Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಗೆಲುವಿಗಾಗಿ ತಿರುವಣ್ಣಾಮಲೈಯ ಅರುಣಾಚಲೇಶ್ವರನಿಗೆ ಮೊರೆ ಹೋದ ಡಿಕೆಶಿ, ಈ ದೇವಾಲಯದ ವಿಶೇಷತೆಯೇನು?
ಕರ್ನಾಟಕ ಚುನಾವಣೆ ಫಲಿತಾಂಶ ನೋಡಿದಾಗ ಕಾಂಗ್ರೆಸ್ ಸ್ಪಷ್ಟಬಹುಮತ ಪಡೆದಿರುವುದರಿಂದ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿಯಲಿದೆ. ಪಕ್ಷವನ್ನು ಬಲಪಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶ್ರಮ ಎದ್ದು ಕಾಣುತ್ತಿದೆ.
ಈ ಬಾರಿ ಮತದಾರ ಕಾಂಗ್ರೆಸ್ ಕಡೆಗೆ ಒಲವು ತೋರಿಸಿದ್ದಾನೆ. ಇಂದು ಮತ ಎಣಿಕೆಗೆ ಮೊದಲೇ ಬಹುತೇಕ ರಾಜಕೀಯ ನಾಯಕರು ದೇವರ ಮೊರೆಹೋಗಿದ್ದರು. ಡಿಕೆ ಶಿವಕುಮಾರ್ ಪತ್ನಿ ಸಮೇತ ತಮಿಳುನಾಡಿನ ತಿರುವಣ್ಣಾಮಲೈಯ ಅರುಣಾಚಲೇಶ್ವರನಿಗೆ ಪೂಜೆ ಸಲ್ಲಸಿದ್ದರು. ಈ ದೇವಾಲಯದ ಮಹಿಮೆ ಬಗ್ಗೆ ತಿಳಿಯೋಣ ಬನ್ನಿ:

ತಮಿಳುನಾಡಿನಲ್ಲಿರುವ ಶಿವನ ದೇವಾಲಯ
ಅರುಣಾಚಲೇಶ್ವರ ದೇವಾಲಯವು ತಮಿಳು ನಾಡಿನ ತಿರುವಣ್ಣ ಬೆಟ್ಟದಲ್ಲಿದೆ. ಹಿಂದೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಶಿವ ದೇವಾಲಯದಲ್ಲಿ ಶಿವ ಲಿಂಗದ ಜೊತೆಗೆ ಪಾರ್ವತಿ ದೇವಿಯನ್ನು ಆರಾಧಿಸಲಾಗುವುದು. ಈ ದೇವಾಲಯಕ್ಕೆ ಇಂದು ಡಿಕೆಶಿ ಪತ್ನಿ ಸಮೇತ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಈ ದೇವಾಲಯದ ವಿಶೇಷತೆ ಬಗ್ಗೆ ನೋಡುವುದಾದರೆ:
ಈ ದೇವಾಲಯವನ್ನು ಅಗ್ನಿ ಪ್ರತೀಕವೆಂದು ಭಾವಿಸಲಾಗಿದೆ, ಇಲ್ಲಿರುವ ಶಿವಲಿಂಗವನ್ನುನ ಅಗ್ನಿ ಲಿಂಗವೆಂದು ಕರೆಯುತ್ತಾರೆ. ಇದು ದೇವಾಲಯದಲ್ಲಿ ಅತ್ಯಂತ ದೊಡ್ಡ ದೇವಾಲಯ ಇದಾಗಿದೆ. ಸುಮಾರು ಹತ್ತು ಹೆಕ್ಟೇರ್‌ನಷ್ಟು ವಿಸ್ತೀರ್ಣದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಇಲ್ಲಿ ನಾಲ್ಕು ಗೋಪುರಗಳಿದ್ದು ಈ ದೇವಾಲಯದಲ್ಲಿರುವ ಪೂರ್ವದ ಗೋಪುರ 66 ಮೀಟರ್ ಎತ್ತರವಿದೆ, ಈ ಗೋಪುರ ಭಾರತದ ಎತ್ತರದ ಗೋಪುರವಾಗಿದೆ.
