For Quick Alerts
ALLOW NOTIFICATIONS  
For Daily Alerts

ಮುದ್ದಿನ ಬೆಕ್ಕಿನ ಹಲ್ಲು ತಿಕ್ಕುವವರು ಯಾರು?

|
Tips For Hygiene Of Cat
ಕೆಲವರಿಗೆ ನಾಯಿ ಅಂದರೆ ಇಷ್ಟ, ಮತ್ತೆ ಕೆಲವರಿಗೆ ಬೆಕ್ಕೆಂದರೆ ಪಂಚಪ್ರಾಣ. ನಾಯಿಗಳಂತೆ ಬೆಕ್ಕಿನಲ್ಲಿ ಕೂಡ ಅನೇಕ ತಳಿಯ ದುಬಾರಿ ಬೆಕ್ಕುಗಳಿವೆ. ಬೆಕ್ಕು ಸಾಕುವವರು ಅದರ ಶುದ್ಧತೆ ಬಗ್ಗೆ ಹೆಚ್ಚಿನ ಮಹತ್ವ ಕೊಡಬೇಕು. ಬೆಕ್ಕನ್ನು ಶುದ್ಧವಾಗಿ ಇಟ್ಟುಕೊಳ್ಳದಿದ್ದರೆ ಮನೆಯವರ ಆರೋಗ್ಯದ ಮೇಲೆ ಪರಿಣಾಮ ಬೀಳುವುದು, ಉಸಿರಾಟದ ತೊಂದರೆ ಹೆಚ್ಚಾಗುವುದು. ಆದ್ದರಿಂದ ನಿಮ್ಮ ಮುದ್ದಿನ ಬೆಕ್ಕನ್ನು ಶುಚಿಯಾಗಿಡುವುದು ಅವಶ್ಯಕ. ಬೆಕ್ಕನ್ನು ಶುಚಿಯಾಗಿಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

1. ಬ್ರೆಷ್ ಮಾಡಬೇಕು:
ಬೆಕ್ಕಿಗೆ ಪ್ರತಿನಿತ್ಯ ಬ್ರೆಷ್ ಮಾಡಿಸಬೇಕು. ಬೆಕ್ಕಿನ ಹಲ್ಲು ತಿಕ್ಕುಲು ಬ್ರೆಷ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮನೆಯಲ್ಲಿ ಇದರ ಜವಬ್ದಾರಿಯನ್ನು ಯಾರಿಗಾದರೂ ವಹಿಸಿಕೊಂಡು ಪ್ರತಿನಿತ್ಯ ಹಲ್ಲು ಉಜ್ಜಬೇಕು. ಹೀಗೆ ಶುಚಿಗೊಳಿಸುವಾಗ ಬೆಕ್ಕಿನ ಮೈ ಚರ್ಮದಲ್ಲಿ ಏನಾದರೂ ವ್ಯತ್ಯಾಸ ಉಂಟಾಗಿದೆಯೆ ಎಮದು ಗಮನಿಸುತ್ತಿರಬೇಕು.

2. ಸ್ನಾನ:
ಬೆಕ್ಕನ್ನು ಪ್ರತಿದಿನ ಸ್ನಾನ ಮಾಡಿಸಬೇಕು. ಹೀಗೆ ಸ್ನಾನ ಮಾಡಿಸುವಾಗ ತುಂಬಾ ಬಿಸಿ ಅಥವಾ ತಣ್ಣನೆಯ ನೀರು ಬಳಸಬಾರದು. ಸ್ನಾನ ಮಾಡಿಸಲು ಬೆಕ್ಕಿಗೆ ಸೋಪು ಮತ್ತು ಶ್ಯಾಂಪೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವೊಂದು ಸೋಪು ಬಳಸಿದರೆ ಬೆಕ್ಕಿಗೆ ಅಲರ್ಜಿ ಉಂಟಾದರೆ ಆ ಬ್ರಾಂಡ್ ಸೋಪನ್ನು ಮತ್ತೆ ಬಳಸಬೇಡಿ.

3. ಕಣ್ಣು ಮತ್ತು ಕಿವಿಗಳ ಶುಚಿ:
ಬೆಕ್ಕಿನ ಕಿವಿಯೊಳಗೆ ಬಡ್ಸ್ ಹಾಕಬೇಡಿ. ಹತ್ತಿಯನ್ನು ಬಿಕ್ಕ ಒಂದು ಚಿಕ್ಕ ಕಡ್ಡಿಯ ತುದಿಯಲ್ಲಿ ಚಿಕ್ಕ ಉಂಡೆಯಾಗಿ ಸುತ್ತಿ ಅದನ್ನು ಪರಿಶುದ್ಧವಾದ ಎಣ್ಣೆಯಲ್ಲಿ ಮುಳುಗಿಸಿ ಅದರಿಂದ ಕಿವಿ ಮತ್ತು ಕಣ್ಣುಗಳನ್ನು ಉಜ್ಜಿ ಶುಚಿಗೊಳಿಸಬೇಕು.

4. ಮ್ಯಾಟ್ ನ ಶುದ್ಧತೆ:
ಬೆಕ್ಕು ಮಲಗುವ ಮ್ಯಾಟ್ ಅನ್ನು ಕೂಡ ಶುಚಿಗೊಳಿಸಬೇಕು. ಇದರಿಂದ ಬೆಕ್ಕಿನ ಚರ್ಮಕ್ಕೆ ಸಮಸ್ಯೆ ಉಂಟಾಗುವುದನ್ನು ತಡೆಯಬಹುದು.

ಬೆಕ್ಕಿನ ಶುದ್ಧತೆಯನ್ನು ಮಾಡಿದರೆ ಬೆಕ್ಕಿನ ಮತ್ತು ಮನೆಯವರ ಆರೋಗ್ಯಕ್ಕೆ ಒಳ್ಳೆಯದು.

English summary

Tips For Hygiene Of Cat | Tips To Maintain Pet | ಬೆಕ್ಕಿನ ಶುದ್ಧತೆಗೆ ಕೆಲ ಸಲಹೆಗಳು | ಸಾಕುಪ್ರಾಣಿಗಳ ನಿರ್ವಹಣೆಗೆ ಕೆಲ ಸಲಹೆ

It is very important to keep cat very cleanly. Because health issues like respiratory disorders are very common among children whose house have cats.
Story first published: Thursday, February 23, 2012, 17:08 [IST]
X
Desktop Bottom Promotion