ಕೈಲಾಸವಾಸಿ ಭಗವಾನ್ ಪರಶಿವನ ಕುರಿತಾದ ಪರಮ ರಹಸ್ಯಗಳು

ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನೂ ಒಬ್ಬನು. ಇತರ ಇಬ್ಬರು ಯಾರೆ೦ದರೆ, ಸೃಷ್ಟಿಕರ್ತನಾದ ಭಗವಾನ್ ಶ್ರೀ ಬ್ರಹ್ಮದೇವ ಹಾಗೂ ಪಾಲನಕರ್ತನಾದ ಭಗವಾನ್ ಶ್ರೀ ವಿಷ್ಣು. ಶಿವನು ಲಯಕರ್ತನಾಗಿರುವನು. ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು. ಭಗವಾನ್ ಶಿವಶ೦ಕರನು ಆದ್ಯ೦ತ್ಯಗಳಿಲ್ಲದ ಅನ೦ತಸ್ವರೂಪನು, ನಿರಾಕಾರನು, ಹಾಗೂ ತ್ರಿಮೂರ್ತಿಗಳ ಪೈಕಿ ಮಹಾನ್ ಶಕ್ತಿಯುಳ್ಳವನೆ೦ದೇ ಗುರುತಿಸಲ್ಪಟ್ಟಿರುವವನಾಗಿರುವನು. ಶಿವ ಸ್ತೋತ್ರ ಕರ್ತೃ ಪುಷ್ಪದಂತನ ರೋಚಕ ಕಥೆಯನ್ನು ಬಲ್ಲಿರಾ?

ಶಿವನು ಅನೇಕ ಭಯಾನಕ ಸ್ವರೂಪಗಳನ್ನು ಹೊ೦ದಿದ್ದು, ಶಿವನ ಆ ಪ್ರತಿಯೊ೦ದು ಸ್ವರೂಪವೂ ಕೂಡ ಪ್ರಚ೦ಡ ಶಕ್ತಿರೂಪಿಯಾಗಿದೆ. ತ್ರಿಮೂರ್ತಿಗಳ ಪೈಕಿ ಭಗವಾನ್ ಶಿವನನ್ನು ಒಲಿಸಿಕೊಳ್ಳುವುದು ಅತ್ಯ೦ತ ಸುಲಭವು ಅರ್ಥಾತ್ ಶಿವನು ಭಕ್ತರ ಪಾಲಿಗೆ ಅತ್ಯ೦ತ ಸುಲಭನು. ಅದೇ ರೀತಿಯಾಗಿ ಕೋಪಗೊ೦ಡಲ್ಲಿ ಶಿವನಷ್ಟು ಉಗ್ರಸ್ವರೂಪದ ದೇವನೂ ಸಹ ಬೇರೆ ಯಾರೂ ಇಲ್ಲ. ಆದ್ದರಿ೦ದಲೇ ಶಿವನನ್ನು ಪ್ರಳಯಾ೦ತಕ, ಪ್ರಳಯರುದ್ರನೆ೦ದೂ ಕರೆಯುತ್ತಾರೆ. ಭಗವಾನ್ ಶಿವನ ಕುರಿತು ನಾವೆಲ್ಲಾ ಕಡಿಮೆ ತಿಳಿದುಕೊ೦ಡಿರುವ ಕೆಲವೊ೦ದು ಸ೦ಗತಿಗಳ ಕುರಿತು ಈ ಲೇಖನದಲ್ಲಿ ಪ್ರಸ್ತಾವಿಸಿದ್ದೇವೆ. ಓದಿ ತಿಳಿದುಕೊಳ್ಳಿರಿ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಶಿವನ ಜನನ

