Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಚಿತ್ರ ಮಾಹಿತಿ-ರೊಮ್ಯಾಂಟಿಕ್ ಬೆಡ್ ರೂಂ ಐಡಿಯಾ
ಮಲಗುವ ರೂಂ ಆಕರ್ಷಕವಾಗಿರಬೇಕು. ಮಲಗಲು ಹೋದರೆ ನಮ್ಮೆಲ್ಲಾ ಚಿಂತೆಗಳು ಮರೆತು ಹಾಯಾಗಿ ನಿದ್ದೆ ಮಾಡುವಂತೆ ಇರಬೇಕು. ಅದಕ್ಕಾಗಿ ಮೃದುವಾದ ಬೆಡ್ , ದಿಂಬುಗಳನ್ನು ಬಳಸಬೇಕು. ರೂಂನ್ನು ಶುದ್ಧವಾಗಿಡಬೇಕು, ಗಾಳಿಯಾಡುವಂತೆ ಇರಬೇಕು, ಕರ್ಟನ್ ಆಕರ್ಷಕವಾಗಿ ಸ್ವಚ್ಛವಾಗಿರಬೇಕು. ಇವೆಷ್ಟು ಎಲ್ಲಾ ಬೆಡ್ ರೂಂನಲ್ಲಿರ ಬೇಕಾದ ಮುಖ್ಯವಾದ ಅಂಶಗಳು.
ಇನ್ನು ಮಕ್ಕಳು ಮಲಗುವ ರೂಂ ಅನ್ನು ಅವರ ಅಭಿರುಚಿಗೆ ತಕ್ಕಂತೆ ಅಲಂಕರಿಸಿದರೆ ಚೆನ್ನ. ದಂಪತಿಗಳು ಮಲಗುವ ರೂಂ ಅನ್ನು ರೊಮ್ಯಾಂಟಿಕ್ ಆಗಿ ಅಲಂಕರಿಸಬಹುದು.
ನೀವು ನಿಮ್ಮ ಬೆಡ್ ರೂಂ ನೋಡಲು ತುಂಬಾ ರೊಮ್ಯಾಂಟಿಕ್ ಆಗಿರಬೇಕೆಂದು ಇಷ್ಟಪಡುತೀರಾ? ಹಾಗಾದರೆ ಇಲ್ಲ ನಾವು ಬೆಡ್ ರೂಂ ಯಾವ ರೀತಿ ಇದ್ದರೆ ರೊಮ್ಯಾಂಟಿಕ್ ಆಗಿರುತ್ತದೆ ಎಂದು ಚಿತ್ರಮಾಹಿತಿ ನೀಡಿದ್ದೇವೆ ನೋಡಿ:

ರೂಂ ಮಧ್ಯದಲ್ಲಿ ಬೆಡ್
ಮನೆಗಳಲ್ಲಿ ಸಾಮಾನ್ಯವಾಗಿ ಗೋಡೆಗೆ ತಾಗುವಂತೆ ಬೆಡ್ ಹಾಕುತ್ತೇವೆ. ಸ್ವಲ್ಪ ವಿಶಾಲವಾದ ರೂಂ ಆಗಿದ್ದರೆ ಚಿತ್ರದಲ್ಲಿ ತೋರಿಸಿದಂತೆ ಬೆಡ್ ಅನ್ನು ರೂಂ ಮಧ್ಯದಲ್ಲಿ ಹಾಕಿ. ಇದರಿಂದ ಪಕ್ಕದಲ್ಲಿ ಮಲಗಿದ ಹೆಂಡತಿ/ಗಂಡ ರಾತ್ರಿಯಲ್ಲಿ ನೀರು ಕುಡಿಯಲು, ಬಾತ್ ರೂಂಗೆ ಅಂತ ಎದ್ದಾಗ ಇನ್ನೊಬ್ಬರ ನಿದ್ದೆಗೆ ಭಂಗ ಉಂಟಾಗುವುದಿಲ್ಲ.

ಸಾಫ್ಟ್ ಟಾಯ್ಸ್ ಬೆಡ್ ರೂಂ
ನಿಮ್ಮ ಬೆಡ್ ರೂಂಗೆ ರೊಮ್ಯಾಂಟಿಕ್ ಲುಕ್ ಸಿಗಲು ಸಾಫ್ಟ್ ಟಾಯ್ಸ್ ಗಳಿಂದ ಅಲಂಕರಿಸಿ.

