For Quick Alerts
ALLOW NOTIFICATIONS  
For Daily Alerts

ಕಾರ್ಪೆಟ್ ಮೇಲೆ ಬಿದ್ದ ಒಡೆದ ಗಾಜುಗಳನ್ನು ಸ್ವಚ್ಛಗೊಳಿಸುವುದು ಹೇಗೆ?

By Super
|

ಕಾರ್ಪೆಟ್ ಮೇಲೆ ಬಿದ್ದ ಒಡೆದ ಗಾಜುಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆ ಅಂದ ಮೇಲೆ ಗಾಜಿನ ವಸ್ತುಗಳು ಇರುವುದಿಲ್ಲವೆ, ಅದು ಇದ್ದ ಮೇಲೆ ಅಪ್ಪಿ-ತಪ್ಪಿ ಅವು ಬೀಳುವುದಿಲ್ಲವೆ? ಒಂದು ವೇಳೆ ಅವು ನಾವು ಹಾಸಿದ ಕಾರ್ಪೆಟ್ ಮೇಲೆ ಬಿದ್ದು, ಸಿಕ್ಕಿಕೊಂಡರೆ? ಆಗ ಅದರ ಮೇಲೆ ಓಡಾಡುವ ಮನೆಯವರಿಗು ಮತ್ತು ನಮ್ಮ ಮನೆಯ ಸಾಕು ಪ್ರಾಣಿಗಳಿಗು ಎರಡಕ್ಕು ತೊಂದರೆ ಕಟ್ಟಿಟ್ಟ ಬುತ್ತಿ.

ಕಾರ್ಪೆಟ್ ಮೇಲೆ ಗಾಜು ಒಡೆದು ಬಿದ್ದಾಗ, ಅದನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯು ಸ್ವಲ್ಪ ಕಷ್ಟವೇ ಆಗುತ್ತದೆ. ಒಂದು ವೇಳೆ ಗಾಜಿನ ಚೂರುಗಳು ನೆಲದ ಮೇಲೆ ಬಿದ್ದರೆ, ತಕ್ಷಣ ಅದನ್ನು ಪೊರಕೆಯಿಂದ ಗುಡಿಸಿ ಬಿಸಾಡಬಹುದು. ಆದರೆ ಅದೇ ಗಾಜಿನ ತುಂಡುಗಳು ಕಾರ್ಪೆಟ್ ಮೇಲೆ ಬಿದ್ದರೆ, ಆಗ ಅವುಗಳನ್ನು ತೆಗೆಯಲು

ನಿಮಗೆ ಸ್ವಲ್ಪ ತಾಳ್ಮೆಯ ಅಗತ್ಯವಿರುತ್ತದೆ. ಏಕೆಂದರೆ ಇದು ನೀವು ಅಂದುಕೊಂಡಷ್ಟು ಸುಲಭದ ಕೆಲಸವಾಗಿರುವುದಿಲ್ಲ. ನಿಮ್ಮ ಕೈಗೆ ಗಾಯಗಳಾಗದಂತೆ ಈ ಗಾಜಿನ ಚೂರುಗಳನ್ನು ತೆಗೆಯುವ ಶ್ರಮ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ. ಇದನ್ನು ಹೇಗೆ ಮಾಡುವುದು ಎಂಬುದು ನಿಮ್ಮ ಸಂಶಯವಾದರೆ, ಅದಕ್ಕಾಗಿ ನಾವು ನೀಡಿರುವ ಸಲಹೆಗಳನ್ನು ಓದಿ.

ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಿ
ಮೊದಲಿಗೆ ನಿಮ್ಮ ಮನೆಯಲ್ಲಿನ ಸಾಕು ಪ್ರಾಣಿಗಳನ್ನು ಒಡೆದ ಗಾಜಿನ ಚೂರುಗಳಿರುವ ಕಾರ್ಪೆಟ್‍ನಿಂದ ದೂರ ಕಳುಹಿಸಿ. ಆ ಜಾಗದಲ್ಲಿ ಕಾಲಿಡುವ ಮೊದಲು ನೀವು ಶೂ ಧರಿಸಿಕೊಳ್ಳಿ. ಹೀಗೆ ಈ ಗಾಜಿನ ಚೂರುಗಳನ್ನು ಸ್ವಚ್ಛಗೊಳಿಸುವ ಮೊದಲು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಿ.

How To Clean Up Broken Glass On Carpet?

