Latest Updates
-
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು
ಜುಲೈ ತಿಂಗಳಿನಲ್ಲಿ ಹುಟ್ಟಿದವರಲ್ಲಿ ಈ ಗುಣ ಬಳುವಳಿಯಾಗಿ ಬಂದಿರುತ್ತದೆ!
ಈ ಜಗತ್ತಿನಲ್ಲಿ ಒಬ್ಬರು ಇದ್ದ ಹಾಗೆ ಮತ್ತೊಬ್ಬರು ಇರೋದಿಲ್ಲ. ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ವಿಶಿಷ್ಟ ಗುಣಗಳು ಇದ್ದೇ ಇರುತ್ತದೆ. ಅದೇ ರೀತಿ ಜುಲೈ ತಿಂಗಳಿನಲ್ಲಿ ಹುಟ್ಟಿರೋ ಮಕ್ಕಳು ಕೂಡ ತುಂಬಾನೇ ಸ್ಪಷಲ್. ಬೇರೆ ಯಾರಲ್ಲೂ ಇರದ ಕೆಲವೊಂದು ವಿಶೇಷ ಗುಣಗಳು ಈ ರಾಶಿಯವರಲ್ಲಿ ಇರುತ್ತಂತೆ.
ಸಾಮಾನ್ಯವಾಗಿ ಜೂನ್ 22 ರಿಂದ ಜುಲೈ 22 ರವರೆಗೆ ಹುಟ್ಟಿದ ಮಕ್ಕಳು ಕರ್ಕಾಟಕ ರಾಶಿಯಲ್ಲಿ ಜನಿಸುತ್ತಾರೆ. ಅದೇ ರೀತಿ ಜುಲೈ 23 ರಿಂದ ಆಗಸ್ಟ್ 22 ರವರೆಗೆ ಹುಟ್ಟಿದ ಮಕ್ಕಳು ಸಿಂಹ ರಾಶಿಗೆ ಸೇರುತ್ತಾರೆ. ಅಷ್ಟಕ್ಕು ಜುಲೈ ತಿಂಗಳಲ್ಲಿ ಹುಟ್ಟಿದ ಮಕ್ಕಳ ಗುಣ ಹೇಗಿರುತ್ತೆ ಅನ್ನೋದನ್ನು ತಿಳಿಯೋಣ.

1. ಧನಾತ್ಮಕ ಚಿಂತಕರಾಗುರುತ್ತಾರೆ
ಜುಲೈನಲ್ಲಿ ಜನಿಸಿದವರು ಸಾಮಾನ್ಯವಾಗಿ ಆಶಾವಾದಿಗಳಾಗಿರುತ್ತಾರೆ. ವಿಷಯಗಳು ಎಷ್ಟೇ ಕಷ್ಟಕರವಾಗಿದ್ದರೂ ಕೂಡ ಇವರು ಪ್ರಕಾಶಮಾನವಾದ ಬದಿಯ ಮೇಲೆ ಮಾತ್ರ ಕೇಂದ್ರೀಕರಿಸುತ್ತಾರೆ. ಇದೇ ಕಾರಣಕ್ಕೆ ಇವರು ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಹುಡುಕೋದಕ್ಕೆ ಸಾಧ್ಯವಾಗುತ್ತದೆ. ಇನ್ನೂ ಋಣಾತ್ಮಕ ಚಿಂತನೆಗಳು ಇವರ ತಲೆಗೆ ಬರೋದೇ ಇಲ್ಲ. ಯಾವಾಗಲೂ ಇವರು ಧನಾತ್ಮಕವಾಗಿ ಚಿಂತಿಸುತ್ತಾರೆ. ಇವರಲ್ಲಿ ಹಾಸ್ಯ ಪ್ರಜ್ಞೆ ಚೆನ್ನಾಗಿದೆ. ಇವರಲ್ಲಿರುವ ಹಾಸ್ಯ ಮತ್ತು ಪ್ರಬುದ್ಧತೆಗಾಗಿ ಜನರು ಇವರನ್ನು ಮೆಚ್ಚುತ್ತಾರೆ.
2. ಉದಾರ ಸ್ವಭಾವವನ್ನು ಹೊಂದಿದ್ದಾರೆ
ಜುಲೈ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ಉದಾರಿಗಳಾಗಿರುತ್ತಾರೆ. ಮತ್ತೊಬ್ಬರನ್ನು ಕಾಳಜಿ ಮಾಡುವ ಗುಣವನ್ನು ಹೊಂದಿದ್ದಾರೆ. ಇನ್ನೂ ಯಾರಿಗಾದರೂ ಸಹಾಯ ಮಾಡಬೇಕಾದರೆ ಇವರು ಹಿಂದೆ ಮುಂದೆ ನೋಡೋದಿಲ್ಲ. ಈ ತಿಂಗಳಿನಲ್ಲಿ ಹುಟ್ಟಿದವರು ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತಾರೆ. ಇನ್ನೂ ಬೇರೆಯವರ ಕಷ್ಟಕ್ಕೂ ಕೂಡ ಇವರು ಪರಿಹಾರವನ್ನು ಕಲ್ಪಿಸುತ್ತಾರೆ. ಇದೇ ಕಾರಣಕ್ಕೆ ಜುಲೈ ತಿಂಗಳಿನಲ್ಲಿ ಹುಟ್ಟಿದವರು ಅನೇಕ ಜನ ಸ್ನೇಹಿತರನ್ನು ಹೊಂದಿರುತ್ತಾರೆ.
