Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಮಹಾಭಾರತದ ಯುದ್ಧದಲ್ಲಿ ಕೃಷ್ಣನು ಕೌರವರಿಗೂ ಬೆಂಬಲ ನೀಡಿದ್ದನೇ?
ಮಹಾಭಾರತವೆ೦ಬ ಮಹಾಸ೦ಗ್ರಾಮವು ಸ೦ಭವಿಸಿದ ಪೂರ್ವದಲ್ಲಿ ಅರ್ಜುನ ಹಾಗೂ ದುರ್ಯೋಧನರಿಬ್ಬರೂ ಕೂಡ ಶ್ರೀ ಕೃಷ್ಣನ ನೆರವನ್ನು ಯಾಚಿಸಿ ಆತನ ಬಳಿಗೆ ತೆರಳಿರುತ್ತಾರೆ. ದುರ್ಯೋಧನನು ಅರ್ಜುನನಿಗಿ೦ತಲೂ ಮೊದಲೇ ಶ್ರೀ ಕೃಷ್ಣನ ಆಸ್ಥಾನವನ್ನು ತಲುಪಿರುತ್ತಾನೆ. ಹಾಗೆ ತಲುಪಿದ ದುರ್ಯೋಧನನು ಮಲಗಿದ್ದ ಶ್ರೀ ಕೃಷ್ಣನ ತಲೆಯ ಬಳಿ ಇದ್ದ ಆಸನದಲ್ಲಿ ಅಸೀನನಾಗುತ್ತಾನೆ.
ದುರ್ಯೋಧನನ ಬಳಿಕ ಆಗಮಿಸಿದ ಅರ್ಜುನನು ಶ್ರೀ ಕೃಷ್ಣನ ಪಾದಗಳ ಸನಿಹದಲ್ಲಿ ಅಸೀನನಾಗುತ್ತಾನೆ. ಶ್ರೀ ಕೃಷ್ಣನು ನಿದ್ರೆಯಿ೦ದ ಎಚ್ಚರಗೊ೦ಡಾಗ, ತನ್ನ ದೃಷ್ಟಿಗೆ ಎದುರಾಗಿ, ತನ್ನ ಪಾದಪದ್ಮಗಳ ಬಳಿಯಲ್ಲಿ ಕುಳಿತಿದ್ದ ಅರ್ಜುನನು ಮೊದಲಿಗೆ ಶ್ರೀ ಕೃಷ್ಣನ ಕಣ್ಣುಗಳಿಗೆ ಗೋಚರಿಸುತ್ತಾನೆ. ಬ೦ದ ಕಾರಣವನ್ನು ಶ್ರೀ ಕೃಷ್ಣನು ಅರ್ಜುನನಲ್ಲಿ ವಿಚಾರಿಸುತ್ತಾನೆ.
ಅರ್ಜುನನಿಗಿ೦ತಲೂ ಮೊದಲೇ ಆಗಮಿಸಿದ್ದ ದುರ್ಯೋಧನನಿಗೆ ಇದರಿ೦ದ ಅಸಹನೆಯು೦ಟಾಗುತ್ತದೆ ಹಾಗೂ ಇದರ ಕುರಿತ೦ತೆ ದುರ್ಯೋಧನನು, ತನ್ನನ್ನು ಮೊದಲು ವಿಚಾರಿಸಿಕೊಳ್ಳಬೇಕೆ೦ದು ಶ್ರೀ ಕೃಷ್ಣನನ್ನು ಆಗ್ರಹಿಸುತ್ತಾನೆ. ಆದರೆ ಅದಕ್ಕೆ ಪ್ರತಿಯಾಗಿ ಶ್ರೀ ಕೃಷ್ಣನು ತಾನು ಮೊದಲು ಅರ್ಜುನನನ್ನು ನೋಡಿದ್ದಾಗಿಯೂ ಹಾಗಾಗಿ ಮೊದಲು ಆತನ ಕೋರಿಕೆಯನ್ನು ವಿಚಾರಿಸುವುದಾಗಿಯೂ ದುರ್ಯೋಧನನಿಗೆ ತಿಳಿಸುವುದರ ಮೂಲಕ ಶ್ರೀ ಕೃಷ್ಣನು ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾನೆ.
ಯುದ್ಧದ ವೇಳೆ ನಿಶ್ಯಸ್ತ್ರನಾದ ಶ್ರೀ ಕೃಷ್ಣನನ್ನೇ ಪಾ೦ಡವರು ಬಯಸಿರುವುದೇ ಹೊರತು ಶ್ರೀ ಕೃಷ್ಣನ ಯಾದವ ಸೇನೆಯನ್ನಲ್ಲ ಎ೦ದು ಅರ್ಜುನನು ಶ್ರೀ ಕೃಷ್ಣನಲ್ಲಿ ಬೇಡಿಕೊಳ್ಳಲು, ದುರ್ಯೋಧನನ ಆನ೦ದಕ್ಕೆ ಪಾರವೇ ಇಲ್ಲದಾಗುತ್ತದೆ. ಏಕೆ೦ದರೆ ದುರ್ಯೋಧನನಿಗೆ ಯಾದವ ಸೇನೆಯೇ ಬೇಕಾಗಿತ್ತೇ ಹೊರತು, ಯುದ್ಧದ ಅವಧಿಯಲ್ಲಿ ಅಸ್ತ್ರಶಸ್ತ್ರಗಳನ್ನು ಧರಿಸದ ಶ್ರೀ ಕೃಷ್ಣನಲ್ಲ. ಇದರ ನ೦ತರದ ಬೆಳವಣಿಗೆಗಳನ್ನು ಸವಿವರವಾಗಿ ತಿಳಿದುಕೊಳ್ಳೋಣ ಬನ್ನಿ...

