Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಈ ವರ್ಷ ಚಾತುರ್ಮಾಸ್ಯ ವ್ರತ ಯಾವಾಗ ಪ್ರಾರಂಭ? ಈ ವ್ರತದ ಮಹತ್ವವೇನು?
ಸನಾತನ ಧರ್ಮದಲ್ಲಿ ಚಾತುರ್ಮಾಸ್ಯಕ್ಕೆ ತುಂಬಾನೇ ಮಹತ್ವವಿದೆ. ಈ ಚಾತುರ್ಮಾಸವು ದೇವಶಯನಿ ಏಕಾದಶಿಯಂದ ಪ್ರಾರಂಭವಾಗುವುದು. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯವರಿಗೆ ನಾಲ್ಕು ತಿಂಗಳು ಶ್ರೀ ವಿಷ್ಣು ಯೋಗನಿದ್ರೆಗೆ ಜಾರುತ್ತಾನೆ.

ಈ ಸಮಯ ಧಾರ್ಮಿಕ ಕಾರ್ಯಗಳಲ್ಲಿ ಸಾಧನೆ ಮಾಡುವವರಿಗೆ ತುಂಬಾನೇ ಮಹತ್ವವಾಗಿದೆ. ಈ ಸಮಯದಲ್ಲಿ ಸಂನ್ಯಾಸಿಗಳು, ಸಾಧುಗಳು ಆಧ್ಯಾತ್ಮಿಕ ಸಾಧನೆಗೆ ಸಂಕಲ್ಪ ಮಾಡುತ್ತಾರೆ. ಈ ವರ್ಷ ಚಾತುರ್ಮಾಸ ವ್ರತ ಯಾವಾಗ ಪ್ರಾರಂಭ? ಚಾತುರ್ಮಾಸ ವ್ರತದ ಮಹತ್ವವೇನು? ವ್ರತ ನಿಯಮಗಳೇನು? ಧಾರ್ಮಿಕ ದೃಷ್ಟಿಯಿಂದ ಈ ನಾಲ್ಕು ತಿಂಗಳು ತುಂಬಾ ಮಹತ್ವವಾದದ್ದು ಏಕೆ ಎಂದು ನೋಡೋಣ ಬನ್ನಿ:
2023ರಲ್ಲಿ ಚಾತುರ್ಮಾಸ ಯಾವಾಗ?
ಚಾತುರ್ಮಾಸ ಶಯನಿ ಏಕಾದಶಿಯಿಂದ ಪ್ರಾರಂಭ, ಈ ವರ್ಷ ಜೂನ್ 29ರಂದು ಪ್ರಾರಂಭ. ಕಾರ್ತಿಕ ಹುಣ್ಣಿಮೆಯವರೆಗೆ ಅಂದರೆ ನವೆಂಬರ್ 23ರವರೆಗೆ ಚಾತುರ್ಮಾಸ ಅಥವಾ ಚಾತುರ್ಮಾಸ್ಯ ಆಚರಿಸಲಾಗುವುದು.
ಚಾತುರ್ಮಾಸ್ಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ
ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ ಚಾತುರ್ಮಾಸ್ಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಈ ಸಮಯದಲ್ಲಿ ಗೃಹ ಪ್ರವೇಶ, ಮದುವೆ, ನಾಮಕಾರಣ ಹೀಗೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. 4 ತಿಂಗಳವರೆಗೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.
ಚಾತುರ್ಮಾಸ್ಯ ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ
ಚಾತುರ್ಮಾಸ್ಯ ಪೂಜೆ, ಯಜ್ಞ, ಯಾಗಗಳಿಗೆ ತುಂಬಾನೇ ಶ್ರೇಷ್ಠವಾಗಿದೆ. ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ತುಂಬಾನೇ ಶುಭ ಫಲ ಸಿಗಲಿದೆ. ಚಾತುರ್ಮಾಸ್ಯ ವ್ರತವನ್ನು ಸಾಧು ಸಂತರು ತುಂಬಾ ಎದುರು ನೋಡುತ್ತಿರುತ್ತಾರೆ. ಆಷಾಢ ಹುಣ್ಣಿಮೆಯಂದು ವ್ಯಾಸ ಪೂಜೆ ಮಾಡುವ ಮೂಲಕ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭಿಸುತ್ತಾರೆ.
ಚಾತುರ್ಮಾಸ್ಯ ವ್ರತ
* ಆಧ್ಯಾತ್ಮದ ಸಾಧನೆಗೆ ಸೂಕ್ತವಾದ ಸಮಯ: ಸಾಮಾನ್ಯವಾಗಿ ಸಾಧು ಸಂತರು ಯಾವುದೇ ಸ್ಥಳದಲ್ಲಿ 3 ದಿನಗಳಿಗಿಂತ ಅಧಿಕ ಸಮಯ ಇರುವಂತಿಲ್ಲ. ಆದ್ದರಿಂದ ಸಂನ್ಯಾಸಿಗಳು ಭಿಕ್ಷೆ ಬೇಡುತ್ತಾ ಸಂಚರಿಸುತ್ತಲೇ ಇರುತ್ತಾರೆ. ಆದರೆ ಚಾತುರ್ಮಾಸ್ಯದಲ್ಲಿ ಹಾಗಲ್ಲ, ಸಂನ್ಯಾಸಿಗಳು ಮಠ, ಮಂದಿರಗಳಲ್ಲಿ ನೆಲೆ ನಿಂತು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿರುತ್ತಾರೆ.
