Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಆ. 27ಕ್ಕೆ ಪುತ್ರದಾ ಏಕಾದಶಿ: ವಿವಾಹಿತ ಮಹಿಳೆಯರಿಗೆ ಈ ದಿನ ತುಂಬಾ ಮಹತ್ವವಾದ ದಿನ ಏಕೆ?
ಎಲ್ಲಾ ವ್ರತಗಳಲ್ಲಿ ಏಕಾದಶಿ ವ್ರತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ವರ್ಷದಲ್ಲಿ 24 ಏಕಾದಶಿ ಬರುತ್ತದೆ, ಪ್ರತಿಯೊಂದು ಏಕಾದಶಿ ಅದರದ್ದೇ ಆದ ಪ್ರಾಮುಖ್ಯತೆ ಹೊಂದಿದೆ. ಆಗಸ್ಟ್ 27ಕ್ಕೆ ಪುತ್ರದಾ ಏಕಾದಶಿ. ವರ್ಷದಲ್ಲಿ ಎರಡು ಶುಕ್ಲ ಪಕ್ಷದ ಏಕಾದಶಿ ಬರಲಿದೆ. ಒಂದು ಶ್ರಾವಣ ಮಾಸದಲ್ಲಿ ಬಂದರೆ ಮತ್ತೊಂದು ಡಿಸೆಂಬರ್-ಜನವರಿ ತಿಂಗಳ ನಡುವೆ ಅಂದರೆ ಪುಷ್ಯ ಮಾಸದಲ್ಲಿ ಬರಲಿದೆ. ಉತ್ತರ ಭಾರತದ ಕಡೆ ಪುಷ್ಯಾ ತಿಂಗಳಿನಲ್ಲಿ ಬರುವ ಏಕಾದಶಿಗೆ ಹೆಚ್ಚಿನ ಮಹತ್ವ ನೀಡಲಾಗುವುದು, ದಕ್ಷಿಣ ಭಾರತದ ಕಡೆ ಶ್ರಾವಣದ ಪುತ್ರದಾ ಏಕಾದಶಿ ತುಂಬಾ ಪ್ರಮುಖವಾದದ್ದು.

ಶ್ರಾವಣ ಮಾಸದ ಏಕಾದಶಿಯನ್ನು ಪವಿತ್ರ ಏಕಾದಶಿ ಎಂದು ಕರೆಯಲಾಗುವುದು. ಪುತ್ರದಾ ಏಕಾದಶಿಯ ಪೂಜಾ ಮುಹೂರ್ತ ಯಾವಾಗ? ಈ ಪುತ್ರದ ಏಕಾದಶಿಯ ಮಹತ್ವವೇನು ಎಂದು ನೋಡೋಣ ಬನ್ನಿ:
ಶ್ರಾವಣ ಪುತ್ರದಾ ಏಕಾದಶಿ ದಿನಾಂಕ ಮತ್ತು ಪೂಜಾ ಮುಹೂರ್ತ
ದಿನಾಂಕ : ಆಗಸ್ಟ್ 27
ಏಕಾದಶಿ ತಿಥಿ ಪ್ರಾರಂಭ: ಆಗಸ್ಟ್ 26 ಮಧ್ಯರಾತ್ರಿ 12:08ಕ್ಕೆ
ಏಕಾದಶಿ ತಿಥಿ ಮುಕ್ತಾಯ: ರಾತ್ರಿ 09:23ರವರೆಗೆ
ಪಾರಣ ಸಮಯ: ಆಗಸ್ಟ್ 28 ಬೆಳಗ್ಗೆ 06:06ರಿಂದ 08:37ರವರೆಗೆ
ಪುತ್ರದ ಏಕಾದಶಿ ಮಹತ್ವ
ಪುತ್ರದ ಏಕಾದಶಿ ಚಾತುರ್ಮಾಸದಲ್ಲಿ ಬರುತ್ತದೆ. ಈ ದಿನ ಶ್ರೀ ವಿಷ್ಣುವಿನ ಆರಾಧನೆಗೆ ಮೀಸಲಾದ ದಿನ. ಪುತ್ರದ ಏಕಾದಶಿಯ ವಿಶೇಷವೆಂದರೆ ಇದನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ಸಂತಾನ ಭಾಗ್ಯವನ್ನು ಕರುಣಿಸುವಂತೆ ಕೋರಿ ಈ ವ್ರತವನ್ನು ಆಚರಿಸಲಾಗುವುದು. ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ ಯಾರು ಈ ವ್ರತವನ್ನು ಆಚರಿಸುತ್ತಾರೋ ಅವರಿಗೆ ಶ್ರೀವಿಷ್ಣು ಸಕಲ ಐಶ್ವರ್ಯ, ಸಂತೋಷ, ನೆಮ್ಮದಿ ನೀಡಿ ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ.
