Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಜುಲೈ 8-17: ಈ ಸಮಯದಲ್ಲಿ ಏಕಾದಶಿ, ಆಷಾಢ ಅಮವಾಸ್ಯೆ ಸೇರಿ ಈ ಪ್ರಮುಖ ವ್ರತಗಳಿವೆ
ಜುಲೈ 08-17ರವರೆಗೆ ಬರುವ ಹಬ್ಬಗಳು, ವ್ರತಗಳ ಬಗ್ಗೆ ನೋಡುವುದಾದರೆ ಉತ್ತರ ಭಾರತದ ಕಡೆ ಶ್ರಾವಣ ಮಾಸ ಶುರುವಾಗಿದೆ, ಕರ್ನಾಟಕದಲ್ಲಿ ಆಷಾಢ ಮಾಸ ಮುಗಿಯಲಿದೆ(ಜುಲೈ 17ಕ್ಕೆ ಮುಗಿಯಲಿದೆ) ಕರ್ನಾಟಕದ ಇನ್ನು ಕೆಲವು ಕಡೆ ಆಟಿ ಮಾಸ ಜುಲೈ 17ರಿಂದ ಪ್ರಾರಂಭವಾಗಿ ಆಗಸ್ಟ್ 17ರವರೆಗೆ ಇರಲಿದೆ. ಆದ್ದರಿಂದ ಕೆಲವು ಆಷಾಢ ಪದ್ಧತಿಗಳು ಮುಂದುವರೆಯಲಿದೆ, ಇನ್ನು ಕೆಲವರಿಗೆ ಶ್ರಾವಣ ಮಾಸ ಆಚರಣೆ...
ಈ ವಾರದಲ್ಲಿ ಬರುವ ಪ್ರಮುಖ ಹಬ್ಬಗಳು, ವ್ರತಗಳ ಲಿಸ್ಟ್ ಇಲ್ಲಿ ನೀಡಲಾಗಿದೆ ನೋಡಿ:

ಜುಲೈ 9, ಭಾನುವಾರ
ಮಾಸಿಕ ಕೃಷ್ಣ ಜನ್ಮಾಷ್ಟಮಿ
ಭಾನು ಸಪ್ತಮಿ
ಜುಲೈ 11 (ಉತ್ತರ ಭಾರತದಲ್ಲಿ 2ನೇ ಮಂಗಳ ಗೌರಿ ವ್ರತ)
ಜುಲೈ 13: ಕಾಮಿಕ ಏಕಾದಶಿ
ಜುಲೈ 14: ಪ್ರದೋಷ ವ್ರತ
ಜುಲೈ 15: ಮಾಸಿಕ ಶಿವರಾತ್ರಿ
ಜುಲೈ 17: ಆಷಾಢ ಅಮವಾಸ್ಯೆ
ಈ ದಿನಗಳಲ್ಲಿ ಕರ್ನಾಟಕದಲ್ಲಿ ಆಚರಿಸುವ ಪ್ರಮುಖ ವ್ರತಗಳು
ಕಾಮಿಕ ಏಕಾದಶಿ: ಕಾಮಿಕ ಏಕಾದಶಿಯು ಆಷಾಢ ಮಾಸದ ಕೊನೆಯ ಏಕಾದಶಿಯಾಗಿದೆ. ಈ ಏಕಾದಶಿ ಬಳಿಕ ಶ್ರಾವಣ ಮಾಸ ಪ್ರಾರಂಭ. ಚಾತುರ್ಮಾಸದ ಮೊದಲ ಏಕಾದಶಿಯಾಗಿದೆ. ಯಾರು ಈ ಏಕಾದಶಿಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿದೆ. ಈ ವರ್ಷ ಜುಲೈ 13ರಂದು ಆಚರಿಸಲಾಗುವುದು.
ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರ ಅರ್ಧಕ್ಕೆ ಸ್ಥಗಿತಗೊಂಡ ಕೆಲಸಗಳಿದ್ದರೆ ಅದು ಪೂರ್ಣಗೊಳ್ಳುವುದು, ಸಂಕಷ್ಟಗಳು ದೂರಾಗುವುದು ಎಂಬ ನಂಬಿಕೆಯಾಗಿದೆ. ಈ ಏಕಾದಶಿ ಮಾಡುವುದರಿಂದ ಅಶ್ವಮೇಧ ಯಾಗದ ಫಲ ಸಿಗುವುದು ಎಂದು ಹೇಳಲಾಗುವುದು. ಈ ದಿನ ತುಳಸಿಯನ್ನು ಆರಾಧಿಸಿದರೆ ಒಳಿತಾಗುವುದು.
ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ
ಪ್ರದೋಷ ವ್ರತ ಮತ್ತು ಮಾಸಿಕ ಶಿವರಾತ್ರಿ ಶಿವ ಪೂಜೆಗೆ ಮೀಸಲಾದ ದಿನ. ಪ್ರತಿಮಾಸ ಎರು ಪ್ರದೋಷ ವ್ರತಗಳಿರುತ್ತದೆ, ಒಂದು ಕೃಷ್ಣ ಪಕ್ಷದಲ್ಲಿ, ಮತ್ತೊಂದು ಶುಕ್ಲ ಪಕ್ಷದಲ್ಲಿ. ಪ್ರದೋಷ ವ್ರತವನ್ನು ಪ್ರದೋಷ ಕಾಲದಲ್ಲಿ ಮಾತ್ರ ಮಾಡಲಾಗುವುದು. ಈ ದಿನ ಶಿವ-ಪಾರ್ವತಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಅದರಲ್ಲೂ ಮಹಿಳೆಯರಿಗೆ ಈ ಪೂಜೆ ವಿಶೇಷವಾದ ದಿನವಾಗಿದೆ. ಪ್ರದೋಷ ವ್ರತ ಮಾಡುವುದರಿಂದ ಶಿವಕೃಪೆಗೆ ಪಾತ್ರರಾಗುವಿರಿ.
ಆಷಾಢ ಅಮವಾಸ್ಯೆ
ಹಿಂದೂ ಧರ್ಮದಲ್ಲಿ ಆಷಾಢ ಅಮವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗಿದೆ. ಆಷಾಢ ಅಮವಾಸ್ಯೆ ಪಿತೃದೋಷ ನಿವಾರಣೆಗೆ ತುಂಬಾ ಮುಖ್ಯವಾದ ದಿನವಾಗಿದೆ. ಈ ದಿನ ಪಿತೃತರ್ಪಣ ಮಾಡುವುದರಿಂದ ಹಿರಿಯರಿಗೆ ಪುಣ್ಯ ಫಲ ಸಿಗುವುದು ಎಂದು ನಂಬಲಾಗಿದೆ. ಪಿತೃಗಳ ಆಶೀರ್ವಾದ ಇದ್ದರೆ ಮಾತ್ರ ಒಳಿತಾಗುವುದು.



Click it and Unblock the Notifications
