Latest Updates
-
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್
ಬೀದಿ ಮಕ್ಕಳಿಗೆ ಫೈವ್ ಸ್ಟಾರ್ ಹೋಟೆಲ್ ಕೊಡಿಸಿದ ವ್ಯಕ್ತಿ: ಹೃದಯಸ್ಪರ್ಶಿ ವೀಡಿಯೋ ವೈರಲ್
ಊಟದ ಬೆಲೆ ಏನೆಂಬುವುದು ಹಸಿದವರಿಗಷ್ಟೇ ಗೊತ್ತಿರುತ್ತದೆ ಎಂಬುವುದು ಸುಳ್ಳಲ್ಲ, ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಮಕ್ಕಳಿಗೆ ಫೈವ್‌ಸ್ಟಾರ್ ಹೋಟೆಲ್ ಊಟ ಸಿಕ್ಕಾಗ ಎಷ್ಟು ಖುಷಿಯಾಗಿರಬೇಡ, ಬಡ ಮಕ್ಕಳ ಆ ಸಂತೋಷದ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಮಾನವೀಯತೆ ಸಾರುವ ಈ ವೀಡಿಯೋ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಕೂಡ ಸಾರುತ್ತದೆ.

ಆತ ಕಾವಲ್‌ಚಬ್ಬರ್ರ ಎಂಬ ವ್ಯಕ್ತಿ ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಸಿಗ್ನಿಲ್ ಬರುತ್ತದೆ, ಅಲ್ಲಿ ಕಾರು ನಿಂತಿರುವಾಗ ಒಂದಿಷ್ಟು ಬಡ ಹುಡುಗರು ಬಂದು ಕಾರನ್ನು ಒರೆಸುತ್ತಾರೆ, ಹೀಗೆ ಕಾರು ಒರೆಸಿದಾಗ ಜನರು ಚಿಲ್ಲರೆ ಕಾಸು ಕೊಡುತ್ತಾರೆ, ಆ ಕಾಸಿನಿಂದ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಅವರದ್ದು.
ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದಾಗ ಇಂಥ ದೃಶ್ಯಗಳು ಕಣ್ಣಿಗೆ ಬೀಳುತ್ತದೆ, ಕೆಲವರು ಪೆನ್ನು ಮಾರುತ್ತಿತ್ತಾರೆ, ಕೆಲವರು ಆಟಿಕೆ ಹೀಗೆ ತಮ್ಮ ಹೊಟ್ಟೆ ಪಾಡಿಗಾಗಿ ಸಿಗ್ನಲ್ ಗ್ಯಾಪ್‌ನಲ್ಲಿ ಕಷ್ಟಪಡುತ್ತಿರುತ್ತಾರೆ. ಈ ಮಕ್ಕಳು ಕೂಡ ಅಷ್ಟೇ ಕಾರು ಒರೆಸಿ ಬರುವ ಅಲ್ಪ-ಸ್ವಲ್ಪ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುತ್ತಾರೆ.
ಚಬ್ರರ್ರ ಅವರಿಗೆ ಈ ಮಕ್ಕಳನ್ನು ನೋಡಿದಾಗ ಅಯ್ಯೋ ಪಾಪ ಅನಿಸುತ್ತೆ, ಅಲ್ಲಿಂದ ಸ್ವಲ್ಪ ದೂರದಲ್ಲಿ ಫೈವ್‌ಸ್ಟಾರ್ ಹೋಟೆಲ್ ಇರುತ್ತದೆ, ಅಲ್ಲಿಗೆ ಕರೆದುಕೊಂಡು ಹೋಗಿ ಊಟ ಕೊಡಿಸಲು ಯೋಚಿಸಿ ಕಾರು ಹತ್ತಲು ಹೇಳುತ್ತಾರೆ. ಅವರು ಹಾಗೆ ಹೇಳಿದಾಗ ಆ ಐಷಾರಾಮಿ ಕಾರು ಹತ್ತಮು ಹಿಂದೇಟು ಹಾಕುವ ಮಕ್ಕಳು ನಂತರ ಹತ್ತುತ್ತಾರೆ, ಅವರನ್ನು ಫೈವ್ ಸ್ಟಾರ್ ಹೋಟೆಲ್‌ಗೆ ಕರೆದುಕೊಂಡು ಹೋಗುತ್ತಾರೆ, ಆ ಮಕ್ಕಳಿಗೆ ಒಂದು ಅದ್ಭುತ ಪ್ರಪಂಚಕ್ಕೆ ಬಂದಂತೆ ಅನಿಸುತ್ತದೆ, ಅವರ ಕಣ್ಣಿಗೆ ಅದು ಸ್ವರ್ಗದಂತೆ ಭಾಸವಾಗಿದೆ ಎಂಬುವುದನ್ನು ಅವರ ಕಣ್ಣುಗಳೇ ಹೇಳುತ್ತಿವೆ, ನಂತರ ಆ ಮಕ್ಕಳಿಗೆ ಒಳ್ಳೆಯ ಭೋಜನ ಬಡಿಸಲಾಯಿತು.
ಆ ಬಡ ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ, ಜೀವನದಲ್ಲಿ ಇದುವರೆಗೆ ತಿಂದಿರದ ಆಹಾರವನ್ನು ತಿಂದ ಅವರು ಆ ದಿನವನ್ನು ಅವರ ಜೀವನದಲ್ಲಿಯೇ ಮರೆಯಲ್ಲ.