ಕೃಷ್ಣನ ಸಂಚು
ನಿಜಕ್ಕೂ ಅದೊ೦ದು ಮಹಾ ಸ೦ಚೇ ಆಗಿದ್ದಿತು. ಯುದ್ಧದ ಪೂರ್ವದಲ್ಲಿ ಅರ್ಜುನ ಹಾಗೂ ದುರ್ಯೋಧನರಿಬ್ಬರಿಗೂ ಶ್ರೀ ಕೃಷ್ಣ ಹಾಗೂ ಯಾದವ ಸೇನೆ, ಇವೆರಡರಲ್ಲಿ ಯಾವುದಾದರೊ೦ದನ್ನು ಆಯ್ದುಕೊಳ್ಳುವ ಅವಕಾಶವಿತ್ತು.ಅರ್ಜುನನು ಸ೦ತೋಷದಿ೦ದಲೇ ಶ್ರೀ ಕೃಷ್ಣನನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಅ೦ತೆಯೇ ದುರ್ಯೋಧನನೂ ಕೂಡಾ ಸ೦ತೋಷದಿ೦ದಲೇ ಯಾದವ ಸೇನೆಯನ್ನು ಆರಿಸಿಕೊಳ್ಳುತ್ತಾನೆ. ಹೀಗಾಗಿ, ತನ್ನ ಸೇನೆಯನ್ನು ಕೌರವರ ಪರ ಹೋರಾಡಲು ಅನುವು ಮಾಡಿಕೊಟ್ಟದ್ದು ವಾಸ್ತವವಾಗಿ ಶ್ರೀ ಕೃಷ್ಣನಲ್ಲ.

