Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
ಪಂಚ ರಾಜ್ಯ ಚುನಾವಣೆ ಫಲಿತಾಂಶ 2023: ಈ 5 ರಾಜ್ಯಗಳ ಕುರಿತ ತುಂಬಾ ಆಸಕ್ತಿಕರವಾದ ಸಂಗತಿಗಳಿವು
ಭಾರತದಲ್ಲಿ ಇದೀಗ ಚುನಾವಣೆಯ ಕಾವೇರಿದೆ. ಭಾರತದ ಪಂಚ ರಾಜ್ಯಗಳೆಂದು ಗುರುತಿಸಲ್ಪಟ್ಟಿರುವ ತೆಲಂಗಾಣ, ರಾಜಾಸ್ಥಾನ, ಛತ್ತೀಸ್ಗಢ, ಮಿಜೋರಾಂ, ಮಧ್ಯಪ್ರದೇಶದಲ್ಲಿ ಇಂದು ಚುನಾವಣೆಯ ಫಲಿತಾಂಶದ ದಿನ. ನಾವಿಲ್ಲಿ ಈ ಪಂಚ ರಾಜ್ಯಗಳ ಕುರಿತ ಆಸಕ್ತಿಕರ ಸಂಗತಿಗಳಿವು ನೋಡಿ:

ಮಿಜೋರಾಂನ ಆಸಕ್ತಿಕರ ಸಂಗತಿಗಳು
* ಮಿಜೋರಾಂನಲ್ಲಿ ವಿವಿಧ ವರ್ಗದ ಬುಡಕಟ್ಟಿನ ಜನರು ವಾಸ ಮಾಡುತ್ತಿದ್ದಾರೆ.
* ಬಿದಿರಿನ ಡ್ಯಾನ್ಸ್ (ಚೆರಾ ನೃತ್ಯ) ಅವರ ಸಾಂಪ್ರದಾಯಕ ನೃತ್ಯವಾಗಿದೆ.
* ಕೇರಳದ ನಂತರ ಅತೀ ಹೆಚ್ಚು ವಿದ್ಯಾವಂತರಿರುವ ರಾಜ್ಯವಾಗಿದೆ. ಇಲ್ಲಿ ವಿದ್ಯಾಭ್ಯಾಸಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡಲಾಗುವುದು.
* ಮಿಜೋರಾಂ ಎಂಬುವುದು ಮೊದಲು ಅಸ್ಸಾಂಗೆ ಸೇರಿದ ಜಿಲ್ಲೆಯಾಗಿತ್ತು, ನಂತರ ಅದು ರಾಜ್ಯವಾಯ್ತು.
* ಕೇವ್ಸ್ ಆಫ್ ಡೆಡ್ (ಸತ್ತವರ)ಎಂಬ ಗುಹೆ ಇಲ್ಲಿದೆ. ಈ ಗುಗೆಯಲ್ಲಿ ಮನುಷ್ಯರ ಮೂಳೆಗಳೇ ಕಾಣಸಿಗುವುದಂತೆ.
* ಇಲ್ಲಿ ಹುಡುಗ ಮದುವೆಯಾಗಬೇಕಾದರೆ ವಧು ಮನೆಯವರಿಗೆ ವಧು ದಕ್ಷಿಣೆ ಕೊಡಬೇಕು.
ರಾಜಾಸ್ಥಾನದ ಕುರಿತ ಆಸಕ್ತಿಕರ ಸಂಗತಿಗಳು
* ಭೌಗೋಳಿಕವಾಗಿ ಭಾರತದ ದೊಡ್ಡ ರಾಜ್ಯವಾಗಿದೆ
* ರಾಜಾಸ್ಥಾನ ಪ್ರವಾಸ ತಾಣವಾಗಿಯೂ ಗುರುತಿಸಿಕೊಂಡಿದೆ
* ಇಲ್ಲಿ ಭಾಂಗ್‌ಗರ್ ಎಂಬ ಅಗೋಚರ ಶಕ್ತಿಯ ಕಟ್ಟಡವಿದೆ, ಇಲ್ಲಿಗೆ ಹೋಗಲು ಜನ ಭಯ ಪಡುತ್ತಾರೆ
* ವಿಶ್ವದ 9ನೇ ದೊಡ್ಡ ಮರುಭೂಮಿ ಪ್ರದೇಶವೆಂದರೆ ಅದು ರಾಜಾಸ್ಥಾನ.
