನ್ನು ಮನಸ್ಸಿನಲ್ಲಿ ನೆನೆದು ನಂತರ ದೇವರ ಧ್ಯಾನ ಮಾಡಬೇಕು. ಇದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚುವುದು.

ಧಾನ-ಧರ್ಮ
ಈ ದಿನ ಅನಾಥರಿಗೆ, ಬಡವರಿಗೆ ದಾನ ಮಾಡಬೇಕು. ಹಿರಿಯರ ಮನಸ್ಸು ನೋಯಿಸಬಾರದು. ಮೌನಿ ಅಮಾವಾಸ್ಯೆಯಂದು ಕಂಬಳಿ, ಹತ್ತಿ ವಸ್ತ್ರಗಳನ್ನು ದಾನ ಮಾಡಿದರೆ ಹೆಚ್ಚು ಫಲ. ಅದರಲ್ಲೂ ಅಶಕ್ತರಿಗೆ, ಅಗತ್ಯ ಇರುವವರಿಗೆ ವಸ್ತ್ರ ದಾನ ಮಾಡಿದರೆ ಶ್ರೇಷ್ಠ. ಈ ಮೌನಿ ಅಮಾವಾಸ್ಯೆಯಂದು ಮಹಾವಿಷ್ಣು- ಶಿವನ ಆರಾಧನೆಗೆ ಪ್ರಾಮುಖ್ಯ ಇದೆ. ಕಳಶ ಸ್ವರೂಪದಲ್ಲಿ ಆರಾಧನೆ ಮಾಡಿದರೂ ಸರಿ, ಬೇರೆ ಯಾವುದೇ ರೂಪದಲ್ಲಾದರೂ ಸರಿ ಇಬ್ಬರ ಆರಾಧನೆ ಮಾಡಬೇಕು.

ಏನು ಮಾಡಬಾರದು?
* ಈ ದಿನ ತಡವಾಗಿ ಏಳಬಾರದು
* ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು
* ನಿರ್ಗತಿಕರನ್ನು ನೋಯಿಸಬಾರದು
* ಹಿರಿಯರಿಗೆ ಅಗೌರವ ತೋರಬಾರದು
* ದೇವಾಲಯ ಹೊರತು ಪಡಿಸಿ ಉಳಿದ ಕಡೆ ಇರುವ ಆಲದ ಮರ, ಮದರಂಗಿ ಗಿಡ ಮತ್ತು ಅಶ್ವತ್ಥ ಮರದ ಕೆಳಗಡೆ ನಿಲ್ಲಬಾರದು, ಈ ಸಮಯದಲ್ಲಿ ಆ ಮರಗಳ ಬಳಿ ನಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ ಎನ್ನಲಾಗುತ್ತದೆ.



Click it and Unblock the Notifications