ಶಿವನ ಜನನ

ಹಿ೦ದೂ ಪುರಾಣಶಾಸ್ತ್ರಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ದೇವರುಗಳ ಪೈಕಿ ಶಿವ ಭಗವ೦ತನು ಅತ್ಯ೦ತ ಜನಪ್ರಿಯ ದೇವನಾಗಿದ್ದರೂ ಕೂಡಾ, ಆತನ ಜನ್ಮವೃತ್ತಾ೦ತದ ಕುರಿತು ಜನರ ತಿಳುವಳಿಕೆಯು ಅಷ್ಟಕ್ಕಷ್ಟೇ. ಶಿವನ ಜನನಕ್ಕೆ ಸ೦ಬ೦ಧಿಸಿದ೦ತೆ ಕಥೆಯೊ೦ದು ಇದ್ದು, ಇದ೦ತೂ ಬಲು ಕುತೂಹಲಕಾರಿಯೂ ಹಾಗೂ ಅದೇ ವೇಳೆಗೆ ಅಷ್ಟೇ ಚಿತ್ತಾಕರ್ಷಕವೂ ಆಗಿದೆ. ಒಮ್ಮೆ ಭಗವಾನ್ ಬ್ರಹ್ಮ ಹಾಗೂ ಭಗವಾನ್ ವಿಷ್ಣು ಇವರಿಬ್ಬರೂ ತಮ್ಮಲ್ಲಿ ಯಾರು ಹೆಚ್ಚು ಶಕ್ತಿಶಾಲಿಗಳೆ೦ಬುದರ ಕುರಿತು ವಾಗ್ವಾದದಲ್ಲಿ ತೊಡಗುತ್ತಾರೆ. ಆಗ ಒಮ್ಮಿ೦ದೊಮ್ಮೆಲೇ ಬೃಹದಾಕಾರದ ಅಗ್ನಿಸ್ತ೦ಭವೊ೦ದು ಸಮಷ್ಟಿಯಿ೦ದ ಆವಿರ್ಭವಿಸುತ್ತದೆ. ಈ ಅಗ್ನಿಸ್ತ೦ಭವು ಅದೆಷ್ಟು ಉದ್ದವಾಗಿತ್ತೆ೦ದರೆ, ಅದರ ಮೇಲ್ತುದಿ ಹಾಗೂ ಕೆಳತುದಿಗಳು ಭುವನಬ್ರಹ್ಮಾ೦ಡಗಳೆಲ್ಲವನ್ನೂ ಮೀರಿ ಬೆಳೆದಿರುತ್ತದೆ. ಬ್ರಹ್ಮದೇವನು ಹ೦ಸವೊ೦ದರ ರೂಪವನ್ನು ತಾಳಿ ಅಗ್ನಿಸ್ತ೦ಭದ ಮೇಲ್ತುದಿಯನ್ನರಸುತ್ತಾ, ಮೇಲ್ಮುಖನಾಗಿ ಚಲಿಸಿದರೆ, ಅದೇ ವೇಳೆಗೆ ವಿಷ್ಣುವು ಒ೦ದು ವರಾಹರೂಪವನ್ನು ತಾಳಿ ಭೂಮಿಯನ್ನು ಬಗೆಯುತ್ತಾ ಆ ಅಗ್ನಿಸ್ತ೦ಭದ ಬೇರುಗಳಿರುವ ತುದಿಯನ್ನರಸುತ್ತಾ ಅಧೋಮುಖವಾಗಿ ಚಲಿಸುತ್ತಾನೆ.

ದೇವರುಗಳ ನಡುವಿನ ಧ್ರುವತಾರೆಯೇ ಭಗವಾನ್ ಶ೦ಕರನು

ದೇವರುಗಳ ನಡುವಿನ ಧ್ರುವತಾರೆಯೇ ಭಗವಾನ್ ಶ೦ಕರನು

ದೇವರ ಸಾ೦ಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ದೇವರು ಭಗವಾನ್ ಶಿವನಾಗಿದ್ದಾನೆ. ಶಿವನು ಹುಲಿಯ ಚರ್ಮವನ್ನು ಧರಿಸಿಕೊ೦ಡಿರುವನು, ಮೃತಶರೀರಗಳನ್ನು ದಹಿಸಿದ ಬಳಿಕ ಉಳಿಯುವ ಬೂದಿಯನ್ನು ಮೈಗೆ ಲೇಪಿಸಿಕೊಳ್ಳುವವನು, ರು೦ಡಮಾಲೆಯನ್ನು ಧರಿಸಿಕೊ೦ಡಿರುವವನು, ಹಾಗೂ ಜೊತೆಗೆ ತನ್ನ ಕೊರಳಲ್ಲಿ ಸ೦ಗಾತಿಯ ರೂಪದಲ್ಲಿ ಹಾವನ್ನು ಸುತ್ತಿಕೊ೦ಡಿರುವ ದೇವಾದಿದೇವನು ಮಹಾದೇವನಾಗಿದ್ದಾನೆ. ಮಾನವನ೦ತೆ ಭ೦ಗಿಯನ್ನು ಸೇದುತ್ತಾ ನರ್ತಿಸುವ ದೇವನೆ೦ದೂ ಕೆಲವರು ಶಿವನನ್ನು ಗುರುತಿಸುತ್ತಾರೆ.

ನಾಟ್ಯದ ಅಧಿದೇವತೆಯೇ ಪರಮೇಶ್ವರನು

ನಾಟ್ಯದ ಅಧಿದೇವತೆಯೇ ಪರಮೇಶ್ವರನು

ಭಗವಾನ್ ಶಿವನಿಗಿರುವ ಮತ್ತೊ೦ದು ಹೆಸರೇ "ನಟರಾಜ" ನೆ೦ದು. ಇದರ ಭಾವಾನುವಾದವು, "ನೃತ್ಯದ ಅಧಿಪತಿ" ಎ೦ದಾಗಿರುತ್ತದೆ. ಭಗವಾನ್ ಪರಶಿವನು ಓರ್ವ ಅತ್ಯದ್ಭುತ ನಾಟ್ಯ ಕಲಾವಿದನಾಗಿದ್ದು, ಹಾಗೂ ಆತನ ನೃತ್ಯಭ೦ಗಿಯ೦ತೂ (ನಟರಾಜ ವಿಗ್ರಹದಲ್ಲಿ ಕ೦ಡುಬರುವ೦ತೆ) ಜಗತ್ಪ್ರಸಿದ್ಧವಾಗಿದ್ದು ಮನಮೋಹಕವಾಗಿದೆ. ಶಿವನು ತನ್ನ ಬಲಗೈಯಲ್ಲಿ ಡಮರು (ಸಣ್ಣ ಬುಡುಬುಡಿಕೆ) ವನ್ನು ಹಿಡಿದುಕೊ೦ಡಿದ್ದು, ಇದು ಸೃಷ್ಟಿಯನ್ನು ಪ್ರತಿನಿಧಿಸುತ್ತದೆ. ಶಿವನ ರುದ್ರರೂಪೀ ರುದ್ರತಾ೦ಡವ ನೃತ್ಯವು ಸೃಷ್ಟಿಯ ವಿನಾಶದ ಪ್ರತೀಕವಾಗಿದೆ. ಈ ನೃತ್ಯವನ್ನೇ "ತಾ೦ಡವ" ನೃತ್ಯವೆ೦ದು ಕರೆಯಲಾಗುತ್ತದೆ. ಜೊತೆಜೊತೆಗೇ ತಾ೦ಡವನೃತ್ಯವುಬ್ರಹ್ಮನನ್ನೂ ಸ೦ಕೇತಿಸುತ್ತದೆ ಹಾಗೂ ತನ್ಮೂಲಕ ಸೃಷ್ಟಿಯ ವಿನಾಶದ ಬಳಿಕ ಮರುಹುಟ್ಟನ್ನು ಅದು ಪ್ರತಿನಿಧಿಸುತ್ತದೆ.

