Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಕುರಿತ 5 ಆಸಕ್ತಿಕರ ಸಂಗತಿಗಳಿವು
ನಡೆದಾಡುವ ದೇವರೆಂದೇ ಗುರುತಿಸಿಕೊಂಡಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ತಮ್ಮ 81ನೇ ವಯಸ್ಸಿಗೆ ವೈಕುಂಠ ಏಕಾದಶಿಯಂದೇ ವೈಕುಂಠ ಯಾತ್ರೆ ಮಾಡಿದ್ದಾರೆ. ನಡೆದಾಡುವ ದೇವರು, ಎರಡನೇ ಸ್ವಾಮಿ ವಿವೇಕಾನಂದ ಎಂದೇ ಗುರುತಿಸಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿಗಳ ಬದುಕು ನಮ್ಮೆಲ್ಲರಿಗೂ ಆದರ್ಶ.

ಇವರು ಜನರ ಮನಸ್ಸನ್ನು ಅರಳಿಸುವ ಪ್ರಯತ್ನ ಮಾಡುತ್ತಿದ್ದರು.
ಎಲ್ಲರಿಗೂ ಸನ್ಮಾರ್ಗದ ಬಗ್ಗೆ ಬೋಧಿಸುತ್ತಿದ್ದರು. ತಾವು ನುಡಿಯುತ್ತಿದ್ದಂತೆ ಬದುಕಿದ ಮಹಾನ್ ಚೇತನ. ಜನರ ಜೀವನವನ್ನು ಪರಿಪೂರ್ಣ ಬದುಕಿನ್ತ ಸಾಗಿಸುವಲ್ಲಿ ನಿರಂತರ ಪ್ರಯತ್ನಿಸುತ್ತಿದ್ದರು. ಇವರು ತಮ್ಮ ಉಪನ್ಯಾಸದಿಂದ ಲಕ್ಷಾಂತರ ಜನರ ಬದುಕು ಬದಲಾಯಿಸಿದ್ದಾರೆ. ಇವರು ಮಾತನಾಡುತ್ತಿದ್ದರು ಮೋಡಿಗೆ ಒಳಗಾದಂತೆ ಜನ ಕೇಳುತ್ತಿದ್ದರು, ಅಷ್ಟೊಂದು ಅದ್ಭುತದ ಭಾಷಣಕಾರರಾಗಿದ್ದರು.
ಶ್ರೀಗಳ ಬಗ್ಗೆ ಕೆಲ ಆಸಕ್ತಿಕರ ವಿಷಯದ ಬಗ್ಗೆ ನೋಡುವುದಾದರೆ:

1. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ಆಧ್ಯಾತ್ಮದಲ್ಲಿ ಸಾಧನೆ ಮಾಡಿದ ಯೋಗಿ:
ಸಿದ್ಧೇಶ್ವರರ ಬಾಲ್ಯದ ಹೆಸರು ಸಿದ್ಧಗೊಂಡಪ್ಪ, 1041ರಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸುತ್ತಾರೆ. ಇವರು ನಾಲ್ಕನೇ ತರಗತಿ ಮುಗಿಸಿದ ಬಳಿಕ ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬರುತ್ತಾರೆ. ಬಾಲಕನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನ ಸೆಳೆಯುತ್ತದೆ. ತಾವು ಪ್ರವಚನಕ್ಕೆ ಹೋಗುವ ಕಡೆಗಳಿಗೆ ಸಿದ್ದೇಶ್ವರರನ್ನೂ ಕರೆದುಕೊಂಡು ಹೋಗುತ್ತಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳೇ ಇವರ ವಿದ್ಯಾಭ್ಯಾಸ ಮಾಡಿಸುತ್ತಾರೆ.
ಇವರು ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ಎಂ. ಎ ತತ್ವಶಾಸ್ತ್ರದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾರೆ.

2. ರಾಜಕೀಯ ವ್ಯಕ್ತಿಗಳಿಂದ ದೂರ ಉಳಿದಿದ್ದರು
ಸಿದ್ಧೇಶ್ವರ ಸ್ವಾಮೀಜಿಗಳು ರಾಜಕೀಯ ವ್ಯಕ್ತಿಗಳಿಂದ ತುಂಬಾನೇ ದೂರ ಉಳಿದಿದ್ದರು, ಅವರು ಯಾವುದೇ ರಾಜಕೀಯ ಸಮಾರಂಭಗಳಿಗೆ ಹೋಗುತ್ತಿರಲಿಲ್ಲ, ಆದರೆ ಪ್ರಧಾನಿ ಮೋದಿಜೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಉಡುಪಿನಲ್ಲಿ ಪಾಕೆಟ್‌ಗಳಿವೆ, ಆದರೆ ಅದನ್ನು ಅವರು ತುಂಬಿಕೊಳ್ಳುವುದಿಲ್ಲ ಎಂಬುವುದಾಗಿ ಮೋದಿ ಕುರಿತು ಹೊಗಳಿದ್ದರು.
'ಸಿದ್ಧೇಶ್ವವರ ಸ್ವಾಮೀಜಿ ಯಾವಾಗಲೂ ಪಾಕೆಟ್ ಇಲ್ಲದ ಶರ್ಟ್ ಬಳಸುತ್ತಿದ್ದರು.

