Just In
- 3 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 3 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 4 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- 5 hrs ago ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯ ಅಂದ ಹೆಚ್ಚಲು ಆಕರ್ಷಕವಾಗಿ ಬಲ್ಬ್ಗಳ್ನು ಹೀಗೆ ಸಿಂಗರಿಸಿ
ಮನೆಯ ಅಲಂಕಾರಕ್ಕಾಗಿ ಕ್ರಿಯೇಟಿವಿಟಿ ಬಹಳ ಮುಖ್ಯ. ಕೆಲವು ನಿರುಪಯುಕ್ತವಾಗಿರುವ ಅದೆಷ್ಟೋ ವಸ್ತುಗಳು ನಿಮ್ಮ ಕೈಚಳಕದಿಂದ ಮನೆಯ ಅಲಂಕಾರಕ್ಕೆ ಬಳಕೆ ಮಾಡಿಕೊಳ್ಳಬಹುದು. ಅದರಲ್ಲಿ ಬಲ್ಬ್ ಗಳು ಕೂಡ ಒಂದು. ನೀವು ನಿಮ್ಮ ಕೋಣೆಯನ್ನು ಕೆಲವು ಕಸ್ಟಮ್ ಪೇಯಿಂಟಿಂಗ್ ಬಲ್ಬ್ ಗಳಿಂದ ಅಲಂಕರಿಸಿಕೊಳ್ಳಬಹುದು. ಇದು ಸುಲಭದ ಕೆಲಸವೂ ಹೌದು. ಅದಕ್ಕಾಗಿ ನಿಮಗೆ ಕೇವಲ 40 ವ್ಯಾಟಿನ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಬಲ್ಬ್ ಗಳಿದ್ದರೂ ಸಾಕಾದೀತು.
ಕೆಲವು ಶಾಖ-ನಿರೋಧಕ ಗ್ಲಾಸ್ ಪೇಯಿಂಟ್ ಗಳನ್ನು ನೀವು ಇದಕ್ಕಾಗಿ ಬಳಕೆ ಮಾಡಿಕೊಳ್ಳಬಹುದು ಮತ್ತು ನಿಮ್ಮದೇ ಸ್ವಂತ ಕ್ರಿಯೇಟಿವಿಟಿ ಬಳಸಿ ಸುಂದರವಾಗಿಸಬಹುದು. ಹಳೆಯ ಲೈಟ್ ಬಲ್ಬ್ ಗಳನ್ನು ಮರುಬಳಕೆ ಮಾಡಿ ಮನೆಯನ್ನು ಅಲಂಕರಿಸಬಹುದು. ಯಾವುದೇ ಬಲ್ಬ್ ಮತ್ತು ಯಾವುದೇ ವಿಧಧ ಹಳೆಯ ಬಲ್ಬ್ ಗಳನ್ನು ಡೆಕೊರೇಷನ್ ಗಾಗಿ ಬಳಸಿಕೊಳ್ಳಬಹುದು. ಅದರ ಕೆಲವು ಉಪಾಯಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.
ವಿಧಾನ 1
ಬಣ್ಣದ ಬೆಳಕಿನ ಬಲ್ಬ್ ಗಳನ್ನು ತಯಾರಿಸುವುದು
1. ಸ್ಪಷ್ಟವಾಗಿರುವ 40 ವ್ಯಾಟ್ ನ ಬಲ್ಬ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. 40 ವ್ಯಾಟ್ ಗಿಂತ ಕಡಿಮೆ ಸಾಮರ್ಥ್ಯದ ಬೆಳಕಿನ ಬಲ್ಬ್ ಗಳು ಕೂಡ ಈ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ನೀವು ಬಳಸುವ ಪೇಯಿಂಟ್ ಬಲ್ಬ್ ನಲ್ಲಿ ಬೆಳಕು ಉರಿದಾಗ ಅದರ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆಯೇ ಎಂಬ ಬಗ್ಗೆ ನೀವು ಖಾತ್ರಿ ಮಾಡಿಕೊಳ್ಳುವುದು ಬಹಳ ಮುಖ್ಯ. ಕ್ಲಿಯರ್ ಬಲ್ಬ್ ಗಳು ಬಣ್ಣದ ಮೂಲಕ ಹೊಳೆಯುವ ಬೆಳಕಿನ ಪರಿಣಾಮವನ್ನು ಉತ್ತಮವಾಗಿ ನೀಡಬಲ್ಲವು. ನೀವು ಫ್ರಾಸ್ಟೆಡ್ ಬಲ್ಬ್ ಗಳನ್ನು ಬಳಸಬಹುದು. ಆದರೆ ಇದರ ಮೂಲಕ ಬರುವ ಬಣ್ಣದ ಬೆಳಕು ಎದ್ದು ಕಾಣುವಂತಿರುವುದಿಲ್ಲ.
