Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಳಿಗಾಲದಲ್ಲಿ ಸುಲಭವಾಗಿ ಬೆಳೆಯಬಹುದಾದ ತರಕಾರಿ

ಚಳಿಗಾಲದಲ್ಲಿ ಬೆಳೆಯಬಹುದಾದ 4 ರೀತಿ ತರಕಾರಿ:
1. ಬಟಾಣಿ: ಈ ಕಾಲದಲ್ಲಿ ಬಟಾಣಿ ಬೇಗನೆ ಬೆಳೆಯಬಹುದು. ಮಣ್ಣನ್ನು ಅಗೆದು ಬೀಜವನ್ನು ಕೇವಲ ಒಂದು ಇಂಚಿನ ಅಂತರದಲ್ಲಿ ನೆಡಬೇಕು. ನಿಮ್ಮ ತೋಟದಲ್ಲಿರುವ ಜಾಗಕ್ಕೆ ಅನುಗುಣವಾಗಿ ಹಾಕಬಹುದು. ಬಟಾಣಿಯನ್ನು ತೇವದ ಬಟ್ಟೆಯಲ್ಲಿಟ್ಟು ಮೊಳಕೆ ಬರುವ ಸಂದರ್ಭದಲ್ಲಿ ಮಣ್ಣಿನಲ್ಲಿ ಹಾಕಿದರೆ ತುಂಬಾ ಹುಲುಸಾಗಿ ಬೆಳೆಯುತ್ತೆ.
2. ಎಲೆಕೋಸು: ಎಲೆಕೋಸನ್ನು ಕೈ ತೋಟದಲ್ಲಿ ಸುಲಭವಾಗಿ ಬೆಳೆಯಬಹುದು. ಹಸಿರು ಎಲೆಗಳ ಈ ಆರೋಗ್ಯಕರ ತರಕಾರಿಯನ್ನು ಇನ್ನೊಂದು ಗಿಡಕ್ಕೆ 10 ಇಂಚಿನ ಅಂತರದಲ್ಲಿ ಬೆಳೆಯಬೇಕು. ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿ ಇದನ್ನು ನೆಟ್ಟರೆ ಆಯಿತು.
3. ಪಾಲಾಕ್: ಚಳಿಗಾಲ ಪಾಲಾಕ್ ಬೆಳೆಯಲು ತುಂಬಾ ಸೂಕ್ತ ಕಾಲ. ಮಣ್ಣನ್ನು ಅಗೆದು ಪಾಲಾಕ್ ಬೀಜವನ್ನು ಹಾಕಿದರೆ ಅದು ಚಿಗುರೊಡೆಯಲು 4-6 ವಾರಗಳಿಡಿಯುತ್ತದೆ. ಆದರೆ ಪಾಲಾಕ್ ಸೊಪ್ಪಿಗೆ ಬೇಗನೆ ಕ್ರಿಮಿ ಕೀಟಗಳು ತಗುಲುವ ಸಾಧ್ಯತೆ ಹೆಚ್ಚಿರುವುದರಿಂದ ಉತ್ತಮ ಗೊಬ್ಬರದೊಂದಿಗೆ ಕ್ರಿಮಿ ನಾಶಕವನ್ನೂ ಬಳಸಬೇಕು. ಆದರೆ ಪಾಲಾಕ್ ಸೊಪ್ಪನ್ನು ಅಡುಗೆಗೆ ಬಳಸುವಾಗ ಉಪ್ಪಿನೊಂದಿಗೆ ತೊಳೆದು ಬಳಸಬೇಕು.
4. ಸಾಂಬಾರು ಈರುಳ್ಳಿ: ಸಾಂಬಾರು ಈರುಳ್ಳಿ ಅಡುಗೆಗೆ ರುಚಿ ತರುವ ತರಕಾರಿ. ಲಭ್ಯವಿರುವ ಈರುಳ್ಳಿ ಬೀಜವನ್ನು ಮಣ್ಣಿನಲ್ಲಿ ಹಾಕಿದರೆ ಮೊಳಕೆ ಒಡೆಯುತ್ತದೆ. ಆದರೆ ಮೊಳಕೆ ಒಡೆಯುತ್ತಿದ್ದಂತೆ ಈರುಳ್ಳಿ ಕತ್ತರಿಸಬಾರದು. ಚೆನ್ನಾಗಿ ಹರಡಲು ಸ್ವಲ್ಪ ಕಾಲಾವಕಾಶ ನೀಡಬೇಕು. ಬೇಗನೆ ಕೊಯ್ದರೆ ಈರುಳ್ಳಿಗೆ ಸಿಹಿ ರುಚಿ ಬಂದುಬಿಡುತ್ತದೆ. ಸಾಂಬಾರು ಈರುಳ್ಳಿಯನ್ನು ಪಾಟ್ ನಲ್ಲಿಯೂ ಬೆಳೆಯಬಹುದು. ಎರಡು ವಾರಕ್ಕೊಮ್ಮೆ ನೀರು ಹಾಕಿದರೆ ಸಾಕು.
ಚಳಿಗಾಲದಲ್ಲಿ ಈ 4 ತರಕಾರಿಗಳನ್ನು ಸುಲಭವಾಗಿ ಬೆಳೆಯಬಹುದು. ಕ್ಯಾರೆಟ್, ಬ್ರೊಕೋಲಿ, ಕೊತ್ತಂಬರಿ, ಟೊಮೆಟೊ ಮತ್ತು ಬೆಳ್ಳುಳ್ಳಿಯನ್ನು ಕೂಡ ಚಳಿಗಾಲದಲ್ಲಿ ಬೆಳೆಯಬಹುದು.



Click it and Unblock the Notifications