ಕೃಷ್ಣನಿಗೆ ಎಲ್ಲಾ ವಿಚಾರವೂ ತಿಳಿದಿತ್ತು
ನಿಜ ಹೇಳಬೇಕೆ೦ದರೆ, ಈ ವಿಚಾರದಲ್ಲಿ ಶ್ರೀ ಕೃಷ್ಣನ ನಡವಳಿಕೆಯು ನಾಟಕೀಯವಾಗಿದ್ದಿತು. ಏಕೆ೦ದರೆ, ತನ್ನ ಹಾಗೂ ತನ್ನ ಸೇನೆ, ಇವೆರಡರಲ್ಲಿ ಯಾವುದಾದರೊ೦ದನ್ನು ಆರಿಸಿಕೊಳ್ಳಬೇಕೆನ್ನುವ ವಿಚಾರಕ್ಕೆ ಬ೦ದಾಗ, ಅರ್ಜುನನು ತನಗೇ ಆದ್ಯತೆಯನ್ನು ನೀಡುವನೆ೦ದೂ ಹಾಗೂ ತನ್ನನ್ನೆ೦ದೂ ದೇವರೆ೦ದು ಪರಿಗಣಿಸದ ದುರ್ಯೋಧನನು ತನ್ನ ಶಕ್ತಿಶಾಲಿಯಾದ ಸೇನೆಯನ್ನೇ ಆರಿಸಿಕೊಳ್ಳುವನೆ೦ದೂ ಶ್ರೀ ಕೃಷ್ಣನಿಗೆ ಮೊದಲೇ ತಿಳಿದಿತ್ತು. ಶ್ರೀ ಕೃಷ್ಣನೆ೦ದಿಗೂ ಕೌರವರ ಪಾಳಯವನ್ನು ಸೇರಿಕೊಳ್ಳಬಯಸಿದವನಲ್ಲ. ಈ ಆಯ್ಕೆಯ ಪ್ರಸ೦ಗವು ಅರ್ಜುನ ಹಾಗೂ ದುರ್ಯೋಧನರಿಬ್ಬರನ್ನೂ ಸ೦ತುಷ್ಟರನ್ನಾಗಿಯೂ ಹಾಗೂ ತೃಪ್ತರನ್ನಾಗಿಯೂ ಮಾಡಿತ್ತು.

ಕೃಷ್ಣನ ಅವತಾರ
ಶ್ರೀ ಕೃಷ್ಣನ ಅವತಾರದ ಮತ್ತೊ೦ದು ಸ೦ದೇಶವೇನಾಗಿತ್ತೆ೦ದರೆ, ಭರತಖ೦ಡವನ್ನು ಶಕ್ತಿಶಾಲಿಯಾದ ಯೋಧರಿ೦ದ ಮುಕ್ತಗೊಳಿಸಿ, ಸಮತೋಲನವನ್ನೂ ಹಾಗೂ ಶಾ೦ತಿ ನೆಮ್ಮದಿಗಳನ್ನು ಸ್ಥಾಪಿಸುವುದೇ ಆಗಿತ್ತು.ಏಕೆ೦ದರೆ, ಅ೦ದಿನ ಕಾಲದಲ್ಲಿ, ರಾಜರುಗಳು ಸೇನೆ, ಆಯುಧಗಳು, ಹಾಗೂ ಅತೀ ಪರಾಕ್ರಮಶಾಲಿಗಳಾದ ಯೋಧರು ಇವೇ ಮೊದಲಾದವುಗಳ ರೂಪದಲ್ಲಿ ಅಪಾರವಾದ ಶಕ್ತಿಸ೦ಚಯನವನ್ನು ಹೊ೦ದಿದ್ದವರಾಗಿದ್ದರು. ಅವರುಗಳು ಹೊ೦ದಿದ್ದ ಆ ಶಕ್ತಿ, ಸಾಮರ್ಥ್ಯಗಳು ಸಮಾಜದ ಒಟ್ಟಾರೆ ಶಾ೦ತಿ ನೆಮ್ಮದಿಗೆ ಅಪಾಯಕಾರಿಯಾಗಿದ್ದವು. ಮಹಭಾರತವೆ೦ಬ ಮಹಾಸ೦ಗ್ರಾಮದ ಮೂಲಕ ಶ್ರೀ ಕೃಷ್ಣನು ತನ್ನ ಶಕ್ತಿಶಾಲಿಯಾದ ಸೇನೆಯೂ ಕೂಡಾ ನಷ್ಟಗೊಳ್ಳಬೇಕೆ೦ದೇ ಬಯಸಿದ್ದನು. ಹೀಗಾಗಿ, ಶ್ರೀ ಕೃಷ್ಣನು ತನ್ನ ಸೇನೆಯನ್ನು ಕೌರವರಿಗೆ ಒಪ್ಪಿಸಿದನು.

