Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಅನಂತ ಚತುರ್ದಶಿ: 14 ಗಂಟಿನ ಅನಂತ ಸೂತ್ರ ಕಟ್ಟಿದರೆ ವೃದ್ಧಿಸುವುದು ಸಂಪತ್ತು
ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಚತುರ್ದಶಿಯನ್ನು 'ಅನಂತ ಚತುರ್ದಶಿ' ಎಂದು ಆಚರಿಸಲಾಗುವುದು. ಇದು ಶ್ರೀ ಗಣೇಶ ಚತುರ್ಥಿಯ ಕೊನೆಯ ದಿನವೂ ಆಗಿದ್ದು ಈ ದಿನ ವ್ರತವನ್ನು ಮಾಡಲಾಗುವುದು.

ಅನಂತ ಚತುರ್ದಶಿಯಂದು ಶ್ರೀ ವಿಷ್ಣು ಅನಂತ ಪದ್ಮನಾಭನಾಗಿ ಅವತಾರ ತಾಳಿದ ಎಂದು ಹೇಳಲಾಗುತ್ತದೆ. ಈ ದಿನ ಭಕ್ತರು ಅನಂತನನ್ನು ಪೂಜಿಸುತ್ತಾ ವ್ರತ ಪಾಲಿಸಿದರೆ ಐಶ್ವರ್ಯ, ಆರೋಗ್ಯ ಪ್ರದಾನಿಸುತ್ತಾನೆ ಎಂಬ ನಂಬಿಕೆಯಿದೆ.
ಅನಂತ ಚತುರ್ದಶಿಯ ಪೌರಾಣಿಕ ಹಿನ್ನೆಲೆ ಹಾಗೂ ವ್ರತದ ಮಹತ್ವದ ಬಗ್ಗೆ ತಿಳಿಯೋಣ:

ಅನಂತ ವ್ರತದ ಪೌರಾಣಿಕ ಹಿನ್ನೆಲೆ
ಕೌಂಡಿಲ್ಯ ಮುನಿಯು ವಿವಾಹಕದ ನಂತತ ಪತ್ನಿ ಜೊತೆ ತನ್ನ ಕುಟೀರಕ್ಕೆ ಹಿಂತಿರುವಾಗ ನಿತ್ಯ ಕರ್ಮಗಳಿಗಾಗಿ ನದಿ ಬಳಿ ಹೋಗುತ್ತಾರೆ. ಆಗ ಅವರ ಪತ್ನಿಯು ಅಲ್ಲಿ ಸ್ವಲ್ಪ ಮಹಿಳೆಯರು ಒಂದು ವ್ರತ ಆಚರಿಸುತ್ತಿರುವುದನ್ನು ನೋಡಿ ಅದರ ಕುರಿತು ಮಹಿಳೆಯರನ್ನು ಕೇಳಿದಾಗ ಅವರು 'ನಾವು ಅನಂತ ವ್ರತ'ವನ್ನು ಆಚರಿಸುತ್ತಿರುವಾಗಿ ಹೇಳಿದರು.
ಆಗ ಕೌಂಡಿಲ್ಯ ಮುನಿಯ ಪತ್ನಿ ಕೂಡ ಆ ವ್ರತ ಮಾಡಲಾರಂಭಿಸುತ್ತಾರೆ. ಇದರಿಂದ ಕೌಂಡಿಲ್ಯ ಮುನಿಯ ಧನ-ಸಂಪತ್ತು ವೃದ್ಧಿಯಾಯಿತು. ಕೌಂಡಿಲ್ಯ ಮುನಿಯು ಪತ್ನಿಯ ಕೈಯಲ್ಲಿರುವ ಅನಂತ ವ್ರತದ ದಾರವನ್ನು ನೋಡಿ ಅದೇನೆಂದು ವಿಚಾರಿಸಿದಾಗ ಇದು ಅನಂತ ವ್ರತದ ದಾರ, ಈ ವ್ರತದಿಂದಾಗಿ ನಮಗೆ ಸಂಪತ್ತು ಲಭಿಸಿದೆ ಎಂದಾಗ ಕೋಪಗೊಂಡ ಕೌಂಡಿಲ್ಯ ಮುನಿ ಇದೆಲ್ಲಾ ನನ್ನ ಪಾಂಡಿತ್ಯದಿಂದಾಗಿ ಬಂದಿದ್ದು, ನಿನ್ನ ವ್ರತದಿಂದಲ್ಲ ಎಂದು ಆ ದಾರವನ್ನು ಕಿತ್ತು ಎಸೆಯುತ್ತಾನೆ.
ಅದಾದ ಬಳಿಕ ಕೌಂಡಿಲ್ಯ ಮುನಿಯ ಸಂಪತ್ತು ಕರಗಲಾರಂಭಿಸುತ್ತದೆ, ಆಗ ಮುನಿಗೆ ತನ್ನ ತಪ್ಪಿನ ಅರಿವು ಉಂಟಾಗಿ ಅನಂತನ ಕೃಪೆಗಾಗಿ ಕಠಿಣ ತಪಸ್ಸು ಮಾಡುತ್ತಾನೆ.
ಈತನ ತಪ್ಪಿಸ್ಸಿಗೆ ಮೆಚ್ಚಿದ ಶ್ರೀವಿಷ್ಣು 14 ವರ್ಷಗಳ ಕಾಲ ಅನಂತ ವ್ರತ ಆಚರಿಸಿದರೆ ಹೋದ ಸುಖ, ಸಂಪತ್ತು ಮರಳಿ ಬರುವುದು ಎಂದು ಹೇಳುತ್ತಾನೆ. ಹೀಗೆ ಅನಂತ ವ್ರತದ ಮಹತ್ವದ ಬಗ್ಗೆ ಹೇಳಲಾಗುವುದು.

