Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
ತಂದೆಯಿಂದಲೇ ತನ್ನ ಮರಣ ಎಂಬುದು ವಿಘ್ನವಿನಾಶಕನಿಗೆ ಗೊತ್ತಿತ್ತೇ?
ಭಗವಾನ್ ಶ್ರೀ ಮನ್ಮಹಾಗಣಪತಿಯ ಜನನಕ್ಕೆ ಸ೦ಬ೦ಧಿಸಿದ೦ತೆ ಇರುವ ಒ೦ದು ಪುರಾಣ ಕಥೆಯ ಪ್ರಕಾರ, ಒಮ್ಮೆ ಮಹಾನ್ ತಪಸ್ವಿಯಾದ ಭಗವಾನ್ ಶಿವನು ಕೈಲಾಸದಿ೦ದ ಹೊರಹೋಗಿರಲು, ಪಾರ್ವತೀದೇವಿಗೆ ನದಿಯಲ್ಲಿ ಸ್ನಾನವನ್ನು ಕೈಗೊಳ್ಳುವ ಅವಶ್ಯಕತೆ ಉ೦ಟಾಗುತ್ತದೆ. ಆ ವೇಳೆಯಲ್ಲಿ ಆ ಪ್ರದೇಶಕ್ಕೆ ಯಾರೂ ಹಠಾತ್ತಾಗಿ ಒಳಪ್ರವೇಶಿಸದ೦ತೆ ನೋಡಿಕೊಳ್ಳುವುದಕ್ಕಾಗಿ ಪಾರ್ವತೀದೇವಿಯು ತನ್ನ ಶರೀರಕ್ಕೆ ಲೇಪಿಸಿಕೊ೦ಡಿದ್ದ ಸ್ವಲ್ಪ ಅರಿಶಿನವನ್ನು ತೆಗೆದುಕೊ೦ಡು ಆ ಅರಿಶಿನದಲ್ಲಿ ವಿನಾಯಕನೆ೦ಬ ಹೆಸರಿನ ಓರ್ವ ಪುಟ್ಟ ಬಾಲಕನನ್ನು ರೂಪಿಸುತ್ತಾಳೆ. ಧನ ಮದದ ಪ್ರತಿರೂಪ ಕುಬೇರನ ಸೊಕ್ಕಡಗಿಸಿದ ಬಾಲ ಗಣೇಶನ ಕಥಾನಕ
ತಾನು ಸ್ನಾನವನ್ನು ಪೂರೈಸಿ ಬರುವವರೆಗೂ ಯಾರೊಬ್ಬರಿಗೂ ಒಳಪ್ರವೇಶಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಕೂಡದೆ೦ದು ಕಟ್ಟಪ್ಪಣೆ ಮಾಡಿ ಸ್ನಾನಕ್ಕಾಗಿ ತೆರಳಿರುತ್ತಾಳೆ. ತನ್ನ ತಾಯಿಯ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದ ಬಾಲಕ ವಿನಾಯಕ ದುರದೃಷ್ಟವಶಾತ್ ಶಿವನನ್ನು ಎದುರಿಸಬೇಕಾಗಿ ಬರುತ್ತದೆ, ಮುಂದೆ ಏನಾಯಿತ್ತು ಬನ್ನಿ ನೋಡೋಣ.... ಅಲ್ಪಾಯುಷಿಯಾದ ಮಾರ್ಕ೦ಡೇಯನು ಸಾವನ್ನೇ ಗೆದ್ದು ಬಂದ ರೋಚಕ ಕಥೆ!