3. ಪ್ರತಿ ಕೆಲಸವನ್ನು ಗಮನ ಕೊಟ್ಟು ಮಾಡುತ್ತಾರೆ
ಜುಲೈ ತಿಂಗಳಿನಲ್ಲಿ ಹುಟ್ಟಿದವರು ಯಾವುದೇ ಕೆಲಸವನ್ನಾಗಲಿ ಗಮನವಿಟ್ಟು ಮಾಡುತ್ತಾರೆ. ಇವರು ತಮ್ಮ ಗುರಿಯೆಡೆಗೆ ಗಮನವಿಟ್ಟು ಕೆಲಸ ಮಾಡುವಾಗ ಬೇರೆ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ಒಂದು ಕೆಲಸವನ್ನು ಪೂರ್ತಿ ಮಾಡುವವರೆಗೂ ಬಿಡುವವರಲ್ಲ ಇವರು.
ಕೆಲಸ ಮಾಡುವ ಸಂದರ್ಭದಲ್ಲಿ ಇವರು ಅನಗತ್ಯ ಮಾತುಗಳಿಗೆ ಅವಕಾಶ ಕೊಡೋದಿಲ್ಲ. ಕೆಲಸ ಮಾಡುವಾಗ ಉತ್ಪಾದಕತೆಯ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಇನ್ನೂ ಕೆಲಸದ ಜೊತೆಗೆ ತಮ್ಮ ಕುಟುಂಬಸ್ಥರ ಕಾಳಜಿಯನ್ನು ಕೂಡ ಇವರು ಮಾಡುತ್ತಾರೆ.
4. ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ
ಜುಲೈ ತಿಂಗಳಿನಲ್ಲಿ ಹುಟ್ಟಿದವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಎಷ್ಟೇ ಕೆಲಸ ಇದ್ದರೂ ಕೂಡ ಕುಟುಂಬವನ್ನು ಮರೆಯುವವರಲ್ಲ ಇವರು. ಎಂತಹದೇ ಪರಿಸ್ಥಿತಿಯಲ್ಲಿ ಜವಾಬ್ದಾರಿಯನ್ನು ಮರೆಯುವವರಲ್ಲ ಇವರು. ಅದ್ರಲ್ಲೂ ಕುಟುಂಬ ಸದಸ್ಯರ ಮೇಲೆ ಇವರಿಗೆ ಅತಿಯಾದ ಕಾಳಜಿ ಇರುತ್ತದೆ. ಅಷ್ಟೇ ಅಲ್ಲದೇ, ಯಾವಾಗಲೂ ಇವರು ಸ್ವತಂತ್ರವಾಗಿರುತ್ತಾರೆ ಹೊರತು ಬೇರೆಯವರ ಮೇಲೆ ಅವಲಂಬಿತವಾಗೋದಿಲ್ಲ.
5. ತಮ್ಮ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ
ಜುಲೈ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ಭಾವನೆಗಳು ನಿಯಂತ್ರಿಸುವ ಗುಣವನ್ನು ಹೊಂದಿದ್ದಾರೆ. ಯಾವುದಾದರೂ ವಿಚಾರಕ್ಕೆ ಇವರು ಕೋಪಗೊಂಡರೂ ಕೂಡ ತಕ್ಷಣಕ್ಕೆ ತಮ್ಮ ಕೋಪವನ್ನು ನಿಯಂತ್ರಿಸುವ ಗುಣ ಹೊಂದಿರುತ್ತಾರೆ. ಯಾವ ಸಂದರ್ಭದಲ್ಲಿ ಹೇಗಿರಬೇಕು ಅನ್ನೋದು ಇವರಿಗೆ ಚೆನ್ನಾಗಿಯೇ ಗೊತ್ತಿದೆ. ತಮ್ಮವರನ್ನು ಕೂಡ ಬಿಟ್ಟು ಕೊಡುವವರಲ್ಲ. ಎಷ್ಟೇ ಕಷ್ಟ ಬಂದರೂ ಕೂಡ ತಮ್ಮವರನ್ನು ವಹಿಸಿಕೊಂಡು ಮಾತನಾಡುವ ಗುಣ ಹೊದಿರುತ್ತಾರೆ.
ಜುಲೈ ತಿಂಗಳಿನಲ್ಲಿ ಹುಟ್ಟುದವರು ಕೋಪಿಷ್ಟರಾದರೂ ಕೂಡ ಇವರಲ್ಲಿರುವ ಉತ್ತಮ ಗುಣಗಳು ಎಲ್ಲರನ್ನೂ ಮೆಚ್ಚಿಸುವಂತಿದೆ. ಈ ತಿಂಗಳಿನಲ್ಲಿ ಎಲ್ಲರಿಗೂ ಇಷ್ಟ ಆಗುತ್ತಾರೆ.



Click it and Unblock the Notifications
