Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶಂಖಚಕ್ರಧಾರಿ ತಿಮ್ಮಪ್ಪನಿಗೆ ಚಿನ್ನದ ಶಂಖ ಕಾಣಿಕೆ ನೀಡಿದ ನಾರಾಯಣ ಮೂರ್ತಿ ದಂಪತಿ: ಹಿಂದೂ ಧರ್ಮದಲ್ಲಿ ಶಂಖದ ಮಹತ್ವ
ಶಂಖಚಕ್ರಧಾರಿ ತಿಮ್ಮಪ್ಪನಿಗೆ ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖವನ್ನು ಅರ್ಪಿಸಿದ್ದಾರೆ. ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖ, ಆಮೆ ವಿಗ್ರಹವನ್ನು ಕಾಣಿಕೆಯಾಗಿ ನೀಡಿದ್ದಾರೆ.
ನಾರಾಯಣ ಮೂರ್ತಿ, ಸುಧಾಮೂರ್ತಿ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ
ನಾರಾಣಯಣ ಮೂರ್ತಿ, ಸುಧಾಮೂರ್ತಿ ನಮ್ಮ ಜೀವನದ ಪ್ರತಿಯೊಂದು ಸ್ತರಗಳಲ್ಲಿ ನಮಗೆ ಮಾದರಿಯಾಗಿದ್ದಾರೆ. ಉದ್ಯಮಿಯಾಗಿ ಮಾತ್ರವಲ್ಲ, ಆದರ್ಶ ದಂಪತಿಯಾಗಿ, ಆದರ್ಶ ಪೋಷಕರಾಗಿ, ಸನ್ನಡತೆಯಲ್ಲಿ, ಸರಳತೆಯಲ್ಲಿ ಹೀಗೆ ಪ್ರತಿಯೊಂದು ವಿಷಯದಲ್ಲೂ ಈ ದಂಪತಿ ಮಾದರಿಯಾಗಿದ್ದಾರೆ. ಇದೀಗ ಈ ದಂಪತಿಯ ದಾಂಪತ್ಯ ಜೀವನಕ್ಕೆ 45ನೇ ವರ್ಷ. ಹೀಗಾಗಿ ದಂಪತಿ ಜೋಡಿಯಾಗಿ ಬಂದು ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖ ಹಾಗೂ ಆಮೆಯನ್ನು ಕಾಣಿಕೆಯನ್ನಾಗಿ ಅರ್ಪಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಶಂಖದ ಮಹತ್ವ
ಪೌರಾಣಿಕೆ ನಂಬಿಕೆ ಪ್ರಕಾರ ಸಮುದ್ರ ಮಂಥನ ಸಮಯದಲ್ಲಿ ಶಂಖ ಹುಟ್ಟಿಕೊಂಡಿತ್ತು ಎಂದು ಹೇಳಲಾಗಿದೆ. ಶಂಖದಲ್ಲಿ ಎರಡು ವಿಧಗಳಿಗೆ ಎಡಬದಿ ಹಿಡಿಕೆಯ ಶಂಖ, ಬಲ ಬದಿ ಹಿಡಿಕೆಯ ಶಂಖ. ಬಲಬದಿ ಹಿಡಿಕೆಯ ಶಂಖವನ್ನು ಶುಭ ಎಂದು ಪರಿಗಣಿಸಲಾಗಿದ್ದು ಇದನ್ನು ಲಕ್ಷ್ಮಿ ಶಂಖ ಎಂದು ಕೂಡ ಕರೆಯುತ್ತಾರೆ.