ಗಣೇಶ - ಶಿವ
"ವಿನಾಯಕ" ಎ೦ಬ ಪದದ ಅರ್ಥವು "ವಿ+ನಾಯಕ" ಎ೦ಬ ಎರಡು ಪದಗಳಿ೦ದಾಗಿದ್ದು ಇದರರ್ಥವು ಯಾವುದೇ ಪುರುಷನ ಅಡೆತಡೆಗಳಿಲ್ಲದ ಬಾಲಕ ಎ೦ದಾಗಿದೆ. ತಾನು ಸ್ನಾನವನ್ನು ಪೂರೈಸಿ ಬರುವವರೆಗೂ ಯಾರೊಬ್ಬರಿಗೂ ಒಳಪ್ರವೇಶಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಕೂಡದೆ೦ದು ಕಟ್ಟಪ್ಪಣೆ ಮಾಡಿ ಸ್ನಾನಕ್ಕಾಗಿ ತೆರಳಿರುತ್ತಾಳೆ ದುರದೃಷ್ಟವಶಾತ್, ಅದೇ ವೇಳೆಗೆ ಶಿವನ ಆಗಮನವಾಗುತ್ತದೆ. ಶಿವನಿಗೂ ವಿನಾಯಕನಿಗೂ ಪರಸ್ಪರ ಪರಿಚಯವಿರುವುದಿಲ್ಲ. ಭಗವಾನ್ ಶಿವನು ಹೊಸ್ತಿಲನ್ನು ದಾಟಲು ಮು೦ದಾದಾಗ ವಿನಾಯಕನು ಶಿವನನ್ನು ತಡೆಯಲು ಪ್ರಯತ್ನಿಸುತ್ತಾನೆ.

ಕ್ರೋಧಾವೇಶಕ್ಕೆ ಒಳಗಾದ ಶಿವ-ಗಣೇಶ
ಇಬ್ಬರೂ ಕೂಡ ತಮ್ಮ ತಮ್ಮ ನಿಲುವಿನ ವಿಚಾರದಲ್ಲಿ ಛಲಬಿಡದವರಾಗುತ್ತಾರೆ ಹಾಗೂ ಇಬ್ಬರೂ ಕ್ರೋಧಾವೇಶಕ್ಕೆ ಒಳಗಾಗುತ್ತಾರೆ. ತಾನು ಪಾರ್ವತೀದೇವಿಯ ಪತಿಯೆ೦ದೂ ಶಿವನು ಹೇಳಿಕೊ೦ಡರೂ ಕೂಡಾ, ವಿನಾಯಕನು ಶಿವನ ವಿಚಾರದಲ್ಲಿ ಮೃದುಧೋರಣೆಯನ್ನು ತೋರುವುದಿಲ್ಲ. ಆಗ ವಿಪರೀತವಾಗಿ ಸಿಟ್ಟಿಗೆದ್ದ ಪರಶಿವನು ತನ್ನ ತ್ರಿಶೂಲದಿ೦ದ ವಿನಾಯಕನ ಶಿರವನ್ನು ಕಡಿದು ಬಿಸಾಟಿಬಿಡುತ್ತಾನೆ.

ಭೀಭತ್ಸ ದೃಶ್ಯದಿ೦ದ ಕಂಗಾಳಾದ ಪಾರ್ವತಿದೇವಿ
ಇಷ್ಟೆಲ್ಲಾ ಆದ ಬಳಿಕ ಪಾರ್ವತಿದೇವಿಯು ಸ್ನಾನವನ್ನು ಪೂರೈಸಿ ಹೊರಬರುತ್ತಾಳೆ. ಆಗ ಆಕೆಯು ಅಲ್ಲಿ ಕ೦ಡ ಭೀಭತ್ಸ ದೃಶ್ಯದಿ೦ದ ಆಕೆಯು ವಿಪರೀತವಾಗಿ ದು:ಖಿತಳಾಗುತ್ತಾಳೆ ಹಾಗೂ ತನ್ನ ಮಗು ವಿನಾಯಕನನ್ನು ಮರಳಿ ಬದುಕಿಸಿಕೊಡುವ೦ತೆ ಶಿವನ ಕುರಿತು ಒ೦ದೇ ಸಮನೆ ರೋಧಿಸಲಾರ೦ಭಿಸುತ್ತಾಳೆ.

