Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮನೆಯಲ್ಲಿ ಕಣಜ ಗೂಡು ಕಟ್ಟುವುದೇಕೆ..? ಶುಭವೋ ಅಶುಭವೋ..!
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಹುಳು, ಕೀಟಗಳ ಕಾಟ ಇದ್ದೇ ಇರುತ್ತದೆ. ಅದರಲ್ಲೂ ಇರುವೆ, ಹಲ್ಲಿ, ನೊಣಗಳ ಕಾಟವಂತು ಸರ್ವೇ ಸಾಮಾನ್ಯ ಆದ್ರೆ ಕೆಲವೊಂದು ಮನೆಯಲ್ಲಿ ಜೇನು ಹುಳು, ಕಣಜ ಎಂದು ಕರೆಯುವ ಅಪಾಯಕಾರಿ ಹುಳುಗಳು ಸಹ ಕಾಣಸಿಗುತ್ತವೆ.
ಆದ್ರೆ ಮನೆಯಲ್ಲಿ ಜೇನು ಹುಳು, ಕಣಜ ಗೂಡು ಕಟ್ಟುವುದು ಶುಭ ಸಂಕೇತವೇ ಅಥವಾ ಅಶುಭವೇ ಎಂಬುದು ಜನರ ಮನದಲ್ಲಿ ಇರುವ ಪ್ರಶ್ನೆಯಾಗಿರುತ್ತೆ. ಆದ್ರೆ ಜೇನು ಹುಳುಗಳು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಗೂಡು ಕಟ್ಟುವುದಿಲ್ಲ. ಆದ್ರೆ ಗೂಡು ಕಟ್ಟಿದರೆ ಹುಳುಗಳನ್ನು ಓಡಿಸುವುದು ಬಹಳ ಕಷ್ಟವಾಗುತ್ತದೆ.

ಹಾಗಾದ್ರೆ ಮನೆಯಲ್ಲಿ ಕಣಜದ ಹುಳು ಅಥವಾ ಜೇನು ಹುಳು ಗೂಡು ಕಟ್ಟುವುದೇಕೆ? ಇದು ಶುಭ ಸಂಕೇತವೋ ಅಥವಾ ಅಶುಭವೋ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಣಜ ಗೂಡ ಕಟ್ಟಿದರೆ ಒಳ್ಳೆಯದು
ಮನೆಯಲ್ಲಿ ಕಣಜ ಗೂಡು ಕಟ್ಟುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಇವು ಎಲ್ಲರ ಮನೆಯಲ್ಲೂ ಗೂಡು ಕಟ್ಟುವುದಿಲ್ಲ. ಇವು ಸಂತಾನೋತ್ಪತ್ತಿಯ ಕಾರಣದಿಂದಾಗಿ ಮಾತ್ರ ಇವು ಗೂಡು ಕಟ್ಟುತ್ತವೆ. ಹೀಗಾಗಿ ಇವು ಗೂಡು ಕಟ್ಟಿದ ಮನೆಯಲ್ಲಿ ಅವಿವಾಹಿತರಿದ್ದರೆ ಶೀಘ್ರ ವಿವಾಹವಾಗುತ್ತಾರೆ ಎಂಬ ನಂಬಿಕೆ ಇದೆ. ಇವು ಗೂಡು ಕಟ್ಟಲು ಬಳಸುವ ಮಣ್ಣು ಬಹಳ ಶುದ್ಧವಾಗಿರುತ್ತದೆ ಎನ್ನಲಾಗಿದೆ. ಹೀಗಾಗಿ ಮನೆಯ ಪರಿಸ್ಥಿತಿ ಉತ್ತಮವಿದ್ದರೆ ಮಾತ್ರವೆ ಇವು ಗೂಡು ಕಟ್ಟಲಿದೆಯಂತೆ. ಮನೆ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹವಿದ್ದಾಗ ಮಾತ್ರ ಅವು ಗೂಡು ಕಟ್ಟುತ್ತವೆಯಂತೆ.
ಆರ್ಥಿಕ ಲಾಭದ ಸೂಚನೆ
ಮನೆಯಲ್ಲಿ ಸಣ್ಣ ಕಣಜ ಗೂಡು ಕಟ್ಟಿದ್ದರೆ ಅದು ಆರ್ಥಿಕ ಸ್ವಾವಲಂಬನೆ ಅಥವಾ ಧನಲಾಭದ ಸಂಕೇತವಂತೆ. ನೀವು ಸಾಲ ಮಾಡಿದ್ದರೆ ಅದರ ಮರುಪಾವತಿ ಹಾಗೂ ಸಾಲ ನೀಡಿದ್ದರೆ ಹಣ ಬರುವ ಸಂಭವ ಹೆಚ್ಚಾಗುತ್ತದೆಯಂತೆ. ಜೊತೆಗೆ ಮನೆಯ ಆರ್ಥಿಕ ವಿಚಾರಗಳು ಧನಾತ್ಮಕ ರೀತಿಯಲ್ಲಿ ಬದಲಾಗುತ್ತದೆ ಎಂದು ನಂಬಲಾಗುದೆ.