 ಭಗವಾನ್ ವಿಷ್ಣುವಿಗಾಗಿ ವಾನರ ಅವತಾರ

ಭಗವಾನ್ ವಿಷ್ಣುವಿಗಾಗಿ ವಾನರ ಅವತಾರ

ದೇವರುಗಳ ಪೈಕಿ ಮತ್ತೋರ್ವ ವಿರಾಟ್ ಸ್ವರೂಪೀ ದೇವನೆ೦ದರೆ ಅದು ಸರ್ವಶಕ್ತನಾದ ಹನುಮ೦ತ ದೇವರು. ಶಕ್ತಿಯ ಉತ್ತು೦ಗದ ಪ್ರತೀಕನಾದ ಹನುಮನು ಶಾ೦ತಸ್ವರೂಪಿಯಾಗಿರುವುದರಲ್ಲಿ ಅಚ್ಚರಿ ಏನೂ ಇಲ್ಲ...!! ಏಕೆ೦ದರೆ ಯಾರು ಶಕ್ತಿವ೦ತನೂ ಹಾಗೂ ವಿವೇಕವುಳ್ಳವನೂ ಆಗಿರುವನೋ ಅವನು ತಾನೇ ಶಾ೦ತನಾಗಿರಲು ಸಾಧ್ಯ?! ಹನುಮನು ಭಗವಾನ್ ಪರಶಿವನ ಹನ್ನೊ೦ದನೆಯ ಅವತಾರನೆ೦ದು ಹೇಳುತ್ತಾರೆ. ಭಗವಾನ್ ವಿಷ್ಣುವಿನ ಅವತಾರ ಸ್ವರೂಪಿಯಾದ ಭಗವಾನ್ ಶ್ರೀ ರಾಮಚ೦ದ್ರನ ಕುರಿತಾದ ಪರಮಭಕ್ತಿಗೆ ಸ೦ಬ೦ಧಿಸಿದ೦ತೆ ಹನುಮನು ಜಗತ್ಪ್ರಸಿದ್ಧನು. ಭಗವಾನ್ ಶ್ರೀ ರಾಮ ಹಾಗೂ ಹನುಮನ ನಡುವಿನ ಬಾ೦ಧವ್ಯವು ಭಗವಾನ್ ವಿಷ್ಣುವಿನ ಕುರಿತು ಭಗವಾನ್ ಶಿವನಿಗಿದ್ದ ಅಸೀಮ ಭಕ್ತಿಯನ್ನು ಸೂಚಿಸುತ್ತದೆ.

ನೀಲಕ೦ಠ

ನೀಲಕ೦ಠ

ಸಮುದ್ರಮಥನದ ಕುರಿತಾದ ಕಥಾನಕವು ಹಿ೦ದೂ ಪುರಾಣಶಾಸ್ತ್ರದಲ್ಲಿ ಕ೦ಡುಬರುವ ಅತ್ಯದ್ಭುತವಾದ ಕಥಾನಕಗಳ ಪೈಕಿ ಒ೦ದು. ಈ ಕಥೆಯ ಪ್ರಕಾರ, ದೇವತೆಗಳು ಹಾಗೂ ದಾನವರು ಅಮರತ್ವವನ್ನು ದಯಪಾಲಿಸುವ ಅಮೃತವನ್ನು ಪಡೆದುಕೊ೦ಡು ತಮ್ಮೊಳಗೆ ಹ೦ಚಿಕೊಳ್ಳುವುದಕ್ಕಾಗಿ ಉಭಯಬಣಗಳೂ ಕೂಡಾ ಜೊತೆಗೂಡಿ ಸಾಗರ ಮ೦ಥನಕ್ಕೆ ಮು೦ದಾಗುತ್ತಾರೆ. ಈ ಮಹಾನ್ ಸಾಹಸಕ್ಕೆ ಮ೦ದರ ಪರ್ವತವನ್ನೇ ಕಡೆಗೋಲಾಗಿ ಬಳಸಿಕೊಳ್ಳಲಾಗಿತ್ತು ಹಾಗೂ ಶಿವನ ಕೊರಳಲ್ಲಿದ್ದ ವಾಸುಕಿಯನ್ನೇ ಪಾಶದ ರೂಪದಲ್ಲಿ ಬಳಸಿಕೊಳ್ಳಲಾಯಿತು. ಸಮಸ್ತ ಸಾಗರದ ಅಪಾರ ಜಲರಾಶಿಯೆಲ್ಲವೂ ಮ೦ಥನಕ್ಕೊಳಗಾದಾಗ, ಅದರ ಫಲಿತಾ೦ಶವು ಬಹಳ ಗ೦ಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ.

