ದೇವರಿಗೆ ಬಳಸುವ ಹೂವಿನ ಪರಿಮಳ ಗ್ರಹಿಸಲೇಬಾರದು ಏಕೆ?

ಹಿಂದೂ ಧರ್ಮದಲ್ಲಿ ಪೂಜೆಗೆ ತುಂಬಾ ಮಹತ್ವವಿದೆ. ಬೆಳಗ್ಗೆ ಮತ್ತು ಸಂಜೆ ದೀಪ ಬೆಳಗಿದರೆ ಆ ಮನೆಗೆ ಒಂದು ಶುಭ. ಇನ್ನು ದೇವರ ಪೂಜೆಯಲ್ಲಿ ಬತ್ತಿ ಹಾಗೂ ಎಣ್ಣೆ ಎಷ್ಟು ಮುಖ್ಯವೋ, ಹೂ ಕೂಡ ಅಷ್ಟೇ ಮುಖ್ಯ. ಆದ್ದರಿಂದ ದೇವರ ಪೂಜೆಗೆ ಹೂ ಇರಲೇಬೇಕು.

ಹೂವನ್ನು ಪೂಜೆಗೆ ಬಳಸಿದರೆ ಅದರಿಂದ ದೇವರು ಖುಷಿಯಾಗುತ್ತಾರೆ ಎಂಬ ನಂಬಿಕೆ ಇದೆ. ಅಲ್ಲದೆ ಅದರ ಪರಿಮಳ ಆ ವಾತಾವರಣದ ಸುತ್ತ ಹರಡಿ ಮನಸ್ಸಿಗೆ ಆಹ್ಲಾದಕರ ಉಂಟಾಗುತ್ತದೆ. ಸುಗಂಧಿತ ಶಕ್ತಿಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ಈ ಲೇಖನದಲ್ಲಿ ದೇವರ ಪೂಜೆಗೆ ಹೂ ಬಳಸುವುದರ ಉದ್ದೇಶ ಹಾಗೂ ಅದನ್ನು ಹೇಗೆ ಬಳಸಬೇಕು, ದೇವರಿಗೆ ಬಳಸಿದ ಹೂವಿನ ವಾಸನೆ ಏಕೆ ಗ್ರಹಿಸಬಾರದು ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ದೇವರ ಪೂಜೆಯಲ್ಲಿ ಹೂ ಬಳಸಲೇಬೇಕು ಏಕೆ?

ದೇವರ ಪೂಜೆಯಲ್ಲಿ ಹೂ ಬಳಸಲೇಬೇಕು ಏಕೆ?

ಹೂಗಳು ದೈವ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಹೂಗಳನ್ನು ಬಳಸುವುದರಿಂದ ಆ ಸ್ಥಳ ಸುಂದರವಾಗಿ ಕಾಣುವುದರ ಜೊತೆಗೆ ಆ ಸ್ಥಳದಲ್ಲಿ ಸುವಾಸನೆ ಇರುತ್ತದೆ. ಈ ಮರಿಮಳ ಮನಸ್ಸಿನ ಏಕಾಗ್ರತೆ ಹೆಚ್ಚಲು ಸಹಕಾರಿ. ಪೂಜೆ ಮಾಡುವಾಗ ಮನಸ್ಸು ಏಕಾಗ್ರತೆಯಿಂದ ಇರಬೇಕು, ಮನಸ್ಸಿನಲ್ಲಿ ಪ್ರಶಾಂತತೆ ಇರಬೇಕು. ಹೂ ಬಳಸಿದರೆ ಅದರ ಸುವಾಸನೆ ಅಲ್ಲೆಲ್ಲ ಹರಡಿ ಆ ಪರಿಸರ ಆಹ್ಲಾದಕರವಾಗಿರುತ್ತದೆ, ಮನಸ್ಸಿನಲ್ಲಿ ದೈವ ಭಕ್ತಿ ಹೆಚ್ಚುವುದು.

ದೇವರಿಗೆ ಬಳಸುವ ಹೂ ಹೇಗಿರಬೇಕು?

ದೇವರಿಗೆ ಬಳಸುವ ಹೂ ಹೇಗಿರಬೇಕು?

ದೇವರಿಗೆ ಬಳಸುವ ಹೂಗಳಿಗೆ ತೊಟ್ಟು ಇರಬೇಕು. ತೊಟ್ಟು ಕಿತ್ತರೆ ಹೂಗಳ ಎಸಳುಗಳು ಉದುರುವುದು ಹಾಗೂ ಹೂಗಳಲ್ಲಿ ಚೈತನ್ಯ ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಕಡಿಮೆಯಾಗುವುದು. ಆದ್ದರಿಂದ ತೊಟ್ಟು ಸಹಿತ ಹೂ ಸರ್ಪಿಸಬೇಕು.