2. ವಿಶೇಷವಾಗಿ ಶಾಖ-ನಿರೋಧಕವಾಗಿರುವ ಗಾಜಿಗೆ ಬಳಸಬಹುದಾದ ಪೇಯಿಂಟ್ ಗಳನ್ನು ಖರೀದಿ ಮಾಡಿ. ಸ್ಥಳೀಯ ಕ್ರಾಫ್ಟ್ ಸ್ಟೋರ್ ನಿಂದ ಪೇಯಿಂಟ್ ಅನ್ನು ಖರೀದಿಸುವಾಗ ಗಾಜಿಗಾಗಿಯೇ ತಯಾರಿಸಲಾಗಿರುವ ಪೇಯಿಂಟ್ ಅಥವಾ ಸಿರಮಿಕ್ಸ್ ಪೇಯಿಂಟ್ ಗೆ ಸುರಕ್ಷಿತವಾಗಿರುವ ಪೇಯಿಂಟ್ ಗಳನ್ನು ಹುಡುಕಿ ಖರೀದಿ ಮಾಡಿಕೊಳ್ಳಿ. ಬೆಳಕಿನ ಬಲ್ಬ್ ಗಳಿಗೆ ರೆಗ್ಯುಲರ್ ಆಗಿ ಬಳಕೆ ಮಾಡಲಾಗುವ ಆಕ್ರಿಲಿಕ್ ಅಥವಾ ತೈಲ-ಆಧಾರಿತ ಬಣ್ಣವನ್ನು ಬಳಸಬೇಡಿ. ಒಂದು ವೇಳೆ ನೀವು ಲೈಟ್ ಬಲ್ಬ್ ಗಳಿಗೆ ಅಥವಾ ಹಾಟ್ ಗ್ಲಾಸ್ ಗಳಿಗೆ ಸಾಮಾನ್ಯವಾಗಿ ಬಳಕೆ ಮಾಡಲಾಗುವ ಪೇಯಿಂಟ್ ಗಳನ್ನು ಬಳಕೆ ಮಾಡಿದರೆ ಶಾಖಕ್ಕೆ ಸಿಡಿಯುವ ಸಾಧ್ಯತೆ ಇರುತ್ತದೆ.
ಬಲ್ಬ್ ಗಳಿಗೆ ಬಳಕೆ ಮಾಡಬಹುದಾದ ಪೇಯಿಂಟ್ ಗಳೆಂದರೆ ಉದಾಹರಣೆಗೆ ಡೆಕೋ ಆರ್ಟ್ ಗ್ಲಾಸ್-ಟಿಕ್ಸ್, ಡೆಕೋರ್ಟ್ ಲಿಕ್ವಿಡ್ ರೈಂಬೋ, ಫೋಕ್ ಆರ್ಟ್ ಗ್ಯಾಲರಿ ಗ್ಲಾಸ್ ಲಿಕ್ವಿಡ್ ಲೀಡಿಂಗ್ ಮತ್ತು ಪೆಬಿಯೋ ಅವರ ವಿಟ್ರಿಯಾ.
