Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜನ್ಮಾಷ್ಟಮಿ 2020: ಪೂಜೆಗೆ ಶುಭ ಮುಹೂರ್ತ, ಪೂಜಾ ವಿಧಾನ
ಶ್ರೀ ವಿಷ್ಣುವಿನ ಎಂಟನೇ ಅವತಾರ ಭಗವಾನ್ ಕೃಷ್ಣ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದನು. ಅಷ್ಟಮಿಯ ಮಧ್ಯರಾತ್ರಿ ಮಥುರೆಯ ಕಾರಗೃಹದಲ್ಲಿ ಕೃಷ್ಣನ ಜನನವಾಯಿತು. ಕೃಷ್ಣನನ್ನು ಸೋದರ ಮಾವ ಕಂಸ ಕೊಲ್ಲುತ್ತಾನೆ ಎಂಬ ಭಯದಿಂದ ತಂದೆ ವಸುದೇವ ಗೋಕುಲಕ್ಕೆ ತಂದು ಬಿಡುತ್ತಾನೆ. ಹೀಗಾಗಿ ದೇವಕ್ಕಿ ಕೃಷ್ಣನನ್ನು ಹೆತ್ತ ತಾಯಿಯಾದರೆ ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು.

2020ರಲ್ಲಿ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು?
ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 11, 12ಕ್ಕೆ ಬಂದಿದೆ. ಕೆಲವು ಕಡೆ 11ಕ್ಕೆ, ಕೆಲವು ಕಡೆ 12ಕ್ಕೆ ಆಚರಿಸಲಾಗುವುದು.
ಅಷ್ಟಮಿ ತಿಥಿ ಪ್ರಾರಂಭ: ಆಗಸ್ಟ್ 11 ಬೆಳಗ್ಗೆ 9.6ಕ್ಕೆ
ಅಷ್ಟಮಿ ತಿಥಿ ಅಂತ್ಯ: ಆಗಸ್ಟ್ 12 ಬೆಳಗ್ಗೆ 11.16ಕ್ಕೆ

ಪೂಜಾ ಸಮಯ
ನಿಶಿತಾ ಕಾಲದ ಪೂಜಾ ಸಮಯ ( ಶ್ರೀ ಕೃಷ್ಣ ಮಧ್ಯರಾತ್ರಿ ಹುಟ್ಟಿದ ಕಾರಣ ಪೂಜೆಯನ್ನು ನಿಶಿತಾ ಕಾಲದಲ್ಲಿ ಮಾಡಲಾಗುವುದು)
ಆಗಸ್ಟ್ 12, 2020: ಬೆಳಗ್ಗೆ 11: 51ರಿಂದ ಮಧ್ಯರಾತ್ರಿ 12: 37ರವರೆಗೆ ಇರಲಿದೆ.

ಜನ್ಮಾಷ್ಟಮಿ 2020, ಪಾರಣ ಸಮಯ
ಅಷ್ಟಮಿಯಂದು ಕೃಷ್ಣ ಭಕ್ತರು ನೀರೂ, ಆಹಾರ ಸೇವಿಸದೆ ಉಪವಾಸ ಇರುತ್ತಾರೆ. ರಾತ್ರಿ ಕೃಷ್ಣನಿಗೆ ಅಘ್ರ್ಯ ಕೊಟ್ಟ ನಂತರ ಫಲಾಹಾರ ಸೇವಿಸಲಾಗುವುದು. ಇದನ್ನು ನಿರ್ಜಲ ಉಪವಾಸ ಎಂದು ಕರೆಯಲಾಗುವುದು. ಭಜನೆ, ಕೃಷ್ಣನ ಕೀರ್ತನೆಗಳ ಮೂಲಕ ಮನೆ, ಮನಗಳಲ್ಲಿ ಸಕಾರಾತ್ಮಕ ಶಕ್ತಿ ತುಂಬುವಂತೆ ಪ್ರಾರ್ಥನೆ ಮಾಡಲಾಗುವುದು. ನಂತರ ಕೃಷ್ಣನಿಗೆ ಪ್ರಿಯವಾದ ತಿನಿಸುಗಳನ್ನು ಮಾಡಿ ನೈವೇದ್ಯ ಇಡಲಾಗುವುದು. ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಕೊಟ್ಟ ಬಳಿಕವಷ್ಟೇ ಉಪವಾಸ ಮುರಿಯುತ್ತಾರೆ. ಇದನ್ನು ಪಾರಣೆ ಎನ್ನುತ್ತಾರೆ.
ಇಸ್ಕಾನ್ ಪ್ರಕಾರ ಪಾರಣ ಸಮಯ ಆಗಸ್ಟ್ 13, ಬೆಳಗ್ಗೆ 5:56ರ ನಂತರ ಆಹಾರ ಸೇವಿಸಬಹುದು.

ಈ ಬಾರಿ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಒಟ್ಟಿಗೆ ಸೇರುವುದಿಲ್ಲ
ಶ್ರೀಕೃಷ್ಣನು ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ಬಾರಿ ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ ಒಟ್ಟಿಗೆ ಬಂದಿಲ್ಲ. ಈ ವರ್ಷ ಅಷ್ಟಮಿ ತಿಥಿ ಆಗಸ್ಟ್ 11 ಬೆಳಗ್ಗೆ 9.6ರಿಂದ ಪ್ರಾರಂಭವಾಗಿ, ಆಗಸ್ಟ್ 12ರಂದು 11:16ಕ್ಕೆ ಅಂತ್ಯವಾಗಲಿದೆ.
ರೋಹಿಣಿ ನಕ್ಷತ್ರವು ಆಗಸ್ಟ್ 13ರಂದು ಬೆಳಗ್ಗೆ 3.27ಕ್ಕೆ ಪ್ರಾರಂಭವಾಗಿ, ಆಗಸ್ಟ್ 14, ಬೆಳಗ್ಗೆ 5: 22ಕ್ಕೆ ಅಂತ್ಯವಾಗಲಿದೆ.

ಕೃಷ್ಣನಿಗೆ ಪೂಜೆ ಮಾಡುವ ವಿಧಾನ
ಜನ್ಮಾಷ್ಟಮಿಯ ದಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಲಕೃಷ್ಣನ ಪುಟ್ಟ ಮೂರ್ತಿಯನ್ನು ತಂದು ತೊಟ್ಟಿಲಿನಲ್ಲಿಟ್ಟು ಪೂಜಿಸಲಾಗುವುದು. ಮೂರ್ತಿ ಇಲ್ಲದಿದ್ದರೆ ಬಾಲ ಕೃಷ್ಣನ ಫೋಟೋ ಇಡಲಾಗುವುದು. ನಂತರ ಕೃಷ್ಣನಿಗೆ ಬಟ್ಟೆ, ಆಸನ, ಪಂಚಾಮೃತ, ತುಪ್ಪದ ದೀಪ, ಚಂದನ, ತುಳಸಿ, ಪಾರಿಜಾತ ಹೂ ಇವುಗಳನ್ನು ಅರ್ಪಿಸಲಾಗುವುದು.
ಕೃಷ್ಣ ವಿಗ್ರಹವನ್ನು ಹೊಸದಾದ ಬಟ್ಟೆಯ ಮೇಲೆ ಇಟ್ಟು, ದೀಪ ಬೆಳಗಿ, ನಂತರ ಕೃಷ್ಣನ ಕೀರ್ತನೆಗಳನ್ನು ಹೇಳಲಾಗುವುದು. ಪೂಜೆಗೆ ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಮೊಸರು, ಹಾಲನ್ನು ಅರ್ಪಿಸಿ.



Click it and Unblock the Notifications