ಅವರು ಈ ವೀಡಿಯೋವನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿದ್ದು ಜೊತೆಗೆ ಕೂತು ಅವರ ಸಂತೋಷವನ್ನು ನೋಡುವಾಗ ತುಂಬಾನೇ ಖುಷಿಯಾಗಿತ್ತು, ಅಂದರ ಸುಂದರ ಕ್ಷಣ ಸೃಷ್ಟಿ ಆಗಿದ್ದಕ್ಕೆ ತುಂಬಾನೇ ಖುಷಿಯಾಯ್ತ, ಏಕೆಂದರೆ ಅವರ ಖುಷಿ ನಿಜವಾಗಿತ್ತು, ನಾವು ಮಾತ್ರ ಗೆಲ್ಲುವುದು ನಿಜವಾದ ಗೆಲುವಲ್ಲ, ಬೇರೆಯವರ ಕನಸು ನನಸು ಮಾಡುವುದೇ ಜಯ ಎಂಬುವುದಾಗಿ ಬರೆದುಕೊಂಡಿದ್ದಾರೆ,.
ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾ ಗಮನ ಸೆಳೆದಿದ್ದು ಇವರು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ, ಇವರು ಈ ರೀತಿ ಮಾಡುವ ಮೂಲಕ ಮತ್ತೊಂದಿಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ.
ಇವರು ಮಾಡಿದ್ದು ತುಂಬಾ ಒಳ್ಳೆಯ ಕಾರ್ಯ, ಎಷ್ಟೋ ಮಕ್ಕಳು ಒಂದು ಹೊತ್ತು ಊಟವಿಲ್ಲದೆ ಕಷ್ಟಪಡುತ್ತಿರುತ್ತಾರೆ ಅಂಥವರಿಗೆ ಬದುಕು ಕಟ್ಟಿಕೊಳ್ಳಲು ಸಾಮರ್ಥ್ಯವಿರುವವರು ಸಹಾಯ ಮಾಡಿದರೆ ಖಂಡಿತ ಇಂಥ ಮಕ್ಕಳ ಬಾಳು ತುಂಬಾ ಸುಂದರವಾಗುವುದು.
ಈ ವೀಡಿಯೋ ನೋಡಿದಾಗ ಸಾಮಾಜಿಕ ತಾಣದಲ್ಲಿ ನೋಡಿದ್ದ ಒಂದು ವೀಡಿಯೋ ನೆನಪಿಗೆ ಬರುತ್ತೆ
ಒಬ್ಬ ವಯಸ್ಸಾದ ಮಹಿಳೆ ದಾರಿಯಲ್ಲಿ ಕೂತು ಭಿಕ್ಷೆ ಬೇಡುತ್ತಿರುತ್ತಾಳೆ, ಅದನ್ನು ನೋಡಿ ವ್ಯಕ್ತಿಯೊಬ್ಬರು ಆಕೆಗೆ ಭಿಕ್ಷೆ ಹಾಕಲು ಬರುತ್ತಾರೆ, ಇನ್ನೇನು ಆ ತಾಯಿಗೆ ಹಣ ನೀಡಬೇಕು ಅಷ್ಟರಲ್ಲಿ ಅವರ ಮನಸ್ಸು ಬದಲಾಗುತ್ತೆ ಹಣ ಕೊಡಲ್ಲ, ಆ ತಾಯಿ ಮುಖ ಚಿಕ್ಕದಾಗುತ್ತೆ, ಆದರೆ ಸ್ವಲ್ಪ ಹೊತ್ತಿನಲ್ಲಿ ತೂಕದ ಯಂತ್ರ ತಂದುಕೊಟ್ಟು ಹಣ ಕೊಟ್ಟು ಹೋಗುತ್ತಾರೆ, ಎಲ್ಲರೂ ಬಂದು ತೂಕ ಚೆಕ್ ಮಾಡಿ ಹಣ ಕೊಟ್ಟು ಹೋಗುತ್ತಾರೆ...
ಸ್ವಲ್ಪ ದಿನಗಳು ಕಳೆದ ಮೇಲೆ ಆ ವ್ಯಕ್ತಿ ಒಂದು ಜ್ಯೂಸ್ ಅಂಗಡಿಗೆ ಹೋಗ್ತಾರೆ, ನೋಡಿದರೆ ಅದೇ ಮಹಿಳೆ, ಇವರು ಮಾಡಿದ ಚಿಕ್ಕ ಸಹಾಯದಿಂದ ಅವರ ಬದುಕು ಸುಂದರವಾಗಿ ರೂಪುಗೊಂಡಿತ್ತು, ಆ ತಾಯಿ ಇವರು ಕುಡಿದ ಜ್ಯೂಸ್‌ಗೆ ಹಣ ಪಡೆಯದೆ ನಗು ಬೀರುತ್ತಾರೆ.
ಈ ಎರಡು ಕತೆಗಳು ತುಂಬಾ ಸ್ಪೂರ್ತಿ ಕತೆಗಳಾಗಿದೆ ಅಲ್ಲವೇ? ನೀವು ಇಂಥ ಸಹಾಯ ಮಾಡಿದ್ದರೆ ನಮ್ಮೊಂದಿಗೆ ಕಮೆಂಟ್ ಮೂಲಕ ತಿಳಿಸಿ....



Click it and Unblock the Notifications