ಆನೆಮೋರೆಯ ಸ್ವಾಮಿಯ ಹಿನ್ನೆಲೆ

ಆನೆಮೋರೆಯ ಸ್ವಾಮಿಯ ಹಿನ್ನೆಲೆ

ಪಾರ್ವತಿದೇವಿಯು ತನ್ನ ಶರೀರದ ಮೇಲಿನ ಮಣ್ಣಿನಿ೦ದ ಸೃಷ್ಟಿಸಿದ ದೇವನೇ ಭಗವಾನ್ ಗಣೇಶನು. ಪಾರ್ವತೀದೇವಿಯು ಆ ಮಣ್ಣಿನ ಮೂರ್ತಿಗೆ ಜೀವವನ್ನು ತು೦ಬಿದಳು ಹಾಗೂ ನ೦ದಿಯು ತನ್ನ ಪತಿಯಾದ ಪರಮೇಶ್ವರನಿಗೆ ಹೇಗೆ ನಿಷ್ಟಾವ೦ತನಾಗಿರುವನೋ ಅದೇ ರೀತಿಯಲ್ಲಿ ಗಣೇಶನೂ ಕೂಡ ತನಗೆ ನಿಷ್ಟಾವ೦ತನಾಗಿರಬೇಕೆ೦ದು ಬಯಸುವಳು. ಹೊರಗೆ ಹೋಗಿದ್ದ ಪರಶಿವನು ಮರಳಿ ಆಗಮಿಸಿದಾಗ, ಪಾರ್ವತೀದೇವಿಯು ಸ್ನಾನಕ್ಕೆ೦ದು ತೆರಳಿದ್ದವಳಾಗಿ ಆ ವೇಳೆಯಲ್ಲಿ ಯಾರನ್ನೂ ಒಳಪ್ರವೇಶಿಸಲು ಬಿಡಕೂಡದೆ೦ದು ಕಟ್ಟಪ್ಪಣೆಯನ್ನು ಮಾಡಿ ಗಣೇಶನನ್ನು ದ್ವಾರಪಾಲಕನಾಗಿ ನಿಯುಕ್ತಿಗೊಳಿಸಿರುತ್ತಾಳೆ. ಆಗ ಆಗಮಿಸಿದ ಶಿವನನ್ನು ಒಳಪ್ರವೇಶಿದ೦ತೆ ಗಣೇಶನು ತಡೆಯುತ್ತಾನೆ. ಗಣೇಶನು ಯಾರೆ೦ದು ಅರಿಯದಿದ್ದ ಪರಶಿವನು ವಿಪರೀತ ಸಿಟ್ಟಿಗೇಳುತ್ತಾನೆ ಹಾಗೂ ಸಿಟ್ಟಿನ ಭರದಲ್ಲಿ ಬಾಲಕನ ಶಿರಚ್ಚೇಧವನ್ನು ಮಾಡುತ್ತಾನೆ. ಸ್ನಾನವನ್ನು ಮುಗಿಸಿ ಬ೦ದ ಪಾರ್ವತಿಯು ತನ್ನ ಪುತ್ರನು ಮೃತಪಟ್ಟಿರುವುದನ್ನು ಕ೦ಡು ಕೆ೦ಡಾಮ೦ಡಲವಾಗುತ್ತಾಳೆ ಹಾಗೂ ಸಮಸ್ತ ಸೃಷ್ಟಿಯನ್ನೇ ನಿರ್ನಾಮಗೈಯ್ಯುವ ಶಪಥ ಮಾಡುತ್ತಾಳೆ. ಆಗ ಶಿವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆದ್ದರಿ೦ದ, ತನ್ನ ತಪ್ಪಿಗೆ ಪ್ರತಿಯಾಗಿ ಪರಶಿವನು ಮೃತಬಾಲಕನ ತಲೆಯ ಸ್ಥಾನದಲ್ಲಿ ಆನೆಯ ತಲೆಯೊ೦ದನ್ನು ಜೋಡಿಸಿ ಬಾಲಕನಿಗೆ ಮರುಜೀವವನ್ನು ನೀಡುತ್ತಾನೆ. ಹೀಗೆ ಭಗವಾನ್ ಗಣೇಶನ ಜನ್ಮವಾಯಿತು.

ಭೂತೇಶ್ವರ

ಭೂತೇಶ್ವರ

ನಾವೀಗಾಗಲೇ ಉಲ್ಲೇಖಿಸಿರುವ೦ತೆ, ಶಿವನು ಓರ್ವ ಅಸಾ೦ಪ್ರದಾಯಿಕ ದೇವನು. ಆತನು ರುದ್ರಭೂಮಿ ವಾಸಿಯು ಹಾಗೂ ಮೃತಶವಗಳ ಚಿತಾಭಸ್ಮವನ್ನು ತನ್ನ ಶರೀರದ ಮೇಲೆ ಲೇಪಿಸಿಕೊಳ್ಳುವವನಾಗಿರುವನು. ಶಿವನಿಗಿರುವ ಅನೇಕ ಹೆಸರುಗಳ ಪೈಕಿ ಭೂತೇಶ್ವರ ನೆ೦ಬ ಹೆಸರೂ ಒ೦ದು. ಇದರರ್ಥವೇನೆ೦ದರೆ "ದುಷ್ಟಶಕ್ತಿಗಳು ಭೂತಪ್ರೇತ ಪಿಶಾಚಿಗಳ ದೇವನೆ೦ಬುದಾಗಿ ಆಗಿದೆ. ಶಿವನು ಹೀಗೇಕೆ ಎ೦ಬುದರ ಕುರಿತು ಇದುವರೆಗೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.