ಬಣ್ಣದ ಬೆಳಕಿನ ಬಲ್ಬ್ ಗಳನ್ನು ತಯಾರಿಸುವುದು
3. ರಬ್ಬಿಂಗ್ ಆಲ್ಕೋಹಾಲ್ ಬಳಸಿ ಮೊದಲಿಗೆ ಪೇಯಿಂಟ್ ಮಾಡಲು ತೆಗೆದುಕೊಂಡಿರುವ ಬಲ್ಬ್ ಅನ್ನು ಸ್ವಚ್ಛಗೊಳಿಸಿ. ಪೇಯಿಂಟ್ ಗಾಗಿ ನೀವು ಸ್ವಚ್ಛವಾಗಿರುವ, ಧೂಳು ಮುಕ್ತವಾಗಿರುವ ಮೇಲ್ಮೈಯನ್ನು ಹೊಂದಿರಬೇಕು. ಆಗ ಮಾತ್ರವೇ ಬಣ್ಣವು ಬಲ್ಬ್ ಗೆ ಚೆನ್ನಾಗಿ ಅಂಟಿಕೊಳ್ಳುತ್ತದೆ. ಹತ್ತಿಯ ತುಂಡಿಗೆ ರಬ್ಬಿಂಗ್ ಆಲ್ಕೋಹಾಲ್ ಅನ್ನು ಹಾಕಿಕೊಳ್ಳಿ ಮತ್ತು ಬಲ್ಬ್ ಅನ್ನು ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿ.
ರಬ್ಬಿಂಗ್ ಆಲ್ಕೋಹಾಲ್ ನಿಮ್ಮ ಬಳಿ ಇಲ್ಲದೇ ಇದ್ದಲ್ಲಿ ಸೋಪು ಮತ್ತು ನೀರನ್ನು ಕೂಡ ಬಳಕೆ ಮಾಡಬಹುದು. ಸ್ವಚ್ಛವಾಗಿರುವ ಟಬೆಲ್ ಬಳಸಿ ಬಲ್ಬ್ ನ್ನು ಒಣಗಿಸಿ ಅಥವಾ ಒಂದರಿಂದ ಎರಡು ನಿಮಿಷ ಗಾಳಿಯಲ್ಲಿಟ್ಟು ಒಣಗಿಸಿ.
4. ನೀವು ಬಲ್ಬ್ ಗೆ ಪೇಯಿಂಟ್ ಮಾಡುವಾಗ ಗಾಜು ನಿಮ್ಮ ಕೈಯಿಂದ ಜಾರಿ ಹೋಗದಂತೆ ಭದ್ರ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಬಲ್ಬಿನ ಮೇಲ್ಬಾಗಕ್ಕೆ ಅಂಟಿಸಿಕೊಳ್ಳಬಹುದಾದ "ಬ್ಲೂ ಟ್ಯಾಕ್" ನ್ನು ಹಾಕಿಕೊಳ್ಳುವುದು ಒಳ್ಳೆಯದು. ಇದು ನಿಮಗೆ ಬಲ್ಬ್ ಹಿಡಿದುಕೊಳ್ಳುವುದಕ್ಕೆ ಗ್ರಿಪ್ ನೀಡುತ್ತದೆ. ಕ್ರಾಫ್ಟ್ ಸ್ಟೋರ್ ಗಳಲ್ಲಿ ಮತ್ತು ಆಫೀಸ್ ವಸ್ತುಗಳನ್ನು ಸರಬರಾಜು ಮಾಡುವ ಅಂಗಡಿಗಳಲ್ಲಿ ಇವುಗಳು ಖರೀದಿಗೆ ಲಭ್ಯವಿರುತ್ತದೆ. ಬ್ಲೂ ಟ್ಯಾಕ್ ಇಲ್ಲದೇ ಇದ್ದಲ್ಲಿ ಗಾಳಿಯಲ್ಲಿ ಬೇಗನೆ ಒಣಗುವಂತಹ ಕ್ಲೇಗಳನ್ನು ಕೂಡ ಬಳಕೆ ಮಾಡಬಹುದು ಅಥವಾ ಇತರೆ ಯಾವುದೇ ನಿಮಗೆ ಆರಾಮವಾಗುವ ವಸ್ತುವನ್ನು ಬಳಕೆ ಮಾಡಿ ಬಲ್ಬ್ ಪೇಯಿಂಟ್ ಮಾಡುವಾಗ ಜಾರದಂತೆ ಜಾಗೃತೆ ಮಾಡಿಕೊಳ್ಳಬಹುದು.