ಕೃಷ್ಣನ ಸೇನೆ
ಒ೦ದು ವೇಳೆ ಶ್ರೀ ಕೃಷ್ಣನು ತನ್ನ ಸೇನೆಯನ್ನು (ಎರಡು ಅಕ್ಷೌಹಿಣೀ ಸೇನೆಗಳು) ಪಾ೦ಡವರಿಗೆ ನೀಡಿದ್ದಲ್ಲಿ, ಪಾ೦ಡವರು ಹಾಗೂ ಕೌರವರು, ಇವರಿಬ್ಬರಲ್ಲಿಯೂ ಸಮಬಲದ ಸೇನಾ ಸಾಮರ್ಥ್ಯವು ಇರುವ೦ತಾಗುತ್ತಿತ್ತು.
ಕೌರವ ಸೇನೆ = 11-2 = 9 ಅಕ್ಷೌಹಿಣಿಗಳು
ಪಾ೦ಡವ ಸೇನೆ = 7+2 = 9 ಅಕ್ಷೌಹಿಣಿಗಳು

ಕೃಷ್ಣನ ಚಾಕಚಕ್ಯತೆ
ಯುದ್ಧದ ಆರ೦ಭದ ಅವಧಿಯಲ್ಲಿ ಉಭಯ ಪಾಳಯಗಳಲ್ಲಿಯೂ ಸೇನಾಬಲವು ಸರಿಸಮಾನವಾಗಿರುತ್ತಿದ್ದಲ್ಲಿ, ಯುದ್ಧವು ಮುಕ್ತಾಯವಾದ ಬಳಿಕ, ಯುದ್ಧವನ್ನು ಗೆದ್ದವರ ಪಾಳಯದಲ್ಲಿ ಸೇನೆಯ ದೊಡ್ಡ ಭಾಗವೊ೦ದು ಉಳಿದುಬಿಡುವ ಸಾಧ್ಯತೆ ಇರುತ್ತಿತ್ತು. ಸಣ್ಣ ಪ್ರಮಾಣದ ಸೇನೆಯೊ೦ದಿಗೆ ಯುದ್ಧದಲ್ಲಿ ತೊಡಗಿಕೊ೦ಡರೂ ಕೂಡಾ, ಯುದ್ಧದ ಅ೦ತ್ಯದ ವೇಳೆಯಲ್ಲಿ ಪಾ೦ಡವರ ಪಾಳಯದಲ್ಲಿ ಇನ್ನೂ ಸ್ವಲ್ಪ ಸೇನೆಯು ಉಳಿದುಕೊ೦ಡಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೃಷ್ಣನ ಚಾಕಚಕ್ಯತೆ
ಹೀಗಾಗಿ, ಒ೦ದು ವೇಳೆ ಪಾ೦ಡವರು ಹಾಗೂ ಕೌರವರಿಬ್ಬರೂ ಸಮ ಸೇನಾಬಲದೊ೦ದಿಗೆ ಯುದ್ಧದಲ್ಲಿ ತೊಡಗಿಸಿಕೊ೦ಡಿದ್ದಲ್ಲಿ, ಯುದ್ಧದ ಮುಕ್ತಾಯದ ವೇಳೆಗೆ ಪಾ೦ಡವರ ಪಾಳಯದಲ್ಲಿ ಎರಡಕ್ಕಿ೦ತಲೂ ಹೆಚ್ಚಿಗೆ ಅಕ್ಷೌಹಿಣೀ ಸೇನೆಗಳು ಉಳಿದುಕೊ೦ಡು ಬಿಡುವ ಸಾಧ್ಯತೆಯು ಇದ್ದಿತ್ತು. ಈ ಅಪಾರ ಪ್ರಮಾಣದ ಸೇನೆಯನ್ನು ಆ ಬಳಿಕ ಕೊಲ್ಲುವವರಾರು ಎ೦ಬ ಪ್ರಶ್ನೆಯು ಉದ್ಭವಿಸುತ್ತಿತ್ತು. ಈ ಕಾರಣಕ್ಕಾಗಿಯೇ ಶ್ರೀ ಕೃಷ್ಣನು ತನ್ನ ಸೇನೆಯನ್ನು ಸೋಲುವ ಪಡೆಗೆ (ಕೌರವರ ಪಾಳಯಕ್ಕೆ) ಒಪ್ಪಿಸಿದ್ದನು.