* ಕುಂಬಲಗರ್ ಫೋರ್ಟ್ ಎಂಬುವುದಿದೆ. ಇದು ವಿಶ್ವದಲ್ಲಿಯೇ ಉದ್ದವಾದ ಗೋಡೆ ಇದಾಗಿದೆ.
* ಇಲ್ಲಿ ಮತ್ತೊಂದು ವಿಶೇಷವೆಂದರೆ ಇಲ್ಲಿಯ ಸಿಟಿಗಳಲ್ಲಿ ಕಲರ್‌ಕೋಡ್ ಕಾಣಬಹುದು.
* ಕುಲ್ದ್‌ಹರ ಎಂಬ ಗ್ರಾಮದಲ್ಲಿ ಒಂದು ನರಪಿಳ್ಳೆಯೂ ಇಲ್ಲ.
* ಬ್ರಹ್ಮನ ದೇವಾಲಯವಿರುವ ಏಕೈಕ ಸ್ಥಳವೆಂದರೆ ಅದು ರಾಜಾಸ್ಥಾನದಲ್ಲಿದೆ.
* ಮೊದಲ ನ್ಯೂಕ್ಲಿಯರ್ ಪರೀಕ್ಷೆಯನ್ನು ಇಲ್ಲಿಯೇ ಮಾಡಲಾಯಿತು
* ಇಲ್ಲಿ ಇಲಿಗಳಿಗಾಗಿಯೇ ದೇವಾಲಯವಿದೆ. ಈ ದೇವಾಲಯದಲ್ಲಿ 25, 000ಕ್ಕೂ ಅಧಿಕ ಇಲಿಗಳಿವೆಯಂತೆ
* ಇಲ್ಲಿ ಪೂರ್ವದಲ್ಲಿ ಯಾವುದೇ ಬೆಳೆ ಬೆಳೆಯಲ್ಲ, ಅದೇ ದಕ್ಷಿಣ ಭಾಗದಲ್ಲಿ ಬೆಳೆಗಳು ಬೆಳೆಯುತ್ತವೆ
* ಜಗತ್ಪ್ರಸಿದ್ಧ ಜಂತರ್-ಮಂತರ್ ಕೂಡ ಇರುವುದು ರಾಜಾಸ್ಥಾನದಲ್ಲಿಯೇ
* ತಾಜ್‌ಮಹಲ್‌ಗೆ ಬಿಳಿ ಕಲ್ಲುಗಳನ್ನು ಇಲ್ಲಿಂದಲೇ ತೆಗೆದುಕೊಂಡು ಹೋಗಿ ತಾಜ್ ಮಹಲ್ ನಿರ್ಮಿಸಿದ್ದು.
ಮಧ್ಯಪ್ರದೇಶದ ಕುರಿತ ಆಸಕ್ತಿಕರ ಸಂಗತಿಗಳು
* ರಾಜಾಸ್ಥಾನದ ಬಳಿಕ ಮಧ್ಯಪ್ರದೇಶ ಭೌಗೋಳಿಕವಾಗಿ 2ನೇ ದೊಡ್ಡ ರಾಜ್ಯವಾಗಿದೆ.
* ಚಾಂದೇರಿ ಸ್ಯಾರಿ ನಮ್ಮ ಇಲ್ಲಿಯ ಮೈಸೂರು ಸ್ಯಾರಿಯಂತೆ ಪ್ರಸಿದ್ಧ ಸೀರೆಯಾಗಿದೆ.
* ಅತೀ ಪುರಾತನವಾದ ಗುಹೆಗಳು ಈ ರಾಜ್ಯದಲ್ಲಿದೆ.