ಬಣ್ಣದ ಬೆಳಕಿನ ಬಲ್ಬ್ ಗಳನ್ನು ತಯಾರಿಸುವುದು
5. ಪೇಯಿಂಟ್ ಅನ್ನು ಹಚ್ಚುವುದಕ್ಕೆ ಸಣ್ಣ ಬ್ರಷ್ ಗಳನ್ನು ಬಳಕೆ ಮಾಡಿ. ಮೊದಲು ಬಣ್ಣವನ್ನು ಬೆಳಕಿನಲ್ಲಿ ಹಚ್ಚಿ. ತೆಳುವಾದ ಪದರವನ್ನು ಮಾಡಿ ಮತ್ತು ಹೇಗೆ ಕಾಣುತ್ತದೆ ಎಂಬುದನ್ನು ಗಮನಿಸಿ. ಯಾವುದೇ ರೀತಿಯ ಡಿಸೈನ್ ಮಾಡುವುದಕ್ಕೂ ನಿಮಗೆ ಸ್ವಾತಂತ್ರ್ಯವಿದೆ. ನಿಮ್ಮ ಇಚ್ಛೆಗೆ ಅನುಸಾರವಾಗಿ ಪೇಯಿಂಟ್ ಮಾಡಬಹುದು. ಚಿತ್ರವು ತಪ್ಪಾದರೆ ಪೇಪರ್ ಬಳಸಿ ನಿಧಾನವಾಗಿ ಉಜ್ಜಿ ತೆಗೆಯಬಹುದು. ನಕ್ಷತ್ರಗಳಿಂದ ಮತ್ತು ಹೂವುಗಳಿಂದ ಅಥವಾ ಸರಳವಾಗಿ ಬ್ಲಾಕ್ ಗಳನ್ನು ಬಣ್ಣಬಣ್ಣವಾಗಿ ಡಿಸೈನ್ ಮಾಡಬಹುದು ಅಥವಾ ಮಳೆಬಿಲ್ಲಿನಂತಹ ಡಿಸೈನ್ ಕೂಡ ಮಾಡಬಹುದು. ಕಸ್ಟಮ್ ಹಾಲಿಡೇ ಲೈಟ್ಸ್ ಗಳಿಗಾಗಿ ನಿಮ್ಮ ಬಲ್ಬ್ ಗಳನ್ನು ಕೆಂಪು ಮತ್ತು ಹಸಿರು ಅಥವಾ ಸ್ನೋಫ್ಲೆಕ್ಸ್ ಗಳಿಂದ ಕೂಡ ಡಿಸೈನ್ ಮಾಡಬಹುದು.
6. ಪೇಯಿಂಟ್ ಕೆಲಸ ಮುಗಿದ ನಂತರ ಪೇಯಿಂಟ್ ಡ್ರೈ ಆಗುವುದಕ್ಕಾಗಿ ಗಾಳಿಯಲ್ಲಿಡಿ. ಕನಿಷ್ಟ ಒಂದು ಘಂಟೆಯ ಅವಧಿಯಾದರೂ ಬೇಕಾಗುತ್ತದೆ. ಒಂದು ವೇಳೆ ನೀವು ಏರ್-ಡ್ರೈ ಗ್ಲಾಸ್ ಪೇಯಿಂಟ್ ಬಳಸಿದ್ದೇ ಆದಲ್ಲಿ ಟ್ಯಾಕ್ ನಲ್ಲಿಯೇ ನಿಲ್ಲಿಸಿಡುವಂತಿಟ್ಟು ಒಂದು ಘಂಟೆ ಒಣಗಿಸಿ. ಹೀಗೆ ಒಣಗಲು ಇಟ್ಟಾಗ ಬಲ್ಬ್ ನಲ್ಲಿ ಮುಟ್ಟಿ ನೋಡಿ ಒಣಗಿದೆಯೇ ಎಂದು ಟೆಸ್ಟ್ ಮಾಡಬೇಡಿ. ಹಚ್ಚಿರುವ ಪೇಯಿಂಟ್ ನಲ್ಲಿ ಬೆರಳಿನ ಗುರುತಾಗುವ ಸಾಧ್ಯತೆ ಇರುತ್ತದೆ ಮತ್ತು ಆ ಮೂಲಕ ನಿಮ್ಮ ಡಿಸೈನ್ ಹಾಳಾಗಬಹುದು. ಸಂಪೂರ್ಣ ಒಣಗುವ ತನಕ ತಾಳ್ಮೆಯಿಂದ ಕಾಯಿರಿ.