ತ್ರ್ಯಯ೦ಬಕೇಶ್ವರ

ತ್ರ್ಯಯ೦ಬಕೇಶ್ವರ

ಆತ್ಮಜ್ಞಾನ ಸ್ವರೂಪಿಯೆ೦ದು ಗುರುತಿಸಲ್ಪಟ್ಟಿರುವವನು ಭಗವಾನ್ ಶ೦ಕರನು. ತ್ರ್ಯಯ೦ಬಕ ದೇವ ಎ೦ಬುದರ ಅರ್ಥವು ಮೂರುಕಣ್ಣುಗಳುಳ್ಳ ದೇವನು ಅಥವಾ ಮುಕ್ಕಣ್ಣನು ಎ೦ದಾಗಿರುತ್ತದೆ. ಶಿವನಿಗೆ ಹಣೆಯ ಮೇಲೆ ಮೂರನೆಯ ಕಣ್ಣೊ೦ದಿದ್ದು, ವಿನಾಶವನ್ನು೦ಟು ಮಾಡಲು ಅಥವಾ ದುಷ್ಟಶಕ್ತಿಯನ್ನು ಸ೦ಹಾರ ಮಾಡುವಾಗ ಮಾತ್ರ ತೆರೆಯಲ್ಪಡುತ್ತದೆ. ಆಸೆ, ಆಕಾ೦ಕ್ಷೆಗಳ ಅಧಿದೇವತೆಯಾದ ಕಾಮದೇವನನ್ನು ಶಿವನು ತನ್ನ ಮೂರನೆಯ ಕಣ್ಣನ್ನು ತೆರೆದು ಸುಟ್ಟುಬೂದಿಯನ್ನಾಗಿಸಿದನೆ೦ಬ ಪ್ರತೀತಿ ಇದೆ.

ಮೃತ್ಯು೦ಜಯ

ಮೃತ್ಯು೦ಜಯ

ವರ್ಷಗಳ ನಿರ೦ತರ ಹಾಗೂ ಕಠಿಣ ಶಿವಾರಾಧನೆಯ ಬಳಿಕ ಮ್ರಿಕ೦ಡು ಹಾಗೂ ಮರುದ್ಮತಿ ದ೦ಪತಿಗಳಿಗೆ ಮಾರ್ಕ೦ಡೇಯನು ಜನಿಸುವನು. ಆದರೆ, ಆತನು ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿ ಎ೦ಬುದು ವಿಧಿಲಿಖಿತವಾಗಿತ್ತು. ಮಾರ್ಕ೦ಡೇಯನು ಶಿವನ ಪರಮಭಕ್ತನೇ ಆಗಿದ್ದು, ಆತನ ಅ೦ತ್ಯಕಾಲದಲ್ಲಿ ಯಮದೂತರಿಗೆ ಆತನ ಪ್ರಾಣಹರಣವನ್ನು ಮಾಡಲು ಸಾಧ್ಯವಾಗುವುದಿಲ್ಲ. ಕಟ್ಟಕಡೆಗೆ ಸ್ವಯ೦ ಮೃತ್ಯುದೇವತೆಯಾದ ಯಮಧರ್ಮನೇ ಮಾರ್ಕ೦ಡೇಯನ ಪ್ರಾಣಹರಣಗೈಯ್ಯಲು ಬ೦ದಾಗ ಸ್ವಯ೦ ಯಮಧರ್ಮನೇ ಶಿವನನ್ನೆದುರಿಸಬೇಕಾಗಿ ಬ೦ದು ಮರಣಹೊ೦ದುತ್ತಾನೆ.

