Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
26/11 ಮುಂಬೈ ದಾಳಿಯ ಕರಾಳ ನೆನಪಿಗೆ 15 ವರ್ಷ: ಈ 5 ಹೀರೋಗಳಿಂದಾಗಿ ಉಳಿಯಿತು ನೂರಾರು ಜೀವಗಳು
26/11 ದಾಳಿ ನಡೆದು 15 ವರ್ಷಗಳೇ ಕಳೆದರೂ ಇನ್ನೂ ಆ ದೃಶ್ಯಗಳು ಕಣ್ಮುಂದೆ ಬರುತ್ತದೆ, ಭಾರತದ ಇತಿಹಾಸದಲ್ಲಿ ಅದೊಂದು ಕರಾಳ ದಿನ, ಯಾರೂ ಊಹಿಸಿರದ ಆ ಬೀಭತ್ಸ ಘಟನೆಯಿಂದಾಗಿ 166 ಜನ ಪ್ರಾಣ ಕಳೆದುಕೊಂಡಿರು, 300 ಜನರು ಪ್ರಾಣ ಕಳೆದುಕೊಂಡರು, ಕೇವಲ 10 ಜನ ಪಾಕಿಸ್ತಾನಿ ಭಯೋತ್ಪಾದಕರು ಭಾರತದೊಳಗೆ ಬಂದು ರಣಕೇಕೆ ಹಾಕಿದರು.
ತಾಜ್ ಪ್ಯಾಲೆಸ್ ಹೋಟೆಲ್, ಒಬೆರಾಯ್, ನಾರಿಮನ್ ಹೌಸ್ ಹೀಗೆ ಮುಂಬಯಿಯ ಪ್ರತಿಷ್ಠಿತ ಹೋಟೆಲ್‌ಗಳಿಗೆ ನುಗ್ಗಿದ ಭಯೋತ್ಪಾದಕರು ನಡೆಸಿದ ಘೋರ ಕೃತ್ಯ ನೆನೆದುಕೊಂಡರೆ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತದೆ. ಆದರೆ ಈ ಘಟನೆ ನಡೆದಾಗ ನಮ್ಮ ಸೈನಿಕರು ತೋರಿದ ಸಾಹಸ ಇದೆಯೆಲ್ಲಾ ಅದಕ್ಕೆ ಎಷ್ಟು ಸಲಾಂ ಹೇಳಿದರೂ ಸಾಲದು.
ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಸೈನಿಕರು ಭಯೋತ್ಪಾದಕ ಹುಟ್ಟಡಗಿಸಿದ ರೀತಿ ಇದೆಯೆಲ್ಲಾ ಅದನ್ನು ನೋಡಿ ನಮ್ಮ ಸೈನಿಕರ ಮೇಲೆ ಗೌರವ ಮತ್ತಷ್ಟು ಹೆಚ್ಚಾಯ್ತು, ಈ ಘಟನೆಯಲ್ಲಿ ಕೆಚ್ಚೆದೆಯಿಂದ ಹೋರಾಟ ಮಾಡಿದ ಈ 5 ವೀರರನ್ನು ನಾವಿಂದು ಸ್ಮರಿಸಲೇಬೇಕು.

ತುಕರಾಂ ಹೊಂಬ್ಳೆ
ಮುಂಬೈಯ ಪೊಲೀಸ್‌ನಲ್ಲಿ ಅಸಿಸ್ಟೆಂಟ್ ಸಬ್‌ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಕೊಡುಗೆ ಬಗ್ಗೆ ಎಷ್ಟು ಹೊಗಳಿದರೂ ಸಾಲದು. ಅಜ್ಮಾಲ್ ಕಸಾಬ್ ಎಂಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯಲು ಇವರಿಂದಾಗಿ ಸಾಧ್ಯವಾಯ್ತು. ಬರೋಬರಿ 40 ಗುಂಡುಗಳು ದೇಹವನ್ನು ಹೊಕ್ಕಿದರೂ ಅಜ್ಮಲ್ ಕಸಾಬ್‌ನನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಉಗ್ರಗಾಮಿ ಮೊಹಮ್ಮದ್ ಅಜ್ಮಲ್ ಕಸಬ್‌ನನ್ನು ಜೀವ ಸಹಿತ ಸೆರೆ ಹಿಡಿಯಲು ಇವರು ತೋರಿದ ಧೈರ್ಯದಿಂದ ಸಾಧ್ಯವಾಯ್ತು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಗುಂಡಿನ ಮಳೆ ಸುರಿಸಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಈತನನ್ನು ತುಕರಾಂ ಹೊಂಬ್ಳೆ ಹಿಡಿಯಲು ಪ್ರಯತ್ನಿಸಿದರು.ಆಗ ಆ ರಾಕ್ಷಸ ಇವರ ಮೇಲೆ 40 ಗುಂಡನ್ನು ಹಾರಿಸಿದ ಆದರೂ ಆತನನ್ನು ಬಿಡಲಿಲ್ಲ, ಅಜ್ಮಲ್ ಕಸಬ್‌ನ ಬಂಧನಕ್ಕೆ ರವಾದರು, ಗುಂಡೇಟು ತಗುಲಿ ಹುತಾತ್ಮರಾಗಿದ್ದರು. ಇವರಿಂದಾಗಿ ಕಸಬ್‌ನ ವಿಚಾರಣೆ ನಡೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಸಾಧ್ಯವಾಯ್ತು, ಬಳಿಕ ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. 2010ರ ಮೇ ತಿಂಗಳಲ್ಲಿ ಕಸಬ್‌ನನ್ನು ಗಲ್ಲಿಗೇರಿಸಲಾಗಿತ್ತು. ಈತನನ್ನು ಗಲ್ಲಿಗೇರಿಸಿದಾಗ ಇಡೀ ದೇಶವೇ ಸಂಭ್ರಮಿಸಿತು.