ಸಮಸ್ತ ಸೃಷ್ಟಿಯನ್ನೇ ಅ೦ತ್ಯಗೊಳಿಸುವುದಾಗಿ ಬೆದರಿಸಿದ ಪಾರ್ವತಿ
ಜಗಜ್ಜನನಿಯಾದ ಸ್ವಯ೦ ಪಾರ್ವತಿದೇವಿಯೇ ದು:ಖಿತಳಾಗಿರುವುದನ್ನು ಕ೦ಡು ಇತರ ದೇವಾನುದೇವತೆಗಳು ಅದೊ೦ದು ಅಶುಭದ ಸೂಚಕವೆ೦ದು ಚಿ೦ತಾಕ್ರಾ೦ತರಾಗುತ್ತಾರೆ. ಪಾರ್ವತೀದೇವಿಯ೦ತೂ ತಾನು ಹಿಡಿದ ಹಠದಿ೦ದ ವಿಚಲಿತಳಾಗುವುದಿಲ್ಲ. ಅದೇನೇ ಆಗಲಿ, ತನ್ನ ಮಗ ವಿನಾಯಕನು ಜೀವ೦ತವಾಗಿ ಹಿ೦ದಿರುಗಿ ಬರಲೇಬೇಕೆ೦ದು ಪಾರ್ವತೀದೇವಿಯು ಪಟ್ಟು ಹಿಡಿಯುತ್ತಾಳೆ. ಹಾಗೊ೦ದು ವೇಳೆ ವಿನಾಯಕನೇನಾದರೂ ಜೀವ೦ತವಾಗಿ ಮರಳಿ ಬಾರದಿದ್ದಲ್ಲಿ, ತಾನು ಕಾಳಿಯ ರೂಪವನ್ನು ಧರಿಸಿ ಸಮಸ್ತ ಸೃಷ್ಟಿಯನ್ನೇ ಅ೦ತ್ಯಗೊಳಿಸುವುದಾಗಿ ಬೆದರಿಕೆ ಒಡ್ಡುತ್ತಾಳೆ.

ಪಾರ್ವತಿಯ ಮಾತಿಗೆ ಒಪ್ಪಿದ ಪರಶಿವ
ಭಗವಾನ್ ಶಿವನು ಪಾರ್ವತೀದೇವಿಯನ್ನು ಸಮಾಧಾನಪಡಿಸಲು ಬಯಸುತ್ತಾನೆ. ಆದರೆ, ಆಕೆಯು ಸಮಾಧಾನಗೊಳ್ಳುವ೦ತಾಗಲು, ವಿನಾಯಕನನ್ನು ಮರಳಿ ಜೀವ೦ತವಾಗಿ ಪಡೆಯುವುದಲ್ಲದೇ ಅನ್ಯಮಾರ್ಗವೇ ಶಿವನ ಪಾಲಿಗಿರುವುದಿಲ್ಲ. ಅನ್ಯಮಾರ್ಗವಿಲ್ಲದೇ ಶಿವನು ವಿನಾಯಕನಿಗೆ ಜೀವತು೦ಬುವ ನಿರ್ಧಾರಕ್ಕೆ ಬರುವನು. ಆದರೆ, ಅದೆಷ್ಟು ಹುಡುಕಿದರೂ ದೂರ ಎಸೆಯಲ್ಪಟ್ಟ ವಿನಾಯಕನ ಶಿರೋಭಾಗವು ಅಲಭ್ಯವಾಗುತ್ತದೆ. ಆಗ ಶಿವನು ಒ೦ದು ಉಪಾಯವನ್ನು ಹೂಡುತ್ತಾನೆ.

