Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮನೆಯ ಸೊಬಗನ್ನು ಹೆಚ್ಚಿಸುವ ವರ್ಣರಂಜಿತ ಬಣ್ಣ ಯಾವುದು?
ಚಳಿಗಾಲ ಬಂತೆಂದರೆ ಒಂದು ಸಂಭ್ರಮ. ಚಳಿಗಾಲದಲ್ಲಿ ಅತಿ ಹೆಚ್ಚಾಗಿ ಸಂಭ್ರಮದಿಂದ ಆಚರಿಸುವ ಸಂದರ್ಭಗಳೆಂದರೆ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆರಂಭ ಇನ್ನೇನು ಹತ್ತಿರಬರುತ್ತಿದೆ. ನಿಮ್ಮ ಮನೆಗೆ ಒಂದು ತಾಜಾ ಭಾವನೆ ಬರಲು ಬಣ್ಣಗಳನ್ನು ಹಚ್ಚುವುದಕ್ಕೆ ಈ ಸಮಯ ಅತ್ಯಂತ ಸೂಕ್ತವಾಗಿದೆ. ನಿಮ್ಮ ಮನೆಯಲ್ಲಿ ನಿಮ್ಮ ಅತಿಥಿಗಳ ಆತಿಥ್ಯ ಮಾಡಲು ಮತ್ತು ನಿಮ್ಮ ಮನೆಯೊಳಗಿನ ಗೋಡೆಗಳು ಚಳಿಗಾಲಕ್ಕೆ ತಕ್ಕಂತೆ ತಾಜಾ ಮತ್ತು ವರ್ಣರಂಜಿತವಾಗಿದ್ದರೆ ಅವರು ಪ್ರಶಂಸಿವುದಕ್ಕೆ ಸಿದ್ಧ ಮಾಡಿ.
ನಿಮ್ಮ ಮನೆಗೆ ಬಣ್ಣ ಹಚ್ಚಿಸುವುದಕ್ಕೆ ಒಮ್ಮೆ ನಿರ್ಧಾರ ಮಾಡಿದ ನಂತರ ಮುಂದೆ ಬಣ್ಣಗಳ ಆಯ್ಕೆಮಾಡುವ ಗೊಂದಲ ಪ್ರಾರಂಭವಾಗುತ್ತದೆ. ಅದಕ್ಕಾಗಿ ಅಷ್ಟೊಂದು ಚಿಂತಿಸಬೇಡಿ. ನಮ್ಮ ಬೋಲ್ಡ್ ಸ್ಕೈ ನಿಮ್ಮ ಮನೆಗೆ ಸ ರಿಹೊಂದುವಂತೆ ಚಳಿಗಾಲಕ್ಕೆ ಸೂಕ್ತವಾಗಿರುವ ಅತ್ಯುತ್ತಮ ಬಣ್ಣಗಳನ್ನು ಆರಿಸುವುದಕ್ಕೆ ಸಹಾಯಮಾಡುತ್ತದೆ. ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು
ಚಳಿಗಾಲ ಬರುತ್ತಿದ್ದಂತೆಯೇ ನಿಮ್ಮ ಮನೆಯು ಸ್ವಲ್ಪ ಮಂಕಾಗಿ ಕಾಣತೊಡಗಬಹುದು ಅಥವ ತೇವದ ವಾತಾವರುಣದಿಂದ ಹಳೆಯ ಬಣ್ಣಗಳು ಹೆಕ್ಕಳಿಕೆಯಾಗಿ ಬೀಳಬಹುದು. ಕಾರಣಗಳು ಏನೇ ಇರಲಿ, ಚಳಿಗಾಲವು ನಿಮ್ಮ ಮನೆಗೆ ಬಣ್ಣ ಹಚ್ಚುವುದಕ್ಕೆ ಅತ್ಯುತ್ತಮ ಸಮಯ. ಪ್ರಕಾಶಮಾನವಾದ ಬಣ್ಣಗಳನ್ನು ಹಚ್ಚುವುದರ ಮೂಲಕ ನಿಮ್ಮ ಮನೆಗೆ ಹೆಚ್ಚುವರಿ ಸೌಂದರ್ಯ ಸೇರಿಸುತ್ತದೆ. ಚಳಿಗಾಲದಲ್ಲಿ ನಿಮ್ಮ ಮನೆಯು ವಿಶಿಷ್ಟವಾಗಿ ಅತ್ಯುತ್ತಮ ಬಣ್ಣಗಳಿಂದ ಕಾಣಲು ಕೆಲವು ಆಯ್ಕೆಗಳನ್ನು ಕೊಟ್ಟಿದ್ದೇವೆ. ಇದು ಖಂಡಿತವಾಗಿ ಚಳಿಗಾಲದ ಆಯ್ಕೆಗಳೆಂದು ಹೇಳಬಹುದು. ಮನೆಯ ಮುಂಬಾಗಿಲು ಹೇಗಿರಬೇಕೆಂಬ ವಾಸ್ತು ಟಿಪ್ಸ್