ಬಣ್ಣದ ಬೆಳಕಿನ ಬಲ್ಬ್ ಗಳನ್ನು ತಯಾರಿಸುವುದು
7. ಬಣ್ಣದ ಗಾಢತೆ ಹೆಚ್ಚು ಬೇಕು ಎಂದು ನೀವು ಬಯಸಿದ್ದೇ ಆದಲ್ಲಿ ಹೆಚ್ಚುವರಿ ಪದರವನ್ನು ಸೇರಿಸಬಹುದು. ಕೆಲವು ಗ್ಲಾಸ್ ಪೇಯಿಂಟ್ ಗಳು ಹೆಚ್ಚುವರಿ ಪದರವನ್ನು ಹಾಕಿದಾಗ ಮಾತ್ರವೇ ಉತ್ತಮ ಪರಿಣಾಮವನ್ನು ನೀಡಬಲ್ಲವು. ಪ್ರತಿ ಬಾರಿ ಹೊಸ ಪದರವನ್ನು ಹಚ್ಚಿದಾಗಲೂ ಒಣಗಿಸಿಕೊಂಡ ನಂತರವೇ ಮತ್ತೊಂದು ಕೋಟಿಂಗ್ ಮಾಡಬೇಕು.
8. ಒಂದು ವೇಳೆ ನೀವು ಬಳಸಿದ ಪೇಯಿಂಟ್ ಬಿಸಿಯನ್ನು ಬೇಡಿದರೆ ಓವನ್ ನಲ್ಲೂ ಕೂಡ ಮಾಡಬಹುದು. ಕೆಲವು ಗ್ಲಾಸ್ ಪೇಯಿಂಟ್ ಗಳು ಅದರಲ್ಲೂ ಪ್ರಮುಖವಾಗಿ ಸಿರಮಿಕ್ಸ್ ಗಾಗಿ ಬಳಕೆ ಮಾಡಲಾಗುವ ಪೇಯಿಂಟ್ ಗಳು ಹೀಟ್ ಕ್ಯೂರಿಂಗ್(ಶಾಖ ನೀಡುವಿಕೆ)ನ್ನು ಬೇಡುತ್ತವೆ. ಓವನ್ ನಲ್ಲಿ ಯದ್ವಾತದ್ವಾ ಹೇಗ್ಹೇಗ್ಹೋ ಮಾಡುವುದಲ್ಲ. ಬದಲಾಗಿ ನೀವು ಬಳಸಿದ ಪೇಯಿಂಟ್ ನಲ್ಲಿ ಒಂದು ವೇಳೆ ಕ್ಯೂರಿಂಗ್ ನ ಅಗತ್ಯತೆ ಇದ್ದಲ್ಲಿ ಹೇಗೆ ಅನುಸರಿಸಬೇಕು ಎಂಬ ಸೂಚನೆಗಳನ್ನು ಪ್ಯಾಕೆಟ್ ನಲ್ಲಿ ನೀಡಲಾಗಿರುತ್ತದೆ. ಆ ಸೂಚನಾ ಕ್ರಮವನ್ನು ನಿರ್ದಷ್ಟವಾಗಿ ಅನುಸರಿಸಿ.
ಲೈಟ್ ಬಲ್ಬ್ ಗಳನ್ನು ಹೀಟ್ ಮಾಡುವ ಮುನ್ನ ಯಾವುದೇ ರೀತಿಯ ಅಡುಗೆ ವಸ್ತುಗಳು ಅಥವಾ ಪದಾರ್ಥಗಳು ಓವನ್ ನಲ್ಲಿದ್ದಲ್ಲಿ ಅದನ್ನು ತೆಗೆಯುವುದನ್ನು ಮರೆಯಬೇಡಿ. ನಿಮ್ಮ ಪೇಯಿಂಟ್ ಪ್ಯಾಕೆಟ್ ನ ಸೂಚನೆಯಲ್ಲಿ ಓವನ್ ನಲ್ಲಿ ಬಿಸಿ ಮಾಡಬೇಕು ಎಂದಿದ್ದಲ್ಲಿ ಸುರಕ್ಷಿತವಾಗಿ ಓವನ್ ಪಾನ್ ನಲ್ಲಿ ಬಲ್ಬ್ ಇಡುವುದನ್ನು ಮರೆಯಬೇಡಿ. ಕ್ಯೂರಿಂಗ್ ಆದ ನಂತರ ಬಲ್ಬ್ ಸಂಪೂರ್ಣ ತಣ್ಣಗಾಗುವವರೆಗೆ ಓವನ್ ನಲ್ಲಿ ಇಡಿ.