ಈ ದೇವಾಲಯದ ಬಗ್ಗೆ ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ಒಮ್ಮೆ ಶಿವ-ಪಾರ್ವತಿ ಕುಳಿತು ಮಾತನಾಡುತ್ತಿರುವಾಗ ಪಾರ್ವತಿ ದೇವಿಗೆ ತಮಾಷೆ ಮಾಡಬೇಕೆಂದು ಅನಿಸುವುದ, ಹಾಗಾಗಿ ಶಿವನ ಕಣ್ಣುಗಳನ್ನು ಮುಚ್ಚುತ್ತಾಳೆ. ಆವಾಗ ಇಡೀ ಲೋಕಕ ಕತ್ತಲಾಗುತ್ತೆ, ರಾಕ್ಷಸರ ಅಟ್ಟಹಾಸ ಹೆಚ್ಚಾಗುವುದು, ತ್ರಿಲೋಕದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವುದು. ಶಿವನು ಕಣ್ಣುಗಳನ್ನು ತೆರೆಯದೆ ಮುಚ್ಚಿಯೇ ಇರುತ್ತಾನೆ, ಆವಾಗ ದೇವಾನು ದೇವತೆಗಳು ಬಂದು ಪಾರ್ವತಿ ಬಳಿ ಬೇಡಿಕೊಳ್ಳುತ್ತಾರೆ. ಪಾರ್ವತಿಯು ಶಿವನನ್ನು ಕಣ್ತೆರೆಯುವಂತೆ ಭಕ್ತಿಯಿಂದ ಪ್ರಾರ್ಥಿಸುತ್ತಾಳೆ. ಇದರಿಂದ ಪ್ರಸನ್ನನಾದ ಶಿಬವ ಗುಡ್ಡವೊಂದರಲ್ಲಿ ಅತ್ಯಂತ ತೇಜಸ್ಸಿನಿಂದ ಕೂಡಿದ ಪ್ರಭೆಯೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆವಾಗ ಮತ್ತೆ ಜಗತ್ತಿಗೆ ಬೆಳಕು ಬರುತ್ತದೆ, ಶಿವನು ಈ ರೀತಿ ಪ್ರತ್ಯಕ್ಷವಾದ ಬೆಟ್ಟವೇ ತಿರುವಣ್ಣಮಲೈ (ಮಲೈ ಎಂದರೆ ತಮಿಳಿನಲ್ಲಿ ಬೆಟ್ಟವೆಂದರ್ಥ).
ಇತಿಹಾಸ: ಇತಿಹಾಸದ ಪ್ರಕಾರ ಈ ದೇವಾಲಯವನ್ನು ಜೋಳರು 9ನೇ ಶತಮಾನದಲ್ಲಿ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.
ಈ ದೇವಾಲಯದ ಮಹಿಮೆ
* ಈ ಶಿವನ ದೇವಾಲಯಕ್ಕೆ ಪ್ರತಿನಿತ್ಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರ.
* ಬೇಡಿದ್ದನ್ನು ನೆರವೇರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.
* ತುಂಬಾ ಭಕ್ತಿಯಿಂದ ಬಂದು ಬೇಡಿದರೆ ಇಷ್ಟಾರ್ಥಗಳು ನೆರವೇರುವುದು.
ಪೂಜಾ ಸಮಯ:
* ಈ ದೇವಾಲಯ ಬೆಳಗ್ಗೆ 5 ಗಂಟೆಗೆ ತೆರೆಯುತ್ತದೆ
ಬೆಳಗ್ಗೆ 5:30, 6, 8:30ಕ್ಕೆ ವಿಶೇಷ ಪೂಜೆ ಇರಲಿದೆ.
* ನಂತರ11 ಗಂಟೆ, ಮಧ್ಯಾಹ್ನ12:30. 3:30, ಸಂಜೆ 6 ಗಂಟೆಗೆ ಪೂಜೆ ಇರಲಿದೆ.
* ರಾತ್ರಿ ಹೊತ್ತಿನಲ್ಲಿ 7:30ಕ್ಕೆ, 9 ಗಂಟೆಗೆ ಹಾಗೂ 9:30ಕ್ಕೆ ವಿಶೇಷ ಪೂಜೆ ಇರಲಿದೆ.



Click it and Unblock the Notifications