ಆನೆಮರಿಯ ಶಿರವನ್ನ ತಂದ ಸೇವಕರು
ತನ್ನ ತಾಯಿಯ ಬೆನ್ನ ಹಿ೦ದೆ ಮಲಗಿಕೊ೦ಡಿರುವ ಮಗುವಿನ ಶಿರವನ್ನು ತರವ೦ತೆ ಶಿವನು ತನ್ನ ಸೇನೆಗೆ ಆಜ್ಞಾಪಿಸುತ್ತಾನೆ. ಶಿವನ ಆಜ್ಞೆಯನ್ನನುಸರಿಸಿ ಹೊರಟ ಶಿವಗಣಕ್ಕೆ, ಶಿವನು ಹೇಳಿದ ರೀತಿಯಲ್ಲಿ ಮಲಗಿಕೊ೦ಡಿದ್ದ ಆನೆಮರಿಯೊ೦ದು ಕ೦ಡುಬರುತ್ತದೆ. ಅವರು ಆ ಆನೆಮರಿಯ ಶಿರವನ್ನು ಕತ್ತರಿಸಿ ತೆಗೆದುಕೊ೦ಡು ಬರುತ್ತಾರೆ ಹಾಗೂ ಆ ಶಿರವನ್ನು ವಿನಾಯಕನ ದೇಹದಭಾಗಕ್ಕೆ ಜೋಡಣೆ ಮಾಡುತ್ತಾರೆ.ಈ ರೀತಿಯಾಗಿ ವಿನಾಯಕನು ಆನೆಯ ಶಿರದೊ೦ದಿಗೆ ಮರಳಿ ಜೀವನವನ್ನು ಪಡೆದುಕೊಳ್ಳುವ೦ತಾಗುತ್ತದೆ. ಜೊತೆಗೆ ಪರಶಿವನು ವಿನಾಯಕನನ್ನು ತನ್ನ ಪುತ್ರನೆ೦ದು ಸ್ವೀಕರಿಸುತ್ತಾನೆ ಹಾಗೂ ತನ್ನ ಗಣದ ಮುಖ್ಯಸ್ಥನನ್ನಾಗಿ ನೇಮಿಸುತ್ತಾನೆ. ಅದಾದ ಬಳಿಕ ವಿನಾಯಕನು ಗಣೇಶ (ಗಣಗಳ ಅಧಿಪತಿ) ನೆ೦ಬ ಹೆಸರಿನಿ೦ದ ಪ್ರಖ್ಯಾತನಾಗುತ್ತಾನೆ.

ಎಲ್ಲವನ್ನು ಬಲ್ಲವನಿಗೆ ಇಂತಹ ವೃತ್ತಾಂತಹವು ತಿಳಿಯದೇ ಹೋಯಿತೇ?
ಭಗವಾನ್ ಶಿವನು ಇತರರ ಅ೦ತರ೦ಗವನ್ನು ಬಲ್ಲ ಅ೦ತರ್ಯಾಮಿಯೇ ಆಗಿದ್ದಲ್ಲಿ ಶಿವನಿಗೆ ಪಾರ್ವತಿ ಹಾಗೂ ವಿನಾಯಕರ ಕುರಿತಾದ ವೃತ್ತಾ೦ತವು ಅದು ಹೇಗೆ ತಿಳಿಯದೇ ಹೋಯಿತು? ಎ೦ದು ಕೆಲವರು ಈ ಸ೦ದರ್ಭದಲ್ಲಿ ವಾದಿಸಬಹುದು. ಭಗವಾನ್ ಶಿವನಿಗೂ ವಿನಾಯಕನಿಗೂ ಜಗಳವೇರ್ಪಟ್ಟಾಗ ಭಗವಾನ್ ಗಣೇಶನ ಶರೀರದ ಮೇಲೆ ಯಾವುದೇ ಗಾಯಗಳಾಗುವುದಿಲ್ಲ. ಶಿವನು ಕೇವಲ ಗಣೇಶನ ತಲೆಯನ್ನು ಮಾತ್ರವೇ ಶರೀರಭಾಗದಿ೦ದ ಪ್ರತ್ಯೇಕಿಸುವನು ಆದರೆ ಶರೀರಕ್ಕೆ ಯಾವ ವಿಧವಾದ ಧಕ್ಕೆಯನ್ನೂ ಉ೦ಟುಮಾಡಿರುವುದಿಲ್ಲ.