ವಿಧಾನ 2
ಹೂದಾನಿಗಳನ್ನು ತಯಾರಿಸುವುದು
1. ಹಿತ್ತಾಳೆಯ ಸಂಪರ್ಕವನ್ನು ಕಡಿದು ಹಾಕುವುದಕ್ಕಾಗಿ ಸೂಜಿ ಅಥವಾ ತಂತಿಗಳನ್ನು ಬಗ್ಗಿಸುವ ಅಥವಾ ಕತ್ತರಿಸುವ ಇಕ್ಕಳವನ್ನು ಬಳಸಿ. ಬಲ್ಬ್ ನ ಕೊನೆಯಲ್ಲಿರುವ ಸಣ್ಣ ಬಿಂದುವನ್ನು ಹಿಡಿದುಕೊಳ್ಳುವುದಕ್ಕಾಗಿ ನೀವು ಸೂಜಿ-ತಂತಿಗಳನ್ನು ಬಗ್ಗಿಸುವ, ಕತ್ತರಿಸುವ ಇಕ್ಕಳದ ಸಹಾಯದಿಂದ ಟ್ವಿಸ್ಟ್ ಅಥವಾ ಅದಕ್ಕೊಂದು ವಿಶೇಷ ತಿರುವು ನೀಡಬಹುದು. ಹೀಗೆ ಮಾಡುವುದರಿಂದಾಗಿ ಹಿತ್ತಾಳೆಯ ಸಂಪರ್ಕವನ್ನು ಕಡಿಯಬಹುದು. ಇಕ್ಕಳದ ಸಹಾಯದಿಂದ ಇದನ್ನು ಎಳೆದು ಕೂಡ ತೆಗೆಯಬಹುದು. ಸ್ವಲ್ಪ ನಾಜೂಕಿನ ಕೆಲಸವೂ ಹೌದು. ಈ ಕೆಲಸವನ್ನು ಮಾಡುವಾಗ ಕೈಗಳಿಗೆ ಗ್ಲೌಸ್ ಮತ್ತು ಕಣ್ಣುಗಳಿಗೆ ರಕ್ಷಾ ಕವಚವನ್ನು ಹಾಕಿಕೊಳ್ಳಿ. ಒಂದು ವೇಳೆ ಕೈತಪ್ಪಿ ಬಲ್ಬ್ ಒಡೆದರೂ ಕೂಡ ನಿಮಗೆ ಯಾವುದೇ ಗಾಯಗಳು ಅಥವಾ ಸಮಸ್ಯೆ ಆಗದಂತೆ ರಕ್ಷಿಸಿಕೊಳ್ಳಿ.
2. ಬಲ್ಬ್ ಒಳಗಿನ ಫಿಲ್ ಟ್ಯೂಬ್ ನ್ನು ಮುರಿಯಲು ಸ್ಕ್ರೂಡ್ರೈವರ್ ನ್ನು ಬಳಕೆ ಮಾಡಿ. ಬಲ್ಬ್ ಒಳಗೆ ನೀವು ನೋಡಿದರೆ ಸಣ್ಣ ಟ್ಯೂಬ್ ವೊಂದು ಅಲ್ಲಿನ ಭಾಗಗಳಿಗೆ ಸಂಪರ್ಕ ಹೊಂದಿರುವುದನ್ನು ನೀವು ಗಮನಿಸಬಹುದು. ಸ್ಕ್ರೂಡ್ರೈವರ್ ಬಳಸಿ ಅದನ್ನು ಅಗೆದು ಟ್ಯೂಬ್ ನ್ನು ಮುರಿಯಬಹುದು. ಒಮ್ಮೆ ನೀವು ಅದನ್ನು ಹೊರಹಾಕಿದ ನಂತರ ಉಳಿದ ಸಣ್ಣ ಸಣ್ಣ ಭಾಗಗಳನ್ನು ಬಲ್ಬ್ ಒಳಗಿನಿಂದ ಅಲ್ಲಾಡಿಸಿ ತೆಗೆಯಬಹುದು. ಬಲ್ಬ್ ಒಳಗಿರುವ ಅಂಶಗಳನ್ನು ಪೇಪರ್ ಟವೆಬ್ ಬಳಿ ಅಥವಾ ಬಟ್ಟೆಯನ್ನು ಬಳಸಿ ಖಾಲಿ ಮಾಡಿಕೊಳ್ಳಿ.