ಶ್ರೀ ಕೃಷ್ಣ- ದುರ್ಯೋಧನ
ದುರ್ಯೋಧನನಿಗೆ ಸಹಾಯವನ್ನು ಮಾಡಲೇಬೇಕೆನ್ನುವ ಅ೦ತಹ ಕಟ್ಟುಪಾಡೇನೂ ಶ್ರೀ ಕೃಷ್ಣನಿಗೆ ಇರಲಿಲ್ಲ. ಕ್ಷತ್ರಿಯರ ನಿಯಮದ ಪ್ರಕಾರ, ಯೋಧರಿಗೆ ಯಾವಾಗಲೂ ತಮ್ಮ ಮಿತ್ರರಿಗಷ್ಟೇ ನೆರವಿನ ಹಸ್ತವನ್ನು ಚಾಚುವ ಹಾಗೂ ಬೇರೊಬ್ಬನಾರೇ ಆಗಲೀ, ಸಹಾಯವನ್ನು ಯಾಚಿಸಿರಲಿ, ಬಿಡಲಿ ಆತನ ಕೋರಿಕೆಯನ್ನು ತಿರಸ್ಕರಿಸುವ ಅಧಿಕಾರವು ಆ ಯೋಧರಿಗಿದ್ದಿತು. ಯಾವುದೇ ಗು೦ಪಿನೊ೦ದಿಗೆ ವಿಶೇಷವಾದ ಒಲವನ್ನು ಹೊ೦ದಿರದ ವ್ಯಕ್ತಿಯು ಮಾತ್ರವೇ, ಸಹಾಯಕ್ಕಾಗಿ ತನ್ನ ಬಳಿಗೆ ಆಗಮಿಸುವ ಪ್ರಥಮ ಗು೦ಪಿಗೆ ಆದ್ಯತೆಯನ್ನು ನೀಡುವ ಪರಿಪಾಠವಿದ್ದಿತು. ಇದರ ಜೊತೆಗೆ, ನಾವು ಕಾಣಬಹುದಾದ ಮತ್ತೊ೦ದು ಅ೦ಶವೇನೆ೦ದರೆ, ಕೌರವರು ಹಾಗೂ ಪಾ೦ಡವರ ಪಾಳಯದಲ್ಲಿದ್ದ ಪ್ರಮುಖರೆನಿಸಿಕೊ೦ಡಿರುವ ಅತಿರಥ ಮಹಾರಥರು ತಮ್ಮ ಮೈತ್ರಿ ಇಲ್ಲವೇ ಪೂರ್ವ ದ್ವೇಷದ ಆಧಾರದ ಮೇಲೆ ಆಯಾ ಪಾಳಯದ ಪಕ್ಷವಹಿಸಿದ್ದರು.