ಹಿಂದೂ ಧರ್ಮದಲ್ಲಿ ಶಂಖದ ಮಹತ್ವ
ಶ್ರೀವಿಷ್ಣುವಿನ ಪಂಚ ಆಯುಧಗಳಲ್ಲಿ ಶಂಖ ಕೂಡ ಒಂದು ಎಂದು ಪರಿಗಣಿಸಲಾಗಿದೆ. ವಿಷ್ಣುವಿನ ಶಂಖವನ್ನು ಪಂಚಜನ್ಯ ಎಂದು ಕರೆಯಲಾಗುವುದು. ಈ ಶಂಖವು ಪಂಚ ಧಾತುಗಳನ್ನು ಹೊಂದಿದೆ. ಇದರಲ್ಲಿ ನೀರು, ಬೆಂಕಿ, ಭೂಮಿ, ಆಕಾಶ, ವಾಯು ಅಂಶಗಳಿದೆ.
ಶಂಖ ಸಂಪತ್ತು ಆಕರ್ಷಿಸುತ್ತದೆ
ಶಂಖ ಕುಬೇರ ಕೃಪೆ ಆಕರ್ಷಿಸುತ್ತದೆ. ಬಲ ಹಿಡಿಕೆಯ ಶಂಖ ಮನೆಯಲ್ಲಿದ್ದರೆ ಲಕ್ಷ್ಮಿ ಕೃಪೆ ಆ ಮನೆ ಮೇಲಿರುತ್ತದೆ, ಆ ಮನೆಯಲ್ಲಿ ಐಶ್ವರ್ಯ, ಸಂಪತ್ತು ವೃದ್ಧಿಸುವುದು.
ಶಂಖದ ಮಹತ್ವ
- ಶಂಖ ಶುದ್ಧತೆಯ ಸಂಕೇತವಾಗಿದೆ.
- ಶಂಖವನ್ನು ಪ್ರತೀ ಹಿಂದೂಗಳ ಮನೆಯಲ್ಲಿ ಇಡಲಾಗುವುದು.
- ಇದನ್ನು ಶುದ್ಧವಾದ ಕೆಂಪು ಬಟ್ಟೆಯಲ್ಲಿ ಇಡಬೇಕು ಇಲ್ಲದಿದ್ದರೆ ಬೆಳ್ಳಿ ಅಥವಾ ಮಣ್ಣಿನ ಮಡಿಕೆಯಲ್ಲಿ ಇಡಬೇಕು.
- ಸಾಮಾನ್ಯವಾಗಿ ಶಂಖದಲ್ಲಿ ನೀರನ್ನು ತುಂಬಿ ಇಡಲಾಗುವುದು.
- ಪೂಜೆಯ ವೇಳೆ ಆ ನೀರನ್ನು ಚಿಮುಕಿಸಲಾಗುವುದು
- ಶಂಖವನ್ನು ಊದಿದಾಗ ಮನೆಯಲ್ಲಿರುವ ಋಣಾತ್ಮಕ ಶಕ್ತಿ ಹೊರದೂಡಲ್ಪಡುತ್ತದೆ, ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರುತ್ತದೆ ಎಂದು ಹೇಳಲಾಗುವುದು.
ಶಂಖದಿಂದ ಆರೋಗ್ಯವೂ ವೃದ್ಧಿಸುವುದು
ಶಂಖದಿಂದ ದೊರೆಯುವ ಧಾರ್ಮಿಕ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಿರುತ್ತದೆ, ಆದರೆ ಇದರಿಂದ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ ಎಂಬುವುದು ಗೊತ್ತೇ?
ಶಂಖದಲ್ಲಿ ನೀರನ್ನು ಇಟ್ಟು ಆ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಅರಿಶಿಣ ಕಾಮಲೆ, ದಂತ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಗುಣ ಪಡಿಸಲು ಸಹಕಾರಿಯಾಗಿದೆ. ಶಂಖದಲ್ಲಿ ಕ್ಯಾಲ್ಸಿಯಂ, ರಂಜಕ, ಮೆಗ್ನಿಷ್ಯಿಯಂ, ರಂಜಕ ಇದ್ದು ದೇಹಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಇದರ ನೀರು ಥೈರಾಯ್ಡ್ ಗ್ರಂಥಿಗೂ ಒಳ್ಳೆಯದು.



Click it and Unblock the Notifications