ಹೂದಾನಿಗಳನ್ನು ತಯಾರಿಸುವುದು
3. ಸಾಬೂನಿನ ನೀರಿನಿಂದ ಬಲ್ಬ್ ನ ಒಳಭಾಗವನ್ನು ಕ್ಲೀನ್ ಮಾಡಿ. ನಿಮ್ಮ ಖಾಲಿಯಾದ ಲೈಟ್ ಬಲ್ಬ್ ನ್ನು ಅಡುಗೆ ಮನೆಯ ಸಿಂಕ್ ಬಳಿ ತೆಗೆದುಕೊಂಡು ಹೋಗಿ. ಸ್ವಲ್ಪ ನೀರಿನಿಂದ ಅದನ್ನು ಭರ್ತಿ ಮಾಡಿ ಮತ್ತು ಪಾತ್ರೆ ತೊಳೆಯುವ ಡಿಟರ್ಜೆಂಟ್ ನ್ನು ಅದಕ್ಕೆ ಹಾಕಿ. ಚೆನ್ನಾಗಿ ಅಲ್ಲಾಡಿಸಿ ನೊರೆ ಮಾಡಿ ನಂತರ ಚೆಲ್ಲಿಬಿಡಿ. ಹೀಗೆ ಬಲ್ಬ್ ನ್ನು ಕ್ಲೀನ್ ಮಾಡಿಕೊಳ್ಳಬಹುದು.
4. ಪೇಪರ್ ಟವೆಲ್ ಬಳಸಿ ಲೈಟ್ ಬಲ್ಬ್ ಅನ್ನು ಒಣಗಿಸಿ. ಚೂರುಚೂರು ಮಾಡಿಕೊಂಡ ಪೇಪರ್ ಟವೆಲ್ ಅಥವಾ ಟಿಶ್ಯೂವನ್ನು ಬಲ್ಬ್ ಒಳಗೆ ತುಂಬಿಸಿ ಕೂಡ ಒಣಗಿಸಬಹುದು. ಹೀಗೆ ಮಾಡುವುದರಿಂದಾಗಿ ಬಲ್ಬ್ ಒಳಗೆ ಯಾವುದಾದರೂ ಪೌಡರ್ ಅಥವಾ ಗಾಜಿನ ತುಂಡುಗಳಿದ್ದಲ್ಲಿ ಹೊರಗೆ ಹೋಗುತ್ತದೆ. ಗಾಳಿಯಲ್ಲಿ ಹರಡಿಟ್ಟು ಸಂಪೂರ್ಣ ಒಣಗುವುದಕ್ಕೆ ಅವಕಾಶ ಮಾಡಿಕೊಡಿ.
