Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪ್ರಪಂಚದ ಐದು ಅತ್ಯಂತ ಭಯಂಕರ ನಾಯಿಗಳಿವು

ಪ್ರಪಂಚದ 5 ಅತ್ಯಂತ ಅಪಾಯಕಾರಿ ನಾಯಿಗಳು:
* ಪಿಟ್ ಬುಲ್: ನಾಯಿಗಳಲ್ಲಿ ಅತಿ ಅಪಾಯಕಾರಿ ನಾಯೆಂದರೆ ಪಿಟ್ ಬುಲ್. ಅತ್ಯಂತ ಭಯಂಕರ ನಾಯಿಗಳೆನಿಸಿರುವ ಬುಲ್ ಡಾಗ್ ಮತ್ತು ಬೇಟೆ ನಾಯಿಯ ತಳಿಯಿಂದ ಹುಟ್ಟಿರುವ ಈ ಪಿಟ್ ಬುಲ್ ನಾಯಿಯನ್ನು ಮೃದುವಾಗಿರಬೇಕೆಂದು ಬಯಸಿದರೆ ಹೇಗೆ ಸಾಧ್ಯ? ವಂಶವಾಹಿಯಿಂದಲೇ ಕ್ರೂರತ್ವ ತಂದಿರುವ ಈ ಪಿಟ್ ಬುಲ್ ನಾಯಿ ಸಾಕುವ ಮುನ್ನ ಒಮ್ಮೆ ಯೋಚಿಸಿ.
* ರಾಟ್ ವೀಲರ್: ಈ ರಾಟ್ ವೀಲರ್ ನಾಯಿ ಅಪಾಯಕಾರಿ ನಾಯಿ ಎನಿಸಿದ್ದರೂ ಸಹ ತನ್ನ ಯಜಮಾನನಿಗೆ ಅತಿ ವಿನಮ್ರನಾಗಿರುವ ವಿಶೇಷ ಗುಣ ಹೊಂದಿದೆ. ಆದರೆ ಸರಿಯಾದ ತರಬೇತಿ ನೀಡದ ಪಕ್ಷದಲ್ಲಿ ಅಪಾಯ ತಪ್ಪಿದ್ದಲ್ಲ.
* ಜರ್ಮನ್ ಶೆಫರ್ಡ್: ನೋಡಿದ ತಕ್ಷಣವೇ ಭಯ ಉಂಟುಮಾಡುವ ಭಯಂಕರ ನಾಯಿ ಜರ್ಮನ್ ಶೆಫರ್ಡ್ ಎಂದರೆ ತಪ್ಪಾಗಲ್ಲ. ಪೊಲೀಸರು ಮತ್ತು ಮಿಲ್ಟ್ರಿಯವರು ಇದನ್ನು ಹೆಚ್ಚು ಉಪಯೋಗಿಸಿಕೊಳ್ಳುತ್ತಾರೆ. ಅತಿ ಬುದ್ಧಿವಂತ ನಾಯಿಯಾಗಿರುವ ಜರ್ಮನ್ ಶೆಫರ್ಡ್ ಗೆ ಹೆಚ್ಚು ಬೇಡಿಕೆಯೂ ಇದೆ.
* ಹಸ್ಕಿ: ಸೈಬೇರಿಯನ್ ಸ್ನೋ ಡಾಗ್ ಎನ್ನಲಾಗುವ ಹಸ್ಕಿ ತುಂಬಾ ಶಕ್ತಿಶಾಲಿ. ಆಕ್ರಮಣ ಮಾಡಲು ಕಾಯುತ್ತಿರುವಂತೆ ಕಾಣುವ ಈ ನಾಯಿಯನ್ನು ನುರಿತವರು ಮಾತ್ರ ಸಾಕುತ್ತಾರೆ. ಆದ್ದರಿಂದ ಅಪಾಯಕಾರಿ ನಾಯಿಗಳ ಪಟ್ಟಿಯಲ್ಲಿ ಇದೂ ಸೇರಿಕೊಂಡಿದೆ.
* ಚೌ ಚೌ: ಸಿಂಹದ ಪ್ರತಿರೂಪದಂತೆ ಕಾಣುವ ಈ ನಾಯಿ ಯಾರೊಂದಿಗೂ ಸ್ನೇಹಪರವಾಗಿರುವುದಿಲ್ಲ. ಇದು ಹೊರಗಿನವರಿಂದ, ಇನ್ನಿತರ ಪ್ರಾಣಿಗಳಿಂದ ಮತ್ತು ಮನೆಯವರಿಂದಲೂ ದೂರವಿರಲು ಇಷ್ಟ ಪಡುತ್ತೆ. ಈ ಪ್ರಕೃತಿಯೇ ನಾಯಿಯನ್ನು ಕ್ರೂರತ್ವದೆಡೆಗೆ ತಿರುಗುವಂತೆ ಮಾಡುತ್ತದೆ. ಇನ್ನಿತರ ನಾಯಿಗಳ ಜೊತೆ ಬೆರೆಯುವಂತೆ ಹೆಚ್ಚು ಅವಕಾಶ ಮಾಡಿಕೊಟ್ಟರೆ ಕ್ರೂರತ್ವವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.



Click it and Unblock the Notifications
