Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜುಲೈ 17ಕ್ಕೆ ಗೌರಿ ಅಮವಾಸ್ಯೆ, ಈ ದಿನ ಗೌರಿ ಪೂಜೆಯ ಮಹತ್ವವೇನು? ಪೂಜಾ ವಿಧಿಗಳೇನು?
ಜುಲೈ 17ಕ್ಕೆ ಆಷಾಢ ಅಮವಾಸ್ಯೆ. ಹಲವು ಕಾರಣಗಳಿಂದಾಗಿ ಈ ದಿನ ತುಂಬಾ ಪ್ರಾಮುಖ್ಯತೆ ಹೊಂದಿದೆ. ಈ ದಿನ ಭೀಮನ ಅಮವಾಸ್ಯೆ ಆಚರಿಸಲಾಗುವುದು, ಪಿತೃ ತರ್ಪಣ ಮಾಡಲಾಗುವುದು, ಕಾಳ ಸರ್ಪ ದೋಷವಿದ್ದರೆ ಅದಕ್ಕೆ ಪರಿಹಾರ ಮಾಡಲಾಗುವುದು ಹೀಗೆ ಹಲವು ಕಾರಣಗಳಿಂದ ತುಂಬಾನೇ ಪ್ರಾಮುಖ್ಯತೆ ಹೊಂದಿದೆ. ಇನ್ನು ಈ ಅಮವಾಸ್ಯೆಯನ್ನು ದಿವಾಸಿ ಅಮವಾಸ್ಯೆಯೆಂದು ಕೂಡ ಆಚರಿಸಲಾಗುವುದು.
ಈ ದಿವಾಸಿ ಅಮವಾಸ್ಯೆಯಂದು ಗೌರಿ ಪೂಜೆ ಮಾಡಲಾಗುವುದು, ಆದ್ದರಿಂದ ಈ ಅಮವಾಸ್ಯೆಯನ್ನು ಗೌರಿ ಅಮವಾಸ್ಯೆ ಎಂದು ಕರಿಯಲಾಗುವುದು. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ದಿವಾಸಿ ಅಮವಾಸ್ಯೆ ತಿಥಿ
ಗೌರಿ ಅಮವಾಸ್ಯೆ ಜುಲೈ 16ರಿಂದ ಪ್ರಾರಂಭವಾಗಿ ಜುಲೈ 17ಕ್ಕೆ ಮುಕ್ತಾಯವಾಗುತ್ತದೆ.
ಗೌರಿ ಅಮವಾಸ್ಯೆ
ಈ ಅಮವಾಸ್ಯೆಯೆಂದು ಗೌರಿಗೆ ಪೂಜೆಯನ್ನು ಮಾಡಲಾಗುವುದು. ಈ ಪೂಜೆ ಮಾಡುವುದರಿಂದ ಕುಟುಂಬಕ್ಕೆ ಹಾಗೂ ಮಕ್ಕಳಿಗೆ ಒಳಿತಾಗುವುದು ಎಂಬ ನಂಬಿಕೆಯಿದೆ, ಹಾಗಾಗಿ ಮಹಿಳೆಯರು ಈ ದಿನ ಗೌರಿ ಪೂಜೆ ಮಾಡುತ್ತಾರೆ.
ಈ ದಿನ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು
ಈ ದಿನ ಕರ್ನಾಟಕದ ವಿವಿಧ ದೇವಾಲಯಗಳಲ್ಲಿ ದೇವಿಗೆ ರುದ್ರಾಭಿಷೇಕ, ಕುಂಕುಮಾಭಿಷೇಕ, ಬಿಲ್ವಾರ್ಚಾನೆ, ದೇವಿಗೆ ನಿಂಬೆಹಣ್ಣಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ದೇವಿಯ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಎಂದಿಗಿಂತಲೂ ಹೆಚ್ಚು ಅಧಿಕವಿರುತ್ತದೆ.
ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಗೌರಿದಾರ ಕಟ್ಟಿಕೊಳ್ಳಬೇಕು
ಮಹಿಳೆಯರು ಗೌರಿಗೆ ಪೂಜೆಯನ್ನು ಸಲ್ಲಿಸಿದ ಬಳಿಕ 9 ಗಂಟುಗಳ ಪವಿತ್ರ ದಾರವಾದ ಗೌರಿ ದಾರವನ್ನು ತಮ್ಮ ಬಲಗೈಗೆ (ಬಲ ಮಣಿಕಟ್ಟಿಗೆ) ಕಟ್ಟಬೇಕು. ಈ ದಾರವನ್ನು ಕಟ್ಟುವುದರಿಂದ ಗೌರಿ ಮಾತೆಯ ಆಶೀರ್ವಾದ ದೊರೆಯಲಿದೆ.
ಈ ದಿನ ಮಹಿಳೆಯರಿಗೆ ಭೀಮನ ಅಮವಾಸ್ಯೆ ಕಾರಣದಿಂದಲೂ ತುಂಬಾನೇ ಪ್ರಾಮುಖ್ಯತೆಯಾದ ದಿನವಾಗಿದೆ
ಈ ದಿನ ಮಹಿಳೆಯರು ಗೌರಿಯನ್ನು ಮಾತ್ರವಲ್ಲ ಶಿವ-ಪಾರ್ವತಿಯನ್ನು ಆಚರಿಸಲಾಗುವುದು. ಶಿವ ಪಾರ್ವತಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಗಂಡನ ಪಾದಗಳಿಗೆ ಪಾದ ಪೂಜೆ ಮಾಡಿ ಅವರಿಂದ ಆಶೀರ್ವಾದ ಪಡೆಯುವ ಪದ್ಧತಿ ಇದೆ.
* ಈ ದಿನ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ನಂತರ ರಂಗೋಲಿ ಹಾಕಿ.
* ನಂತರ ಮರದ ಹಲಗೆ ಅಥವಾ ಪೀಠ ಇಟ್ಟು ಮಂಗಳ ಗೌರಿ ಮೂರ್ತಿ ಜೊತೆಗೆ ತಟ್ಟೆಯಲ್ಲಿ ಅಕ್ಕಿ ಹಾಕಿ ಎರಡು ಮಣ್ಣಿನ ಅಥವಾ ಬೆಳ್ಳಿಯ ದೀಪವನ್ನು ಇಡಿ.
* ನಂತರ ಅದೇ ತಟ್ಟೆಯಲ್ಲಿ 9 ವೀಳ್ಯೆದೆಲೆ ಹಾಗೂ 9 ಗಂಟಿನ ದಾರವನ್ನು ಇಡಿ.
* ದೇವಿಗೆ ನೈವೇದ್ಯವಾಗಿ ಕಡಬು ಇಡಬಹುದು. ಎಣ್ಣೆಯಲ್ಲಿ ಕರಿಯಬೇಡಿ, ಹಬೆಯಲ್ಲಿ ಬೇಯಿಸಿದ ಕಡಬು ದೇವರಿಗೆ ಅರ್ಪಿಸಿ.
* 9 ಗಂಟಿನ ದಾರವನ್ನು ಅರಿಶಿಣ ಪೇಸ್ಟ್‌ನಲ್ಲಿ ಅದ್ದಿ ನಂತರ ಆ ದಾರವನ್ನು ಬಲಗೈಗೆ ಕಟ್ಟಿಕೊಳ್ಳಿ.
* ದೇವಿಯ ಮಂತ್ರ ಅಥವಾ ಹಾಡು ಹೇಳುವ ಮೂಲಕ ದೇವರಿಗೆ ಆರತಿ ಎತ್ತಿ.
ಹೆಣ್ಮಕ್ಕಳು ಗಂಡ-ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಗೌರಿ ಪೂಜೆಯನ್ನು ಮಾಡುತ್ತಾರೆ.



Click it and Unblock the Notifications