ಅನಂತ ವ್ರತದಲ್ಲಿ ಕಟ್ಟುವ ಅನಂತ ಸೂತ್ರದ ಮಹತ್ವ
ಅನಂತ ಚತುರ್ದಶಿಯನ್ನು ಸೆಪ್ಟೆಂಬರ್ 1ರಂದು ಆಚರಿಸಲಾಗುತ್ತದೆ.
ಅನಂತ ವ್ರತದಲ್ಲಿ ಕಟ್ಟುವ ಅನಂತ ಸೂತ್ರದ ಮಹತ್ವ
ಅನಂತ ವ್ರತವನ್ನು ಪಾಲಿಸುವವರು ಅನಂತ ಸೂತ್ರವನ್ನು ಕಟ್ಟಿಕೊಳ್ಳುತ್ತಾರೆ. ಭಗವಾನ್ ವಿಷ್ಣು ಅನಂತ ಸೂತ್ರದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಮೇಲೆ ಅನಂತ ಸೂತ್ರ ಕಟ್ಟಲಾಗುವುದು. ಈ ಸೂತ್ರವನ್ನು ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸಿದ ಬಳಿಕ ಕಟ್ಟಲಾಗುವುದು. ಈ ದಾರಕ್ಕೆ 14 ಗಂಟುಗಳಿರುತ್ತದೆ.

14 ಗಂಟು ಏನನ್ನು ಸೂಚಿಸುತ್ತದೆ
ದಾರದಲ್ಲಿರುವ 14 ಗಂಟು ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹಾಲೋರ್ಕ, ಜನಲೋಕ, ತಪೋಲೋಕ, ಬ್ರಹ್ಮಲೋಕ, ಅತಳ ಲೋಕ, ವಿತಳ ಲೋಕ. ಸತಳ ಲೋಕ, ರಸಾತಳ ಲೋಕ, ಮಹಾತಳ ಲೋಕ, ತಳಾತಳ ಲೋಕ, ಪಾತಾಳ ಲೋಕ ಹೀಗೆ 14 ಲೋಕವನ್ನು ಪ್ರತಿನಿಧಿಸುತ್ತದೆ.

ಅನಂತ ಸೂತ್ರ ಕಟ್ಟುವ ವಿಧಾನ
ಈ ಸೂತ್ರ ಕಟ್ಟಿಕೊಳ್ಳಲು ಕೆಲವು ನಿಯಮಗಳಿವೆ. ಈ ಸೂತ್ರವನ್ನು ಪುರುಷರು ಬಲಗೈಗೆ, ಮಹಿಳೆಯರು ಎಡಗೈಗೆ ಕಟ್ಟಿಕೊಳ್ಳಬೇಕು. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಪೂಜಿಸಿದರೆ ಆತನ ಕೃಪೆ ನಿಮಗೆ ಲಭಿಸುವುದು.



Click it and Unblock the Notifications