ಮೇಜರ್ ಸಂದೀಪ್ ಉನ್ನಿಕೃಷ್ಣನ್': ಇವರು ನಮ್ಮ ಕರ್ನಾಟಕದ ವೀರರು. NSG (ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇತರ ಸೈನಿಕರ ಜೊತೆಗೆ ಗನ್ ಹಿಡಿದು ಹೋಟೆಲ್‌ಗೆ ನುಗ್ಗಿ ಅಲ್ಲಿ ಒತ್ತೆಯಾಳಾಗಿ ಇಟ್ಟಿದ್ದ ಅನೇಕರ ಜೀವ ರಕ್ಷಣೆ ಮಾಡಿದ್ದರು. ಈ ಕಾರ್ಯಚರಣೆಯಲ್ಲಿ ಉಗ್ರನ ಗುಂಡೇಟಿಗೆ ಬಲಿಯಾದರು. ಮೇಜರ್ ಸಂದೀಪ್ ಉನ್ನಿಕೃಷ್ಣನಂಥ ವೀರನ ನೋಡಿ ನಾವು ಕೂಡ ಅವರಂತೆ ರಾಷ್ಟ್ರ ರಕ್ಷಣೆ ಮಾಡುತ್ತೇವೆಯೆಂದು ಇಂದು ಸಾವಿರಾರು ಯುವಕರು ಸೇನೆಗೆ ಸೇರಲು ಬಯಸುತ್ತಿದ್ದಾರೆ.
ಮಲ್ಲಿಕ ಜಗದ್
ತಾಜ್ ಪ್ಯಾಲೇಸ್‌ನಲ್ಲಿ ಬ್ಯಾಂಕೆಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹೋಟೆಲ್‌ನ ಒಳಗಡೆ ಗನ್ ಶಬ್ದ ಕೇಳುತ್ತಿದ್ದಂತೆಯೇ ಅತಿಥಿಗಳಿಗೆ ಟೇಬಲ್ ಕೆಳಗಡೆ ಬಚ್ಚಿಡುವಂತೆ ಸೂಚಿಸಿದರು, ಅಲ್ಲದೆ ಒಂದೇ ಕುಟುಂಬದಿಂದ ಬಂದವರನ್ನು ಬೇರೆ-ಬೇರೆ ಕಡೆ ಬಚ್ಚಿಡುವಂತೆ ಮಾಡಿ ಒಂದೇ ಕುಟುಂಬದ ಎಲ್ಲರೂ ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಿದರು.
ಕರಂಬೀರ್ ಸಿಂಗ್ ಕಂಗ್
ಇವರು ಕೂಡ ತಾಜ್ ಮುಂಬಯಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದರು. ಹೋಟೆಲ್‌ನ ಒಂದು ಕಡೆ ಗನ್ ಸೌಂಡ್ ಕೇಳುತ್ತಿದ್ದಂತೆ ಹೋಟೆಲ್‌ಗೆ ಓಡಿ ಬಂದು ನೂರಾರು ಜನರು ಅಲ್ಲಿಂದ ಪ್ರಾಣುಳಿಸಿಕೊಂಡು ಹೋಗುವಲ್ಲಿ ಸಹಾಯ ಮಾಡಿದವರು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಇತರರ ಪ್ರಾಣ ರಕ್ಷಣೆಗೆ ಮುಂದಾದರು. ಆದರೆ ಭಯೋತ್ಪಾದಕರು ಕಂಗ್ ಅವರನ್ನು ಗುಂಡಿಟ್ಟು ಕೊಂದರು, ಅಲ್ಲದೆ ಅವರ ಪತ್ನಿ ಹಾಗೂ ಮಗ ಕೂಡ ಗುಂಡೇಟಿನಲ್ಲಿ ಸಾವನ್ನಪ್ಪಿದರು.
ಥೋಮಸ್ ವರ್ಗೀಸ್
ತಾಜ್ ಜಪಾನೀಸ್‌ನಲ್ಲಿ ಸೀನಿಯರ್ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಗುಂಡಿನ ಶಬ್ದ ಕೇಳುತ್ತಿದ್ದಂತೆ ಅತಿಥಿಗಳಿಗೆ ಮುದುಡಿ ಕುಳಿತುಕೊಳ್ಳುವಂತೆ ಸೂಚಿಸಿ ಅಲ್ಲಿಂದ ಅವರನ್ನು ಬೇಗನೆ ಸಾಗಿಸುವ ಪ್ರಯತ್ನ ಮಾಡಿದರು, ಅಲ್ಲಿದ್ದವರನ್ನು ರಕ್ಷಣೆ ತಾವು ಕೊನೆಯಲ್ಲಿ ಹೊರಡುವಾಗ ಉಗ್ರನ ಗುಂಡೇಟಿಗೆ ಬಲಿಯಾದರು



Click it and Unblock the Notifications