ಹಳದಿ ಬಣ್ಣ
ಚಳಿಗಾಲದಲ್ಲಿ ಹಳದಿ ಬಣ್ಣಕೊಡುವ ಹೊಳಪನ್ನು ಬೇರೆ ಯಾವ ಬಣ್ಣವೂ ಕೊಡುವುದಿಲ್ಲ. ಹೊರಗಡೆಯ ಗೋಡೆಗಳಿಗೆ ಇದು ಅತಿ ಸೂಕ್ತ ಆಯ್ಕೆ. ನಿಮ್ಮ ಕೊಠಡಿಗಳು ಚಿಕ್ಕದಾಗಿದ್ದರೆ ಹಳದಿ ಬಣ್ಣವು ಒಳ್ಳೆಯ ಆಯ್ಕೆ; ಏಕೆಂದರೆ ಅದು ನಿಮ್ಮ ಕೊಠಡಿಗಳು ವಿಶಾಲ ಮತ್ತು ದೊಡ್ಡದಾಗಿರುವಂತೆ ಕಾಣಿಸುವಂತೆ ಮಾಡುತ್ತದೆ.

ಶ್ವೇತ (ಬಿಳಿ) ವರ್ಣ
ಶ್ವೇತವರ್ಣ ಮತ್ತು ಚಳಿಗಾಲ ಒಂದಕ್ಕೊಂದು ಸರಿಹೊಂದುತ್ತದೆ. ಈ ಬಿಳಿಬಣ್ಣದ ಸಾಮರ್ಥ್ಯ ಎಲ್ಲಾ ಕಾಲದಲ್ಲಿಯೂ ಮತ್ತು ವಿವಿಧ ಶೈಲಿಗಳ ಮನೆಗಳ ಗೋಡೆಗಳ ಅಚ್ಚುಮೆಚ್ಚಾಗಿ ಹೊಂದಾಣಿಕೆಯಾಗುವ ಬಣ್ಣ. ಈ ಬಿಳಿಬಣ್ಣದ ಬಿನ್ನತೆಯನ್ನು ಎತ್ತಿ ತೋರಲು ಬೇರೆ ಯಾವುದಾದ ಬಣ್ಣವನ್ನು ನೀವು ಆಯ್ಕೆ ಮಾಡಬಹುದು.

ಕಡುಕೆಂಪು (ಕ್ರಿಂಸನ್/ಮೆರೂನ್)
ಚಳಿಗಾಲದಲ್ಲಿ ನಿಮ್ಮ ವಾಸದ ಕೋಣೆಗೆ ಬಣ್ಣವನ್ನು ಆರಿಸುವುದು ಒಂದು ಸವಾಲೇ ಸರಿ. ನಿಮ್ಮ ಮನೆಗೆ ಬರುವವರಿಗೆ ಈ ಕೋಣೆಯು ನಿಮ್ಮ ಮನೆಯ ಮೊದಲ ಆಕರ್ಷಣೆಯಾಗುತ್ತದೆ.