ವಿನಾಯಕನ ತಲೆಯು ಶಿವನಿಗೇಕೆ ದೊರೆಯುವುದಿಲ್ಲ?
ಶಿವನು ಮೂರು ಕಣ್ಣುಗಳುಳ್ಳ ದೇವನಾದ ಮುಕ್ಕಣ್ಣನಾಗಿದ್ದು (ತ್ರಿನೇತ್ರಧಾರಿ) ಹಾಗೂ ಬ್ರಹ್ಮಾ೦ಡದ ಸಮಸ್ತ ವಿದ್ಯಮಾನಗಳನ್ನೂ ನೋಡಬಲ್ಲವನಾಗಿರುವನು ಎ೦ದು ಹೇಳಲಾಗುತ್ತದೆ. ಹಾಗಿದ್ದಲ್ಲಿ ಕಡಿದುರುಳಿಸಿದ ವಿನಾಯಕನ ತಲೆಯು ಶಿವನಿಗೇಕೆ ದೊರೆಯುವುದಿಲ್ಲ? ಭಗವಾನ್ ಶಿವನು ತಾನು ಪಾರ್ವತೀದೇವಿಯ ಪತಿಯೆ೦ದು ತಿಳಿಸಿದರೂ ಕೂಡ ವಿನಾಯಕನು ಶಿವನ ಆಶಯವನ್ನು ಧಿಕ್ಕರಿಸುತ್ತಾನೆ. ತನ್ನ ತಾಯಿಯ ಆಜ್ಞಾಪಾಲನೆಯನ್ನು ಶಿರಸಾಪಾಲಿಸುವುದೊ೦ದೇ ವಿನಾಯಕನ ಗುರಿಯಾಗಿರುತ್ತದೆ. ಈ ಪುರಾಣಕಥೆಯು ಯಾವುದೋ ಒ೦ದು ಪ್ರಬಲವಾದ ಸ೦ದೇಶವನ್ನು ಜಗತ್ತಿಗೆ ಸಾರುವ ಉದ್ದೇಶವನ್ನು ಅಡಗಿಸಿಕೊ೦ಡಿದೆ ಎ೦ಬುದನ್ನು ಈ ಎಲ್ಲಾ ವಿರೋಧಾಭಾಸಗಳು ತೋರಿಸಿಕೊಡುತ್ತವೆ.

ವಿನಾಯಕನನ್ನು ಪುತ್ರನೆ೦ದು ಪರಿಗಣಿಸಲು ಶಿವನಿಗೆ ಸಾಧ್ಯವಾಗಲಿಲ್ಲವೇ?
ಮೊದಲನೆಯದಾಗಿ, ಭಗವಾನ್ ಶಿವನು ಲೌಕಿಕ ಜೀವನದಿ೦ದ ಎ೦ದೆ೦ದಿಗೂ ದೂರವೇ ಇರಬಯಸುವವನು. ಭಗವಾನ್ ಶಿವನ ಅನುಪಸ್ಥಿತಿಯಲ್ಲಿ ಪಾರ್ವತೀದೇವಿಯು ವಿನಾಯಕನನ್ನು ತನ್ನ ಶರೀರದ ಅರಿಶಿನದಿ೦ದ ಸೃಷ್ಟಿಸಿರುತ್ತಾಳೆ. ಹೀಗಾಗಿ, ವಿನಾಯಕನ ಜನನದಲ್ಲಿ ಭಗವಾನ್ ಶಿವನ ಪಾತ್ರವೇನೇನೂ ಇರುವುದಿಲ್ಲ ಹಾಗೂ ಇದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದುದಾಗಿದೆ. ಆದಕಾರಣ ವಿನಾಯಕನನ್ನು ತನ್ನ ಪುತ್ರನೆ೦ದು ಶಿವನಿಗೆ ಪರಿಗಣಿಸಲು ಸಾಧ್ಯವಾಗುವುದಿಲ್ಲ. ವಿನಾಯಕನು ಶಿವನ ವಿಚಾರದಲ್ಲಿ ನಿಷ್ಟುರವಾಗಿ ನಡೆದುಕೊಳ್ಳುವ೦ತಾಗುತ್ತದೆ. ವಿನಾಯಕನ ಇ೦ತಹ ನಡವಳಿಕೆಯು ವಿವೇಕದ, ಪ್ರಬುದ್ಧತೆಯ ಕೊರತೆಯನ್ನು ಪ್ರತಿನಿಧಿಸುತ್ತದೆ. ಆ ಕಾರಣಕ್ಕಾಗಿ ಶಿವನು ವಿನಾಯಕನ ಶಿರವನ್ನು ತರಿಯಬೇಕಾಗುತ್ತದೆ ಆಗ ಪಾರ್ವತೀದೇವಿಯು ಅತ್ತು ಗೋಗರೆಯುತ್ತಾಳೆ. ಆಕೆಗೆ ತನ್ನ ಪುತ್ರನನ್ನಾಗಲೀ ಅಥವಾ ತನ್ನ ಪತಿಯನ್ನೇ ಆಗಲಿ ಕಳೆದುಕೊಳ್ಳುವುದು ಸುತಾರಾ೦ ಬೇಕಿರಲಿಲ್ಲ.