* ಅಹಿಂಸೆಗೆ ಹೆಚ್ಚಿನ ಒತ್ತು ನೀಡಲಾಗುವುದು: ಈ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಿಂಸೆ ಮಾಡಬಾರದು ಎಂಬ ನಂಬಿಕೆ ಇದೆ. ಅಲ್ಲದೆ ಚಾತುರ್ಮಾಸದಲ್ಲಿ ಆ ನಾಲ್ಕು ತಿಂಗಳು ತುಂಬಾನೇ ಮಳೆ ಸುರಿಯುತ್ತಿರುತ್ತದೆ. ಈ ಸಮಯದಲ್ಲಿ ಹುಳ ಹುಪ್ಪಟೆಗಳು ಅಧಿಕ. ಈ ಸಮಯದಲ್ಲಿ ಸಾಧುಗಳು ಓಡಾಡುವುದರಿಂದ ಹುಳ ಹುಪ್ಪಟೆಗೆ ನೋವಾಗಬಾರದು ಎಂಬ ಕಾರಣದಿಂದ ಯಾವುದಾದರೂ ದೇವಾಲಯ ಅಥವಾ ಮಠದಲ್ಲಿ ನೆಲೆನಿಂತು ಆಧ್ಯಾತ್ಮಿಕ ಧ್ಯಾನ ಮಾಡುತ್ತಿರುತ್ತಾರೆ.
ಚಾತುರ್ಮಾಸ್ಯದ ವ್ರತದ ಸಮಯದಲ್ಲಿ ಆಹಾರಕ್ರಮ ಹೀಗಿರಬೇಕು ಎಂಬ ನಿಯಮ ಕೂಡ ಇದೆ:
* ಚಾತುರ್ಮಾಸ್ಯದ ಮೊದಲ ತಿಂಗಳವನ್ನು ಶಾಕವ್ರತ ಎಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ತರಕಾರಿ, ಹಣ್ಣುಗಳನ್ನು ಬಳಸಬಾರದು ಎಂದು ಹೇಳಲಾಗುವುದು. ಈ ಸಮಯದಲ್ಲಿ ತಿಮರೆ ಸೊಪ್ಪು, ಮಾವಿನಕಾಯಿ, ಕಾಳು ಮೆಣಸು ಈ ಬಗೆಯ ಆಹಾರವನ್ನು ಬಳಸುತ್ತಾರೆ. ಒಣ ಮೆಣಸು, ಹುಣಸೆ ಹಣ್ಣು ಇವುಗಳನ್ನು ಬಳಸುವುದಿಲ್ಲ.
ಈ ಸಮಯದಲ್ಲಿ ಕೆಸ, ಪತ್ರೊಡೆ, ತಜಂಕ್ ಸೊಪ್ಪು ಹೀಗೆ ಈ ಕಾಲದಲ್ಲಿಯೇ ಬಳಸುವ ಆಹಾರಗಳಿವೆ ಅವುಗಳನ್ನು ಹೆಚ್ಚಾಗಿ ಬಳಸುತ್ತಾರೆ.
ಎರಡನೇಯ ತಿಂಗಳ ವ್ರತವನ್ನು ಕ್ಷೀರವ್ರತವೆಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಹಾಲನ್ನು ಬಳಸುವುದಿಲ್ಲ.
ಮೂರನೇ ತಿಂಗಳ ವ್ರತವನ್ನು ದವ್ರತ ಎಂದು ಕರೆಯಲಾಗುವುದು. ಈ ಅವಧಿಯಲ್ಲಿ ಮೊಸರು ಬಳಸುವಂತಿಲ್ಲ.
ನಾಲ್ಕನೇ ತಿಂಗಳಿನಲ್ಲಿ ದ್ವಿದಳ ವ್ರತ ಎಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಹಸಿ ಮೆಣಸು, ಒಣ ಮೆಣಸು ಬಳಸಬಾರದು, ಕಾಳು ಮೆಣಸು ಬಳಸಬೇಕು.
ಆಧ್ಯಾತ್ಮಿಕ ಕಾರ್ಯಗಳಲ್ಲಿ ಗಮನಹರಿಸಲು ಸೂಕ್ತ ಸಮಯ
ಈ ನಾಲ್ಕು ತಿಂಗಳು ಭಗವಂತ ಯೋಗ ನಿದ್ರೆಯಲ್ಲಿರುತ್ತಾರೆ. ಈ ಸಮಯದಲ್ಲಿ ಪೂಜೆ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ. ಆದರೆ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ.



Click it and Unblock the Notifications