3. ಸಿದ್ಧೇಶ್ವರ ಸ್ವಾಮೀಜಿಗಳು ಪಂಚ ಭಾಷಾ ನಿಪುಣರಾಗಿದ್ದರು
ಇವರಿಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಯಲ್ಲಿ ಒಳ್ಳೆಯ ಹಿಡಿತ ಹೊಂದಿದ್ದರು. ಇವರು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಪ್ರವಚನಗಳನ್ನು ನೀಡುತ್ತಿದ್ದರು. ಇವರ ಮಾತುಗಳು ಜನರ ಮೇಲೆ ಗಾಢ ಪ್ರಭಾವ ಬೀರುತ್ತಿತ್ತು. ಗ್ರಾಮೀಣ ಕಡೆಗಳಲ್ಲಿ ಬಡ ಮಕ್ಕಳಿ ವಿದ್ಯೆಗಾಗಿ ಕಷ್ಟಪಡುವುದನ್ನು ನೋಡಿ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದರು. ಇವರ ದೂರದೃಷ್ಟಿಯ ಪ್ರಭಾವ ಸಾವಿರಾರು ಮಕ್ಕಳು ಇಂದು ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾರೆ.

4. ಪ್ರಶಸ್ತಿ, ಪುರಸ್ಕಾರಗಳನ್ನು ತಿರಸ್ಕಾರ ಮಾಡಿದ್ದ ಸ್ವಾಮೀಜಿ
ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಮುಂದಾಗಿತ್ತು, ಆಗ ಅವರು ಆ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದರು. ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ತುಂಬಾ ಗೌರವ ಇದೆ. ಆದರೆ ನಾನೊಬ್ಬ ಸರಳ ವ್ಯಕ್ತಿ, ಸಾಮಾನ್ಯ ಜೀವನ ನಡೆಸುತ್ತಾ ಆಧ್ಯಾತ್ಮಿಕ ಬೋಧನೆ ಮಾಡುವುದು ನನ್ನ ಉದ್ದೇಶ ಎಂದು ಪ್ರಶಸ್ತಿಯನ್ನು ನಯವಾಗಿ ಬೇಡ ಎಂದಿದ್ದರು. ಇವರನ್ನರಿಸಿ ಹಲವಾರು ಪ್ರಶಸ್ತಿಗಳು ಬಂದಿದ್ದೆವು, ಆದರೆ ಅದ್ಯಾವುದನ್ನೂ ಸ್ವೀಕರಿಸಲಿಲ್ಲ.
5. 2014ರಲ್ಲಿಯೇ ಮರಣ ಶಾಸನ ಬರೆದಿದ್ದ ಸಿದ್ಧೇಶ್ವರ ಸ್ವಾಮೀಜಿ
ಇವರು ತಮ್ಮ ಮರಣ ಶಾಸನವನ್ನು 2014ರಲ್ಲಿಯೇ ಬರೆದಿದ್ದರು. ಅದರಲ್ಲಿ ನನ್ನನ್ನು ಹೂಳಬೇಡಿ, ಸುಡಬೇಕು, ನನ್ನ ಕುರುಹುಗಳು ಇರಬಾರದು ಎಂದು ಬರೆದಿದ್ದರು. ನನಗೋಸ್ಕರ ಗುಡಿ ಕಟ್ಟಬಾರದು, ಸಮಾದಿ ಮಾಡಬಾರದು ಎಂದು ಕೂಡ ಸೂಚಿಸಿದ್ದರು.
ತಮ್ಮ ಕೊನೆಯ ದಿನಗಳ ಕುರಿತು 2014ರಲ್ಲಿಯೇ ಈ ರೀತಿ ಬರೆದಿದ್ದಾರೆ.
ಅಂತಿಮ ನೆನಹು
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ
ನಾನೂ ಇಲ್ಲ, ನೀನೂ ಇಲ್ಲ
ಇಲ್ಲ ಇಲ್ಲ ಎಂಬುವುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು
ಅಂತ್ಯಃ ಪ್ರಣಾಮಾಂಜಲಿಃ!
ಸ್ವಾಮಿ ಸಿದ್ಧೇಶ್ವರ
ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ಮತ್ತೆ ಮತ್ತೆ ನೋಡಲು ಬರುತ್ತೇನೆ, ಈ ಜಗತ್ತನ್ನು, ಈ ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತೇನೆ ಎಂಬ ಉತ್ಸಾಹ ನಮ್ಮಲ್ಲಿರಬೇಕು
-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

5. 2014ರಲ್ಲಿಯೇ ಮರಣ ಶಾಸನ ಬರೆದಿದ್ದ ಸಿದ್ಧೇಶ್ವರ ಸ್ವಾಮೀಜಿ
ಇವರು ತಮ್ಮ ಮರಣ ಶಾಸನವನ್ನು 2014ರಲ್ಲಿಯೇ ಬರೆದಿದ್ದರು. ಅದರಲ್ಲಿ ನನ್ನನ್ನು ಹೂಳಬೇಡಿ, ಸುಡಬೇಕು, ನನ್ನ ಕುರುಹುಗಳು ಇರಬಾರದು ಎಂದು ಬರೆದಿದ್ದರು. ನನಗೋಸ್ಕರ ಗುಡಿ ಕಟ್ಟಬಾರದು, ಸಮಾದಿ ಮಾಡಬಾರದು ಎಂದು ಕೂಡ ಸೂಚಿಸಿದ್ದರು.
ತಮ್ಮ ಕೊನೆಯ ದಿನಗಳ ಕುರಿತು 2014ರಲ್ಲಿಯೇ ಈ ರೀತಿ ಬರೆದಿದ್ದಾರೆ.
ಅಂತಿಮ ನೆನಹು
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ
ನಾನೂ ಇಲ್ಲ, ನೀನೂ ಇಲ್ಲ
ಇಲ್ಲ ಇಲ್ಲ ಎಂಬುವುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು
ಅಂತ್ಯಃ ಪ್ರಣಾಮಾಂಜಲಿಃ!
ಸ್ವಾಮಿ ಸಿದ್ಧೇಶ್ವರ



Click it and Unblock the Notifications











