Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಅದೃಷ್ಟ ನಿಮ್ಮನ್ನು ಹಿಂಬಾಲಿಸಬೇಕೇ? ಇಲ್ಲಿದೆ ಉಪಾಯ!
ಕೆಲವರು ಜನ್ಮದಿಂದಲೇ ತಮ್ಮೊಂದಿಗೆ ಅದೃಷ್ಟವನ್ನು ತಂದಿರುತ್ತಾರೆ. ಇನ್ನು ಕೆಲವರಿಗೆ ಅದೃಷ್ಟ ಮರಿಚಿಕೆಯಾಗಿರುತ್ತದೆ. ಅವರು ಏನೇ ಮಾಡಲಿ, ಅಪಜಯ ಯಾವಾಗಲೂ ಬಾಧಿಸುತ್ತಿರುತ್ತದೆ. ಅವರು ತಮ್ಮ ಎಲ್ಲಾ ಸೋಲುಗಳಿಗೆ ವಿಧಿಯನ್ನು ಹಳಿಯುತ್ತಾ ತಮ್ಮ ಪಾಲಿಗೆ ಬಂದದ್ದನ್ನೇ ಪಂಚಾಮೃತ ಎಂದು ನೀರಸ ಜೀವನ ಸವೆಸುತ್ತಿರುತ್ತಾರೆ.
ಆದರೆ ಈ ಸ್ಥಿತಿಯಿಂದ ಹೊರಬರಲು ಕೆಲವು ದಾರಿಗಳಿವೆ. ನಿಮಗೂ ಅದೃಷ್ಟದೇವತೆ ಒಲಿಯದೇ ಜೀವನ ದುರ್ಭರವಾಗಿದ್ದರೆ ಆ ಸ್ಥಿತಿಯಿಂದ ಹೊರಬರಲು ಈ ಆರು ದಾರಿಗಳು ಖಂಡಿತಾ ಸಹಾಯ ಮಾಡಲಿವೆ.
*ನಿಮ್ಮ ಮನೆಯ ಅಂಗಳದಲ್ಲಿ ಅಥವಾ ಸೂರ್ಯನನ್ನು ಕಾಣುವ ಯಾವುದೇ ಭಾಗದಲ್ಲಿ ಬಿಳಿಯ ಎಲೆ ಅಥವಾ ಹೂವು ಬಿಡುವ ಪೊದೆ ಅಥವಾ ಗಿಡವೊಂದನ್ನು ನೆಡಿ. ಈ ಗಿಡದಲ್ಲಿ ಮುಳ್ಳುಗಳಿರಬಾರದು. ಈ ಗಿಡಗಳು ನಿಮ್ಮ ಮನೆಯಲ್ಲಿರುವ ದುಷ್ಟಶಕ್ತಿಗಳನ್ನು ಒಳಪ್ರವೇಶಿಸದಂತೆ ತಡೆದು ಮನೆಯಲ್ಲಿ ಧನವೃದ್ಧಿಯಾಗುವಂತೆ ನೋಡಿಕೊಳ್ಳುತ್ತವೆ.

*ಪ್ರತಿದಿನ ಬೆಳಿಗ್ಗೆ ಶ್ರೀ ಆದಿತ್ಯ ಹೃದಯ ಸ್ತೋತ್ರವನ್ನು ಓದಿ. "ಓಂ ಗೃಣಿ ಸೂರ್ಯೋ ನಮಃ" ಈ ಸೂರ್ಯಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಪಠಿಸುವುದರಿಂದ ಮನೆಯಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
*ಮನೆಯ ಹೊರಗೆ ಒಂದು ಸ್ವಸ್ತಿಕ್ ಚಿನ್ಹೆಯನ್ನು ಬಿಡಿಸಿ. ಇದು ಮನೆಗೆ ಐಶ್ವರ್ಯ ಮತ್ತು ಸುಯೋಗವನ್ನು ಬರುವಂತೆ ಮಾಡುತ್ತದೆ.
*ಒಂದು ವೇಳೆ ತುಂಬಾ ದಿನಗಳಿಂದ ಯಾವುದೋ ವ್ಯಾಧಿ ನಿಮ್ಮನ್ನು ಕಾಡುತ್ತಿದ್ದರೆ ಹೀಗೆ ಮಾಡಿ. ಪ್ರಖರವಾಗಿ ಹೊಳೆಯುತ್ತಿರುವ ಒಂದು ರೂಪಾಯಿಯ ನಾಣ್ಯವನ್ನು ನೀವು ಮಲಗಿದೆಡೆ ತಲೆಭಾಗದಲ್ಲಿ ಇರಿಸಿ. ಮರುದಿನ ಈ ನಾಣ್ಯವನ್ನು ಸ್ಮಶಾನದಲ್ಲಿ ಎಸೆಯಿರಿ. ನಿಮ್ಮನ್ನು ಕಾಡುತ್ತಿದ್ದ ವ್ಯಾಧಿ ದೂರವಾಗುವುದು. ಭಗವಾನ್ ಆಂಜನೇಯ ಸ್ವಾಮಿ ಶಿವನ ಮೂಲ ಶಕ್ತಿ
*ಕಡುಗೆಂಪು ಬಣ್ಣದ ಚಿಕ್ಕ ಚಿಕ್ಕ ಕರಂಡಕಗಳಲ್ಲಿ ಗೋಮತಿ ಚಕ್ರವನ್ನಿರಿಸಿದರೆ ನಿಮ್ಮ ಮನೆಯಲ್ಲಿ ಎಂದಿಗೂ ಶಾಂತಿ ನೆಲೆಸುವುದು.
*ಕೆಲವೊಮ್ಮೆ ಮನೆಯ ಕಿಟಕಿ ಬಾಗಿಲುಗಳ ಮೂಲಕ ಲೋಕ ಕಂಟಕ ದುಷ್ಟಶಕ್ತಿಗಳು ಮನೆಗೆ ಆಗಮಿಸುತ್ತವೆ. ಅಪಶಕುನವನ್ನು ನುಡಿಯುವ ಒಣಗಿದ ಮರ, ಹೊಗೆಯುಗುಳುತ್ತಿರುವ ಕೊಳವೆ ಮೊದಲಾದವು ಒಂದು ವೇಳೆ ಕಿಟಕಿ ಬಾಗಿಲುಗಳಿಂದ ಕಾಣಿಸುವಂತಿದ್ದರೆ ಅವುಗಳನ್ನು ಮರೆಮಾಚಲು ದಟ್ಟನೆಯ ಪರದೆಗಳನ್ನು ಕಿಟಕಿ ಬಾಗಿಲುಗಳ ಮುಂದೆ ಇಳಿಬಿಡಿ. ನೀವು ಆಧ್ಯಾತ್ಮಿಕ ಹಾದಿ ಏಕೆ ಅನುಸರಿಸಬೇಕು? ಇಲ್ಲಿದೆ 10 ಕಾರಣಗಳು



Click it and Unblock the Notifications