ಕ್ಲಾಸಿಕ್ ಬೆಡ್ ರೂಂ
ಬೆಡ್ ರೂಂ ಪಕ್ಕದಲ್ಲಿ ಟೇಬಲ್ ಹಾಕಿ ಅದರಲ್ಲಿ ಅಲಂಕಾರಿಕ ಬಣ್ಣದ ದೀಪವನ್ನು ಇಟ್ಟು ಬೆಡ್ ಸ್ಪ್ರೆಡ್ ಬಣ್ಣದ ಕರ್ಟನ್ ಹಾಕಿ. ಈ ರೀತಿ ಮಾಡಿದರೆ ಬೆಡ್ ರೂಂಗೆ ಕ್ಲಾಸಿಕ್ ಲುಕ್ ಸಿಗುತ್ತದೆ.

ಹೂವಿನ ಅಲಂಕಾರದ ಬೆಡ್ ರೂಂ
ಬೆಡ್ ರೂಂ ನಲ್ಲಿ ಹೂವಿನ ಚಿತ್ರವಿರುವ ದಿಂಬು, ಹೊದಿಕೆ ಹಾಕಿ. ಬೆಡ್ ರೂಂ ಅನ್ನು ಫ್ಲೋರಲ್ ಥೀಮ್ ನಲ್ಲಿ ಅಲಂಕರಿಸಿದರೂ ರೊಮ್ಯಾಂಟಿಕ್ ಆಗಿ ಕಾಣುತ್ತದೆ.

ಮುಘಲ್ ಸ್ಟೈಲ್
ಮುಘಲ್ ಸ್ಟೈಲ್ ಬೆಡ್ ರೂಂಗೆ ಆಕರ್ಷಕ ಬಣ್ಣದ ಕಾರ್ಪೆಟ್ ಹಾಕಿದರೆ ರೂಂಗೆ ಶ್ರೀಮಂತಿಕೆಯ ಕಳೆ ಬರುವುದು.

ರೆಡ್ ಹಾಟ್ ಬೆಡ್ ರೂಂ
ಕೆಂಪು ಬಣ್ಣ ತುಂಬಾ ರೊಮ್ಯಾಂಟಿಕ್ ಆದ ಬಣ್ಣವಾಗಿದೆ. ಹೊಳೆಯುವ ಕೆಂಪು ರೆಡ್ ಫ್ಲೋರ್ ಹಾಗೂ ರೆಡ್ ಬೆಡ್ ಅದರಲ್ಲಿ ಬಿಳಿ ಬಣ್ಣದ ದಿಂಬು ಇಟ್ಟರೆ ನಿಮ್ಮ ಬೆಡ್ ರೂಂ ರೊಮ್ಯಾಂಟಿಕ್ ಲುಕ್ ಪಡೆಯುತ್ತದೆ.

ದಿ ಸ್ಪಾಟ್ ಲೈಟ್
ಬೆಡ್ ರೂಂನಲ್ಲಿ ಬೆಡ್ , ಸೋಫಾ ಅದಕ್ಕೆ ಹೊಂದುವ ಬೆಡ್ ಶೀಟ್ ಗಳು ಹಾಗೂ ಸ್ಪಾಟ್ ಲೈಟ್ ಹಾಕಿಸಿದರೆ ಬೆಡ್ ರೂಂ ಆಗಿ ಕಾಣುತ್ತದೆ.

ವೈಟ್ ಅಂಡ್ ಪಿಂಕ್
ರೊಮ್ಯಾಂಟಿಕ್ ಲುಕ್ ಗಾಗಿ ಬಿಳಿ ಮಿಶ್ರತ ಪಿಂಕ್ ಬಣ್ಣದ ಬೆಡ್ ಶೀಟ್ ಹಾಗೂ ವಸ್ತುಗಳಿಂದ ಬೆಡ್ ರೂಂ ಅಲಂಕಾರ ಮಾಡಿ.

ವಿಸ್ತಾರವಾದ ಬೆಡ್ ರೂಂ
ಚಿತ್ರದಲ್ಲಿ ತೋರಿಸಿದಂತಹ ಬೆಡ್ ರೂಂ ಅನ್ನು ಸ್ವಲ್ಪ ವಿಸ್ತಾರವಾದ ರೂಂ ಇರುವವರು ಮಾಡಬಹುದು.

ಕಬ್ಬಿಣದ ಬೆಡ್
ಆಕರ್ಷಕ ವಿನ್ಯಾಸದ ಕಬ್ಬಿಣದ ಬೆಡ್ ಗೆ ಸಾಫ್ಟ್ ಬೆಡ್ ಹಾಕಿ ರೂಂಗೆ ಕನ್ನಡಿ ಹಾಕಿ ಸಿಂಪಲ್ ಆಗಿ ಅಲಂಕರಿಸಿದರೂ ಆಕರ್ಷಕವಾಗಿ ಕಾಣುತ್ತದೆ.



Click it and Unblock the Notifications