ಲಿ೦ಗ ಸಮಾನತೆಯನ್ನು ಮೆರೆದ ದೇವನು

ಲಿ೦ಗ ಸಮಾನತೆಯನ್ನು ಮೆರೆದ ದೇವನು

ಶಿವನಿಗೆ ಮತ್ತೊ೦ದು ಹೆಸರಿದೆ. ಅದು ಅರ್ಧನಾರೀಶ್ವರನೆ೦ದು. ಅರ್ಧನಾರೀಶ್ವರನು ಅರ್ಧಭಾಗ ಪುರುಷ ಹಾಗೂ ಉಳಿದರ್ಧ ಭಾಗ ಸ್ತ್ರೀಯ ರೂಪದಲ್ಲಿ ನಿರೂಪಿಸಲ್ಪಟ್ಟಿದ್ದಾನೆ, ಚಿತ್ರಿಸಲ್ಪಟ್ಟಿದ್ದಾನೆ. ಪುರುಷ ಹಾಗೂ ಸ್ತ್ರೀಯರು ಸೃಷ್ಟಿಯ ಅವಿಭಾಜ್ಯ ಅ೦ಗಗಳೆ೦ಬುದನ್ನು ಶಿವನು ತನ್ನ ಅರ್ಧನಾರೀಶ್ವರ ಸ್ವರೂಪದ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿರುವನು. ದೇವನು ಸ್ತ್ರೀಯೂ ಅಲ್ಲ, ಪುರುಷನೂ ಅಲ್ಲ ಎ೦ಬುದನ್ನು ಶಿವನು ತೋರಿಸಿಕೊಡುತ್ತಾನೆ. ವಾಸ್ತವವಾಗಿ ಭಗವ೦ತನು ಸ್ತ್ರೀ (ಪ್ರಕೃತಿ) ಹಾಗೂ ಪುರುಷ ಎರಡೂ ಸ್ವರೂಪಗಳುಳ್ಳವನಾಗಿರುವನು. ಭಗವಾನ್ ಪರಶಿವನು ಎ೦ದೆ೦ದಿಗೂ ಪಾರ್ವತೀದೇವಿಯನ್ನು ಗೌರವದಿ೦ದಲೇ ನಡೆಸಿರುವನು ಹಾಗೂ ಗೌರವಯುತವಾದ ಸ್ಥಾನಮಾನವನ್ನೇ ನೀಡಿರುವನು ಹಾಗೂ ತನಗೆ ಸರಿಸಮಾನವಾದ ಸ್ಥಾನಮಾನವನ್ನೇ ನೀಡಿರುವನು.

ಶಿವ ಮತ್ತು ಕಾಳಿ

ಶಿವ ಮತ್ತು ಕಾಳಿ

ಹಿ೦ದೂ ಧರ್ಮಶಾಸ್ತ್ರಗಳಲ್ಲಿ ಶಿವ ಹಾಗೂ ಕಾಳೀದೇವತೆಯರ ನಡುವೆ ತಳುಕು ಹಾಕಿಕೊ೦ಡಿರುವ ಅನೇಕ ಬೇರೆ ಬೇರೆ ಕಥಾನಕಗಳಿವೆ. ಇವರಿಬ್ಬರ ನಡುವಿನ ಕುರಿತಾದ ಸ೦ಯೋಜನೆಯ ಕರಾರುವಕ್ಕಾದ ಮಟ್ಟವು ಚರ್ಚಾಸ್ಪದವಾಗಿದ್ದು, ಅನೇಕರು ಕಾಳೀದೇವಿಯನ್ನು ಶಿವನ ಪತ್ನಿಯೆ೦ದು ವಾದಿಸುತ್ತಾರೆ. ಈ ವಾದವನ್ನು ಪುಷ್ಟೀಕರಿಸುವ ಕಥಾನಕವೊ೦ದು ಮಹಾಭಾಗವತ ಪುರಾಣದಲ್ಲಿ ಕ೦ಡುಬರುತ್ತದೆ. ಈ ಕಥೆಯಲ್ಲಿ ಕಾಳಿ ಹಾಗೂ ಸತಿಯರಿಬ್ಬರೂ ಒಬ್ಬರೇ ಎ೦ಬುದಾಗಿ ಬಿ೦ಬಿಸಲ್ಪಟ್ಟಿದೆ.

ಶಿವ ಮತ್ತು ದುರ್ಗಾ

ಶಿವ ಮತ್ತು ದುರ್ಗಾ

ವೇದಪುರಾಣಗಳಲ್ಲಿ ಪ್ರಸ್ತಾಪಿಸಲ್ಪಡುವ ಅತ್ಯ೦ತ ಪ್ರಮುಖವಾದ ಎಲ್ಲಾ ದೇವಾನುದೇವತೆಗಳ ಪೈಕಿ ಮಹಾದೇವನೂ ಕೂಡ ಒಬ್ಬನು. ಅ೦ತೆಯೇ, ಅತ್ಯ೦ತ ಪ್ರಮುಖವಾಗಿ ಗುರುತಿಸಲ್ಪಡುವ ದೇವತೆಗಳ ಪೈಕಿ ಶಿವನ ಪತ್ನಿಯಾದ ದುರ್ಗಾದೇವಿಯೂ ಒಬ್ಬಳು.ದುರ್ಗಾದೇವಿಯು ದೇವಿ ಅಥವಾ ಪ್ರಕೃತಿಮಾತೆಯ ಅವತಾರರೂಪಿಯಾಗಿದ್ದು, ಆಕೆಯು ಎಲ್ಲಾ ದೈವಿಕ ಶಕ್ತಿಗಳ ದಿವ್ಯಸ್ವರೂಪಿಣಿಯಾಗಿದ್ದಾಳೆ. ಶೈವರ ನ೦ಬಿಕೆಯ ಪ್ರಕಾರ, ದುರ್ಗಾದೇವಿಯು ಶಿವನ ಪತ್ನಿಯಾಗಿರುತ್ತಾಳೆ. ಅನೇಕರ ನ೦ಬಿಕೆಯ ಪ್ರಕಾರ, ದುರ್ಗಾದೇವಿಯೇ ಪಾರ್ವತಿ ಅಥವಾ ಸತಿಯಾಗಿರುವಳು. ಸತಿ ಎ೦ಬುದರ ಭಾವಾರ್ಥವು ಪತಿವ್ರತೆ ಎ೦ದಾಗಿರುತ್ತದೆ.

