Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಚ್ಚರಿ ಆದ್ರು ಸತ್ಯ..! ಹೃದಯವೇ ಇಲ್ಲದೆ 555 ದಿನ ಬದುಕಿದ್ದ ಧೀರ..!!
ನಮ್ಮ ದೇಹದಲ್ಲಿ ಯಾವುದು ಅತೀ ಮುಖ್ಯ ಅಂದ್ರೆ ಮಕ್ಕಳು ಸಹ ಹೃದಯ ಎನ್ನುತ್ತಾರೆ. ಏಕಂದ್ರೆ ಹೃದಯದಿಂದ ಇಡೀ ದೇಹದ ಕಾರ್ಯ ನಡೆಯುತ್ತಿರುತ್ತೆ. ಹಾಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಕೂಡ. ಆದ್ರೆ ಇಲ್ಲೊಬ್ಬ ಹೃದಯವೇ ಇಲ್ಲದೆ ಬರೋಬ್ಬರಿ 555 ದಿನ ಬದುಕಿದ್ದ.
ಹೌದು.! ಇದೊಂದು ಅಚ್ಚರಿಯ ನಂಬಲಸಾಧ್ಯ ಘಟನೆಯಾಗಿದ್ದು, ಹೃದಯವಿಲ್ಲದೆ ಆತ ಬದುಕಿದ್ದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ..
ಮಿಚಿಗನ್‌ನ 25 ವರ್ಷದ ಯಪ್ಸಿಲಾಂಟಿ ನಿವಾಸಿ ಲಾರ್ಕಿನ್ ಹೃದಯ ಕಸಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ನವೆಂಬರ್ 2014ರಲ್ಲಿ ಆತನ ಹೃದಯವನ್ನು ಹೊರತೆಗೆಯಲಾಗಿತ್ತು. ಆದರೆ ಮತ್ತೊಂದು ಹೃದಯದ ಅವಶ್ಯಕತೆ ಅವನಿಗಿತ್ತು. ಆದರೆ ಬೇರೊಂದು ಆರೋಗ್ಯವಂತ ಹೃದಯ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ.

ಹೀಗಿರುವಾಗ ವೈದ್ಯಕೀಯ ಕ್ಷೇತ್ರವೊಂದು ಯಾರು ಕೇಳಿರದ, ನೋಡಿರದ ಸಾಹಸಕ್ಕೆ ಮುಂದಾಗಿತ್ತು. ಆತನಿಗೆ ಹೃದಯ ದಾನ ಮಾಡುವವರು ಸಿಗುವವರೆಗೂ ಆರ್ಟಿಫಿಷಿಯಲ್ ಹೃದಯ ಜೋಡಿಸಲು ಮುಂದಾದರು. ಮೊದಲು ಇದೊಂದು ಸಾಹಸ ಎನಿಸಿತ್ತು. ಜೊತೆಗೆ ಇದು ಯಶಸ್ವಿಯಾಗುತ್ತಾ ಇಲ್ಲವಾ? ಎಂಬುದು ಸಹ ವೈದ್ಯರಿಗೆ ತಿಳಿದಿರಲಿಲ್ಲ.
ಯಂತ್ರ ಹೇಗೆ ಕೆಲಸ ಮಾಡುತ್ತೆ?
ಲಾರ್ಕಿನ್‌ಗೆ ಸಹ ಬದುಕುತ್ತೇನೆ ಎಂಬ ಒಂದಿಷ್ಟು ನಂಬಿಕೆ ಇರಲಿಲ್ಲ. ಆದ್ರೆ ಹೃದಯ ದಾನಿಗಳು ಬರುವವರೆಗೂ ಆತ ಆಸ್ಪತ್ರೆಯಲ್ಲಿ ಉಳಿಯಲು ಬಯಸದೆ ಆರ್ಟಿಫಿಷಿಯಲ್ ಹೃದಯ ಜೋಡಣೆಗೆ ಒಪ್ಪಿಗೆ ನೀಡಿದ್ದ. ಈ ಡಿವೈಸ್‌ಗೆ ಸಿಂಕ್ ಆಕಾರ್ಡಿಯಾ ಸಾಧನ ಎನ್ನುತ್ತಾರೆ. ಒಂದು ಪುಟ್ಟ ಬ್ಯಾಗ್‌ನಂತಹ ಸಾಧನ ಇದಾಗಿದ್ದು ನೇರವಾಗಿ ದೇಹದೊಳಗೆ ಪೈಪ್ ಹೊರಟಿರುತ್ತದೆ. ಅಂದರೆ ಕೃತಕವಾಗಿ ಹೃದಯದಂತೆ ಇದು ಕೆಲಸ ಮಾಡುತ್ತದೆ. ರಕ್ತವನ್ನು ಪಂಪ್ ಮಾಡಲು ಎರಡು ಕೊಳವೆಗಳಿರುತ್ತವೆ. ಇದರ ಸಹಾಯದಿಂದ ಆತ 555 ದಿನಗಳ ಕಳೆದಿದ್ದ.
