Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮಂಗಳೂರಿನಲ್ಲಿ ಥೇಟ್ ಸಿನಿಮಾ ಸ್ಟೈಲ್‌ನಲ್ಲಿ KSRTC ಬಸ್‌ನ ಹಿಮ್ಮೆಟ್ಟಿಸಿದ ವೀಡಿಯೋ ವೈರಲ್
ಮಂಗಳೂರಿನಲ್ಲಿ ಒಬ್ಬರು ಕೆಎಸ್ ಆರ್‌ಟಿಸಿ ಡ್ರೈವರ್‌ಗೆ ತಕ್ಕ ಪಾಠ ಕಲಿಸುವ ಮೂಲಕ ಹೀರೋ ಆಗಿದ್ದಾರೆ. ರೋಡ್‌ನಲ್ಲಿ ಕುರ್ಚಿ ಹಾಕಿ ಕೂತು KSRTC ಬಸ್ ಅನ್ನು ಹಿಮ್ಮೆಟ್ಟಿಸುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಅವರು ಈ ರೀತಿ ವರ್ತಿಸಿದ್ದು ಅವರಿಗಾಗಿ ಅಲ್ಲ ಜನರ ಕಷ್ಟವನ್ನು ನೀಗಿಸಲು ಏಕಾಂಗಿಯಾಗಿ ಹೋರಾಡಿದ್ದಾರೆ, ಈ ದೃಶ್ಯ ನೋಡುತ್ತಿದ್ದಾರೆ ನಾವೆಲ್ಲಾ ಹೀಗಿರಬೇಕು, ಸಮಸ್ಯೆ ಅಂತ ಕೂರುವ ಬದಲು ಎದುರಿಸಬೇಕು ಎಂದನಿಸದೆ ಇರಲ್ಲ..

ವಿಷಯ ಏನಪ್ಪಾ ಅಂದರೆ ಮಂಗಳೂರು ಕಾಸರಗೋಡು ಹೋಗುವ KSRTC ಬಸ್ ಸರ್ವೀಸ್ ರೋಡ್‌ನಲ್ಲಿ ಬರದೆ ಹೆದ್ದಾರಿಯಲ್ಲಿ ಹೋಗಿ ಬಿಡುತ್ತಿತ್ತು, ಆಗಾಗ ಈ ರೀತಿ ಆಗುತ್ತಿದ್ದರಿಂದ ಬಸ್‌ನಲ್ಲಿ ಓಡಾಡುವವರಿಗೆ ತೊಂದರೆಯಾಗುತ್ತಿತ್ತು.ಈ ಕುರಿತು ಜನರು ತಮ್ಮ ಅಸಮಧಾನ ಹಲವು ಬಾರಿ ತೋಡಿಕೊಂಡಿದ್ದರೂ KSRTC ಬಸ್‌ನವರು ಮಾತ್ರ ಹೆದ್ದಾರಿಯಲ್ಲಿಯೇ ಹೋಗುತ್ತಿದ್ದರು. ಸರ್ವೀಸ್ ರೋಡ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದವರು ಬಸ್ ಬಂದಿಲ್ಲ ಅಂತ ಗೊಣಗುತ್ತಾ ನಿಲ್ಲುವ ಪರಿಸ್ಥಿತಿ ಇತ್ತು.
ಬಸ್ ಡ್ರೈವರ್‌ಗಳು ಈ ರೀತಿ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದನ್ನು ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಹಸೈನಾರ್ ಎಂಬವರು ಗಮನಿಸಿದ್ದರು, ಬಸ್‌ನವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ತಿರ್ಮಾನಿಸಿ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ.
ಬಸ್ ಬರುತ್ತಿದ್ದಾಗ ರಸ್ತೆ ಮಧ್ಯ ಸ್ಟೂಲ್ ಹಾಕಿ ಕೂತು ಬಸ್‌ನ ಮಾರ್ಗ ತಡೆದಿದ್ದಾರೆ. ಬಸ್‌ನವರಿಗೆ ಬೇರೆ ವಿಧಿ ಕಾಣದೆ ಬಸ್ ಅನ್ನು ರಿವರ್ಸ್ ತೆಗೆದುಕೊಂಡಾಗಿ ಸರ್ವೀಸ್ ರೋಡ್‌ನಲ್ಲಿ ಹೋಗಬೇಕಾಯ್ತು. ಈ ದೃಶ್ಯ ಮಾತ್ರ ಥೀಟ್ ಸಿನಿಮಾ ಶೈಲಿಯಂತೆಯೇ ಇದೆ. ಬಸ್ ರಿವರ್ಸ್‌ನಲ್ಲಿ ಹೋಗುತ್ತಿದ್ದಾಗ ಅವರು ಮುಂದೆ ಮುಂದೆ ಹೋಗುತ್ತಿದ್ದರು. ಈ ದೃಶ್ಯ ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ಜನರು ಸಮಸ್ಯೆ ಬಗೆಹರಿಯಲಿ ಎಂದು ಕೂತರೆ ಆಗಲ್ಲ, ತಪ್ಪು ಕಂಡಲ್ಲಿ ಪ್ರತಿಭಟಿಸಿದರೆ ಮಾತ್ರ ಸರಿಯಾಗುವುದು.
ಈ ವಿಷಯಕ್ಕೆ ಹಸೈನಾರ್ ಅವರಿಗೆ ಮೆಚ್ಚುಗೆ ಸೂಚಿಸಲೇಬೇಕು, KSRTC ಎಂಬ ಸಾರ್ವಜನಿಕ ಬಸ್ ಇರುವುದು ಜನರಿಗಾಗಿ ಅದು ಸಾಮಾನ್ಯ ಜನರಿಗಾಗಿ. ಅಂಥ ಬಸ್ ಸರ್ವೀಸ್ ರೋಡ್‌ನಲ್ಲಿ ಹೋಗದೆ ಹೆದ್ದಾರಿಯಲ್ಲಿ ಹೋದರೆ ಜನಸಾಮಾನ್ಯರು ಏನು ಮಾಡಬೇಕು? ಸರಿಯಾಗಿಯೇ ಪಾಠ ಕಲಿಸಿದ್ದಾರೆ ಅಲ್ವಾ?



Click it and Unblock the Notifications