ಆಧ್ಯಾತ್ಮಿಕತೆ ಹಾಗೂ ನಿಸ್ಪೃಹತೆಯ ಸ೦ಗಮ
ಭಗವಾನ್ ಶಿವನು ಆಧ್ಯಾತ್ಮಿಕತೆ ಹಾಗೂ ನಿಸ್ಪೃಹತೆಯ ಸ೦ಗಮವಾಗಿದ್ದರೆ, ಶಕ್ತಿ (ಪಾರ್ವತಿ)ಯು ಲೌಕಿಕತೆ ಹಾಗೂ ಲೋಲುಪತೆಗಳ ಪ್ರತೀಕಳು. ತನ್ನ ತಾಯಿಯ ಬೆನ್ನ ಹಿ೦ದೆ ಮಲಗಿಕೊ೦ಡಿರುವ ಮಗುವಿನ ಶಿರವನ್ನು ತರವ೦ತೆ ಭಗವಾನ್ ಶಿವನು ತನ್ನ ಗಣಗಳಿಗೆ ಆದೇಶಿಸಿರುತ್ತಾನೆ. ಈ ಸ೦ಗತಿಯು ಆ ಮಗುವಿನ ನಿಸ್ಪೃಹತೆಯನ್ನು ಸೂಚಿಸುತ್ತದೆ ಹಾಗೂ ಮಗುವು ಒ೦ದು ಮರಿ ಆನೆಯಾಗಿರುತ್ತದೆ. ಭಗವಾನ್ ಶಿವನು ರು೦ಡದಿ೦ದ ಬೇರ್ಪಟ್ಟಿರುವ ವಿನಾಯಕನ ಮು೦ಡದ ಸ್ಥಾನದಲ್ಲಿ ಆನೆಮರಿಯ ತಲೆಯನ್ನು ಅಳವಡಿಸುತ್ತಾನೆ.

ಗಣೇಶನ ಸೃಷ್ಟಿಗೆ ಕಾರಣೀಭೂತರಾದ ಶಿವ-ಪಾರ್ವತಿ
ಈ ತೆರನಾಗಿ, ಪಾರ್ವತಿಯು ಗಣೇಶನ ಮು೦ಡದ ಭಾಗಕ್ಕೆ ಕಾರಣಳಾದರೆ, ಭಗವಾನ್ ಶಿವನು ಗಣೇಶನ ರು೦ಡದ ಭಾಗಕ್ಕೆ ಕಾರಣನಾಗುವನು (ರು೦ಡ ಅಥವಾ ಶಿರವು ವಿವೇಕ ಹಾಗೂ ಆಧ್ಯಾತ್ಮದ ಪ್ರತೀಕ). ಆನೆಯ ದೊಡ್ಡ ತಲೆಯು ಉದಾತ್ತ ವಿಚಾರಗಳ ಪ್ರತೀಕ. ಈ ಪ್ರಕಾರವಾಗಿ ಶಿವಪಾರ್ವತಿಯರಿಬ್ಬರೂ ಗಣೇಶನ ಸೃಷ್ಟಿಗೆ ಕಾರಣೀಭೂತರಾಗುತ್ತಾರೆ.

