ತೀರ್ಥಕ್ಷೇತ್ರಗಳಿಂದ ನಿಜ ಆನಂದವನ್ನು ಹೊಂದಿರಿ

By Manu

ತೀರ್ಥಯಾತ್ರೆ ಎಂದಾಕ್ಷಣ ಎಲ್ಲರಿಗೆ ಹೊಳೆಯುವುದು ಮನೆಯಲ್ಲಿನ ಸಮಸ್ತ ಜವಾಬ್ದಾರಿಗಳನ್ನು ಮುಗಿಸಿ ದೇವರ ಸಾನಿಧ್ಯಕ್ಕೆ ತೆರಳಿ ಮುಕ್ತಿಹೊಂದಬೇಕು ಎಂದು. ವಿಶೇಷವಾಗಿ ಭಾರತದಲ್ಲಿ ತೀರ್ಥಯಾತ್ರೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಇದು ಪ್ರತಿಯೊಬ್ಬನ ಜೀವನದ ಅಂತಿಮ ಭಾಗದ ಕರ್ತವ್ಯಗಳಲ್ಲಿ ಒಂದಾಗಿದೆ ಎಂಬುದು ಹೆಚ್ಚಿನವರ ವಾಡಿಕೆ.

ತೀರ್ಥಯಾತ್ರೆಗೆ ತೆರಳಲು ಅನೇಕ ಕಾರಣಗಳಿವೆ. ಮೊದಲಿಗೆ, ಪ್ರಯಾಣದ ಪ್ರಕ್ರಿಯೆ ಮತ್ತು ಎರಡನೆಯದಾಗಿ, ಪ್ರಯಾಣದಿಂದ ಮನಸ್ಸಿಗೆ ಹೆಚ್ಚು ಹಿತ ಅನುಭವವುಂಟಾಗುತ್ತದೆ. ರಜೆಗೆ ಮಜಾ ನೀಡುವ ಅನೇಕ ಮನರಂಜನಾ ಪ್ರದೇಶಗಳು ಇದ್ದರೂ ಸಹ ಪವಿತ್ರ ಕ್ಷೇತ್ರಗಳ ದರ್ಶನದಿಂದ ನಿಮಗೆ ಸ್ಫೂರ್ತಿ ಹಾಗೂ ನಿಮ್ಮನ್ನು ಪುನೀತವಾಗಿಸುತ್ತದೆ. ನಿಮ್ಮ ಒಳ ಮರ್ಮವನ್ನು ಅರಿಯಲು ಈ ಕ್ಷೇತ್ರಗಳ ದರ್ಶನದಿಂದ ಸಾಧ್ಯವಾಗುತ್ತದೆ.

Benefits Of Pilgrimages

ಈ ತೀರ್ಥಕ್ಷೇತ್ರಗಳ ದರ್ಶನದಿಂದ ಅನೇಕ ರೀತಿಯ ಸಂಸ್ಕೃತಿ ಮತ್ತು ಹೊಸ ನಂಬಿಕೆಗಳನ್ನು ತಿಳಿಯಪಡಿಸುತ್ತದೆ ಹಾಗೂ ಜೀವನದ ಮತ್ತೊಂದು ಆಯಾಮವನ್ನು ನಿಮಗೆ ಪ್ರಸ್ತುತಪಡಿಸುತ್ತದೆ. ಕೆಲವು ಕ್ಷೇತ್ರಗಳಲ್ಲಿ ಸಾಧು ಸಂತರು ವಾಸಿಸುತ್ತಿರುತ್ತಾರೆ. ಈ ಕ್ಷೇತ್ರಗಳಿಗೆ ಭೇಟಿ ಕೊಟ್ಟರೆ ಅವರ ಹೇಳಿಕೆಗಳು ಮತ್ತು ಅವರ ಮಾರ್ಗದರ್ಶನದಿಂದ ನಿಮ್ಮ ಆಧ್ಯಾತ್ಮಿಕ ಜ್ಞಾನವು ಹೆಚ್ಚಾಗಿ ನಿಮಗೆ ಹೊಸಬಗೆಯ ಆನಂದವನ್ನು ಉಂಟುಮಾಡುತ್ತದೆ.

ಆಧ್ಯಾತ್ಮಿಕತೆ ಎಂಬುದು ಕೇವಲ ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಅಥವಾ ಈ ರೀತಿಯ ಪುಣ್ಯಕ್ಷೇತ್ರಗಳ ದರ್ಶನದಿಂದ ಲಭಿಸುವುದಿಲ್ಲ. ಆದರೆ ಈ ಕ್ಷೇತ್ರಗಳಿಂದ ತೆರಳುವುದರಿಂದ ನಿಮ್ಮ ಮನಸ್ಸು ಉಲ್ಲಾಸಭರಿತದಿಂದ ಕೂಡಿದ್ದು, ನಿಮ್ಮಲ್ಲಿ ಹೊಸ ಚೈತನ್ಯವನ್ನು ತುಂಬುವಂತೆ ಮಾಡುತ್ತದೆ.

ಪವಿತ್ರ ಕ್ಷೇತ್ರಗಳ ಯಾತ್ರೆಯಿಂದ ಒಟ್ಟಾರೆಯಾಗಿ ನಿಮ್ಮ ವ್ಯಕ್ತಿತ್ವ ವಿಕಸನಗೊಳಿಸಿ ನಿಮ್ಮ ದೈನಂದಿನ ಒದ್ದಾಟವನ್ನು ಶಮನಗೊಳಿಸಲು ನೆರವಾಗುತ್ತದೆ. ಏಕೆಂದರೆ ಪ್ರತಿಯೊಬ್ಬನ ಜೀವನದಲ್ಲಿ ತಮ್ಮ ಒಳಮರ್ಮವನ್ನು ಅರಿತು ಶಾಂತಿಯನ್ನು ಕಂಡುಕೊಳ್ಳಲು ಈ ಪವಿತ್ರ ಕ್ಷೇತ್ರಗಳು ನೆರವಾಗುತ್ತವೆ. ಈ ಸತ್ಯವನ್ನು ಅರಿಯಬೇಕಾದರೆ ನೀವು ಈ ರೀತಿಯ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲೇಬೇಕು.

ಈ ಕ್ಷೇತ್ರಗಳು ನಿಮಗೆ ಸರಳತೆಯನ್ನು ಕಲಿಸುತ್ತವೆ. ಹೆಚ್ಚಿನ ತೀರ್ಥಕ್ಷೇತ್ರಗಳು ಮನುಷ್ಯನ ಭೌತಿಕ ವಸ್ತುಗಳ ಆನಂದಕ್ಕಿಂತ ಒಳಮನಸ್ಸಿನ ಆನಂದ ದೊಡ್ಡದೆಂದು ತಿಳಿಸಿಕೊಡುತ್ತವೆ. ಹೀಗಾಗಿ ಈ ಕಾರಣಗಳಿಗೆ ನೀವು ಒಮ್ಮೆ ಈ ತೀರ್ಥಕ್ಷೇತ್ರಗಳಿಗೆ ಭೇಟಿ ಕೊಟ್ಟು ಮನಸ್ಸಿನ ನಿಜ ಆನಂದವನ್ನು ಹೊಂದಿರಿ ಎಂಬುದು ನಮ್ಮ ಆಶಯ.

Story first published: Wednesday, January 6, 2016, 14:28 [IST]
X
Desktop Bottom Promotion