Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಾಸ್ತು ಟಿಪ್ಸ್: ನೆಮ್ಮದಿ ಬೇಕೆಂದರೆ ಈ ವಸ್ತುಗಳನ್ನು ಮನೆಯಿಂದ ಮೊದಲು ಹೊರಹಾಕಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಲೇಬಾರದು, ಅವು ಮನೆಯಲ್ಲಿದ್ದರೆ ಒಂದೆಲ್ಲಾ ಒಂದು ಸಮಸ್ಯೆ ಬರುತ್ತಲೇ ಇರುತ್ತದೆ. ಗಂಡ-ಹೆಂಡತಿ ನಡುವೆ ಸಮಸ್ಯೆ, ಮನೆಯವರಿಗೆ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಹೀಗೆ ನಾನಾ ಬಗೆಯ ತೊಂದರೆಗಳು ಬರುತ್ತಲೇ ಇರುತ್ತದೆ.

ನಿಮ್ಮ ಮನೆಯಲ್ಲಿ ಈ ಬಗೆಯ ವಸ್ತುಗಳಿದ್ದರೆ ಅವುಗಳನ್ನು ಮನೆಯಿಂದ ಮೊದಲು ಹೊರಹಾಕಿ, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಯಾವೆಲ್ಲಾ ವಸ್ತುಗಳು ಮನೆಯಲ್ಲಿ ಇರಲೇಬಾರದು ನೋಡೋಣ ಬನ್ನಿ:
1. ನಿಮ್ಮ ಮನೆ ಗಡಿಯಾರ ಕೆಲಸ ಮಾಡುತ್ತಿಲ್ಲ ಎಂದಾದರೆ ಹಾಗೆಯೇ ಇಡಬೇಡಿ, ಇದರಿಂದ ಮನೆಯಲ್ಲಿ ಸಾವು ಸಂಭವಿಸುವುದು ಹಾಗೂ ಆರ್ಥಿಕ ತೊಂದರೆ ತರುವುದು. ಆದ್ದರಿಂದ ಅಂಥ ಗಡಿಯಾರ ಮನೆಯೊಳಗಡೆ ಇಡಲೇಬೇಡಿ.
2. ಮುರಿದ ವಸ್ತುಗಳನ್ನು ಮನೆಯೊಳಗಡೆ ಇಡಬೇಡಿ, ಇದರಿಂದ ಕೆಡಕು ಉಂಟಾಗುವುದು
3. ಒಣಗಿದ ಹೂಗಳು, ಕಪ್ಪೆ ಚಿಪ್ಪು ಇವುಗಳನ್ನು ಮನೆಯೊಳಗಡೆ ಇಡಬಾರದು.
4. ಮನೆಯೊಳಗಡೆ ಕೊಡಲಿ ಇತರಬಾರದು, ಮನೆಯೊಳಗಡೆ ಕೊಡಲಿ ಇಟ್ಟರೆ ಮನೆಯಲ್ಲಿ ಸದಸ್ಯರಲ್ಲಿ ಸಾವು ಬರುತ್ತದೆ ಎಂದು ಹೇಳಲಾಗುವುದು.
5. ಮನೆ ನವೀಕರಿಸಿದಾಗ ಮನೆಯಲ್ಲಿದ್ದ ಹಳೆಯ ಪೊರಕೆ ಬಿಸಾಡಿ, ಇಲ್ಲದಿದ್ದರೆ ಈ ಹಳೆ ಪೊರಕೆ ಹೊಸ ಮನೆ ಅಥವಾ ನವೀಕರಿಸಿದ ಮನೆಯ ಅದೃಷ್ಟ ಗುಡಿಸುತ್ತದೆ ಎಂದು ಹೇಳಲಾಗುವುದು.
6. ವಿಕ್ಟೋರಿಯನ್ ನಂಬಿಕೆ ಪ್ರಕಾರ ಹೂದಾನಿಯಲ್ಲಿ ಕೆಂಪು ಬಿಳಿ ಹೂಗಳನ್ನು ಇಡಬಾರದು ಎಂದು ಹೇಳಲಾಗುವುದು, ಹೀಗಿಟ್ಟರೆ ಮನೆಗೆ ಕೆಡಕು ಉಂಟಾಗುವುದು.
7. ನಿಮ್ಮ ಮನೆಯ ಕಿಟಕಿಯೊಳಗಿನಿಂದ ಪಕ್ಷಿ ಹಾರಬಾರದು, ಅದು ನೀವು ಸಾಕಿದ ಪಕ್ಷಿಯೇ ಆಗಿರಲಿ ಕಿಟಕಿಯೊಳಗಡೆಯಿಂದ ಹಾರಬಾರದು ಎಂದು ಹೇಳಲಾಗುವುದು.
8. ತಾಜ್ ಮಹಲ್ ಪ್ರೇಮದ ಸಂಕೇತ ಎಂದು ಕೆಲವರು ಮನೆಯೊಳಗಡೆ ಇಡುತ್ತಾರೆ ಆದರೆ ವಾಸ್ತು ಶಾಸ್ತ್ರ ಪ್ರಕಾರ ತಾಜ್‌ಮಹಲ್ ಫೋಟೋವಾಗಲಿ ಅದರ ಮಾದರಿಯಾಗಲಿ ಮನೆಯೊಳಗಡೆ ಇಡಬಾರದು.
9. ಮನೆಯಲ್ಲಿ ಕಳ್ಳಿ ಗಿಡ ಅಥವಾ ಕ್ಯಾಕ್ಟಸ್ ಗಿಡ ಇರಬಾರದು, ಇವುಗಳನ್ನು ಮನೆಯಲ್ಲಿಟ್ಟರೆ ಮನೆಯಲ್ಲಿ ಸಮಸ್ಯೆ ಹೆಚ್ಚಾಗುವುದು ಎಂದು ಹೇಳಲಾಗುವುದು.
10. ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದರೆ ಅದರಲ್ಲಿ ನಿಮ್ಮ ಮಂಚದ ಪ್ರತಿಬಿಂಬ ಬೀಳಬಾರದು, ಆ ರೀತಿ ಇಡಬೇಕು ಇಲ್ಲದಿದ್ದರೆ ಪತಿ-ಪತ್ನಿ ನಡುವೆ ವಿರಸ ಉಂಟಾಗುವುದು.
11. ಮನೆಯಲ್ಲಿ ಒಡೆದ ಗ್ಲಾಸ್ ಇದ್ದರೆ ಅವುಗಳನ್ನು ಹೊರಹಾಕಿ, ಇಲ್ಲ ಅವು ಋಣಾತ್ಮಕ ಶಕ್ತಿಯನ್ನು ಸೆಳೆಯುತ್ತದೆ, ಇದರಿಂದ ಮನೆಗೆ ಕೆಡಕು ಉಂಟಾಗುವುದು.
ಸೂಚನೆ: ಇಲ್ಲಿ ನೀಡಿರುವ ಅಂಶಗಳು ಒಂದು ನಂಬಿಕೆಯಷ್ಟೆ, ಈ ಬಗೆಯ ನಂಬಿಕೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನಿಮಗೆ ಯಾವುದು ಸರಿ ಅನಿಸುತ್ತೋ ಅವುಗಳನ್ನೇ ಮಾಡಿ.



Click it and Unblock the Notifications