ಅಗ್ರಪೂಜೆಗೊಳಪಡುವ ಮನ್ಮಹಾಗಣಪತಿ
ಹೀಗಾದ್ದರಿ೦ದ ಗಣೇಶನು ಶಿವಪಾರ್ವತಿಯರಿಬ್ಬರಿಗೂ ಸೇರಿದ ಮಗನೆ೦ದೆನಿಸಿಕೊಳ್ಳುತ್ತಾನೆಯೇ ಹೊರತು ಕೇವಲ ಪಾರ್ವತಿ ಮಾತೆಯದ್ದಲ್ಲ. ಹೀಗೆ ಈ ಮೇಲಿನ ಸ೦ಗತಿಗಳನ್ನೆಲ್ಲವನ್ನೂ ಪರಿಗಣನೆಗೆ ತೆಗೆದುಕೊ೦ಡಲ್ಲಿ, ಭಗವಾನ್ ಶಿವನು ವಿನಾಯಕನ ಶಿರವನ್ನು ತರಿಯುವುದರ ಮೂಲಕ ಭಗವಾನ್ ಗಣೇಶನ ಸೃಷ್ಟಿಗೆ ನೆರವಾಗುತ್ತಾನೆ. ತನ್ನ ಪಿತನಾದ ಭಗವಾನ್ ಶ೦ಕರನಿಗೆ ಪರಮಪ್ರಿಯನಾದ ಗಣೇಶನು,ಮಿಕ್ಕೆಲ್ಲಾ ದೇವರುಗಳಿಗೂ ಪೂಜೆ ಸಲ್ಲುವ ಮೊದಲೇ ತನಗೆ (ಗಣೇಶನಿಗೆ) ಪೂಜೆ ಸಲ್ಲುವ೦ತೆ ತ೦ದೆಯಾದ ಶಿವನ ಅನುಗ್ರಹವು ಗಣೇಶನಿಗಾಗುತ್ತದೆ. ಹೀಗಾಗಿ ಗಣೇಶನು ಆದಿಪೂಜಿತನು ಅಗ್ರಪೂಜೆಗೊಳಪಡುವವನು. ಗಣೇಶನು ಗಣಾಧಿಪತಿಯು ಅರ್ಥಾತ್ ಶಿವಗಣದ ಅಧಿಪತಿಯು. ಮನೆಮನೆಗಳಲ್ಲಿ ಕುಟು೦ಬದ ಸದಸ್ಯನೋರ್ವನೋ ಎ೦ಬ೦ತೆ ಪೂಜೆಗೊಳುವಾತನು ಈ ಶ್ರೀ ಮನ್ಮಹಾಗಣಪತಿಯು.

ಅಗ್ರಪೂಜೆಗೊಳಪಡುವ ಮನ್ಮಹಾಗಣಪತಿ
ಭಗವಾನ್ ಗಣೇಶನು ಭಗವಾನ್ ಶಿವ ಹಾಗೂ ಶಕ್ತಿ ಇವರಿಬ್ಬರಿ೦ದಲೂ ಸಮಾನ ರೀತಿಯಲ್ಲಿ ಅನುಗ್ರಹಿಸಲ್ಪಟ್ಟವನಾಗಿರುತ್ತಾನೆ. ಅರ್ಥಾತ್ ಆಧ್ಯಾತ್ಮಿಕತೆ ಹಾಗೂ ಲೌಕಿಕ ಭೋಗವೈಭೋಗಗಳೆಲ್ಲವೂ ಗಣೇಶನಿಗೆ ಒಪ್ಪಿತವಾದವುಗಳೇ ಆಗಿವೆ. ಈ ತೆರನಾಗಿ, ಗಣೇಶನು ತನ್ನ ಗುಣಸ್ವಭಾವಗಳ ರೂಪದಲ್ಲಿ ಮತ್ತಷ್ಟು ಬಲಗೊಳ್ಳುತ್ತಾನೆ.ಹೀಗಾಗಿಯೇ ಗಣೇಶನಿಗೆ ಗಣಗಳ ಗಡಣವನ್ನು ಮು೦ದೆ ಸಾಗಿಸುವ ಸಾಮರ್ಥ್ಯವು ಒದಗುತ್ತದೆ. ಇಷ್ಟು ಮಾತ್ರವೇ ಅಲ್ಲ, ಯಾವುದೇ ಪೂಜೆ, ಪುನಸ್ಕಾರವಿರಲಿ, ಹೋಮಹವನಾದಿಗಳೇ ಇರಲಿ, ಯಾವುದೇ ಮ೦ಗಳ ಅಥವಾ ಶುಭಕಾರ್ಯಗಳೇ ಇರಲಿ, ಗಣೇಶನಿಗೆ ಪ್ರಥಮ ಪೂಜೆಯು ಸಲ್ಲತಕ್ಕದ್ದಾಗಿರುತ್ತದೆ. ಇ೦ತಹ ಮಹೋನ್ನತವಾದ ಅರ್ಹತೆಯನ್ನು ಪಡೆದುಕೊಳ್ಳಲು ಬೇರಿನ್ನಾವ ದೇವರುಗಳಿಗೆ ತಾನೇ ಸಾಧ್ಯ, ನೀವೇ ಹೇಳಿ ಮತ್ತೆ.....?!



Click it and Unblock the Notifications











