Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ರಾಮಕಥಾದಲ್ಲಿ ಭಾಗವಹಿಸಿ ನಾನು ಪ್ರಧಾನಿಯಾಗಿ ಅಲ್ಲ, ಹಿಂದೂ ಆಗಿ ಬಂದಿದ್ದೇನೆ ಎಂದ ಯುಕೆ ಪ್ರಧಾನಿ ರಿಷಿ ಸುನಕ್
ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಮೂಲವನ್ನು ಮರೆಯಬಾರದು, ಆಗ ಮಾತ್ರ ದೊಡ್ಡ ವ್ಯಕ್ತಿ ಎಂದನಿಸಿಕೊಳ್ಳಲು ಸಾಧ್ಯ. ರಿಷಿ ಸುನಕ್ ಈ ವಿಷಯದಲ್ಲಿ ತುಂಬಾನೇ ಗಮನ ಸೆಳೆಯುತ್ತಾರೆ. ವಿದೇಶಕ್ಕೆ ಹೋದ ಮೇಲೆ ನಮ್ಮ ದೇಶದ ಸಂಸ್ಕೃತಿಯನ್ನು ಮರೆತು ವರ್ತಿಸುವ ಎಷ್ಟೋ ಜನರಿದ್ದಾರೆ, ಆದರೆ ಯುಕೆ ಪ್ರಧಾನಿಯಾದರೂ 'ನಾನೊಬ್ಬ ಹಿಂದೂ' ಎಂಬುವುದಾಗಿ ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ರಿಷಿ ಸುನಕ್. ಈ ಕಾರಣಕ್ಕೆ ಅವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗುವುದು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯರು ಬ್ರಿಟನ್ ಕ್ಯಾಂಬ್ರಿಡ್ಜ್‌ನಲ್ಲಿ ರಾಮಕಥಾ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಿಷಿ ಸುನಕ್ 'ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕ್ಯಾಂಬ್ರಿಡ್ಜ್‌ನಲ್ಲಿ ಏರ್ಪಡಿಸಿದ ಮೊರಾರಿ ಬಾಪುರವರ ರಾಮಕಥಾ ಇಲ್ಲಿಗೆ ಬಂದಿರುವುದು ನನಗೆ ಖುಷಿಯಾಗಿದೆ, ನಾನು ಇಲ್ಲಿಗೆ ಬ್ರಿಟನ್ ಪ್ರಧಾನಿಯಾಗಿ ಬಂದಿಲ್ಲ, ಒಬ್ಬ ಹಿಂದೂ ಆಗಿ ಬಂದಿದ್ದೇನೆ("It is truly an honour and pleasure to be here today at Morari Bapu's Ram Kahtha at the University of Cambridge on Indian Independence Day. Bapu, I am here today not as a Prime Minister but as a Hindu,") ಎಂಬ ಮಾತನ್ನು ಹೇಳುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ, ಸನಾತನ ಭಾರತದ ಪ್ರಜೆಗಳ ಮನಸ್ಸು ಗೆದ್ದಿದ್ದಾರೆ.
ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾಗುತ್ತಿದ್ದಾರೆ ಎಂದಾಗ ಭಾರತೀಯರು ಸಂಭ್ರಮಿಸಿದ್ದರು ಅದಕ್ಕೆ 2 ಕಾರಣ:
* ನಮ್ಮನ್ನು ಆಳಿದ್ದ ಬ್ರಿಟಿಷರನ್ನು ಒಬ್ಬ ಭಾರತೀಯ ಮೂಲದ ವ್ಯಕ್ತಿ ಆಳುತ್ತಾರೆ ಎಂಬ ಖುಷಿ
* ರಿಷಿ ಸುನಕ್ ಹಾಗೂ ಅವರ ಪತ್ನಿ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ, ಆಚರಿಸುತ್ತಾರೆ
ರಿಷಿ ಸುನಕ್ ಹುಟ್ಟಿದ್ದು, ಬೆಳೆದಿದ್ದು ವಿದೇಶದಲ್ಲಿ ಆದರೆ ಅವರ ಪೂರ್ವಜರು ಭಾರತದ ಪಂಜಾಬ್ ಮೂಲದವರು, ಹೀಗಾಗಿ ಭಾರತೀಯ ಸಂಸ್ಕೃತಿ ಎಂದರೆ ರಿಷಿ ಸುನಕ್‌ಗೆ ಅಪಾರ ಗೌರವ, ಅದನ್ನು ತಮ್ಮ ಕೃತಿಯಲ್ಲಿ ಪಾಲಿಸುತ್ತಿದ್ದಾರೆ ಕೂಡ. ಇವರು ಪ್ರಮಾಣವಚನ ಸ್ವೀಕರಿಸುವಾಗ ಭಗವದ್ಗೀತೆ ಜೊತೆಗೆ ಕೊಂಡೊಯ್ಯುವ ಮೂಲಕ ಗಮನ ಸೆಳೆದಿದ್ದರು. ಬ್ರಿಟನ್‌ನ ಪ್ರಧಾನಿಯಾದರೂ ಭಾರತ ಮಾತೆಯ ಮಣ್ಣಿನ ಮಗ ಎಂದು ಹೇಳಿಕೊಳ್ಳಲು ಸುನಕ್ ಅವರಿಗೆ ತುಂಬಾನೇ ಹೆಮ್ಮೆ.