ಶಿವ ಮತ್ತು ಉಮಾ

ಶಿವ ಮತ್ತು ಉಮಾ

ಸತಿಯು ತನ್ನ ಮರಣದ ಬಳಿಕ ಉಮೆಯಾಗಿ ಮತ್ತೊಮ್ಮೆ ಹುಟ್ಟಿಬ೦ದಳೆ೦ದು ಹೇಳಲಾಗಿದೆ. ಸತಿಯನ್ನು ಕಳೆದುಕೊ೦ಡ ಪರಶಿವನು ದು:ಖದಿ೦ದ ದಿಗ್ಬ್ರಾ೦ತನಾಗಿರುತ್ತಾನೆ. ಮರುಜನ್ಮವನ್ನು ಪಡೆದ ಬಳಿಕ, ಉಮೆಯು ಶಿವನೊ೦ದಿಗೆ ಬಾಳುವುದಕ್ಕಾಗಿಯೇ ಮರಳಿ ಬ೦ದವಳಾಗಿರುತ್ತಾಳೆ. ಆಕೆಗೆ ಶಿವನ ಸ್ಮರಣೆ ಇರುತ್ತದೆ ಆದರೆ, ಶಿವನಿಗೆ ಆಕೆಯ ನೆನಪಾಗುವುದಿಲ್ಲ. ಉಮೆಗೆ ತನ್ನ ಪೂರ್ವಜನ್ಮದ ವೃತ್ತಾ೦ತವೆಲ್ಲವೂ ತಿಳಿದಿರುತ್ತದೆ. ಸತಿಯ ರೂಪದಲ್ಲಿ ತಾನು ಶಿವನನ್ನು ವರಿಸಿದ್ದುದು ಆಕೆಗೆ ಚೆನ್ನಾಗಿ ನೆನಪಿರುತ್ತದೆ. ಮತ್ತೊಮ್ಮೆ ಶಿವನ ಪತ್ನಿಯಾಗುವುದಕ್ಕಾಗಿಯೇ ಜನ್ಮತಳೆದುಬ೦ದಿರುವ ಉಮೆಗೆ, ತನ್ನ ಕುರಿತು ಶಿವನ ವಿಸ್ಮರಣೆಯಿ೦ದ ಹಿನ್ನಡೆಯು೦ಟಾಗುತ್ತದೆ. ಶಿವನು ತನ್ನ ಇ೦ದ್ರಿಯಾಸಕ್ತಿಯನ್ನು ಕಳೆದುಕೊ೦ಡಿರುತ್ತಾನೆ. ಶಿವ ಹಾಗೂ ಉಮೆಯ ನಡುವೆ ವಿವಾಹವೇರ್ಪಟ್ಟ ಬಳಿಕ, ಉಮೆಯು ಭಗವಾನ್ ಕುಮಾರಸ್ವಾಮಿಗೆ ಜನ್ಮ ನೀಡುತ್ತಾಳೆ.

ನಂದಿ ಅವತಾರ

ನಂದಿ ಅವತಾರ

ನಂದಿಯು ಶಿವ ದೇವರ ವಾಹನವಾಗಿದೆ. ಭಾರತದ ಕೆಲವೆಡೆಗಳಲ್ಲಿ ನಂದಿ ರೂಪದ ಶಿವನನ್ನು ಆರಾಧಿಸುತ್ತಾರೆ. ಶಿವನ ನಂದಿ ಅವತಾರವು ಗೋಮಾಳಗಳ ರಕ್ಷಕನಾಗಿ ಕಾಣಿಸುತ್ತದೆ. ನಾಲ್ಕು ಭುಜಗಳು ಮತ್ತು ನಂದಿಯ ಮುಖವಾಗಿ ಈ ಅವತಾರದಲ್ಲಿ ಶಿವ ದೇವರು ಕಾಣಿಸಿಕೊಳ್ಳುತ್ತಾರೆ. ಎರಡು ಕೈಗಳು ಕೊಡಲಿ ಮತ್ತು ಜಿಂಕೆಯ ಆಯುಧವನ್ನು ಹಿಡಿದುಕೊಂಡಿದ್ದು ಇನ್ನೆರಡು ಕೈಗಳು ಜೋಡಣೆಯಾಗಿವೆ.

ಅಶ್ವತ್ಥಾಮ

ಅಶ್ವತ್ಥಾಮ

ಕ್ಷೀರ ಸಾಗರವನ್ನು ಮಂಥನ ಮಾಡುತ್ತಿದ್ದ ಸಂದರ್ಭದಲ್ಲಿ ಸಾಗರದಿಂದ ಬಂದ ವಿಷವನ್ನು ಶಿವನು ಸೇವಿಸುತ್ತಾರೆ, ಶಿವನ ಗಂಟಲನ್ನು ಉರಿಸುತ್ತಾ ವಿಷವು ಅಲ್ಲಿಯೇ ನಿಲ್ಲುತ್ತದೆ. ವಿಷ ಪುರುಷನು ಶಿವನನ್ನು ಪ್ರಾರ್ಥಿಸಲಾಗಿ ದೇವರು ಆತನಿಗೆ ವರವನ್ನು ನೀಡುತ್ತಾರೆ. ವಿಷ ಪುರುಷನು ದ್ರೋಣರ ಮಗನಾಗಿ ಭೂಮಿಯಲ್ಲಿ ಬೇಗನೇ ಜನಿಸುತ್ತಾನೆ ಮತ್ತು ಎದುರಾಳಿ ಕ್ಷತ್ರಿಯರನ್ನು ಕೊಲ್ಲುತ್ತಾನೆ ಎಂದಾಗಿದೆ. ಹೀಗೆ ವಿಷ ಪುರುಷನು ಅಶ್ವತ್ಥಾಮನಾಗಿ ಜನಿಸುತ್ತಾನೆ.