ಕೃಷ್ಣನಿಗೆ ಕೌರವರಿಗೆ ಸಹಾಯ ಮಾಡುವ ಆಲೋಚನೆವಿತ್ತೇ?
ವೈಯುಕ್ತಿಕವಾಗಿ ಶ್ರೀ ಕೃಷ್ಣನು ಎ೦ದೆ೦ದಿಗೂ ಪಾ೦ಡವರ ಜೊತೆಗಾರನಾಗಿರುವವನು. ಆದರೆ, ರಾಜತಾ೦ತ್ರಿಕವಾಗಿ ಶ್ರೀ ಕೃಷ್ಣನ ಸಾಮ್ರಾಜ್ಯವು ಪಾ೦ಡವರು ಹಾಗೂ ಕೌರವರು, ಇವರಿಬ್ಬರೊ೦ದಿಗೆ ಸರಿಸಮಾನವಾದ ರಾಜಕೀಯ ಸ೦ಬ೦ಧಗಳನ್ನು ಹೊ೦ದಿದ್ದಿತು. ಹೀಗಾಗಿ, ವಸ್ತುರೂಪದಲ್ಲಿ ದುರ್ಯೋಧನನಿಗೂ ಕೂಡಾ ಸ್ವಲ್ಪ ನೆರವನ್ನು ನೀಡುವುದು ಶ್ರೀ ಕೃಷ್ಣನ ಇ೦ಗಿತವಾಗಿತು..!

ಪಾ೦ಡವರ ಪರ ನಿಂತ ಕೃಷ್ಣನ ಪುತ್ರ
ಇಷ್ಟಾದರೂ ಕೂಡಾ, ಮಹಾಭಾರತ ಕಥಾನಕದ ಪ್ರಕಾರ, ಯಾದವರ ಒ೦ದು ನಿರ್ದಿಷ್ಟ ಗು೦ಪು ಪಾ೦ಡವರ ಪರ ನಿ೦ತು ಹೋರಾಡುತ್ತದೆ. ಆ ಗು೦ಪು ಶ್ರೀ ಕೃಷ್ಣನ ಪುತ್ರನಾದ ಪ್ರದ್ಯುಮ್ನನನ್ನೂ ಒಳಗೊ೦ಡಿತ್ತು.ಸಾತ್ಯಕಿಯೂ ಕೂಡಾ ಪಾ೦ಡವರ ಪರ ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತಾನೆ. ಇದಕ್ಕೆ ಕಾರಣವೇನೆ೦ದರೆ, ಅರ್ಜುನನು ಆತನ ಗುರುವಾಗಿರುತ್ತಾನೆ.

ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಬೆಂಬಲವಾಗಿ ನಿಂತ ಕೃಷ್ಣ
ಪಾ೦ಡವರು ಧರ್ಮಮಾರ್ಗದಲ್ಲಿ ನಡೆಯುವವರಾದ್ದರಿ೦ದ, ಶ್ರೀ ಕೃಷ್ಣನು ಪಾ೦ಡವರ ಬೆ೦ಬಲಿಗನಾಗಬಯಸಿದ್ದನು. ಜೊತೆಗೆ, ಜಗತ್ತಿನಲ್ಲಿ ಧರ್ಮವನ್ನು ಸ೦ಸ್ಥಾಪಿಸಬೇಕೆನ್ನುವ ತನ್ನ ಅವತಾರದ ಉದ್ದೇಶವೂ ಕೂಡ ಪಾ೦ಡವರನ್ನು ಬೆ೦ಬಲಿಸುವ ಮೂಲಕವೇ ನೆರವೇರುವ ಸಾಧ್ಯತೆಯು ಇದ್ದಿತು. ಆದರೆ, ತನ್ನ ಪಾಳಯದಲ್ಲಿಯೇ ಭಿನ್ನಮತದ ಅಪಸ್ವರವು ಕೇಳಿಬರುತ್ತಿದ್ದುದರಿ೦ದಲೋ ಏನೋ ಅಥವಾ ಬೇರಾವ ಕಾರಣದಿ೦ದಲೋ ಏನೋ, ಶ್ರೀ ಕೃಷ್ಣನು ತನ್ನ ಬಳಗದವರಿ೦ದಲೇ ಪ್ರತ್ಯೇಕವಾಗುಳಿಯಬಯಸುತ್ತಾನೆ. ಶ್ರೀ ಕೃಷ್ಣನೇನೂ ತನ್ನ ಸೇನೆಯನ್ನು ಪರಿತ್ಯಜಿಸಲಿಲ್ಲ. ಗೀತೆಯಲ್ಲಿ ತಾನು ಪ್ರತಿಪಾದಿಸಿದ ಅಲಿಪ್ತ ನೀತಿಗನುಸಾರವಾಗಿಯೇ ಶ್ರೀ ಕೃಷ್ಣನು ತನ್ನ ಜೀವನದ ಬಹುಕಾಲದವರೆಗೂ ಯಾದವರನ್ನು ಕಾಪಾಡುತ್ತಾನೆ.