ಸದಾ ಬೆನ್ನಿಗೆ ಈ ಬ್ಯಾಗ್ ಹಾಕಿಕೊಂಡು ಆತ ಸುತ್ತಾಡುತ್ತಿದ್ದ. ಗೆಳೆಯರ ಜೊತೆ ಸಣ್ಣ ಪುಟ್ಟ ಆಟಗಳ ಆಡುತ್ತಿದ್ದ. ಆದರೆ 2016ರಲ್ಲಿ ಆತನಿಗೆ ಮತ್ತೊಂದು ಹೃದಯ ಕಸಿ ಮಾಡಲು ವೈದ್ಯರು ಮುಂದಾದರು. ಅಲ್ಲದೆ ಕೃತಕ ಹೃದಯದಿಂದ ಆಯ ಮುಕ್ತಿ ಪಡೆದು ಹೊಸ ಹೃದಯ ಕಸಿ ಶಸ್ತ್ರ ಚಿಕಿತ್ಸೆ ನೆರವೇರಿದ ಬಳಿಕ ಎಂದಿನಂತಾದ.
ಹೃದಯ ಸಮಸ್ಯೆ ಗೊತ್ತೇ ಇರಲಿಲ್ಲ!
ಲಾರ್ಕಿನ್ 9 ವರ್ಷಗಳ ಹಿಂದೆ ಬಾಸ್ಕೆಟ್‌ಬಾಲ್ ಆಡುವಾಗ ಕುಸಿದು ಬಿದ್ದಿದ್ದ, ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿಯವರೆಗೂ ಆತನ ಹೃದಯ ಇನ್ನು ಮುಂದೆ ಕೆಲಸ ಮಾಡದಷ್ಟು ಹಾಳಾಗಿದೆ ಎಂಬುದು ಅರಿವಿಗೆ ಬಂದಿರಲಿಲ್ಲ. ಲಾರ್ಕಿನ್‌ಗೆ ಫ್ಯಾಮಿಲಿಯಲ್ ಕಾರ್ಡಿಯೊಮಿಯೊಪತಿ ಎಂಬ ಆನುವಂಶಿಕ ಹೃದಯ ಕಾಯಿಲೆ ಇತ್ತು. ಈ ಕಾಯಿಲೆ ಅನುವಂಶಿಕಾಗಿ ಬಂದಿದ್ದರಿಂದ ಆತ ಸಹ ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು.
ಕೃತಕ ಹೃದಯದೊಂದಿಗೆ ರೋಗಿಯು ದೀರ್ಘಕಾಲ ಬದುಕಿರುವುದು ಇದೇ ಮೊದಲಲ್ಲ, ಆದರೆ ಪೋರ್ಟಬಲ್ ಸಾಧನದೊಂದಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಸೇರಿದ್ದ ಮೊದಲಿಗ ಲಾರ್ಕಿನ್ ಆಗಿದ್ದ. ಲಾರ್ಕಿನ್‌ನ ಎದೆಯಲ್ಲಿರುವ ಸಿನ್‌ಕಾರ್ಡಿಯಾ ತಾತ್ಕಾಲಿಕ ಕೃತಕ ಹೃದಯವು ಅದರ ಕೋಣೆಗಳು ಮತ್ತು ನಾಲ್ಕು ಕವಾಟಗಳನ್ನು ಒಳಗೊಂಡಿತ್ತು. ಎರಡು ಟ್ಯೂಬ್‌ಗಳು, ಪಕ್ಕೆಲುಬಿನ ಕೆಳಗೆ ಸ್ಟಾನ್‌ನ ದೇಹದ ಎಡಭಾಗದಿಂದ ನಿರ್ಗಮಿಸಿ, ಕೃತಕ ಹೃದಯವನ್ನು ಫ್ರೀಡಮ್ ಡ್ರೈವರ್ ಎಂಬ 13-ಪೌಂಡ್ ಯಂತ್ರಕ್ಕೆ ಸಂಪರ್ಕಿಸಲಾಗಿತ್ತು.
ತಾತ್ಕಾಲಿಕವಾಗಿ, ಲಾರ್ಕಿನ್ ಅವರ ದೇಹದ ಭಾಗವಾಗಿರುವ ತಂತ್ರಜ್ಞಾನವು 2001ರಲ್ಲಿ ವಿಶ್ವದ ಮೊದಲ ರೋಗಿಗೆ ಅಳವಡಿಸಲಾಗಿತ್ತು. ಇದಾದ ಬಳಿಕ ಈ ಯಂತ್ರದಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿತ್ತು. ಆದರೆ ಇಷ್ಟು ದೀರ್ಘ ಸಮಯದ ವರೆಗೆ ಬೇರೆ ಯಾರು ಈ ಯಂತ್ರದ ಸಹಾಯದಿಂದ ಜೀವನ ನಡೆಸಿರಲಿಲ್ಲ.



Click it and Unblock the Notifications