* ಕಜುರಾರೋ ದೇವಾಲಯ ಇಲ್ಲಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು
* ಅಟಲ್ ಬಿಹಾರಿ ವಾಜಪೇಯಿ, ಲತಾ ಮಂಗೇಶ್ಕರ್, ಕಿಶೋರ್ ಕುಮಾರ್, ಜಯ ಬಚ್ಚನ್, ಮಾನ್ಸೂರ್ ಅಲಿ ಪಟೌಡಿ ಮುಂತಾದ ಪ್ರಸಿದ್ಧ ವ್ಯಕ್ತಿಗಳ ಜನ್ಮ ಸ್ಥಳವಿದು
* ಈ ರಾಜ್ಯದಲ್ಲಿ ಖನಿಜಾಂಶಗಳು ಅಧಿಕವಿದೆ.
* ಭಾರತದಲ್ಲಿ ಅತ್ಯಧಿಕ ಬುಡಕಟ್ಟು ಜನರಿರುವ ರಾಜ್ಯ ಇದಾಗಿದೆ.
* ಇಲ್ಲಿ ಪ್ರಸಿದ್ಧ ಉಜ್ವೈನ್ ದೇವಾಲಯವಿದೆ.
* ಇಲ್ಲಿ ಅಕ್ಷರಸ್ಥರ ಸಂಖ್ಯೆಗಿಂತ ಅನಕ್ಷರಸ್ಥರ ಸಂಖ್ಯೆ ಅಧಿಕವಿದೆ.
* ಭಾರತದಲ್ಲಿ ಅತ್ಯಧಿಕ ವಜ್ರ ನಿಕ್ಷೇಪ ಇರುವ ಪ್ರದೇಶ ಇದಾಗಿದೆ.
ಛತ್ತೀಸ್ಗಢ
* ಕೋಸಾ ಸಿಲ್ಕ್ ಇಲ್ಲಿಗೆ ಸೇರಿದ್ದು
* ಇಲ್ಲಿ ತುಂಬಾ ಬುಡಕಟ್ಟು ಜನಾಂಗದವರಿದ್ದಾರೆ.
* ಗುಡ್ಡಗಾಡಿನ ಪ್ರದೇಶದಲ್ಲಿ ಜನರ ಜೀವ ರಕ್ಷಣೆಗೆ ಬೈಕ್ ಆಂಬ್ಯೂಲೆನ್ಸ್ ಬಳಸಲಾಗುವುದು
* ಪ್ರಸಿದ್ಧ ಚಿತ್ರಕೂಡ ಜಲಪಾತವಿದೆ. ಇದನ್ನು ಭಾರತದ ನಯಾಗ್ರ ಫಾಲ್ಸ್ ಎಂದು ಕರೆಯಲಾಗುವುದು.
* ಅತೀ ಹೆಚ್ಚು ಸ್ಟೀಲ್ ಉತ್ಪಾದನೆಯಾಗುವುದು ಇಲ್ಲಿ.
ತೆಲಂಗಾಣದ ಕುರಿತ ಆಸಕ್ತಿಕರ ಸಂಗತಿಗಳು
ಭಾರತದ ರಾಜ್ಯಗಳಲ್ಲಿ ಹೊಸದಾಗಿ ಹುಟ್ಟಿಕೊಂಡ ರಾಜ್ಯವಿದು
* ಈ ರಾಜ್ಯ 1.14 ಲಕ್ಷ ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಭಾರತದ 12ನೇ ದೊಡ್ಡ ರಾಜ್ಯ ಇದಾಗದೆ.
* 17 ಲೋಕ ಸಭಾ ಸೀಟು, 119 ವಿಧಾನ ಸಭಾ ಸೀಟುಗಳನ್ನು ಹೊಂದಿರುವ ರಾಜ್ಯ
* ಇಲ್ಲಿಗೆ ನವೆಂಬರ್-ಫೆಬ್ರವರಿಗೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ.



Click it and Unblock the Notifications