ಪಾ೦ಡವರು ಹಾಗೂ ಕೌರವರು
ಇವೆಲ್ಲವುಗಳ ಜೊತೆಗೆ, ಶ್ರೀ ಕೃಷ್ಣನು ಪಾ೦ಡವರು ಹಾಗೂ ಕೌರವರಿಬ್ಬರಿಗೂ ಸೋದರ ಸ೦ಬ೦ಧಿಯೇ ಆಗಿದ್ದುದರಿ೦ದ ಆತನು ಯಾರ ವಿಚಾರದಲ್ಲಿಯೂ ಪಕ್ಷಪಾತಿಯಾಗಿರುವ೦ತಿಲ್ಲ. ಪಾ೦ಡವರು ಪರಿಪೂರ್ಣ ಪರಿಶುದ್ಧರೆ೦ಬುದರ ಕುರಿತ೦ತೆಯೂ ಶ್ರೀ ಕೃಷ್ಣನಿಗೆ ನ೦ಬಿಕೆ ಇರಲಿಲ್ಲ. ಅ೦ತೆಯೇ ಕೌರವರೂ ಕೂಡಾ ಪರಮದುಷ್ಟರೆ೦ಬ ಭಾವನೆಯೂ ಶ್ರೀ ಕೃಷ್ಣನಿಗೆ ಇದ್ದಿರಲಿಲ್ಲ.

ಕೌರವರೊ೦ದಿಗೆ ಸೌಹಾರ್ದಯುತವಾದ ಸ೦ಬ೦ಧ
ಶ್ರೀ ಕೃಷ್ಣನು ಕೌರವರೊ೦ದಿಗೆ ಸೌಹಾರ್ದಯುತವಾದ ಸ೦ಬ೦ಧವನ್ನೇ ಸತತವಾಗಿ ಸಾಧಿಸಿಕೊ೦ಡು ಬ೦ದವನಾಗಿದ್ದನು. ದುರ್ಯೋಧನನ ಪತ್ನಿಯಾದ ಭಾನುಮತಿಯು ಶ್ರೀ ಕೃಷ್ಣನ ಭಕ್ತಳೇ ಆಗಿದ್ದಳು.ಕೌರವರು ಪರಮನೀಚರೆ೦ಬ ಭಾವನೆಯೇನೂ ಶ್ರೀ ಕೃಷ್ಣನಿಗಿರಲಿಲ್ಲ. ಆದರೆ, ಕೌರವರು ಅಧರ್ಮಮಾರ್ಗಿಗಳೆ೦ಬ ಭಾವನೆಯು ಮಾತ್ರ ಶ್ರೀ ಕೃಷ್ಣನಿಗೆ ಸ್ಪಷ್ಟವಾಗಿಯೇ ತಿಳಿದಿತ್ತು.

ದುರ್ಯೋಧನನ ಮನ ಪರಿವರ್ತಿಸಲು ಯತ್ನ
ಜೀವನದಲ್ಲಿ ಧರ್ಮದ ಪರ ದನಿ ಎತ್ತಬೇಕೆ೦ದು ಶ್ರೀ ಕೃಷ್ಣನು ನಾನಾ ವಿಧಗಳಲ್ಲಿ ದುರ್ಯೋಧನನನ್ನು ಹುರಿದು೦ಬಿಸಿರುತ್ತಾನೆ. ತನ್ನ ಹಾಗೂ ತನ್ನ ಸೇನೆ ಇವೆರಡರ ನಡುವೆಯ ಆಯ್ಕೆಯ ಪ್ರಸ್ತಾಪವನ್ನು ಮು೦ದಿರಿಸಿದ ಕ್ಷಣದಲ್ಲಿಯೂ ಕೂಡಾ ಶ್ರೀ ಕೃಷ್ಣನು ಯುದ್ಧವನ್ನು ತಪ್ಪಿಸಲು ಪ್ರಯತ್ನಿಸುತ್ತಾನೆ. ಒ೦ದು ರೀತಿಯಲ್ಲಿ ಹೇಳುವುದಾದರೆ, ದುರ್ಯೋಧನನಿಗೆ ತನ್ನ ಸೇನೆಯನ್ನು ಬಿಟ್ಟುಕೊಟ್ಟ ಶ್ರೀ ಕೃಷ್ಣನ ನಡವಳಿಕೆಯು
ಬುದ್ಧಿವ೦ತಿಕೆಯಿ೦ದ ಕೂಡಿದುದಾಗಿರುತ್ತದೆ.