ನಂಬಿಕೆ ಎಂಬುವುದು ತುಂಬಾನೇ ವೈಯಕ್ತಿಕವಾದ ವಿಚಾರ ಎಂದು ನಂಬಿರುವ ರಿಷಿ ಸುನಕ್ ಅವರ ಜೀವನದಲ್ಲಿ ಏನಾದರೂ ಸವಾಲುಗಳು ಉಂಟಾದಾಗ ದೇವರನ್ನು ನಂಬುತ್ತಾರೆ, ಅವರ ಟೇಬಲ್‌ನಲ್ಲಿ ಗಣೇಶನ ಮೂರ್ತಿಯಿದೆ. ರಿಷಿ ಸುನಕ್ ಸೌತಾಂಪ್ಟನ್‌ನಲ್ಲಿ ಜನಿಸಿ ಬೆಳೆದವರು, ಅವರು ತಮ್ಮ ಬಾಲ್ಯದಲ್ಲಿ ಇರುವಾಗ ಕುಟುಂಬದ ಜೊತೆಗೆ ಸಮೀಪದ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು.
ಅವರ ಪೋಷಕರು ಪೂಜೆ, ಹೋಮ-ಹವನ, ಆರತಿ ಎಲ್ಲವನ್ನೂ ಮಾಡುತ್ತಿದ್ದರು, ಇವೆಲ್ಲವನ್ನೂ ನೋಡಿ ಬೆಳೆದ ರಿಷಿ ಸುನಕ್ ಅವರಿಗೆ ಕೂಡ ಭಾರತದ ಸಂಸ್ಕೃತಿ, ಆಚರಣೆಯ ಪರಿಚಯ ತುಂಬಾ ಚೆನ್ನಾಗಿದೆ.
ಶ್ರೀರಾಮನ ಆದರ್ಶಗಳನ್ನು ಮೆಚ್ಚಿ ಆರಾಧಿಸುವ ರಿಷಿ ಸುನಕ್
ಶ್ರೀರಾಮನನ್ನು ಆದರ್ಶ ಪುರುಷನಂತೆ ಕಾಣುವ ರಿಷಿ ಸುನಕ್ ಜೀವನದಲ್ಲಿನ ಸವಾಲುಗಳನ್ನು ಹೇಗೆ ಎದುರಿಸಬೇಕು, ಸ್ವಾರ್ಥವಿಲ್ಲದೆ ಹೇಗೆ ಕೆಲಸ ಮಾಡಬೇಕು ಎಂಬುವುದಕ್ಕೆ ಶ್ರೀರಾಮ ಸ್ಪೂರ್ತಿ ಎಂಬುವುದಾಗಿ ಹೇಳಿದ್ದಾರೆ.
ನಾವು ಎಲ್ಲೇ ಇರಲಿ, ಹೇಗೇ ಇರಲಿ ನಮ್ಮತನ, ನಮ್ಮ ಸಂಸ್ಕೃತಿ ಎಂದಿಗೂ ಬಿಟ್ಟುಕೊಡಬಾರದು, ಈ ವಿಚಾರದಲ್ಲಿ ರಿಷಿ ಸುನಕ್ ಮಾದರಿ ವ್ಯಕ್ತಿ....



Click it and Unblock the Notifications