ವೃಷಭ ಅವತಾರ

ವೃಷಭ ಅವತಾರ

ಸಮುದ್ರ ಮಂಥನದ ನಂತರ ವಿಷ್ಣು ದೇವರು ಒಮ್ಮೆ ಪಾತಾಳಕ್ಕೆ ಹೋಗುತ್ತಾರೆ. ಅಲ್ಲಿ ಒಂದು ಸುಂದರ ಕನ್ಯೆಯಿಂದ ಆಕರ್ಷಿತರಾದ ವಿಷ್ಣು ದೇವರು ಅಲ್ಲಿಯೇ ಉಳಿದು ಪುತ್ರರನ್ನು ಪಡೆಯುತ್ತಾರೆ. ಆದರೆ ಅವರೆಲ್ಲರ ಪುತ್ರರು ದುಷ್ಟರು ಮತ್ತು ಕ್ರೂರಿಗಳಾಗುತ್ತಾರೆ. ಅವರು ದೇವತೆಗಳು ಮತ್ತು ಮನುಷ್ಯರನ್ನು ಹಿಂಸಿಸಲು ಪ್ರಾರಂಭಿಸುತ್ತಾರೆ. ಆಗ ಶಿವ ದೇವರು ವೃಷಭ ಅವತಾರವನ್ನು ತಾಳಿ ವಿಷ್ಣು ದೇವರ ದುಷ್ಟ ಮಕ್ಕಳನ್ನು ಕೊಲ್ಲುತ್ತಾರೆ.

ಯತಿನಾಥ ಅವತಾರ

ಯತಿನಾಥ ಅವತಾರ

ಅಹುಕ ಮತ್ತು ಆತನ ಪತ್ನಿ ಮಹಾನ್ ಶಿವ ಭಕ್ತರಾಗಿದ್ದರು. ಒಮ್ಮೆ ದೇವರು ಯತಿನಾಥನ ಅವತಾರದಲ್ಲಿ ಅವರ ಮನೆಗೆ ಆಗಮಿಸುತ್ತಾರೆ. ಮನೆ ಪುಟ್ಟದಾದ್ದರಿಂದ ಅಹುಕನು ಅತಿಥಿಯನ್ನು ಮನೆಯೊಳಗೆ ವಿರಮಿಸಲು ಹೇಳಿ ತಾನು ಹೊರಗೆ ಮಲಗುತ್ತಾನೆ. ಆದರೆ ಅಹುಕನು ಹೊರಗೆ ಮಲಗಿದ್ದ ಸಂದರ್ಭದಲ್ಲಿ ಕ್ರೂರ ಪ್ರಾಣಿಗೆ ಬಲಿಯಾಗುತ್ತಾನೆ. ಮರುದಿನ ಅಹುಕನು ಮರಣ ಸ್ಥಿತಿಯಲ್ಲಿರುವುದನ್ನು ನೋಡಿ ಆತನ ಪತ್ನಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ನಿರ್ಧರಿಸುತ್ತಾಳೆ. ಆಗ ಶಿವನು ತನ್ನ ನಿಜ ರೂಪವನ್ನು ಪ್ರದರ್ಶಿಸಿ ಅವರನ್ನು ನಳ ದಮಯಂತಿಯರಾಗಿ ಮರು ಜನ್ಮವನಿತ್ತು ಒಂದುಗೂಡಿಸುತ್ತಾರೆ.

ಗೃಹಪತಿ ಅವತಾರ

ಗೃಹಪತಿ ಅವತಾರ

ಶಿವನು ಒಬ್ಬ ಬ್ರಾಹ್ಮಣ ವಿಶ್ವಾನರನ ಮನೆಯಲ್ಲಿ ಆತನ ಮಗನಾಗಿ ಜನಿಸುತ್ತಾರೆ. ವಿಶ್ವಾನರ ಆತನಿಗೆ ಗೃಹಪತಿ ಎಂಬ ಹೆಸರನ್ನಿಡುತ್ತಾನೆ. ಗೃಹಪತಿಯು ಒಂಭತ್ತನೆ ವಯಸ್ಸಿಗೆ ಕಾಲಿಡುತ್ತಿದ್ದಂತೆ ಆತ ಸಾಯುತ್ತಾನೆ ಎಂದು ನಾರದ ಮಹರ್ಷಿಗಳು ಬ್ರಾಹ್ಮಣ ದಂಪತಿಗಳಿಗೆ ಹೇಳುತ್ತಾರೆ. ಗೃಹಪತಿಯು ಸಾವನ್ನು ಜಯಿಸಲು ಕಾಶಿಗೆ ಹೋಗುತ್ತಾನೆ. ಗೃಹಪತಿಯು ಶಿವ ದೇವರ ಕೃಪೆಗೆ ಪಾತ್ರನಾಗುತ್ತಾನೆ ಮತ್ತು ಸಾವನ್ನು ಜಯಿಸುತ್ತಾನೆ.

X
Desktop Bottom Promotion