Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕೈತೋಟದ ಅಂದ ಹೆಚ್ಚಿಸುವ ಕ್ಯಾಕ್ಟಸ್ ಗಿಡ

ಸೂರ್ಯನ ಕಿರಣ: ಕ್ಯಾಕ್ಟಸ್ ಗಿಡದ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುವ ಜಾಗದಲ್ಲಿ ಗಿಡವನ್ನು ನೆಡಬೇಕು. ಕಡಿಮೆ ಅಂದರೂ 6 ಗಂಟೆ ಬಿಸಿಲು ಅದರ ಮೇಲೆ ಬೀಳಬೇಕು.
ನೀರು: ಕ್ಯಾಕ್ಟಸ್ ಗಿಡ ನೆಟ್ಟಿರುವ ಹೂವಿನ ಕುಂಡದಲ್ಲಿ ನೀರು ನಿಲ್ಲವಂತೆ ಇರಬಾರದು. ಅಧಿಕ ನೀರು ಕುಂಡದಿಂದ ಹರೆಯುವಂತೆ ಇರಬೇಕು. ಅಧಿಕ ತೇವಾಂಶವಿದ್ದರೆ ಈ ಗಿಡ ನಾಶವಾಗುವುದು.
ಮಣ್ಣು: ಇದನ್ನು ನೆಡುವ ಮಣ್ಣಿನಸಲ್ಲಿ ಕಲ್ಲು, ಖನಿಜಾಂಶ, ಉಪ್ಪಿನಂಶ ಮತ್ತು ಮರಳಿನಂಶವಿರಬೇಕು. ಮಣ್ಣಿನಲ್ಲಿ ಈ ಎಲ್ಲಾ ಅಂಶಗಳಿದ್ದರೆ ಗಿಡ ಬೇಗನೆ ಬೆಳೆಯುತ್ತದೆ.
ಉಷ್ಣತೆ: ತುಂಬಾ ತಂಪು ಪ್ರದೇಶದಲ್ಲಿ ಕ್ಯಾಕ್ಟಸ್ ಗಿಡ ಬೆಳೆಸದಿರುವುದು ಒಳ್ಳೆಯದು. ಏಕೆಂದರೆ ಉಷ್ಣತೆ ಕಡಿಮೆ ಇದ್ದರೆ ಈ ಪ್ರದೇಶದಲ್ಲಿ ಈ ಗಿಡ ಉತ್ತಮವಾಗಿ ಬೆಳೆಯುವುದಿಲ್ಲ.
ಈ ಗಿಡವನ್ನು ನೆಡುವಾಗ ಅದರ ಬೇರುಗಳಿಗೆ ಯಾವುದೇ ಹಾನಿಯಾಗದಂತೆ ನೆಡಬೇಕು. ಹೂಕುಂಡದಲ್ಲಿ ಬೇರುಗಳು ಸ್ವಲ್ಪ ಆಳಕ್ಕೆ ಇಳಿಯುವಂತೆ ಸ್ಥಳಾವಕಾಶ ಸ್ವಲ್ಪ ಹೆಚ್ಚಿರುವ ಕುಂಡದಲ್ಲಿ ನೆಡಬೇಕು. ಇದನ್ನು ನೆಲದಲ್ಲಿ ನೆಟ್ಟರೆ ಗುಂಪಾಗಿ ಬೆಳೆದು ಆಕರ್ಷಕವಾಗಿ ಕಾಣುವುದು.
ಈ ಗಿಡವನ್ನು ನೆಡ ಬಯಸುವವರು ಇನ್ನೂ 2 ತಿಂಗಳು ಕಾಯುವುದು ಒಳ್ಳೆಯದು. ಏಕೆಂದರೆ ಜೂನ್ನಿಂದ ಆಗಸ್ಟ್ಈ ಗಿಡ ನೆಡುವುದಕ್ಕೆ ತುಂಬಾ ಸೂಕ್ತವಾದ ಸಮಯವಾಗಿದೆ.



Click it and Unblock the Notifications