ನಿಮ್ಮ ಕೈಗಳನ್ನು ರಕ್ಷಿಸಲು ಏನನ್ನಾದರು ಧರಿಸಿ
ಕಾರ್ಪೆಟ್ ಮೇಲೆ ಬಿದ್ದ ಒಡೆದ ಗಾಜುಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮೊದಲು ಕೈಗಳಿಗೆ ಗವಸು ಧರಿಸಿ ಮತ್ತು ನಿಧಾನವಾಗಿ ಗಾಜಿನ ತುಂಡುಗಳನ್ನು ಹೆಕ್ಕಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಕೈಗವಸು ಇಲ್ಲದಿದ್ದಲ್ಲಿ, ಚಿಕ್ಕ ಚಿಕ್ಕ ಗಾಜಿನ ತುಂಡುಗಳು ನಿಮ್ಮ ಕೈಗೆ ಗಾಯವನ್ನುಂಟು ಮಾಡಬಹುದು. ಬೆರಳುಗಳನ್ನು ಕೊಯ್ಯಬಹುದು ಎಚ್ಚರ. ಇದರಿಂದ ರಕ್ತವೇನಾದರು ಬಂದು, ಅದು ಕಾರ್ಪೆಟ್ ಮೇಲೆ ಬಿದ್ದರೆ, ಅದು ಮತ್ತಷ್ಟು ಅಸಹ್ಯವಾಗಿ ಕಾಣುತ್ತದೆ. ಜೊತೆಗೆ ಗಾಯವು ನಿಮಗೆ ಅಪಾಯವನ್ನು ಸಹ ತಂದೊಡ್ಡಬಹುದು. ಮನೆಯ ಬಾತ್ ರೂಮ್‌ ಟೈಲ್ಸ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಹಳೆಯ ದಿನಪತ್ರಿಕೆಯನ್ನು ತೆಗೆದುಕೊಳ್ಳಿ
ಆ ಒಡೆದ ಗಾಜಿನ ತುಂಡುಗಳನ್ನು ದಿನಪತ್ರಿಕೆಯ ಮೇಲೆ ತೆಗೆದುಕೊಳ್ಳಿ. ಅವುಗಳನ್ನು ಜಾಗರೂಕತೆಯಿಂದ ಸುತ್ತಿಕೊಂಡು ಎಸೆಯಲು ಪಕ್ಕಕ್ಕಿಡಿ. ಇದೇ ಪ್ರಕ್ರಿಯೆಯನ್ನು ಆ ಸ್ಥಳದಿಂದ ದೊಡ್ಡ ಗಾಜಿನ ತುಂಡುಗಳನ್ನು ಸಂಪೂರ್ಣ ಹೊರತೆಗೆಯುವವರೆಗೆ ಪುನರಾವರ್ತಿಸಿ. ಹೀಗೆ ಮಾಡುವಾಗ ಯಾವುದೇ ಕಾರಣಕ್ಕು ಇರುವ ಗಾಜಿನ ಚೂರುಗಳನ್ನು ನಿಮ್ಮ ಕಾರ್ಪೆಟ್‍ಗೆ ಸಿಕ್ಕಿಸದಂತೆ ಎಚ್ಚರವಹಿಸಿ. ಏಕೆಂದರೆ ಇವು ಒಮ್ಮೆ ಕಾರ್ಪೆಟ್‍ಗೆ ನಾಟಿಕೊಂಡರೆ ಬಿಡಿಸುವುದು ತುಂಬಾ ಕಷ್ಟ. ಜೊತೆಗೆ ಇವುಗಳನ್ನು ನೀವು ಗಮನಿಸದಿದ್ದಲ್ಲಿ, ಮುಂದೆ ಅದರಿಂದ ನಿಮಗೆ ಅಥವಾ ನಿಮ್ಮ ಮನೆಯವರಿಗೆ ಗಾಯಗಳಾಗುವುದು ನಿಶ್ಚಿತ.

ವ್ಯಾಕ್ಯೂಮ್ ಕ್ಲೀನರ್ ಬಳಸಿ
ಈಗ ವ್ಯಾಕ್ಯೂಮ್ ಕ್ಲೀನರ್ ತೆಗೆದುಕೊಂಡು ಅದನ್ನು ಗಾಜಿನ ಚೂರು ಬಿದ್ದ ಕಡೆಯಲ್ಲಿ ಚಲಾಯಿಸಿ. ನಂತರ ನಿಮ್ಮ ಡಸ್ಟ್ ಬಿನ್ ಮತ್ತು ವ್ಯಾಕ್ಯೂಮ್ ಕ್ಲೀನರನ್ನು ಖಾಲಿ ಮಾಡಿ. ಒಂದು ವೇಳೆ ಇವುಗಳನ್ನು ಖಾಲಿ ಮಾಡದಿದ್ದರೆ, ಆಕಸ್ಮಿಕವಾಗಿ ನಿಮ್ಮ ಮನೆಯವರು ಅದರಲ್ಲಿ ಕೈ ಇಟ್ಟು ಗಾಯ ಮಾಡಿಕೊಳ್ಳಬಹುದು. ಅದು ಸಹ ಅಪಾಯಕಾರಿಯಾದ್ದರಿಂದ ತಕ್ಷಣ ಇದನ್ನು ಖಾಲಿ ಮಾಡಿ. ಸುಟ್ಟ ಗ್ಯಾಸ್ ಸ್ಟೌವ್ ಫಳ-ಫಳ ಹೊಳೆಯಲು ಸ್ವಚ್ಛತಾ ಮಾರ್ಗಗಳು

ಪೊರಕೆಯನ್ನು ಬಳಸಿ
ಒಂದು ವೇಳೆ ಗಾಜಿನ ತುಂಡುಗಳು ನಿಮ್ಮ ಕೈ ತಲುಪದ ಸ್ಥಳಕ್ಕೆ ಹೋಗಿ ಬಿದ್ದಿದ್ದರೆ, ಅದನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಿ. ಮೇಜಿನ ಕೆಳಗೆ, ಟಿವಿ ಸ್ಟ್ಯಾಂಡ್ ಕೆಳಗೆ ನುಸುಳಿಕೊಂಡಿರುವ ಗಾಜಿನ ಚೂರುಗಳನ್ನು ಪೊರಕೆಯಿಂದ ಸ್ವಚ್ಛಗೊಳಿಸಿ. ಹೀಗೆ ಒಡೆದ ಗಾಜಿನ ಚೂರುಗಳನ್ನು ನಿಮ್ಮ ಕಾರ್ಪೆಟ್ ಮೇಲಿನಿಂದ ಸ್ವಚ್ಛಗೊಳಿಸಬಹುದು.

English summary

How To Clean Up Broken Glass On Carpet?

How to clean up broken glass on carpet? When glass objects break at home, that too on the floor, they make the place messy. On the top of it, if you postpone the task of clearing them, then it would be a potential danger to both your family members and pets too. here are some ideas. Carefully follow them. How to clean up broken glass on carpet
X
Desktop Bottom Promotion