ಉಪವಾಸ ನಿಯಮ
ಏಕಾದಶಿ ಉಪವಾಸವನ್ನು ಲಿಂಗ, ಜಾತಿ ಬೇಧವಿಲ್ಲದೆ ಯಾರು ಬೇಕಾದರೂ ಆಚರಿಸಬಹುದು. ಈ ದಿನ ಕೆಲವರು ಸಂಪೂರ್ಣ ಉಪವಾಸ ನಿಯಮ ಅನುಸರಿಸಿದರೆ ಇನ್ನು ಕೆಲವರು ಹಾಲು, ಹಣ್ಣು ಇವುಗಳನ್ನಷ್ಟೇ ಸೇವಿಸುತ್ತಾರೆ.
ಪುತ್ರದ ಏಕಾದಶಿ ಆಚರಣೆ ವಿಧಾನಗಳು
* ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು
* ಉಪವಾಸ ವ್ರತವನ್ನು ಮಾಡುವ ಮುನ್ನ ಸಂಕಲ್ಪ ಕೈಗೊಳ್ಳಬೇಕು
* ನಂತರ ಶ್ರೀಕೃಷ್ಣನ ಮೂರ್ತಿಯನ್ನು ಇಟ್ಟು ಅದಕ್ಕೆ ತುಳಸಿ, ಪಂಚಾಮೃತ, ಹೂ, ಹಣ್ಣುಗಳನ್ನು ಅರ್ಪಿಸಬೇಕು. ತುಳಸಿ ಅಂತೂ ಕಡ್ಡಾಯವಾಗಿ ಇರಲೇಬೇಕು.
* ಸೂರ್ಯಾಸ್ತಕ್ಕೆ ಸ್ವಲ್ಪ ಮುನ್ನ ಪೂಜೆಯನ್ನು ಮಾಡಬೇಕು.
* ನಂತರ ಶ್ರೀವಿಷ್ಣುವಿಗೆ ಆರತ ಬೆಳಗೆ ನೈವೇದ್ಯ ಅರ್ಪಿಸಿ.
* ಈ ದಿನ ಶ್ರೀಕೃಷ್ಣ ಅಥವಾ ಶ್ರೀ ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ.
ಪುತ್ರದಾ ಏಕಾದಶಿ ಕುರಿತು ಪೌರಾಣಿಕ ಕತೆ
ಭದ್ರಾವತಿ ಎಂಬ ಪಟ್ಟಣದಲ್ಲಿ ಸಕೇತಮಾನ್ ಎಂಬ ರಾಜನಿದ್ದ, ಆತ ಶೈಭ್ಯಾ. ಈ ದಂಪತಿಗೆ ಮಕ್ಕಳಿರಲಿಲ್ಲ. ಅವರಿಗೆ ಮಕ್ಕಳಿಲ್ಲದ ಕಾರಣ ತುಂಬಾ ದುಃಖದಲ್ಲಿರುತ್ತಾರೆ, ಅನೇಕ ವ್ರತಗಳನ್ನು ಮಾಡುತ್ತಾರೆ, ಆದರೂ ಮಕ್ಕಳಾಗಲಿಲ್ಲ. ಇದರಿಂದ ಬೇಸರವಾಗಿ ಎಲ್ಲಾ ಸಂಪತ್ತು ಬಿಟ್ಟು ಕಾಡಿನ ಕಡೆಗೆ ನಡೆಯುತ್ತಾರೆ. ಅಲ್ಲಿ ಒಂದು ಆಶ್ರಮ ಕಾಣುವುದು. ಅಲ್ಲಿರುವ ಋಷಿ ಮುನಿಗಳಿಗೆ ನಮಸ್ಕರಿಸುತ್ತಾರೆ, ಅವರು ದಂಪತಿಯ ದುಃಖಕ್ಕೆ ಕಾರಣ ಕೇಳಿದಾಗ ಈ ಪುತ್ರದಾ ಏಕಾದಶಿ ಕುರಿತು ತಿಳಿಸುತ್ತಾರೆ. ಅದರಂತೆ ಈ ವ್ರತ ಪಾಲಿಸಿದ ಮೇಲೆ ದಂಪತಿಗೆ ಸಂತಾಭಾಗ್ಯ ದೊರೆಯುವುದು. ಆದ್ದರಿಂದ ಮಕ್ಕಳಿಲ್ಲದವರು ಈ ವ್ರತ ಪಾಲಿಸಿದರೆ ಮಕ್ಕಳಾಗುವುದು ಎಂಬ ನಂಬಿಕೆ ಇದೆ.
ಈ ದಿನ ವ್ರತಕತೆ ಓದಿ ವಿಷ್ಣು ಸಹಸ್ರನಾಮ ಪಠಿಸಿ.



Click it and Unblock the Notifications