ಹೊಸ ಗೂಡಿನಲ್ಲಿ ಕಣಜ ಇಲ್ಲದಿದ್ದರೆ?
ಕೆಲವೊಮ್ಮೆ ಹೊಸದಾಗಿ ಗೂಡು ಕಟ್ಟಿದ ಕಣಜ ಆ ಗೂಡು ಬಿಟ್ಟು ತೆರಳುತ್ತದೆ, ಅಲ್ಲಿ ಸಂತಾನೋತ್ಪತ್ತಿಗೆ ಅದು ಮುಂದಾಗುವುದಿಲ್ಲ. ಹೀಗಾದರೆ ಆ ಮನೆಯಲ್ಲಿ ಏನಾದರು ದೋಷವಿದೆ ಎಂದರ್ಥವಾಗುತ್ತದೆ. ಅವು ಗೂಡು ಬಿಟ್ಟು ತೆರಳಿದರೆ ಅಶುಭ ಎಂದು ಪರಿಗಣಿಸಲಾಗುತ್ತದೆ, ಆದರೆ ಒಮ್ಮೆ ಅವು ಸಂತಾನೋತ್ಪತ್ತಿ ಕೈಗೊಂಡು ಗೂಡು ಖಾಲಿ ಮಾಡಿದ ಬಳಿಕ ಹಳೆಯ ಗೂಡಿಗೆ ನೀರು ಹಾಕಿ ಅದನ್ನು ಒಂದು ಪೇಪರ್‌ನಲ್ಲಿ ಸುತ್ತಿ ಎಸೆಯಬೇಕಂತೆ.
ದೇವರ ಕೋಣೆಯಲ್ಲಿ ಗೂಡು ಕಟ್ಟಿದ್ದರೆ ಶುಭ
ಇತ್ತ ಕಣಜವು ದೇವರ ಕೋಣೆಯಲ್ಲಿ ಹೆಚ್ಚಾಗಿ ಗೂಡು ಕಟ್ಟುತ್ತವೆ. ನೀವು ದೇವರ ಕೋಣೆಯ ಮೂಲೆಯಲ್ಲಿ ನೋಡಿದರೆ ಒಂದು ಮಣ್ಣಿನ ಗೂಡು ಕಾಣಿಸಬಹುದು, ಇದು ಶುಭ ಸಂಕೇತವಂತೆ. ಅದರಲ್ಲೂ ಈಶಾನ್ಯ ಮೂಲೆಯಲ್ಲಿ ಗೂಡು ಕಟ್ಟಿದರೆ ತುಂಬಾನೆ ಒಳ್ಳೆಯದು. ದೇವರ ಕೋಣೆಯಲ್ಲಿ ಕಣಜನ ಗೂಡು ಇದ್ದರೆ ಅದನ್ನು ತೆಗೆಯುವುದು, ಒಡೆದು ಹಾಕುವುದು ಮಾಡಬಾರದಂತೆ. ಅವುಗಳು ತಮಗೆ ಯೋಗ್ಯ ಸ್ಥಳ ಆಯ್ದುಕೊಂಡು ಗೂಡು ಕಟ್ಟಿರುತ್ತವೆ. ಅಲ್ಲದೆ ಇವು ಗೂಡು ಕಟ್ಟುವುದು ಶುಭ ಸೂಚನೆಯಾಗಿದೆ.
ದ್ವಾರ ಬಾಗಿಲಿಗೆ ಗೂಡು ಕಟ್ಟಿದರೆ
ಬಾಗಿಲ ಮೇಲೆ ಗೂಡು ಕಟ್ಟಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ವಾಸವಿದ್ದಾಳೆ ಎಂದರ್ಥ. ಆದರೆ ಅಗ್ನಿ ಮೂಲೆ ಅಥವಾ ಅಡುಗೆ ಮನೆಯಲ್ಲಿ ಗೂಡು ಕಟ್ಟಿದರೆ ಮನೆಯಲ್ಲಿ ಖರ್ಚು ಹೆಚ್ಚಾಗುತ್ತಿದೆ ಎಂದರ್ಥವಂತೆ. ದ್ವಾರ ಬಾಗಿಲ ಮೇಲೆ ಕಟ್ಟಿದರೆ ಮನೆಯಲ್ಲಿರುವ ಸದಸ್ಯರ ಆರೋಗ್ಯ ವೃದ್ಧಿ, ಧನ, ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗಿದೆ. ಇಂತಹ ಮನೆಯಲ್ಲಿ ಧಾನ್ಯ ಸಂಪತ್ತು ವೃದ್ಧಿಯಾಗುತ್ತೆ ಎನ್ನಲಾಗಿದೆ.



Click it and Unblock the Notifications