ನೀಲಿ ಬಣ್ಣ
ನೀಲಿ ಬಣ್ಣವು ಒಳಗಡೆಯ ಗೋಡೆಗಳಿಗೆ ಒಂದು ಆಹ್ಲಾದಕರ ಮತ್ತು ಪ್ರಕಾಶಮಾನವಾಗಿ ಕಾಣಲು ಒಳಾಂಗಣ ವಿನ್ಯಾಸಕಾರರಿಗೆ ಸಾರ್ವಕಾಲಿಕ ಮೆಚ್ಚಿನ ಬಣ್ಣ. ನೀಲಿ ಬಣ್ಣವನ್ನು ನೀವು ಯಾವುದೇ ಇತರ ಭಿನ್ನತೆ ಕೊಡುವ ಬಣ್ಣಗಳ ಜೊತೆ ಬಳಸಿ ಪ್ರಕಾಶಮಾನ ಅಥವ ಮಂದ ಮುಕ್ತಾಯಕ್ಕೆ (Finishing) ಪ್ರಯೋಗ ಮಾಡಲು ಅನುಕೂಲಮಾಡಿಕೊಳ್ಳುತ್ತದೆ.

ಕಂದು ಬಣ್ಣ
ಮಹಿಳೆಯರಿಗೆ ಕಂದು ಬಣ್ಣವು ಅಡಿಗೆಮನೆಯಲ್ಲಿನ ಕೊಳೆ ಮತ್ತು ಕಲೆಗಳನ್ನು ಮರೆಮಾಡುವುದರಿಂದ ಇದು ಅವರ ಮೆಚ್ಚಿನ ಬಣ್ಣವಾಗಿದೆ. ಈ ಬಣ್ಣದಿಂದ ಅಡಿಗೆಮನೆಯು ಅಚ್ಚುಕಟ್ಟಾಗಿ ಕಾಣುವಂತೆ ಮಾಡುತ್ತದೆ. ಹಾಗೂ ನಿಮ್ಮ ಅಡಿಗೆಮನೆಯಲ್ಲಿ ಮರದ ಕ್ಯಾಬಿನೆಟ್ ಇದ್ದಲ್ಲಿ ಕಂದು ಬಣ್ಣವು ಹೊಂದಾಣಿಕೆಯಾಗುತ್ತದೆ.

ಕಿತ್ತಳೆ ಬಣ್ಣ
ಮನೆ, ಫ್ಲಾಟ್ ಅಥವ ಬಂಗಲೆಗಳು - ಯಾವುದೇ ನಿಮ್ಮದಾಗಿದ್ದರೂ ಕಿತ್ತಳೆ ಬಣ್ಣವು ನಿಮ್ಮ ಕೊಠಡಿಗಳಿಗೆ ಬಣ್ಣಗಳಲ್ಲಿ ಅತ್ಯುತ್ತಮ ಬಣ್ಣವಾಗಿರುತ್ತದೆ. ಕಿತ್ತಲೆ ಬಣ್ಣವು ತನ್ನ ಆಕರ್ಷಕ ಮತ್ತು ಆಹ್ಲಾದಕರ ರಂಗಿನಿಂದ ನಮ್ಮ ಮನೆಯನ್ನು ವಿಶಿಷ್ಟ ಮತ್ತು ಭಿನ್ನತೆಯ ದೃಶ್ಯದಿಂದ ಕಾಣಬಹುದು.

ಐವರಿ ಬಣ್ಣ
ಚಳಿಗಾಲದಲ್ಲಿ ಮನೆಯನ್ನು ವಿಸ್ಮಯಕಾರಿಯಾಗಿಟ್ಟುಕೊಳ್ಳಲು ಐವರಿ ಬಣ್ಣವು ಬಣ್ಣಗಳಲ್ಲಿ ಒಂದು ಅತ್ಯುತ್ತಮ ಬಣ್ಣವಾಗಿದೆ. ನಿಮ್ಮ ವಾಸಿಸುವ ಮತ್ತು ಮಲಗುವ ಕೋಣೆಗಳನ್ನು ವಿಶಾಲವಾಗಿ ಕಾಣುವಂತೆ ಬಯಸಿದರೆ ಈ ಬಣ್ಣವು ಒಂದು ಪರಿಪೂರ್ಣ ಆಯ್ಕೆಯಾಗಿದೆ.