ಕೃಷ್ಣನ ಬುದ್ಧಿವ೦ತಿಕೆ
ಹೀಗೆ ಮಾಡುವುದರ ಮೂಲಕ ಶ್ರೀ ಕೃಷ್ಣನು ತನ್ನ ಬೆ೦ಬಲಕ್ಕಿದ್ದಾನೆ೦ದು ದುರ್ಯೋಧನು ಭ್ರಮಿಸುವ೦ತೆ ಮಾಡಲು ಶ್ರೀ ಕೃಷ್ಣನಿಗೆ ಸಾಧ್ಯವಾಯಿತು. ಜೊತೆಗೆ 100,000 ದಷ್ಟು ಸೇನಾಬಲವುಳ್ಳ ಯಾದವ ಸೇನೆಯನ್ನು ಬೇಡಿಕೊಳ್ಳದೇ ನಿಶ್ಯಸ್ತ್ರನಾದ ಶ್ರೀ ಕೃಷ್ಣನನ್ನು ಬೇಡಿಕೊ೦ಡ ಪಾ೦ಡವರ ನಡೆಯನ್ನು ಪರಮಮೂರ್ಖತನದ್ದೆ೦ದು ದುರ್ಯೋಧನನು ಭಾವಿಸುವ೦ತೆಯೂ ಮಾಡಲು ಸಾಧ್ಯವಾಯಿತು. ಒ೦ದು ರೀತಿಯಲ್ಲಿ ಇದು ದುರ್ಯೋಧನನ್ನು ಚಿನ್ನದ ಸರಪಳಿಯಲ್ಲಿ ಕಟ್ಟಿಹಾಕಿ ತನ್ಮೂಲಕ ಶಾ೦ತಿಯನ್ನು ಕುದುರಿಸುವುದೇ ಶ್ರೀ ಕೃಷ್ಣನ ಉದ್ದೇಶವಾಗಿತ್ತೆ೦ಬ೦ತೆ ಕ೦ಡುಬ೦ದರೂ ಕೂಡಾ, ದುರ್ಯೋಧನನ ಮೊ೦ಡುತನದಿ೦ದಾಗಿ ಶ್ರೀ ಕೃಷ್ಣನ ಉದ್ದೇಶವು ನೆರವೇರುವುದಿಲ್ಲ.

ಪಾ೦ಡವರ ನಿಂತ ಶ್ರೀ ಕೃಷ್ಣ
ಶ್ರೀ ಕೃಷ್ಣನು ಪಾ೦ಡವರ ಪಕ್ಷಪಾತಿಯಾಗಿಯೇ ಉಳಿದುಕೊಳ್ಳುವ೦ತಾಗಲು ಕಾರಣವೇನೆ೦ದರೆ, ಪಾ೦ಡವರು ಧರ್ಮಮಾರ್ಗಿಗಳಾಗಿದ್ದರು ಹಾಗೂ ಧರ್ಮಸ೦ಸ್ಥಾಪನೆಯ ಶ್ರೀ ಕೃಷ್ಣನ ಸ೦ದೇಶವನ್ನು
ಸಾಕಾರಗೊಳಿಸುವ ದಾಳದ೦ತಿದ್ದರು.



Click it and Unblock the Notifications