ಹೂದಾನಿಗಳನ್ನು ತಯಾರಿಸುವುದು
5. ಸ್ವಲ್ಪ ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡುವುದಕ್ಕಾಗಿ ಸ್ಕ್ರೂಡ್ರೈವರ್ ಗೆ ಅಥವಾ ಗಾಜಿಗೆ ಬಣ್ಣವನ್ನು ಮಾಡಿ. ನೈಲ್ ಪಾಲಿಶ್ ಅಥವಾ ಯಾವುದೇ ರೀತಿಯ ಅಕ್ರಾಲಿಕ್ ಪೇಯಿಂಟ್ ಅನ್ನು ಬಳಸಿ ನಿಮ್ಮದೇ ಶೈಲಿಯ ಚಿತ್ರವನ್ನು ಹೂದಾನಿಗಳಲ್ಲಿ ಬಿಡಿಸಬಹುದು ಅಥವಾ ಸಿಂಪಲ್ ಲುಕ್ ಗಾಗಿ ಕೇವಲ ಕ್ಯಾಪ್ ಅನ್ನು ಮಾತ್ರವೇ ಪೇಯಿಂಟ್ ಮಾಡಬಹುದು. ಹೂವುಗಳು ಅಥವಾ ನೀರನ್ನು ನಿಮ್ಮ ಹೂದಾನಿಗೆ ಸೇರಿಸುವ ಮೊದಲು ಪೇಯಿಂಟ್ ನ್ನು ಸಂಪೂರ್ಣ ಒಣಗಲು ಬಿಡಿ. ನಂತರವಷ್ಟೇ ನೀರು ಮತ್ತು ಹೂವುಗಳನ್ನು ಸೇರಿಸಿ. ಬಲ್ಬ್ ನಿಂದ ತಯಾರಿಸಿದ ಹೂದಾನಿಗೆ ನೀರನ್ನು ಹಾಕಿ ಸಣ್ಣಸಣ್ಣ ಹೂವುಗಳನ್ನು ಅದರೊಳಗೆ ಹಾಕಬಹುದು. ಆದರೆ ಅದರ ತೂಕವು ಆರಾಮವಾಗಿ ಹೂದಾನಿಯು ನಿಲ್ಲುವಂತಿರಬೇಕು ಎಂಬುದು ನಿಮ್ಮ ಗಮನದಲ್ಲಿ ಇರಲಿ.
6. ಹಳ್ಳಿಗಾಡಿನ ಲುಕ್ ಬರುವುದಕ್ಕಾಗಿ ಸೆಣಬಿನ ತುಂಡನ್ನು ನೀವು ಸ್ಕ್ರೂಡ್ರೈವರ್ ಬಳಿ ಸುತ್ತಬಹುದು. ಒಂದು ವೇಳೆ ನಿಮ್ಮ ಹೂದಾನಿಯನ್ನು ನೇತಾಡುವಂತೆ ಇಡಬೇಕು ಎಂದು ಬಯಸಿದರೆ ರಿಬ್ಬನ್ನು ಅಥವಾ ಸುಂದರವಾಗಿ ಕಾಣುವ ಯಾವುದೇ ಹಗ್ಗದಿಂದಲೂ ಕೂಡ ಬಂಧಿಸಬಹುದು. ಹುಕ್ ಗಳನ್ನು ಬಳಸಿ ಅಥವಾ ಕೊಕ್ಕೆಗಳಲ್ಲಿ ಇವುಗಳನ್ನು ನೇತಾಡುವಂತೆ ಮಾಡಬಹುದು. ಮನೆಯ ಯಾವುದೇ ಪ್ರದೇಶದಲ್ಲಿ ಹಾಕಿದರೂ ಕೂಡ ಸುಂದರವಾಗಿರುತ್ತದೆ. ನಿಮಗಿಷ್ಟವೆನಿಸುವ ಜಾಗದಲ್ಲಿಟ್ಟು ಮನೆಯನ್ನು ಅಲಂಕರಿಸಬಹುದು.
ಮನೆಯ ಅಲಂಕಾರಕ್ಕಾಗಿ ಅದೆಷ್ಟೋ ನಿರುಪಯುಕ್ತ ವಸ್ತುಗಳೇ ಪ್ರಯೋಜನಕ್ಕೆ ಬರುತ್ತದೆ. ಅದಕ್ಕಾಗಿ ನೀವು ಸ್ವಲ್ಪ ಸಮಯ ಮತ್ತು ತಲೆ ಖರ್ಚು ಮಾಡಬೇಕಷ್ಟೇ! ಹೌದು, ಕ್ರಿಯೇಟಿವಿಟಿ ಅನ್ನೋದು ನಿಮ್ಮದೇ ಸ್ವಂತ ಸ್ವತ್ತು. ಅದನ್ನು ನೀವು ಬಳಸಿಕೊಳ್ಳಬೇಕು ಅಷ್ಟೇ. ಆಗ ಉಳಿತಾಯದ ಜೊತೆಗೆ ಮನೆಯ ಅಲಂಕಾರವನ್ನೂ ಮಾಡಬಹುದು.