ಹಸಿರು ಬಣ್ಣ
ಚಳಿಗಾಲದ ಸಮಯದಲ್ಲಿ ಸಾಮಾನ್ಯವಾಗಿ ಮರಗಳಲ್ಲಿನ ಹಸಿರೆಲೆಗಳು ಉದುರಿಹೋಗಿ ಹಸಿರುಬಣ್ಣವು ಕಾಣದಿದ್ದರೆ ನಿಮ್ಮ ಮನೆಗೆ ಹಸಿರು ಬಣ್ಣವನ್ನು ಹಚ್ಚಲು ಪ್ರಯತ್ನಿಸಿ. ಚಳಿಗಾಲದ ಸಮಯದಲ್ಲಿ ನಿಮ್ಮ ಮನೆಗಳಿಗೆ ನಿಮ್ಮ ನಿತ್ಯ ಜೀವನದಲ್ಲಿ ಸ್ವಲ್ಪ ಹಸಿರಿಗಾಗಿ ಇದು ಬಣ್ಣಗಳಲ್ಲಿ ಒಂದು ಪರಿಪೂರ್ಣ ಆಯ್ಕೆಯ ಬಣ್ಣವಾಗಿದೆ.

ಪಿಂಕ್ (ಗುಲಾಬಿ) ಬಣ್ಣ
ಚಳಿಗಾಲದ ಸಮಯದಲ್ಲಿ ಈ ಬಣ್ಣದಿಂದ ನಿಮ್ಮ ಮನೆ ಮತ್ತು ಅದರ ಆವರಣ ಪ್ರಕಾಶಮಾನ, ಸುಂದರ ಮತ್ತು ಎಲ್ಲ ರೀತಿಯಲ್ಲಿ ಅಲಂಕೃತವಾಗಿರುವ ಭಾವನೆಬರುತ್ತದೆ. ನಿಮ್ಮ ನೆರೆಯವರು ಹೊಂದಿಲ್ಲದ ಬೇರೆ ಬಣ್ಣವನ್ನು ಪ್ರಯತ್ನಿಸಲು ಬಯಸಿದರೆ, ಪಿಂಕ್ ಬಣ್ಣವು ಒಂದು ಒಳ್ಳೆಯ ಆಯ್ಕೆ.

ಕೆಂಪು ಬಣ್ಣ
ನಿಮ್ಮ ಕೋಣೆಯು ಪ್ರಜ್ವಲಿಸಿ ಎದ್ದು ಕಾಣವಂತೆ ಮಾಡಲು ಕೆಂಪು ಬಣ್ಣವು ಅತ್ಯುತ್ತಮ ಬಣ್ಣವಾಗಿದೆ. ಕೆಂಪು ಬಣ್ಣಕ್ಕೆ ಸೂಕ್ತವಾಗಿ ತದ್ವಿರುದ್ಧ ಕಾಣಲು ಇತರ ಬಣ್ಣಗಳನ್ನು ಪ್ರಯೋಗಮಾಡಬಹುದು. ಹಾಗೂ ಕೆಂಪು ಅತ್ಯಂತ ಭಾವಪ್ರಧಾನ (ರೊಮ್ಯಾಂಟಿಕ್) ಬಣ್ಣವೆಂದು ಪರಿಗಣಿಸುವುದರಿಂದ ನಿಮ್ಮ ಮಲಗುವ ಕೋಣೆಗೆ ಅತ್ಯುತ್ತಮ ಆಯ್ಕೆಯಾಗುತ್ತದೆ.



Click it and Unblock the Notifications