ಗೊರಟೆ, ನಂದಿಬಟ್ಟಲ ಹೂಗಳನ್ನು ಅರ್ಪಿಸುವಾಗ ಇದನ್ನು ಗಮನಿಸಿ

ಗೊರಟೆ, ನಂದಿಬಟ್ಟಲ ಹೂಗಳನ್ನು ಅರ್ಪಿಸುವಾಗ ಇದನ್ನು ಗಮನಿಸಿ

ಇನ್ನು ಗೋರಂಟೆ (ಗೊರಟೆ, ಗೊರಟಿಗೆ) ನಂದಿಬಟ್ಟಲು ಇಂಥ ಹೂವುಗಳಿಗೆತೊಟ್ಟಲ್ಲದೇ ಒಂದು ಸಣ್ಣ ಹಸಿರು ಭಾಗವು ತೊಟ್ಟಿನ ಕೆಳಗೆ ಜೋಡಿಸಿರುತ್ತದೆ. ಆ ತುಂಬನ್ನು ಅವಶ್ಯವಾಗಿ ತೆಗೆಯಬೇಕು. ಏಕೆಂದರೆ ಈ ತುಂಬುಗಳು ತೊಟ್ಟಿನ ಕಡೆಗೆ ಸಂಕ್ರಮಿತವಾಗುವ ದೇವತೆಯ ಚೈತನ್ಯಕ್ಕೆ ಅಡಚಣೆಯನ್ನುಂಟು ಮಾಡುತ್ತವೆ ಎಂದು ಹೇಳಲಾಗುವುದು. ಈ ತುಂಬುಗಳನ್ನು ತೆಗೆಯದೇ ಇದ್ದರೆ ಇದರ ಜಡತ್ವ ಗುಣದಿಂದ ಚೈತನ್ಯ ಪ್ರವಹಿಸುವ ಕ್ಷಮತೆಯು ಅತ್ಯಂತ ಕಡಿಮೆಯಿರುತ್ತದೆ. ಈ ತುಂಬುಗಳನ್ನು ತೆಗೆಯದೇ ಹೂವುಗಳ ತೊಟ್ಟಿನ ಜೊತೆಗೆ ಹಾಗೇ ಬಿಟ್ಟರೆ ದೈವತ್ವವನ್ನು ಆಕರ್ಷಿಸುವ ಕ್ಷಮತೆ ಕಡಿಮೆಯಾಗುವುದು. ಇದರಿಂದಾಗಿ ಪೂಜಿಸುವವನಿಗೆ ಅಪೇಕ್ಷಿತ ಫಲ ಸಿಗಲ್ಲ. ಆದ್ದರಿಂದ ತೊಟ್ಟಿನ ಕೆಳಗಿರುವ ತುಂಬು ತೆಗೆದೇ ದೇವರಿಗೆ ಹೂ ಅರ್ಪಿಸಬೇಕು.

ದೇವರಿಗೆ ಅರ್ಪಿಸುವ ಹೂವಿನ ವಾಸನೆ ಗ್ರಹಿಸಬಾರದು ಏಕೆ?

ದೇವರಿಗೆ ಅರ್ಪಿಸುವ ಹೂವಿನ ವಾಸನೆ ಗ್ರಹಿಸಬಾರದು ಏಕೆ?

ಹೂಗಳಿಗೆ ದೈವತ್ವನ್ನು ಆಕರ್ಷಿಸುವ ಹಾಗೂ ಪ್ರಕ್ಷೇಪಿಸುವ ಕ್ಷಮತೆ ಇರುತ್ತದೆ. ಮನುಷ್ಯರು ಹೂವಿನ ಪರಿಮಳ ತೆಗೆದುಕೊಂಡಾಗ ಜೀವದ ಗಂಧರೂಪದ ವಾಸನೆಗೆ ಸಂಬಂಧಿಸಿದ ಇಚ್ಛಾಶಕ್ತಿಯು ಉಚ್ಛ್ವಾಸದೊಂದಿಗೆ ಹೂವಿನ ಸೂಕ್ಷ್ಮ-ಕಕ್ಷೆಯಲ್ಲಿ ಪ್ರವೇಶಿಸುವುದರಿಂದ ಹೂವಿಗೆ ದೈವತ್ವವನ್ನು ಆಕರ್ಷಿಸುವವ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ನಾವು ಹೂವಿನ ವಾಸನೆ ಗ್ರಹಿಸಿದರೆ ನೈಸರ್ಗಿಕವಾಗಿ ಅದರ ಸತ್ತ್ವವೂ ಕಡಿಮೆಯಾಗುವುದು.

ಸತ್ತ್ವ ಕಡಿಮೆಯಾದ ಹೂವನ್ನು ದೇವರಿಗೆ ಅರ್ಪಿಸುವುದರಿಂದ ಮೂರ್ತಿಯು ರಜ-ತಮದಿಂದ ತುಂಬಿಕೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಮೂರ್ತಿಯಿಂದ ಬರುವ ಧನಾತ್ಮಕ ಶಕ್ತಿ ಹಾಗೂ ಚೈತನ್ಯಕಣಗಳ ಪ್ರಕ್ಷೇಪಣೆಗೆ ಅಡಚಣೆಯಾಗುತ್ತದೆ. ಇದರ ಪರಿಣಾಮದಿಂದ (ಸಮಷ್ಟಿಯಲ್ಲಿ) ಚೈತನ್ಯವು ಕಡಿಮೆ ಪ್ರಕ್ಷೇಪಣೆಯಾಗುತ್ತದೆ. ಇದೇ ಕಾರಣದಿಂದ ದೇವತೆಗಳಿಗೆ ಅರ್ಪಿಸುವ ಹೂವುಗಳ ಪರಿಮಳ ತೆಗೆದುಕೊಳ್ಳುವುದು ಒಂದು ರೀತಿಯಲ್ಲಿ ಅಪರಾಧವಾಗಿದೆ.

English summary

Everything You Need To know Why One Should Not Take Smell Of Pooja Flower

Here are everything you need to know about flowers offered to God in pooja , have a look,
Story first published: Tuesday, August 25, 2020, 9:37 [IST]
X
Desktop Bottom Promotion